Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Supreme Court

ಚುನಾವಣೆಯಲ್ಲಿ ಕಳಂಕಿತರ ಸ್ಪರ್ಧೆ ನಿರ್ಬಂಧಿಸಲಾಗದು: ಸಂಸತ್ತಿನಲ್ಲಿ ನೀವೇ ಕಾನೂನು ರೂಪಿಸಿ ಎಂದ 'ಸುಪ್ರೀಂ'

ಬಾಲಭಾಸ್ಕರ್ ಕುಟುಂಬ

ಭೀಕರ ಅಪಘಾತ: ಖ್ಯಾತ ಗಾಯಕ ಬಾಲಭಾಸ್ಕರ್, ಪತ್ನಿ ಸ್ಥಿತಿ ಚಿಂತಾಜನಕ, ಮುದ್ದಾದ ಮಗು ದುರ್ಮರಣ!

Rahul gandhi

ರಫೇಲ್ ಒಪ್ಪಂದ ವಿಷಯ ಕೇವಲ ಆರಂಭವಷ್ಟೇ: ಪ್ರಧಾನಿ ಮೋದಿಗೆ ಕಠಿಣ ಸಂದೇಶ ರವಾನಿಸಿದ ರಾಹುಲ್

Instagram founders Mike Krieger (L) and Kevin Systrom. (Photo | File/ Reuters)

ಫೇಸ್ ಬುಕ್ ಸಂಸ್ಥೆ ತೊರೆದ ಇನ್ಸ್ಟಾಗ್ರಾಮ್ ಸಹ ಸಂಸ್ಥಾಪಕರಾದ ಕೆವಿನ್ ಸಿಸ್ಟ್ರೋಮ್, ಮೈಕ್ ಕ್ರೆಗರ್

Cricket is a captain

ಇದು ಕ್ರಿಕೆಟ್.. ಫುಟ್ಬಾಲ್ ಅಲ್ಲ.. ಕೋಚ್ ಗೆ ಹಿಂದಿನ ಕುರ್ಚಿಯೇ ಉತ್ತಮ: ಸೌರವ್ ಗಂಗೂಲಿ ಹೇಳಿದ್ದು ಯಾರಿಗೆ?

Luka Modric ends Ronaldo-Messi era to be crowned FIFA

ಮೆಸ್ಸಿ, ರೊನಾಲ್ಡೋ ದಶಕದ ಪಾರಮ್ಯ ಮುರಿದ ಲೂಕಾ ಮೋಡ್ರಿಕ್!

ಸಂಗ್ರಹ ಚಿತ್ರ

ಹೃದಯ ವಿದ್ರಾವಕ ಘಟನೆ: ಅಪಘಾತವಾಗಿ ರಕ್ತದ ಮಡುವಿನಲ್ಲಿದ್ದ ಗಂಡನಿಗೆ ಪತ್ನಿ(ನರ್ಸ್)ಯಿಂದಲೇ ಚಿಕಿತ್ಸೆ, ಸಾವು!

Manohar Parrikar

ಅನಾರೋಗ್ಯಕ್ಕೀಡಾದ ಪರಿಕ್ಕರ್ ಅವರನ್ನೇ ಗೋವಾ ಸಿಎಂ ಆಗಿಸುವುದು ಬಿಜೆಪಿಯ ಆಮಾನವೀಯ ರಾಜಕೀಯದಾಟ: ಶಿವಸೇನಾ

Lance Naik Sandeep Singh

ಉಗ್ರರ ಜೊತೆ ಕಾದಾಟ: ಸರ್ಜಿಕಲ್ ಸ್ಟ್ರೈಕ್ ಹೀರೋ ಲಾನ್ಸ್ ನಾಯಕ್ ಸಂದೀಪ್ ಸಿಂಗ್ ಹುತಾತ್ಮ

Sushil Modi

ಪಿತೃಪಕ್ಷದ ವೇಳೆ ಅಪರಾಧಗಳಿಂದ ದೂರವಿರಿ: ಕ್ರಿಮಿನಲ್ ಗಳಿಗೆ ಸುಶೀಲ್ ಮೋದಿ ಸಲಹೆ

Trishna Shakhya

ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡ ನೇಪಾಳದ 'ಜೀವಂತ ದೇವತೆ' ತ್ರಿಶ್ನಾ ಶಕ್ಯ

China says hard to proceed on trade talks with US putting

ಅಮೆರಿಕದೊಂದಿಗೆ ವಾಣಿಜ್ಯ ಸಂಬಂಧ ಮುಂದುವರಿಕೆ ಕಷ್ಟ: ಚೀನಾ ಹೇಳಿಕೆ

File photo

ವಿರಳಾತಿ ವಿರಳ ಹೊಸ ಪ್ರಭೇದದ ಹಾವು ಹಂಪಿಯಲ್ಲಿ ಪತ್ತೆ!

ಮುಖಪುಟ >> ರಾಷ್ಟ್ರೀಯ

ಎಲ್ ಒಸಿ ಬಳಿ ದಾಳಿ ಮಾಡಲು ಕಾದು ಕುಳಿತಿದ್ದಾರೆ 600ಕ್ಕೂ ಅಧಿಕ ಪಾಕಿಸ್ತಾನಿ ಉಗ್ರರು: ಗುಪ್ತಚರ ಇಲಾಖೆ ಎಚ್ಚರಿಕೆ

ಪಾಕ್ ಸೇನೆಯಿಂದಲೇ ದಾಳಿ ಮಾಡಲು ಉಗ್ರರಿಗೆ ಕುಮ್ಮಕ್ಕು, ಬಾರ್ಡರ್‌ ಆಕ್ಷನ್‌ ಟೀಂ ಸೋಗಿನಲ್ಲಿ ಪಾಕ್ ಯೋಧರಿಂದಲೂ ದಾಳಿ ಸಾದ್ಯತೆ
Supported by Pakistan Army, 600 terrorists ready to cross LoC, says Inteligence report

ಸಂಗ್ರಹ ಚಿತ್ರ

ನವದೆಹಲಿ: ಪಾಕಿಸ್ತಾನದ ಪ್ರಧಾನಿಯಾಗಿ ಮಾಜಿ ಕ್ರಿಕೆಟಿಗ ಮತ್ತು ಪಿಟಿಐ ಅಧ್ಯಕ್ಷ ಇಮ್ರಾನ್ ಖಾನ್ ಪ್ರಮಾಣ ವಚನ ಸ್ವೀಕಾರಕ್ಕೂ ಮುನ್ನವೇ ಭಾರತದಲ್ಲಿ ಭಾರಿ ಪ್ರಮಾಣದ ವಿಧ್ವಂಸಕ ಕೃತ್ಯವೆಸಗಲು ಪಾಕಿಸ್ತಾನ ಸೇನೆ ಪ್ರಾಯೋಜಿತ ಉಗ್ರರು ಸಂಚು ರೂಪಿಸಿದ್ದಾರೆ ಎಂದು ಕೇಂದ್ರ ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ.

ಇದೇ ಆಗಸ್ಟ್ 11ರಂದು ಪಾಕಿಸ್ತಾನ ಪ್ರಧಾನಿಯಾಗಿ ಇಮ್ರಾನ್ ಖಾನ್ ಅವರು ಪ್ರಮಾಣ ವಚನ ಸ್ವೀಕರಿಸುತ್ತಿದ್ದು, ಆಗಸ್ಚ್ 15ರಂದು ಭಾರತದಲ್ಲಿ ಸ್ವಾತಂತ್ಯ್ರ ದಿನಾಚರಣೆ ನಡೆಯುತ್ತಿದೆ. ಈ ಎರಡೂ ಕಾರ್ಯಕ್ರಮಗಳ ನಡುವೆ ಭಾರತದಲ್ಲಿ ಭಾರಿ ಪ್ರಮಾಣದ ವಿದ್ವಂಸಕ ಕೃತ್ಯವೆಸಗಲು ಪಾಕಿಸ್ತಾನ ಮೂಲದ ಉಗ್ರರು ಸಂಚು ರೂಪಿಸುತ್ತಿದ್ದಾರೆ ಎಂದು ಕೇಂದ್ರ ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ.

ಆತಂಕಕಾರಿ ವಿಚಾರವೆಂದರೆ ಉಗ್ರರ ದುಷ್ಕೃತ್ಯಕ್ಕೆ ಪಾಕಿಸ್ತಾನಿ ಸೇನೆ ಮತ್ತು ಪಾಕ್ ಗುಪ್ತಚರ ಇಲಾಖೆ ಐಎಸ್ಐ ಬೆಂಬಲ ನೀಡುತ್ತಿದೆ. ಅಲ್ಲದೆ ಉಗ್ರರ ಬಾರ್ಡರ್ ಆ್ಯಕ್ಷನ್ ಟೀಂ (ಬ್ಯಾಟ್)ತಂಡದ ಸೋಗಿನಲ್ಲಿ ಪಾಕಿಸ್ತಾನಿ ಸೈನಿಕರೇ ಭಾರತೀಯ ಯೋಧರ ಮೇಲೆ ದಾಳಿ ಮಾಡಲು ಸಂಚು ರೂಪಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಗಡಿಯಲ್ಲಿ ಈಗಾಗಲೇ ಸುಮಾರು 600ಕ್ಕೂ ಅಧಿಕ ಉಗ್ರರು ಮತ್ತು ಉಗ್ರರ ಸೋಗಿನಲ್ಲಿರುವ ಪಾಕಿಸ್ತಾನಿ ಸೈನಿಕರು ಗಡಿನಿಯಂತ್ರಣ ರೇಖೆ ದಾಟಲು ಕಾದು ಕುಳಿತಿದ್ದು, ಅವಕಾಶ ಸಿಕ್ಕಾಕ್ಷಣವೇ ಗಡಿ ನುಸುಳಲು ಕಾಯುತ್ತಿದ್ದಾರೆ ಎಂದು ಗುಪ್ತಚರ ಇಲಾಖೆ ಹೇಳಿದೆ.

ಈ ಬಗ್ಗೆ ಕೇಂದ್ರ ಗೃಹ ಇಲಾಖೆಗೆ ವರದಿಯನ್ನು ಕೂಡ ನೀಡಲಾಗಿದ್ದು, ಸೇನೆಗೆ ಗಡಿಯಲ್ಲಿ ಕಟ್ಟೆಚ್ಚರದಿಂದ ಇರುವಂತೆ ಸೂಚಿಸಲಾಗಿದೆ.

ಇನ್ನು ವರದಿಯಲ್ಲಿರುವಂತೆ ಈ ಹಿಂದೆ ನಡೆದ ಸರ್ಜಿಕಲ್ ದಾಳಿಯ ಬಳಿಕ ಇದೇ ಮೊದಲ ಬಾರಿಗೆ ಉಗ್ರರು ಇಂತಹುದೊಂದು ಸಂಚು ರೂಪಿಸಿದ್ದಾರೆ ಎನ್ನಲಾಗಿದೆ.
ಸಂಬಂಧಿಸಿದ್ದು...
Posted by: SVN | Source: Online Desk

ಕನ್ನಡ ಮ್ಯಾಟ್ರಿಮನಿಯಲ್ಲಿ
ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ -
ನೋಂದಣಿ ಉಚಿತ!

Topics : New Delhi, Inteligence Department, Pakistan Army, indian Army, Terrorist, LoC, ನವದೆಹಲಿ, ಗುಪ್ತಚರ ಇಲಾಖೆ, ಪಾಕಿಸ್ತಾನ ಸೇನೆ, ಭಾರತೀಯ ಸೇನೆ, ಉಗ್ರರು, ಗಡಿನಿಯಂತ್ರಣ ರೇಖೆ

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS