Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Duniya Viji

ನಟ ದುನಿಯಾ ವಿಜಿಗೆ 14 ದಿನಗಳ ನ್ಯಾಯಾಂಗ ಬಂಧನ :8ನೇ ಎಸಿಎಂಎಂ ಕೋರ್ಟ್ ಆದೇಶ!

PM Narendra Modi

ಅನಿಲ್ ಅಂಬಾನಿಗೆ ಮಾಹಿತಿ ಸೋರಿಕೆ ಮೂಲಕ ಗೌಪ್ಯತೆ ಉಲ್ಲಂಘಿಸಿದ ಪ್ರಧಾನಿ :ಕಾಂಗ್ರೆಸ್ ಆರೋಪ

Imran Khan , PM Modi

ಭಾರತಕ್ಕೆ'ಸ್ನೇಹ 'ದ ಆಪರ್ :ದೌರ್ಬಲ್ಯವೆಂದು ಪರಿಗಣಿಸಬಾರದು:ಇಮ್ರಾನ್ ಖಾನ್

Casual Photo

ಕುಪ್ವಾರದಲ್ಲಿ ಎನ್ ಕೌಂಟರ್ :2 ಉಗ್ರರನ್ನು ಹೊಡೆದುರುಳಿಸಿದ ಭದ್ರತಾ ಪಡೆ!

Shikar dhavan , Rohith Sharma

ಏಷ್ಯಾ ಕಪ್ 2018 :ಪಾಕಿಸ್ತಾನ ವಿರುದ್ಧ ಭಾರತಕ್ಕೆ 9 ವಿಕೆಟ್ ಗಳ ಭರ್ಜರಿ ಜಯ !

Ehsan Mani

ಕ್ರಿಕೆಟ್ ವಿಷಯಗಳಲ್ಲಿ ರಾಜಕಾರಣಿಗಳು ಮಧ್ಯಪ್ರವೇಶಿಸಬಾರದು:ಪಿಸಿಬಿ ಮುಖ್ಯಸ್ಥ

Casual Photo

ಹಿಂದೂ ಮಹಾಸಾಗರದಲ್ಲಿ ಸಂಕಷ್ಟಕ್ಕೆ ಸಿಲುಕಿದ ನೌಕ ಅಧಿಕಾರಿ 16 ತಾಸುಗಳಲ್ಲೇ ರಕ್ಷಣೆ

Sarveswara Rao

ಆಂಧ್ರಪ್ರದೇಶ: ಇಬ್ಬರು ಟಿಡಿಪಿ ನಾಯಕರನ್ನು ಗುಂಡಿಕ್ಕಿ ಹತ್ಯೆ ಮಾಡಿದ ಮಹಿಳಾ ಮಾವೋವಾದಿಗಳು!

ದುನಿಯಾ ವಿಜಯ್-ಕೀರ್ತಿಗೌಡ-ನಾಗರತ್ನ

ದುನಿಯಾ ವಿಜಿಗೆ ಮತ್ತೊಂದು ಸಂಕಷ್ಟ: ಮೊದಲ ಪತ್ನಿಯಿಂದ 2ನೇ ಪತ್ನಿ ವಿರುದ್ಧ ದೂರು!

Team India Players

ಇಂಡೋ-ಪಾಕ್ ಹಣಾಹಣಿ :ಭಾರತ ಬೌಲಿಂಗ್ ದಾಳಿಗೆ ಕುಸಿದ ಪಾಕ್ :237 ರನ್ ಗಳಿಗೆ ಸರ್ವಪತನ

Congress candidates

ವಿಧಾನಪರಿಷತ್ ಉಪಚುನಾವಣೆ : ಕಾಂಗ್ರೆಸ್ ಅಭ್ಯರ್ಥಿಗಳ ಹೆಸರು ಪ್ರಕಟ

ಚಂದ್ರಶೇಖರ್ ರಾವ್

ನಮ್ಮಲ್ಲಿ ಆರೋಗ್ಯಶ್ರೀ ಯೋಜನೆಯಿದೆ, ಆಯೂಷ್ಮಾನ್ ಭಾರತ್ ನಮಗೇಕೆ!

Donald Trump-Hassan Rouhani

ಟ್ರಂಪ್ ಜಾಸ್ತಿ ಎಗರಾಡಬೇಡಿ, ಸದ್ದಾಂ ಹುಸೇನ್‌ಗೆ ಆದ ಗತಿ ನಿಮಗೂ ಆಗಬಹುದು: ಇರಾನ್ ಅಧ್ಯಕ್ಷ ರೋಹಾನಿ

ಮುಖಪುಟ >> ರಾಷ್ಟ್ರೀಯ

ಸಲಿಂಗಕಾಮ: ಕಾನೂನು ಹೋರಾಟ ಬೆಳೆದು ಬಂದ ಹಾದಿ

17 ವರ್ಷಗಳ ಸುದೀರ್ಘ ಕಾನೂನು ಹೋರಾಟಕ್ಕೆ ತಾರ್ಕಿಕ ಅಂತ್ಯ ಹಾಡಿದ ಸುಪ್ರೀಂ ಕೋರ್ಟ್
Timeline: Gay Rights Movement in India

ಸಂಗ್ರಹ ಚಿತ್ರ

ನವದೆಹಲಿ: ಸಲಿಂಗ ಕಾಮ ಅಪರಾಧ ಎನ್ನುವ 156 ವರ್ಷಗಳ ಹಳೆಯ ಕಾನೂನು ಐಪಿಸಿ ಸೆಕ್ಷನ್ 377 ಅನ್ನು ಸುಪ್ರೀಂ ಕೋರ್ಟ್ ಅಧಿಕೃತವಾಗಿ ರದ್ದುಗೊಳಿಸಿದ್ದು, ಸಲಿಂಗಕಾಮ ಅಪರಾಧವಲ್ಲ ಎಂದು ಮಹತ್ವದ ತೀರ್ಪು ನೀಡಿದೆ.

ಆ ಮೂಲಕ ಸಲಿಂಗಿಗಳ ಸುಮಾರು 2 ದಶಕಗಳ ಕಾನೂನು ಹೋರಾಟಕ್ಕೆ ಜಯ ದೊರೆತಿದ್ದು, ಸಲಿಂಗಿಗಳ ಕಾನೂನು ಹೋರಾಟ ಬೆಳೆದು ಬಂದ ಹಾದಿ ಸಂಕ್ಷಿಪ್ತ ಕಿರು ಪರಿಚಯ ಇಲ್ಲಿದೆ.

2001: ಇಬ್ಬರು ವಯಸ್ಕರ ನಡುವಣ ಸಮ್ಮತ ಸಲಿಂಗಕಾಮವನ್ನು ಕಾನೂನುಬದ್ಧಗೊಳಿಸಬೇಕು ಎಂದು ಮನವಿ ಮಾಡಿ ಸಲಿಂಗಿಗಳ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿದ್ದ ಸ್ವಯಂ ಸೇವಾ ಸಂಸ್ಥೆ (ಎನ್‌ಜಿಒ) ನಾಜ್‌ ಫೌಂಡೇಷನ್‌ನಿಂದ ದೆಹಲಿ ಹೈಕೋರ್ಟ್‌ಗೆ ಮೊದಲ ಬಾರಿಗೆ ಅರ್ಜಿ ಸಲ್ಲಿಕೆ ಮಾಡಿತ್ತು.

2004, ಸೆಪ್ಟೆಂಬರ್‌ 2: ಅರ್ಜಿ ವಜಾ ಮಾಡಿದ ಹೈಕೋರ್ಟ್‌. ಅದೇ ತಿಂಗಳು ಮರುಪರಿಶೀಲನಾ ಅರ್ಜಿ ಸಲ್ಲಿಸಿದ ಸಲಿಂಗಿಗಳ ಹಕ್ಕುಗಳ ಕಾರ್ಯಕರ್ತರು

ನವೆಂಬರ್‌ 3: ಪುನರ್‌ ಪರಿಶೀಲನಾ ಅರ್ಜಿ ತಿರಸ್ಕರಿಸಿದ ಹೈಕೋರ್ಟ್‌

ಡಿಸೆಂಬರ್‌: ಹೈಕೋರ್ಟ್‌ ಆದೇಶದ ವಿರುದ್ಧ ಸಲಿಂಗಿಗಳ ಹಕ್ಕುಗಳ ಕಾರ್ಯಕರ್ತರಿಂದ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ

ಏಪ್ರಿಲ್‌, 2006: ಆದ್ಯತೆಯ ಮೇರೆಗೆ ಅರ್ಜಿಯನ್ನು ಪರಿಗಣಿಸುವಂತೆ ಹೈಕೋರ್ಟ್ ಗೆ ಸೂಚಿಸಿದ ಸುಪ್ರೀಂ ಕೋರ್ಟ್‌

ಸೆಪ್ಟೆಂಬರ್‌, 2008: ಸಲಿಂಗಕಾಮ ಅಪರಾಧವೇ ಅಲ್ಲವೇ ಎಂಬ ವಿಚಾರದಲ್ಲಿ ಕೇಂದ್ರ ಗೃಹ ಮತ್ತು ಆರೋಗ್ಯ ಸಚಿವಾಲಯಗಳ ನಡುವೆ ಭಿನ್ನಾಭಿಪ್ರಾಯ. ಪ್ರತಿಕ್ರಿಯೆ ನೀಡಲು ಹೆಚ್ಚುವರಿ ಸಮಯ ನೀಡಲು ಹೈಕೋರ್ಟ್ ಗೆ ಕೇಂದ್ರ ಸರ್ಕಾರದಿಂದ ಮನವಿ. ಆದರೆ ಸರ್ಕಾರದ ಮನವಿ ತಿರಸ್ಕಾರ. ಅಂತಿಮ ವಾದ–ಪ್ರತಿವಾದ ಆರಂಭ

ಸೆಪ್ಟೆಂಬರ್‌ 25: ನೈತಿಕತೆಯ ಆಧಾರದಲ್ಲಿ ಸಲಿಂಗಕಾಮವನ್ನು ಅಪರಾಧ ಎಂದು ಘೋಷಿಸಿ ತಮ್ಮ ಮೂಲಭೂತಹಕ್ಕುಗಳನ್ನು ಸರ್ಕಾರಕ್ಕೆ ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ಸಲಿಂಗಿಗಳ ಹಕ್ಕುಗಳ ಕಾರ್ಯಕರ್ತರಿಂದ ವಾದ

ಸೆಪ್ಟೆಂಬರ್‌ 26: ಸಲಿಂಗಕಾಮ ಕಾನೂನಿನ ವಿಚಾರವಾಗಿ ಕೇಂದ್ರ ಗೃಹ ಮತ್ತು ಆರೋಗ್ಯ ಸಚಿವಾಲಯಗಳು ಭಿನ್ನ ನಿಲುವಿನ ಪ್ರಮಾಣಪತ್ರ ಸಲ್ಲಿಸಿದ್ದಕ್ಕೆ ಕೇಂದ್ರಕ್ಕೆ ಹೈಕೋರ್ಟ್‌ ತರಾಟೆ

‘ಸಲಿಂಗಕಾಮ ಅನೈತಿಕ. ಅದು ಅಪರಾಧ ಅಲ್ಲ ಎಂದು ಘೋಷಿಸಿದರೆ ಸಮಾಜವು ನೈತಿಕವಾಗಿ ಅಧಃಪತನಕ್ಕೆ ಇಳಿಯುತ್ತದೆ’ ಎಂದು ವಾದಿಸಿದ ಕೇಂದ್ರ

ಅಕ್ಟೋಬರ್‌ 15, 2008: ಸಲಿಂಗಕಾಮದ ಮೇಲೆ ನಿರ್ಬಂಧ ಹೇರಲು ಧರ್ಮಗ್ರಂಥಗಳನ್ನು ಆಧಾರವಾಗಿಟ್ಟುಕೊಂಡ ಕೇಂದ್ರ ಸರ್ಕಾರವನ್ನು ಮತ್ತೆ ತರಾಟೆಗೆ ತೆಗೆದುಕೊಂಡ ಹೈಕೋರ್ಟ್‌. ವಾದದ ಸಮರ್ಥನೆಗೆ ವೈಜ್ಞಾನಿಕ ವರದಿಗಳನ್ನು ಮಂಡಿಸುವಂತೆ ಸೂಚನೆ

ನವೆಂಬರ್‌: ‘ಈ ಬಗ್ಗೆ ನಿರ್ಧಾರ ಕೈಗೊಳ್ಳುವುದು ಸಂಸತ್ತಿನ ಹಕ್ಕು. ನ್ಯಾಯಾಂಗವು ಇಂತಹ ವಿಚಾರಗಳಲ್ಲಿ ಮಧ್ಯಪ್ರವೇಶಿಸಬಾರದು ಎಂದು ಕೇಂದ್ರದಿಂದ ಲಿಖಿತ ಹೇಳಿಕೆ

ನವೆಂಬರ್‌ 7: ತೀರ್ಪು ಕಾಯ್ದಿರಿಸಿದ ಹೈಕೋರ್ಟ್‌

ಜುಲೈ, 2009: ಸಲಿಂಗಿ ಕಾರ್ಯಕರ್ತರ ಅರ್ಜಿ ಮಾನ್ಯ ಮಾಡಿದ ದೆಹಲಿ ಹೈಕೋರ್ಟ್‌, ಸಲಿಂಗಕಾಮ ಅಪರಾಧ ಅಲ್ಲ ಎಂದು ತೀರ್ಪು

ಜುಲೈ: ಹೈಕೋರ್ಟ್‌ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ ದೆಹಲಿಯ ಜ್ಯೋತಿಷಿ. ತದ ನಂತರ ತೀರ್ಪನ್ನು ವಿರೋಧಿಸಿ ಹಲವರಿಂದ ಅರ್ಜಿ

ಫೆಬ್ರುವರಿ 15, 2012: ಅಂತಿಮ ಹಂತದ ದಿನಂಪ್ರತಿ ವಿಚಾರಣೆ ಆರಂಭಿಸಿದ ಸುಪ್ರೀಂ ಕೋರ್ಟ್‌

ಮಾರ್ಚ್ 27, 2012: ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್‌

ಡಿಸೆಂಬರ್‌ 11,2013: 2009ರ ದೆಹಲಿ ಹೈಕೋರ್ಟ್‌ ತೀರ್ಪು ವಜಾ ಮಾಡಿದ ‘ಸುಪ್ರೀಂ’. ಸಲಿಂಗಕಾಮ ಅಪರಾಧ ಎಂದು ಘೋಷಣೆ

ಡಿಸೆಂಬರ್‌ 20, 2013: ಸಲಿಂಗಕಾಮದ ವಿರುದ್ಧ ಹೇರಲಾಗಿರುವ ನಿರ್ಬಂಧವನ್ನು ವಾಪಸ್‌ ಪಡೆಯುವಂತೆ ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸರ್ಕಾರ ಮನವಿ.

ಜನವರಿ 28, 2014: ಕೇಂದ್ರ ಸರ್ಕಾರದ ಅರ್ಜಿಯನ್ನು ವಜಾ ಮಾಡಿದ ‘ಸುಪ್ರೀಂ’ ಕೋರ್ಟ್

ಜೂನ್‌ 30, 2016: ಸಲಿಂಗಕಾಮವನ್ನು ಕಾನೂನುಬದ್ಧಗೊಳಿಸುವಂತೆ ಮನವಿ ಮಾಡಿ ಲೈಂಗಿಕ ಅಲ್ಪಸಂಖ್ಯಾತ ಸಮುದಾಯದ ಐವರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗೆ ಕಳುಹಿಸಿದ ಇಬ್ಬರು ನ್ಯಾಯಮೂರ್ತಿಗಳ ನ್ಯಾಯಪೀಠ

ಆಗಸ್ಟ್ 24, 2017: ‘ಖಾಸಗಿತನವು ಮೂಲಭೂತ ಹಕ್ಕು’ ಎಂದು ಐತಿಹಾಸಿಕ ತೀರ್ಪು ನೀಡಿದ ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠ. ‘ಲೈಂಗಿಕ ಪ್ರವೃತ್ತಿಯು ವ್ಯಕ್ತಿಯೊಬ್ಬನ ಖಾಸಗಿತನದ ಅತ್ಯಂತ ಪ್ರಮುಖ ಭಾಗ’ ಎಂದು ಪ್ರತಿಪಾದನೆ.

ಜನವರಿ 8, 2018: ಐಪಿಸಿ ಸೆಕ್ಷನ್‌ 377 ಅನ್ನು ಸುಪ್ರೀಂಕೋರ್ಟ್ ನ ವಿಸ್ತೃತ ಪೀಠಕ್ಕೆ ಶಿಫಾರಸು ಮಾಡಿದ ಸುಪ್ರೀಂ ಕೋರ್ಟ್‌. ‘2013ರ ತೀರ್ಪನ್ನು ಮರುಪರಿಶೀಲಿಸುವ ಅಗತ್ಯವಿದೆ’ ಎಂದು ಹೇಳಿಕೆ

ಜುಲೈ 13, 2018: ಸಮ್ಮತಿಯ ಸಲಿಂಗಕಾಮ ಅಪರಾಧಮುಕ್ತಗೊಂಡರೆ, ಲೈಂಗಿಕ ಅಲ್ಪಸಂಖ್ಯಾತ ಸಮುದಾಯದ ಮೇಲಿನ ಕಳಂಕ ಮತ್ತು ಅವರನ್ನು ತಾರತಮ್ಯದಿಂದ ನೋಡುವ ಮನೋಭಾವ ತನ್ನಿಂತಾನೆ ಬದಲಾಗುತ್ತದೆ ಎಂದು ಅಭಿಪ್ರಾಯಪಟ್ಟ ಸುಪ್ರೀಂ ಕೋರ್ಟ್‌

ಸೆಪ್ಟೆಂಬರ್ 6, 2018: ಸಲಿಂಗ ಕಾಮ ಅಪರಾಧವಲ್ಲ ಎಂದು ತೀರ್ಪು ನೀಡಿದ ಸುಪ್ರೀಂ ಕೋರ್ಟ್,  ಐಪಿಸಿ ಸೆಕ್ಷನ್ 377 ರದ್ದು ಗೊಳಿಸಿ ಆದೇಶ
ಸಂಬಂಧಿಸಿದ್ದು...
Posted by: SVN | Source: Online Desk

ಕನ್ನಡ ಮ್ಯಾಟ್ರಿಮನಿಯಲ್ಲಿ
ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ -
ನೋಂದಣಿ ಉಚಿತ!

Topics : Section 377 Verdict, LGBT Rights, Gay Rights Movement, India, ನವದೆಹಲಿ, ಸಲಿಂಗಗಳ ಹಕ್ಕು, ಸಲಿಂಗಿ ಹೋರಾಟ, ಭಾರತ

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS