Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Finally, Bengaluru To get its own sub-urban train Soon

ಬಹು ಬೇಡಿಕೆಯ ಸಬ್ ಅರ್ಬನ್ ರೈಲಿಗೆ ಮೇ ತಿಂಗಳಲ್ಲಿ ಶಂಕು ಸ್ಥಾಪನೆ: ಸುರೇಶ್ ಪ್ರಭು

Government nod to near-200 percent hike in salaries of Supreme Court, High Court judges

ನ್ಯಾಯಾಧೀಶರ ವೇತನ ಶೇ.200ರಷ್ಟು ಏರಿಕೆಗೆ ಸರ್ಕಾರ ಸಮ್ಮತಿ!

Aadhaar card to be mandatory for driving license

ಪ್ಯಾನ್ ಕಾರ್ಡ್, ಸಿಮ್ ಕಾರ್ಡ್ ಬಳಿಕ ಡ್ರೈವಿಂಗ್ ಲೈಸೆನ್ಸ್ ಗೂ ಆಧಾರ್ ಕಡ್ಡಾಯ!

4th Test: Lyon

ಅಂತಿಮ ಟೆಸ್ಟ್: 2ನೇ ದಿನದಾಟದಂತ್ಯಕ್ಕೆ ಭಾರತ 248/6

Tamil Nadu man deposits Rs 246 crore in Bank account, will pay 45% of it as tax

ಡೆಡ್ ಲೈನ್ ಎಫೆಕ್ಟ್; 246 ಕೋಟಿ "ಹಣ" ಘೋಷಿಸಿದ ತಮಿಳುನಾಡು ವ್ಯಕ್ತಿ, ಶೇ.45ರಷ್ಟು ತೆರಿಗೆ

Cannot be Parasite on Husband

ಪತಿಯ ಸಂಪಾದನೆಯನ್ನೇ ಅವಲಂಬಿಸಬೇಡಿ: ದೆಹಲಿ ಕೋರ್ಟ್ ತೀರ್ಪು

Actress Shilpa Shinde accuses producer Sanjay Kohli of sexual harassment

ಲೈಂಗಿಕ ಕಿರುಕುಳ ಆರೋಪ: ನಿರ್ಮಾಪಕ ಸಂಜಯ್ ಕೊಹ್ಲಿ ವಿರುದ್ಧ ನಟಿ ಶಿಲ್ಪಾ ಶಿಂದೆ ಎಫ್ ಐಆರ್!

EVM

ಭಾರತದ ಮತಯಂತ್ರಗಳು ಜಗತ್ತಿನಲ್ಲೇ ಅತ್ಯಂತ ಸುರಕ್ಷಿತ: ಚುನಾವಣಾ ಆಯೋಗ

Australians celebrate Mathew Wade fifty little too early, then sulk

ಅರ್ಧಶತಕಕ್ಕೂ ಮೊದಲೇ ಸಂಭ್ರಮಿಸಿ ಆಂಪೈರ್ ತೀರ್ಪಿನ ಬಳಿಕ ಬೇಸ್ತು ಬಿದ್ದ ಆಸಿಸ್ ಆಟಗಾರರು!

Uttar Pradesh Chief Minister Adityanath Yog

ಕಾನೂನಾತ್ಮಕ ಕಸಾಯಿಖಾನೆಗಳನ್ನು ಮುಟ್ಟುವುದಿಲ್ಲ: ಯೋಗಿ ಆದಿತ್ಯನಾಥ್ ಸ್ಪಷ್ಟನೆ

Doctors give treatment to Police

ಜಮ್ಮು-ಕಾಶ್ಮೀರ: ಉಗ್ರರ ದಾಳಿ, ಓರ್ವನ ಬಂಧನ; ಪೊಲೀಸ್ ಗೆ ಗಾಯ

Prime minister Narendra Modi

ನವ ಭಾರತ 125 ಕೋಟಿ ಭಾರತೀಯರ ಕನಸು: ಪ್ರಧಾನಿ ನರೇಂದ್ರ ಮೋದಿ

Emergency vehicle rushed to the spot

ವಾಷಿಂಗ್ಟನ್: ಸಿನ್ಸಿನ್ನಾಟಿ ನೈಟ್ ಕ್ಲಬ್ ನಲ್ಲಿ ಶೂಟೌಟ್; ಓರ್ವ ಸಾವು, 15 ಮಂದಿಗೆ ಗಾಯ

ಮುಖಪುಟ >> ರಾಷ್ಟ್ರೀಯ

ಜಯಾ ಸಮಾಧಿಗೆ ಜೋರಾಗಿ ತಟ್ಟಿದ ಶಶಿಕಲಾ; ಅಸಹಾಯಕತೆಯ ರೋಷವೋ ಇಲ್ಲಾ ಶಪಥವೋ?

ಶರಣಾಗತಿಗೂ ಮುನ್ನ ಜಯಾ ಸಮಾಧಿಗೆ ನಮಿಸಿದ ಶಶಿಕಲಾ, ಹೊರಡುವ ಮುನ್ನ ಸಮಾಧಿಗೆ ಬಡಿದು ಶಪಥ
Sasikala visits Jayalalithaa

ಜಯಾ ಸಮಾಧಿಯಲ್ಲಿ ಶಶಿಕಲಾ ಶಪಥ

ಚೆನ್ನೈ: ಅಕ್ರಮ ಆಸ್ತಿ ಪ್ರಕರಣ ಸಂಬಂಧ ಸುಪ್ರೀಂ ಕೋರ್ಟ್ ನಿಂದ ಶಿಕ್ಷೆಗೆ ಗುರಿಯಾಗಿರುವ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿಕೆ ಶಶಿಕಲಾ, ಮರೀನಾ ಬೀಚ್ ನಲ್ಲಿರುವ ಜಯಲಲಿತಾ ಅವರ ಸಮಾಧಿಗೆ ಭೇಟಿ ನೀಡಿ ನಮನ  ಸಲ್ಲಿಸಿದರು. ಈ ವೇಳೆ ಶಶಿಕಲಾ ಜಯಾ ಸಮಾಧಿಗೆ ಮೂರು ಬಾರಿ ಹೊಡೆದಿದ್ದು, ಈ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗಿದೆ.

ಇಂದು ಬೆಳಗ್ಗೆ ಶಶಿಕಲಾ ಪರ ವಕೀಲ ಕೆಟಿಎಸ್ ತುಳಸೀ ದಾಸ್ ಅವರು ಸುಪ್ರೀಂ ಕೋರ್ಟ್ ನಲ್ಲಿ ಶರಣಾಗತಿಗೆ ಕಾಲಾವಕಾಶ ನೀಡುವಂತೆ ಅರ್ಜಿ ಸಲ್ಲಿಸಿದ್ದರಾದರೂ, ಸುಪ್ರೀಂ ಕೋರ್ಟ್ ಮಾತ್ರ ಯಾವುದೇ ರೀತಿಯ ಕಾಲಾವಕಾಶ  ನೀಡಲು ಸಾಧ್ಯವಿಲ್ಲ ಎಂದು ಹೇಳಿ ಅರ್ಜಿಯನ್ನು ತಿರಸ್ಕರಿಸಿತ್ತು. ಹೀಗಾಗಿ ಶಶಿಕಲಾ ಕೋರ್ಟ್ ಗೆ ಹಾಜರಾಗಿ ಶರಣಾಗುವುದು ಅನಿವಾರ್ಯವಾಗಿತ್ತು. ಇದೇ ಹಿನ್ನಲೆಯಲ್ಲಿ ಶಶಿಕಲಾ ಇಂದು ಬೆಂಗಳೂರಿನತ್ತ ಪಯಣ ಬೆಳೆಸಿದ್ದು,  ಇದಕ್ಕೂ ಮೊದಲು ಚೆನ್ನೈನ ಮರೀನಾ ಬೀಚ್ ನಲ್ಲಿರುವ ಜಯಾ ಸಮಾಧಿ ಭೇಟಿ ನೀಡಿ ಪುಷ್ಪ ನಮನ ಸಲ್ಲಿಸಿದರು.

ಈ ವೇಳೆ ಜಯಲಲಿತಾರನ್ನು ನೆನೆದ ಶಶಿಕಲಾ ಸಮಾಧಿಯಿಂದ ಹೊರಡುವ ಮುನ್ನ ಮನದಲ್ಲೇ ಏನ್ನನ್ನೋ ನೆನೆಯುತಾ ಮೂರು ಬಾರಿ ತಮ್ಮ ಕೈಯಿಂದ ಸಮಾಧಿಗೆ ತಟ್ಟಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ  ವೈರಲ್ ಆಗಿದ್ದು, ಶಶಿಕಲಾ ಜಯಾ ಸಮಾಧಿಗೆ ತಟ್ಟಿದ್ದು, ಅಸಹಾಯಕತೆಯಿಂದಲೋ ಅಥವಾ ಪ್ರತಿಜ್ಞೆ ಮಾಡಿ ತಟ್ಟಿದರೋ ಎಂಬುದರ ಕುರಿತು ಚರ್ಚೆಗಳು ನಡೆಯುತ್ತಿವೆ.

ಮತ್ತೆ ಬಂದೇ ಬರುತ್ತೇನೆ.. ಅಧಿಕಾರಕ್ಕೇರುತ್ತೇನೆ: ಶಶಿಕಲಾ ಶಪಥ

ಇನ್ನು ಸಮಾಧಿಗೆ ಶಶಿಕಲಾ ತಡ್ಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಶಿಕಲಾ ಆಪ್ತರು ಸ್ಪಷ್ಟನೇ ನೀಡಿದ್ದು, ಶಶಿಕಲಾ ಶಪಥ ಮಾಡುತ್ತಾ ಮೂರು ಬಾರಿ ಸಮಾಧಿಗೆ ಹೊಡೆದಿದ್ದಾರೆ ಎಂದು ತಿಳಿಸಿದ್ದಾರೆ. ಶಶಿಕಲಾ ಸಮಾಧಿಗೆ ಭೇಟಿ  ನೀಡುವ ವೇಳೆ ಜೊತೆಯಲ್ಲಿದ್ದ ಅವರ ಆಪ್ತರು ಹೇಳಿರುವಂತೆ ಶಶಿಕಲಾ ಪ್ರಸ್ತುತ ಜೈಲಿಗೆ ಹೋಗುತ್ತಿರಬಹುದು. ಆದರೆ ಮತ್ತೆ ರಾಜ್ಯಕ್ಕೆ ವಾಪಸ್ ಬಂದೇ ಬರುತ್ತೇನೆ.. ಬಂದ ಬಳಿಕ ಅಧಿಕಾರಕ್ಕೇರಿಯೇ ತೀರುತ್ತೇನೆ ಎಂದು ಶಪಥ  ಮಾಡಿದರು ಎಂದು ಅವರು ಹೇಳಿದ್ದಾರೆ.

ಸಿಬಿಐ ವಿಶೇಷ ಕೋರ್ಟ್ ಮತ್ತೆ ಪರಪ್ಪನ ಅಗ್ರಹಾರಕ್ಕೆ ಸ್ಥಳಾಂತರ

ಮತ್ತೊಂದು ಬೆಳವಣಿಗೆಯಲ್ಲಿ ಶಶಿಕಲಾ ಹಾಜರಾಗಲಿರುವ ಸಿಬಿಐ ವಿಶೇಷ ನ್ಯಾಯಾಲಯವನ್ನು ಪುನಃ ಪರಪ್ಪನ ಅಗ್ರಹಾರಕ್ಕೇ ಸ್ಥಳಾಂತರ ಮಾಡಲಾಗಿದೆ. ಪ್ರಸ್ತುತ ಸಿಬಿಐ ವಿಶೇಷ ನ್ಯಾಯಾಲಯ ಸಿಟಿ ಸಿವಿಲ್ ಕೋರ್ಟ್ ನಲ್ಲಿದ್ದು, ಇದೀಗ ಅದನ್ನು ಪರಪ್ಪನ ಅಗ್ರಹಾರಕ್ಕೆ ಸ್ಥಳಾಂತರ ಮಾಡಲಾಗಿದೆ. ಈ ಹಿಂದೆ ಇದೇ ಅಕ್ರಮ ಆಸ್ತಿ ಗಳಿಕೆ ಪ್ರಕರಣ ಸಂಬಂಧ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರು ವಿಚಾರಣೆ ಎದುರಿಸುತ್ತಿದ್ದ ಸಂದರ್ಭದಲ್ಲಿಯೂ ವಿಶೇಷ ನ್ಯಾಯಾಲಯವನ್ನು ಪರಪ್ಪನ ಅಗ್ರಹಾರದಲ್ಲಿ ಸ್ಥಾಪನೆ ಮಾಡಲಾಗಿತ್ತು. ಇದೀಶ ಶಶಿಕಲಾ ವಿಚಾರಣೆ ಸಂದರ್ಭದಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗುವ ಆತಂಕದಿಂದ ಮುಂಜಾಗ್ರತಾ ಕ್ರಮವಾಗಿ ವಿಶೇಷ ನ್ಯಾಯಾಲಯವನ್ನು ಪರಪ್ಪನ ಅಗ್ರಹಾರದಲ್ಲಿ ಪುನಃ ಸ್ಥಾಪನೆ ಮಾಡಲಾಗುತ್ತಿದೆ.

ಬೆಂಗಳೂರಿನತ್ತ ಶಶಿಕಲಾ

ಬೆಂಗಳೂರಿನಲ್ಲಿರುವ ವಿಶೇಷ ನ್ಯಾಯಾಲಯಕ್ಕೆ ಶಶಿಕಲಾ ಹಾಜರಾಗಲಿದ್ದು, ಈಗಾಗಲೇ ಚೆನ್ನೈನಿಂದ ಬೆಂಗಳೂರಿನತ್ತ ಪಯಣ ಬೆಳೆಸಿದ್ದಾರೆ. ಇಂದು ಸಂಜೆ ವೇಳೆಗೆ  ನ್ಯಾಯಾಲಯಕ್ಕೆ ಶಶಿಕಲಾ ಹಾಜರಾಗುವ ಸಾಧ್ಯತೆ ಇದೆ.

ಸಂಬಂಧಿಸಿದ್ದು...
Posted by: SVN | Source: Online Desk

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ !

Topics : Chennai, Politics, DA case, Supreme Court, Sasikala, Marina Beach, Jayalalithaa memorial, ಚೆನ್ನೈ, ರಾಜಕೀಯ, ಅಕ್ರಮ ಆಸ್ತಿ ಗಳಿಕೆ, ಸುಪ್ರೀಂ ಕೋರ್ಟ್, ಶಶಿಕಲಾ, ಮರೀನಾ ಬೀಚ್, ಜಯಲಲಿತಾ ಸಮಾಧಿ

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Kannadaprabha.com App for Android Kannadaprabha.com App for IOS
Advertisement
Advertisement