Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
CBI infighting: PM Modi summons agency chief Alok Verma, special director Rakesh Asthana

ಸಿಬಿಐ ಒಳಜಗಳ: ತನಿಖಾ ಸಂಸ್ಥೆಯ ನಿರ್ದೇಶಕ, ವಿಶೇಷ ನಿರ್ದೇಶಕರಿಗೆ ಪ್ರಧಾನಿ ಮೋದಿ ಬುಲಾವ್

Bishop Franco

ಅತ್ಯಾಚಾರ ಆರೋಪಿ ಬಿಷಪ್ ಫ್ರಾಂಕೋ ವಿರುದ್ಧ ಹೇಳಿಕೆ ನೀಡಿದ್ದ ಕೇರಳ ಪಾದ್ರಿ ಸಾವು

Activist Rehana Fathima

ಶಬರಿಮಲೆ ವಿವಾದ: ಹೋರಾಟಗಾರ್ತಿ ರೆಹಾನ ಫಾತಿಮಾ ವಿರುದ್ಧ ಬಿಎಸ್ಎನ್ಎಲ್ ಶಿಸ್ತುಕ್ರಮ

Congress president Rahul Gandhi and Ex minister P Chidambaram(File photo)

2019 ಚುನಾವಣೆಗೆ ರಾಹುಲ್ ಗಾಂಧಿಯನ್ನು ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿಸುವುದಿಲ್ಲ: ಚಿದಂಬರಂ

Kannada group warns of Padmaavat-like protest against Sunny Leone

ಸನ್ನಿ ಬೆಂಗಳೂರು ಭೇಟಿಗೆ ಕನ್ನಡ ಸಂಘಟನೆ ವಿರೋಧ: 'ವೀರಮಹಾದೇವಿ' ವಿರುದ್ಧ 'ಪದ್ಮಾವತ್' ನಂತೆ ಪ್ರತಿಭಟನೆ ಎಚ್ಚರಿಕೆ!

Nearly 50k died after being hit by trains in 3 years

ಕಳೆದ 3 ವರ್ಷಗಳಲ್ಲಿ ರೈಲು ಡಿಕ್ಕಿ ಹೊಡೆದು 50 ಸಾವಿರ ಮಂದಿ ಸಾವು

I have a few years left in my career to enjoy this sport says Virat Kohli

'ಕೆಲವೇ ವರ್ಷ ಆಟ ಬಾಕಿ ಇದೆ, ಶೇ.100 ಬದ್ಧತೆಯಿಂದ ಆಡ ಬಯಸುವೆ'; ಕೊಹ್ಲಿ ಮಾತಿನ ಮರ್ಮವೇನು?

Sriramulu and Siddaramaiah(File photo)

ಶ್ರೀರಾಮುಲು ಏನು ಉದ್ಭವ ಮೂರ್ತಿನಾ? ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನೆ

India vs West Indies: India

ವಿಂಡೀಸ್ ವಿರುದ್ಧ ಭರ್ಜರಿ ಶತಕ; ಸಚಿನ್‌ , ವಾರ್ನರ್‌ ಅಪರೂಪದ ದಾಖಲೆ ಮುರಿದ ರೋ'ಹಿಟ್' ಶರ್ಮಾ!

Excluded from NRC, lawyer commits suicide

ಎನ್ಆರ್ ಸಿ ಪಟ್ಟಿಯಿಂದ ಕೈಬಿಟ್ಟಿದ್ದಕ್ಕೆ ವಕೀಲ ಆತ್ಮಹತ್ಯೆ

In a first in India, Pune woman gives birth from her mother

ಭಾರತದಲ್ಲೇ ಪ್ರಥಮ! ತನ್ನ ತಾಯಿಯ ಗರ್ಭಾಶಯದಿಂದ ಮಗುವಿಗೆ ಜನ್ಮ ನೀಡಿದ ಮಹಿಳೆ

Tough to dismiss Virat Kohli, Rohit Sharma when they are in full flow: Ravindra Jadeja

ಫಾರ್ಮ್ ನಲ್ಲಿದ್ದಾಗ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ವಿಕೆಟ್ ತೆಗೆಯುವುದು ಕಷ್ಟ: ಜಡೇಜಾ

Arun Jaitley

ಜೇಟ್ಲಿಯನ್ನು ಸಂಪುಟದಿಂದ ವಜಾಗೊಳಿಸಬೇಕು: ಕಾಂಗ್ರೆಸ್ ನೀಡಿದ ಕಾರಣಗಳಿವು!

ಮುಖಪುಟ >> ರಾಷ್ಟ್ರೀಯ

ರಾಜ್ಯಸಭಾ ಉಪಸಭಾಪತಿಯಾಗಿ ಎನ್'ಡಿಎ ಅಭ್ಯರ್ಥಿ ಹರಿವಂಶ ಸಿಂಗ್ ಆಯ್ಕೆ

Parliament Monsoon Session: NDA

ರಾಜ್ಯಸಭಾ ಉಪಸಭಾಪತಿಯಾಗಿ ಎನ್'ಡಿಎ ಅಭ್ಯರ್ಥಿ ಹರಿವಂಶ ಸಿಂಗ್ ಆಯ್ಕೆ

ನವದೆಹಲಿ: ತೀವ್ರ ಕುತೂಹಲ ಮೂಡಿಸಿದ್ದ ರಾಜ್ಯಸಭೆ ಉಪಸಭಾಪತಿ ಚುನಾವಣೆಯಲ್ಲಿ ಕೇಂದ್ರದ ಆಡಳಿತಾರೂಢ  ಎನ್'ಡಿಎ ಪಕ್ಷದ ಅಭ್ಯರ್ಥಿ ಹರಿವಂಶ ಸಿಂಗ್ ಅವರು ಗುರುವಾರ ಗೆಲುವು ಸಾಧಿಸಿದ್ದಾರೆ. 

ರಾಜ್ಯಸಭೆ ಉಪಸಭಾಪತಿ ಚುನಾವಣೆಯಲ್ಲಿ ಎನ್'ಡಿಎ ಅಭ್ಯರ್ಥಿ ಹರಿವಂಶ್ ನಾರಾಯಣ್ ಸಿಂಗ್ ವಿರುದ್ಧ ಪ್ರತಿಪಕ್ಷದ ಅಭ್ಯರ್ಥಿಯಾಗಿ ಕರ್ನಾಟಕದ ಸಂಸದ ಬಿ.ಕೆ. ಹರಿಪ್ರಸಾದ್ ಅವರು ನಿಂತಿದ್ದರು. 

ಪಿ.ಜೆ ಕುರಿಯನ್ ಅವರ ನಿವೃತ್ತಿ ಹಿನ್ನಲೆಯಲ್ಲಿ ಇಂದು ಬೆಳಿಗ್ಗೆ ನಡೆದ ಮತದಾನದಲ್ಲಿ ಹರಿವಂಶ್ ನಾರಾಯಣ್ ಸಿಂಗ್ ಅವರು ಗೆಲವು ಸಾಧಿಸಿದ್ದಾರೆ. 

ಒಟ್ಟು ಮತಗಳ ಪೈಕಿ ಹರಿವಂಶ ಅವರು 125 ಮತಗಳನ್ನು ಪಡೆಗು ಗೆಲವು ಸಾಧಿಸಿದ್ದರೆ, ಹರಿಪ್ರಸಾದ್ ಅವರು 105 ಮತಗಳನ್ನು ಪಡೆದು ಸೋಲು ಕಂಡಿದ್ದಾರೆ. 

ರಾಜ್ಯಸಭೆ ಸಭಾಪತಿಯಾಗಿರುವ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಅವರು ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡಿದರು. ಬಳಿಕ ಮತಕ್ಕೆ ಹಾಕಿದರು. ಸದಸ್ಯರು ತಾವು ಕುಳಿತ ಆಸನದ ಮುಂದಿದ್ದ ಗುಂಡಿಗಳನ್ನು ಒತ್ತುವ ಮೂಲಕ ಮತ ಚಲಾಯಿಸಿದರು. ಇದರಂತೆ ಒಟ್ಟು 202 ಮತಗಳು ಚಲಾವಣೆಯಾದವು. ಡಿಜಿಟಲ್ ಡಿಸ್ಪ್ಲೇ ಮೂಲಕ ಬಂದ ಮತಗಳಿಗೂ ಹಾಜರಿದ್ದ ಸದಸ್ಯರ ಸಂಖ್ಯೆಗೆ ತಾಳೆಯಾಗದ ಕಾರಣ ಸಭಾಧ್ಯಕ್ಷರು ಮತ್ತೊಮ್ಮೆ ಮತಕ್ಕೆ ಹಾಕಿ, ಗುಂಡಿ ಒತ್ತುವಂತೆ ಸೂಜಿಸಿದರು. 2ನೇ ಬಾರಿಗೆ 222 ಮತಗಳು ಚಲಾವಣೆಯಾದವು. 

ಈ ವೇಳೆಯೂ ನಿಖರವಾದ ಸಂಖ್ಯೆ ಲಭ್ಯವಾಗಲಿಲ್ಲ. ಹೀಗಾಗಿ ಸಭಾಧ್ಯಕ್ಷು ಮತ ಚಲಾವಣೆಯಾಗದವರು ಚೀಟಿಯಲ್ಲಿ ಬರೆದಿ ತಿಳಿಸುವಂತೆ ಸೂಚಿಸಿದರು. ಎಲ್ಲವನ್ನೂ ಲೆಕ್ಕ ಹಾಕಿದ ಬಳಿಕ ಪ್ರಕಟಿಸಲಾಗುತ್ತದೆ ಎಂದು ತಿಳಿಸಿದರು. 

ಬಳಿಕ ಎಲ್ಲಾ ಮತಗಳನ್ನು ಒಟ್ಟುಗೂಡಿಸಿದ ಬಳಿಕ ಹರಿವಂಶ ಸಿಂಗ್ ಅವರ ಪರ 124 ಮತಗಳು ಬಂದಿದ್ದು, ಹರಿಪ್ರಸಾದ್ ಪರವಾಗಿ 105 ಮತಗಳು ಬಂದಿವೆ. ಹರಿವಂಶ ನಾರಾಯಣ್ ಅವರು ಉಪಸಭಾಪತಿಯಾಗಿ ಆಯ್ಕೆಯಾಗಿದ್ದಾರೆಂದು ಪ್ರಕಟ ಮಾಡಿದರು. 

ಉಭಯ ಅಭ್ಯರ್ಥಿಗಳು ಬುಧವಾರ ನಾಮಪತ್ರ ಸಲ್ಲಿಸಿದರು. ಪ್ರತಿಪಕ್ಷಗಳಿಂದ ಎನ್'ಸಿಪಿ ಸಂಸದೆ ವಂದನಾ ಚವಾಣ್ ಅಭ್ಯರ್ಥಿಯಾಗಬಹುದು ಎನ್ನಲಾಗಿತ್ತಾದರೂ ಕೊನೇ ಕ್ಷಣದಲ್ಲಿ ನಡೆದ ಅಚ್ಚರಿಯ ಬೆಳವಣಿಗೆಯಲ್ಲಿ ಕಾಂಗ್ರೆಸ್ ಸೂಚಿಸಿದ ಅಭ್ಯರ್ಥಿಯಾಗಿ ಹರಿಪ್ರಸಾದ್ ಹೊರಹೊಮ್ಮಿದರು. 

245 ಸದಸ್ಯ ಬಲದ ರಾಜ್ಯಸಭೆಯಲ್ಲಿ ಬಿಜೆಪಿ ದೊಡ್ಡ ಪಕ್ಷವಾಗಿದ್ದರೂ ಅದರ ನೇತೃತ್ವದ ಎನ್'ಡಿಎಗೆ ಬಹುಮತವಿರಲಿಲ್ಲ. ಹೀಗಾಗಿ ಅನ್ಯಪಕ್ಷಗಳನ್ನು ಅದು ನೆಚ್ಚಿಕೊಂಡಿತ್ತು. ಎನ್'ಡಿಎಗೆ ಬಹುಮತವಿಲ್ಲ ಎಂಬುದನ್ನೇ ಪ್ರತಿಪಕ್ಷಗಳ ಕೂಟವು ಬಂಡವಾಳ ಮಾಡಿಕೊಂಡಿತ್ತು. ಬಹುಮತಕ್ಕೆ 123 ಸದಸ್ಯ ಬಲ ಬೇಕಿತ್ತು. 

ಎನ್'ಡಿಎಗೆ ಶಿವಸೇನೆ, ಬಿಜು ಜನತಾದಳ ಹಾಗೂ ತೆಲಂಗಾಣ ರಾಷ್ಟ್ರ ಸಮಿತಿ ಬೆಂಬಲ ನೀಡುವ ಸಾಧ್ಯತೆಗಳಿದ್ದ ಹಿನ್ನಲೆಯಲ್ಲಿ ತನ್ನ ಬಳಿ 129 ಮತಗಳಿವೆ ಎಂದು ಈ ಹಿಂದೆಯೇ ಎನ್'ಡಿಎ ಹೇಳಿಕೊಂಡಿತ್ತು. ಇದರಂತೆ ಅವಿಶ್ವಾಸ ನಿರ್ಣಯ ಮಂಡನೆ ಬಳಿಕ ರಾಜ್ಯಸಭಾ ಉಪಸಭಾಪತಿ ಸ್ಥಾನಕ್ಕೆ ಎದುರಾಗಿದ್ದ ಅಗ್ನಿ ಪರೀಕ್ಷೆಯಲ್ಲಿ ಮತ್ತೆ ಎನ್'ಡಿಎ ಗೆಲುವು ಸಾಧಿಸಿದೆ. 
ಸಂಬಂಧಿಸಿದ್ದು...
Posted by: MVN | Source: ANI

ಕನ್ನಡ ಮ್ಯಾಟ್ರಿಮನಿಯಲ್ಲಿ
ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ -
ನೋಂದಣಿ ಉಚಿತ!

Topics : Parliament Monsoon Session, Rajya Sabha, Rajya Sabha Deputy Chairman polls, NDA, Harivansh Singh, Victory, ಸಂಸತ್ತು ಮುಂಗಾರು ಅಧಿವೇಶನ, ರಾಜ್ಯಸಭೆ, ರಾಜ್ಯಸಭೆ ಉಪಸಭಾಪತಿ ಚುನಾವಣೆ, ಎನ್'ಡಿಎ, ಹರ

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS