Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Rafale Row: Let IAF speak up as the case is about its needs, says Supreme court

ರಾಫೆಲ್ ವಿವಾದ: ಈಗಲೇ ದರ ಕುರಿತು ವಾದ ಬೇಡ, ವಾಯು ಸೇನೆ ಸ್ಪಷ್ಟನೆ ನೀಡಲಿ: ಸುಪ್ರೀಂ ಕೋರ್ಟ್

PM Modi delivers keynote address at Singapore Fintech Festival

ಫಿನ್ ಟೆಕ್ ಫೆಸ್ಟಿವಲ್: ಡಿಜಿಟಲ್‌ ಪೇಮೆಂಟ್‌ನಿಂದ ಸಮಯ, ದೇಶಕ್ಕೆ ಹಣ ಉಳಿತಾಯ- ಪ್ರಧಾನಿ ಮೋದಿ

Rohit Sharma

ನ್ಯೂಜಿಲ್ಯಾಂಡ್ ವಿರುದ್ಧದ ಸರಣಿಯಿಂದ ರೋಹಿತ್ ಶರ್ಮಾಗೆ ವಿಶ್ರಾಂತಿ!

ಸಾಂದರ್ಭಿಕ ಚಿತ್ರ

ವಿಚಿತ್ರ ಘಟನೆ: ಮದುವೆ ಮಂಟಪದ ಮುಂದೆ ನಿಂತು ನಾನು ಮತ್ತೊಂದು ಮದುವೆಯಾಗಲ್ಲ ಎಂದು ಗೋಳಾಡಿದ ವಧು!

If today we have a

'ಚಾಯ್‌ವಾಲಾ ಪ್ರಧಾನಿಯಾಗಿದ್ದಾರೆ ಎಂದರೆ ಅದಕ್ಕೆ ಚಾಚಾ ನೆಹರೂ ಕಾರಣ': ಶಶಿ ತರೂರ್

Suzie Bates

ಎದ್ದು ಬಿದ್ದು ಕೊನೆಗೂ ಅದ್ಭುತ ಕ್ಯಾಚ್ ಹಿಡಿದ ಆಟಗಾರ್ತಿ, ವಿಡಿಯೋ ನೋಡಿದ್ರೆ ವಾವ್ಹ್ ಅಂತೀರಾ!

Ajith,

ನಟ ಅಜಿತ್ ನನ್ನು 18 ಕಿಮೀ ದೂರದವರೆಗೂ ಹಿಂಬಾಲಿಸಿದ ಆ ಅಭಿಮಾನಿ ಕೇಳಿದ್ದೇನು?

Deepika and Ranveer Singh

ಇಂದು, ನಾಳೆ ಇಟಲಿಯಲ್ಲಿ ದೀಪಿಕಾ-ರಣವೀರ್ ವಿವಾಹ: 700 ವರ್ಷ ಹಳೆಯ ವಿಲ್ಲಾದಲ್ಲಿ ಮಹೋತ್ಸವ

Representational image

ಹತ್ತರಲ್ಲಿ ಆರು ಮಂದಿ ಪೋಷಕರು ಮಕ್ಕಳಿಗೆ ಲೈಂಗಿಕ ಶಿಕ್ಷಣ ನೀಡುವುದಿಲ್ಲ: ಅಧ್ಯಯನ

Representational image

ಟಾಟಾ ಸಂಸ್ಥೆ ಜತೆ ಒಪ್ಪಂದ ವರದಿ ನಿಜವಲ್ಲ: ಜೆಟ್ ಏರ್ ವೇಸ್

ಸಂಗ್ರಹ ಚಿತ್ರ

ಅರ್ಧ ಕಿಲೋ ಮೀಟರ್ ದೂರ ಬೆನ್ನಟ್ಟಿ ಬಂದ ಹುಲಿ, ಪತರಗುಟ್ಟಿದ ಪ್ರವಾಸಿಗರು; ಭಯಾನಕ ವಿಡಿಯೋ!

ಗೋಲ್ಡಿ ಬೆಹ್ಲ್-ಸೊನಾಲಿ ಬೇಂದ್ರೆ

ಕ್ಯಾನ್ಸರ್​ನಿಂದ ಬಳಲುತ್ತಿರುವ ಬಾಲಿವುಟ್ ನಟಿ ಸೊನಾಲಿ ಬೇಂದ್ರೆ ನೋವಿನಲ್ಲೂ ಗಂಡನಿಗೆ ಬರೆದ ಪತ್ರ!

File photo

ಬಸವೇಶ್ವರನಗರ ಅತ್ಯಾಚಾರ ಪ್ರಕರಣ: ಕಾಮುಕನಿಗಾಗಿ ಪೊಲೀಸರಿಂದ ತೀವ್ರ ಹುಡುಕಾಟ

ಮುಖಪುಟ >> ರಾಜಕೀಯ

ಸಮ್ಮಿಶ್ರ ಸರ್ಕಾರದ ಸಚಿವ ಸಂಪುಟ ವಿಸ್ತರಣೆ; ಕಾಂಗ್ರೆಸ್ ನಲ್ಲಿ ಹೆಚ್ಚಿದೆ ಲಾಬಿ ತಂತ್ರ

Ramalinga Reddy

ರಾಮಲಿಂಗಾ ರೆಡ್ಡಿ

ಬೆಂಗಳೂರು: ಸಮ್ಮಿಶ್ರ ಸರ್ಕಾರದ ಬಹುನಿರೀಕ್ಷಿತ ಸಂಪುಟ ವಿಸ್ತರಣೆ ಸೆಪ್ಟೆಂಬರ್ 3 ನೇ ವಾರದಲ್ಲಿ  ನಡೆಯುವುದಾಗಿ ಘೋಷಣೆಯಾದ ನಂತರ ಇದೀಗ ಕಾಂಗ್ರೆಸ್ ಪಕ್ಷದಲ್ಲಿ ಸಚಿವ ಸ್ಥಾನದ ಆಕಾಂಕ್ಷಿಗಳು ಲಾಬಿ ನಡೆಸಲು ಆರಂಭಿಸಿದ್ದಾರೆ. ಸರ್ಕಾರದಲ್ಲಿ 6 ಸಚಿವ ಸ್ಥಾನ ಖಾಲಿ ಇದ್ದು ಕಾಂಗ್ರೆಸ್ ನಿಂದ ನಾಲ್ಕು ಅಥವಾ ಐದು ಸಚಿವ ಸ್ಥಾನಗಳು ತುಂಬುವ ಸಾಧ್ಯತೆಯಿದೆ.

ಸಮ್ಮಿಶ್ರ ಸರ್ಕಾರ ರಚನೆ ಮತ್ತು ಸಚಿವ ಸಂಪುಟ ವಿಸ್ತರಣೆಯಿಂದ ಕಾಂಗ್ರೆಸ್ ನಲ್ಲಿ ಕೆಲವು ಅಸಮಾಧಾನಗೊಂಡಿರುವ ಹಿರಿಯ ಸಚಿವರುಗಳನ್ನು ಸಂಪುಟ ವಿಸ್ತರಣೆ ವೇಳೆ ಸಮಾಧಾನಪಡಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಕಾಂಗ್ರೆಸ್ ನಲ್ಲಿರುವ ಹಲವು ಹಿರಿಯ ನಾಯಕರಾದ ರಾಮಲಿಂಗಾ ರೆಡ್ಡಿ, ಹೆಚ್ ಕೆ ಪಾಟೀಲ್, ಎಂ ಬಿ ಪಾಟೀಲ್, ರೋಶನ್ ಬೇಗ್, ಸತೀಶ್ ಜಾರಕಿಹೊಳಿ ಮತ್ತು ಎಸ್ ಆರ್ ಪಾಟೀಲ್ ಸಮ್ಮಿಶ್ರ ಸರ್ಕಾರ ರಚನೆಗೊಂಡ ನಂತರ ಅತೃಪ್ತಗೊಂಡ ನಾಯಕರಾಗಿದ್ದಾರೆ. ಆರಂಭದಲ್ಲಿ ಎಂ ಬಿ ಪಾಟೀಲ್ ಅವರು ಪಕ್ಷದ ಕೆಲವು ಶಾಸಕರೊಂದಿಗೆ ಗುಂಪು ರಚಿಸಿಕೊಂಡು ಬಂಡಾಯ ಏಳುವ ಬೆದರಿಕೆಯನ್ನು ಕೂಡ ಹಾಕಿದ್ದರು. ನಂತರ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿಯವರು ಮಧ್ಯ ಪ್ರವೇಶಿಸಿ ಮತ್ತು ರಾಹುಲ್ ಗಾಂಧಿಯವರು ಎಂ ಬಿ ಪಾಟೀಲ್ ಅವರನ್ನು ದೆಹಲಿಗೆ ಕರೆದು ಮಾತುಕತೆ ನಡೆಸಿ ಆ ವಿವಾದವನ್ನು ತಣ್ಣಗಾಗಿಸಿದರು.

ಮೂಲಗಳಿಂದ ಸಿಕ್ಕಿರುವ ಮಾಹಿತಿ ಪ್ರಕಾರ, ಕಾಂಗ್ರೆಸ್ ರಾಮಲಿಂಗಾ ರೆಡ್ಡಿ ಮತ್ತು ಎಸ್ ಆರ್ ಪಾಟೀಲ್ ಅವರನ್ನು ಸಚಿವ ಸ್ಥಾನಕ್ಕೆ ಪರಿಗಣಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ರಾಮಲಿಂಗಾ ರೆಡ್ಡಿಯವರನ್ನು ಸೇರಿಸಿಕೊಂಡರೆ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮೂರು ಲೋಕಸಭಾ ಸ್ಥಾನಗಳಲ್ಲಿ ಕಾಂಗ್ರೆಸ್ ಗೆ ವರದಾನವಾಗಲಿದೆ.

ಇನ್ನು ಮಾಜಿ ಮುಖ್ಯಮಂತ್ರಿ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಎಸ್ ಆರ್ ಪಾಟೀಲ್ ಅವರನ್ನು ಸಂಪುಟಕ್ಕೆ ಸೇರ್ಪಡೆ ಮಾಡುವಂತೆ ಶಿಫಾರಸು ಮಾಡುವ ಸಾಧ್ಯತೆಯಿದೆ. ಲಿಂಗಾಯತ ಸಮುದಾಯದ ಉತ್ತರ ಕರ್ನಾಟಕವನ್ನು ಪ್ರತಿನಿಧಿಸುವ ಎಸ್ ಆರ್ ಪಾಟೀಲ್ ಅವರು, ಬಾದಾಮಿ ಕ್ಷೇತ್ರದಿಂದ ಸಿದ್ದರಾಮಯ್ಯ ಅವರು ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇನ್ನು ಭದ್ರಾವತಿ ಶಾಸಕ ಬಿ ಕೆ ಸಂಗಮೇಶ್ ಮತ್ತು ಚಳ್ಳಕೆರೆ ಶಾಸಕ ರಘುಮೂರ್ತಿ ಅವರನ್ನು ಕೂಡ ಸಂಪುಟ ಸೇರ್ಪಡೆಗೆ ಪರಿಗಣಿಸುವ ಸಾಧ್ಯತೆಯಿದೆ.

ಸಚಿವಾಕಾಂಕ್ಷಿಗಳ ಪಟ್ಟಿ ಕಾಂಗ್ರೆಸ್ ನಲ್ಲಿ ಹೆಚ್ಚಾಗಿದ್ದು ಕೆಲವು ಅತೃಪ್ತರಿಗೆ ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನ ನೀಡಿ ಸಮಾಧಾನಪಡಿಸುವ ಸಾಧ್ಯತೆಯಿದೆ. ಸಚಿವ ಸಂಪುಟ ವಿಸ್ತರಣೆ ಜೊತೆಗೆ ನಿಗಮ ಮಂಡಳಿಗಳ ಅಧ್ಯಕ್ಷರ ನೇಮಕಾತಿ ಕೂಡ ನಡೆಯಲಿದೆ.

Posted by: SUD | Source: The New Indian Express

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : Cabinet expansion, Government, Congress, Ramalinga Reddy, Siddaramaiah, ಸಚಿವ ಸಂಪುಟ ವಿಸ್ತರಣೆ, ಸರ್ಕಾರ, ಕಾಂಗ್ರೆಸ್, ರಾಮಲಿಂಗಾ ರೆಡ್ಡಿ, ಸಿದ್ದರಾಮಯ್ಯ

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS