Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Ameerul Islam

ಜಿಶಾ ಅತ್ಯಾಚಾರ ಮತ್ತು ಕೊಲೆ: ಅಮೀರುಲ್ ಇಸ್ಲಾಂಗೆ ಗಲ್ಲು ಶಿಕ್ಷೆ

PM Modi

ಗುಜರಾತ್ 2ನೇ ಹಂತದ ಮತದಾನ: ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ ಮೋದಿ

Rohit Sharma

ತಂದೆಯ ಶಸ್ತ್ರಚಿಕಿತ್ಸೆಗಾಗಿ ಸ್ವದೇಶಕ್ಕೆ ಮರಳಲು ಲಂಕಾ ಅಭಿಮಾನಿಗೆ ರೋಹಿತ್ ವಿಮಾನ ಟಿಕೆಟ್ ವ್ಯವಸ್ಥೆ!

Shambhulal

ರಾಜಸ್ಥಾನ ಹತ್ಯೆ ಪ್ರಕರಣ: ಆರೋಪಿ ಶಂಭುಲಾಲ್ ಪತ್ನಿ ಖಾತೆಗೆ ದೇಶದ ವಿವಿಧೆಡೆಗಳಿಂದ 3 ಲಕ್ಷ ರೂ. ನೆರವು

Rohit Sharma

ವಿವಾಹ ವಾರ್ಷಿಕೋತ್ಸವಕ್ಕೆ ದ್ವಿಶತಕದ ಉಡುಗೊರೆ ನೀಡಿದ ರೋಹಿತ್ ಶರ್ಮಾ, ಪತ್ನಿ ರಿತಿಕಾ ಆನಂದಬಾಷ್ಪ!

Rahul Gandhi

ಗುಜರಾತ್ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ: ರಾಹುಲ್ ಗಾಂಧಿ ಜತೆಗೆ ಸುದ್ದಿ ವಾಹಿನಿಗೆ ಸಂಕಷ್ಟ!

Actor Kichcha Sudeep falicitated farmers after the launch of logo of trust

ತಮ್ಮ ಒಂದು ದುಬಾರಿ ಕಾರು ಮಾರಿ ರೈತರಿಗೆ ಸಹಾಯ ಮಾಡಲು ನಟ ಸುದೀಪ್ ಮುಂದು!

Dhruva Sraja

ಧ್ರುವ ಸರ್ಜಾ ಅಭಿನಯದ ಪೊಗರು ಚಿತ್ರಕ್ಕೆ ಮುಹೂರ್ತ, ನಂದ್ ಕಿಶೋರ್ ಆಕ್ಷನ್ ಕಟ್

Narendra Modi

ದೇಶಿ ನಿರ್ಮಿತ ಐಎನ್ಎಸ್ ಕಲ್ವರಿ ಲೋಕಾರ್ಪಣೆಗೊಳಿಸಿದ ಪ್ರಧಾನಿ ಮೋದಿ

Selfie of film team with Srimurali

ಹೊಂಬಾಳೆ ಫಿಲಮ್ಸ್ ಮುಂದಿನ ಚಿತ್ರದಲ್ಲಿ ಶ್ರೀಮುರಳಿ ನಾಯಕ

Ajit Doval

ಪಾಕ್ ಉದ್ಯಮಿಯೊಂದಿಗೆ ಅಜಿತ್ ದೋವಲ್ ಪುತ್ರನ ಪಾಲುದಾರಿಕೆಗೆ ಬಿಜೆಪಿ ಆಕ್ಷೇಪವಿಲ್ಲ ಯಾಕೆ: ಕಾಂಗ್ರೆಸ್

Nikhil Kumar

ತಂದೆಯ ಜನ್ಮ ದಿನಾಚರಣೆಗೆ ಅಭಿಮನ್ಯು ಟೀಸರ್ ಉಡುಗೊರೆ ನೀಡಲಿರುವ ನಿಖಿಲ್

New deadline for Aadhaar linking is March 31, 2018

ಬ್ಯಾಂಕ್ ಖಾತೆ, ಪ್ಯಾನ್, ಮೊಬೈಲ್ ನಂಬರ್ ಗೆ ಆಧಾರ್ ಲಿಂಕ್ ಗಡುವು ಮಾರ್ಚ್ 31ರ ವರೆಗೆ ವಿಸ್ತರಣೆ

ಮುಖಪುಟ >> ರಾಜಕೀಯ

ವಿಧಾನಸಭಾ ಚುನಾವಣೆ: 170 ಸ್ಥಾನ ಪಡೆಯುವುದು ಜೆಡಿ(ಎಸ್) ಗುರಿ

H D Kumaraswamy

ಎಚ್ ಡಿ ಕುಮಾರಸ್ವಾಮಿ

ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ  ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿಯವರಿಗೆ ಸೆಡ್ಡು ಹೊಡೆದು ತನ್ನ ಸ್ವಂತ ಬಲದಲ್ಲಿ ಅಧಿಕಾರಕ್ಕೆ ಬರಲು ಜೆಡಿ (ಎಸ್) ಪಕ್ಷ ತಯಾರಾಗಿದೆ. ಇದಕ್ಕಾಗಿ ಪಕ್ಷವು 'ಮಿಷನ್ 170’ ಎನ್ನುವ ಯೋಜನೆಯೊಂದನ್ನು ಹಾಕಿಕೊಂಡಿದೆ. ಇದೇ ವೇಳೆ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ತನ್ನ 'ಪರಿವರ್ತನಾ ಯಾತ್ರೆ' ಮತ್ತು 'ಮಿಷನ್ 150'ಮೂಲಕ  ಕನಿಷ್ಠ 150 ಸ್ಥಾನಗಳನ್ನು ಗೆಲ್ಲಲು ಪ್ರಯತ್ನಿಸುತ್ತಿದೆ. 

ಪಕ್ಷದಲ್ಲಿನ ಮಿತವಾದ  ಸಂಪನ್ಮೂಲಗಳ ಆಧಾರದ ಮೇಲೆ ಜೆಡಿ (ಎಸ್) 224 ವಿಧಾನಸಭಾ ಕ್ಷೇತ್ರಗಳಲ್ಲಿ 170 ಸ್ಥಾನಗಳಿಗೆ ಮಾತ್ರ  ಮಹತ್ವ ನೀಡಿದ್ದು ಉಳಿದ 54 ಸ್ಥಾನಗಳನ್ನು ಕೈವಶ ಮಾಡಿಕೊಳ್ಳುವುದು ಕಠಿಣ ಎನ್ನುವ ನಿರ್ಧಾರಕ್ಕೆ ಬಂದಿದೆ.

ಪಕ್ಷದ ರಾಜ್ಯಾಧ್ಯಕ್ಷರಾದ ಎಚ್. ಡಿ. ಕುಮಾರಸ್ವಾಮಿ ಒಟ್ಟಾರೆ ಕ್ಷೇತ್ರಗಳನ್ನು ಎ, ಬಿ ಮತ್ತು ಸಿ ವರ್ಗಗಳಾಗಿ ವಿಂಗಡಿಸಿದ್ದು . ಅದರಲ್ಲಿ 80 ಕ್ಷೇತ್ರಗಳು 'ಎ' ವಿಭಾಗದಲ್ಲಿ ಬರಲಿದೆ. ಇಲ್ಲೆಲ್ಲಾ ಪಕ್ಷದ ಅಭ್ಯರ್ಥಿಗಳು ಜಯ ಸಾಧಿಸುತ್ತಾರೆ ಎಂದು ಬಲವಾಗಿ ಹೇಳಬಹುದಾಗಿದೆ. ಇನ್ನುಳಿದ ತೊಂಭತ್ತು ಕ್ಷೇತ್ರಗಳಲ್ಲಿ ಪರಿಶ್ರಮದಿಂದಲೂ, ಸೂಕ್ತ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಮೂಖೇನ ಜಯ ಸಾಧಿಸಬೇಕಿದೆ . ಇನ್ನು 'ಸಿ' ವಿಭಾಗದಲ್ಲಿ ಬರುವ 54 ಸ್ಥಾನಗಳಲ್ಲಿ ಪಕ್ಷವು ಜಯ ಗಳಿಸುವ ಭರವಸೆಯನ್ನು ಹೊಂದಿಲ್ಲ. ಇದರಲ್ಲಿ 'ಎ' ವಿಭಾಗದ ಹೆಚ್ಚಿನ ಕ್ಷೇತ್ರಗಳು ದಕ್ಷಿಣ ಅಥವಾ ಮದ್ಯ ಕರ್ನಾಟಕದಲ್ಲಿ ಬರುತ್ತವೆ.

ಪಕ್ಷದ ಮುಖಂಡರು ಮತ್ತು ಟಿಕೆಟ್ ಆಕಾಂಕ್ಷಿತರ ಸಭೆಯ ನಂತರ ಸುದ್ದಿಗಾರರೊಡನೆ ಮಾತನಾಡಿದ ಕುಮಾರಸ್ವಾಮಿ,  "ನಾವು ಕ್ಷೇತ್ರಗಳನ್ನು ಎ, ಬಿ ಮತ್ತು ಸಿ ವಿಭಾಗಗಳಾಗಿ ವಿಂಗಡಿಸಿದ್ದೇವೆ. ನಾವು ಗೆಲ್ಲಲೇ ಬೇಕಾದ  70 ರಿಂದ 80 ಕ್ಷೇತ್ರಗಳನ್ನು ಮೊದಲ ಪಟ್ಟಿಯಲ್ಲಿ ಹಾಕಿದ್ದೇವೆ. ಇನ್ನು 20 ರಿಂದ 30  ಸ್ಥಾನಗಳಿಗೆ ತೀವ್ರ ಪೈಪೋಟಿ ಎದುರಿಸಿ ಗೆಲ್ಲಬಹುದು. ಒಟ್ಟಾರೆ ನಾವು ಸ್ವಂತ ಬಲದಲ್ಲಿ ಸರ್ಕಾರ ರಚನೆಗೆ ಅಗತ್ಯವಾದ 113 ಸ್ಥಾನಗಳನ್ನು ಪಡೆಯಲು ಪಣ ತೊಟ್ಟಿದ್ದೇವೆ" ಎಂದರು.

ದೇವೇಗೌಡ ಮತ್ತು ಕುಮಾರಸ್ವಾಮಿ 'ಎ' ವಿಭಾಗದಲ್ಲಿ ಬರುವ 80 ಕ್ಷೇತ್ರಗಳಲ್ಲಿ ವ್ಯಾಪಕ ಪ್ರವಾಸ ಮತ್ತು ರ್ಯಾಲಿಗಳನ್ನು ನಡೆಸಲು ಯೋಜನೆ ರೂಪಿಸುತ್ತಿದ್ದಾರೆ ಎರಡನೇ ಹಂತದ ನಾಯಕರು ಮತ್ತು ಆಯಾ ಜಿಲ್ಲೆಯ ಮುಖಂಡರು 'ಬಿ' ವಿಭಾಗದ ಕ್ಷೇತ್ರಗಳಲ್ಲಿ ದೊಡ್ಡ ಮಟ್ಟದ ಪ್ರಚಾರದಲ್ಲಿ ತೊಡಗುತ್ತಾರೆ ಎನ್ನಲಾಗಿದೆ.
Posted by: RHN | Source: The New Indian Express

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು
ಆಯ್ಕೆ ಮಾಡಿ -
ನೋಂದಣಿ ಉಚಿತ!

Topics : Mission 170, JD(S) , BJP, former Prime Minister H D Deve Gowda, H D Kumaraswamy, Assembly Elections, ಮಿಷನ್ 170, ಜೆಡಿ (ಎಸ್), ಬಿಜೆಪಿ, ಮಾಜಿ ಪ್ರಧಾನ ಮಂತ್ರಿ ಎಚ್ ಡಿ ದೇವೇಗೌಡ, ಎಚ್ ಡಿ ಕುಮಾರಸ
English summary
Projecting itself as the only regional party that can prove an effective alternative to national parties Congress and BJP, former Prime Minister H D Deve Gowda-led JD(S) has drawn up ‘Mission 170’ plan to come to power on its own strength.

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS
Advertisement
Advertisement