Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
CM H.D Kumaraswamy

ನಾನು ರಾಜ್ಯದ ಜನತೆಯ ಮುಲಾಜಿನಲ್ಲಿಲ್ಲ, ಕಾಂಗ್ರೆಸ್ ಪಕ್ಷದ ಮುಲಾಜಿನಲ್ಲಿದ್ದೇನೆ: ಸಿಎಂ ಹೆಚ್ ಡಿ ಕುಮಾರಸ್ವಾಮಿ

PM Modi pays homage to Nehru on his death anniversary; hails Savarkar

ನೆಹರೂಗೆ ಗೌರವ ಸಲ್ಲಿಸುತ್ತ ಸಾವರ್ಕರ್ ಹಾಡಿ ಹೊಗಳಿದ ಪ್ರಧಾನಿ ಮೋದಿ

Chandrababu naidu

ಮೋದಿ ಪ್ರಚಾರದ ಪ್ರಧಾನಿ : 2019 ರಲ್ಲಿ ಬಿಜೆಪಿ ಖಂಡಿತ ಅಧಿಕಾರಕ್ಕೆ ಬರಲ್ಲ- ಚಂದ್ರಬಾಬು ನಾಯ್ಡು

Lok Sabha polls 2019: Former Kerala Chief Minister AK Antony says Congress cannot fight BJP single-handedly

ಬಿಜೆಪಿ ವಿರುದ್ಧ ಕಾಂಗ್ರೆಸ್ ಏಕಾಂಗಿಯಾಗಿ ಹೋರಾಡಲು ಸಾಧ್ಯವಿಲ್ಲ: ಎಕೆ ಆಂಟನಿ

Lingayat religion tag: Will move Supreme Court if needed, dares Mathe Mahadevi

ಲಿಂಗಾಯತ ಪ್ರತ್ಯೇಕ ಧರ್ಮ; ಸುಪ್ರೀಂ ಮೊರೆ ಹೋಗುತ್ತೇವೆ: ಮಾತೆ ಮಹಾದೇವಿ

Election Commission contradicts Central Information Commission

ರಾಜಕೀಯ ಪಕ್ಷಗಳು ಆರ್ ಟಿಐ ವ್ಯಾಪ್ತಿಗೆ ಬರುವುದಿಲ್ಲ: ಕೇಂದ್ರ ಮಾಹಿತಿ ಆಯೋಗದ ನಿರ್ದೇಶನಕ್ಕೆ ಚುನಾವಣಾ ಆಯೋಗ ವಿರೋಧ

Hafiz Saeed

ಹಫೀಜ್ ಸಯೀದ್ ನ್ನು ಕಾನೂನಿನ ಕಟಕಟೆಗೆ ತಂದರೆ ಪಾಕ್ ರಾಜಕೀಯ ಬೆಲೆ ತೆರಬೇಕಾದೀತು: ಮಾಜಿ ಐಎಸ್ಐ ಮುಖ್ಯಸ್ಥ ಅಸಾದ್ ದುರಾನಿ

Narendra Modi-Nitish Kumar

ಯೂ-ಟರ್ನ್ ಹೊಡೆದ್ರಾ ನಿತೀಶ್, ಮೋದಿ ಸರ್ಕಾರದ ನೋಟು ನಿಷೇಧ ಕುರಿತು ಪ್ರಶ್ನೆ!

India

2027 ರ ವೇಳೆಗೆ 112 ಬಿಲಿಯನ್ ಡಾಲರ್ ನಷ್ಟಾಗಲಿದೆ ಭಾರತದ ರಕ್ಷಣಾ ಬಜೆಟ್ ಗಾತ್ರ!

PM Modi

ದಲಿತರ ಉದ್ದಾರಕ್ಕಾಗಿ ಸರ್ಕಾರ ಪ್ರಯತ್ನಿಸುತ್ತಿದ್ದರೂ ಕಾಂಗ್ರೆಸ್ ಅಪಹಾಸ್ಯ- ಪ್ರಧಾನಿ ಮೋದಿ

Farmers to go on strike from June 1 in Maharashtra

ಜೂನ್ 1ರಿಂದ ಮಹಾರಾಷ್ಟ್ರ ರೈತರಿಂದ ಮುಷ್ಕರ

Pranab mukherjee

ನಾಗ್ಪುರ: ಜೂ.07 ರಂದು ಆರ್ ಎಸ್ ಎಸ್ ಕಾರ್ಯಕರ್ತರನ್ನುದ್ದೇಶಿಸಿ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಭಾಷಣ

Casual photo

ಈಜಿಪ್ಟ್ ನಲ್ಲಿ ತಾತ್ಕಾಲಿಕವಾಗಿ ಯು ಟ್ಯೂಬ್ ಬ್ಯಾನ್ ಮಾಡಿದ ನ್ಯಾಯಾಲಯ

ಮುಖಪುಟ >> ರಾಜಕೀಯ

ನೀವು ಸಿಎಂ ಆಗಲು ಅಷ್ಟು ಸುಲಭವಾಗಿ ಬಿಡಲಾರರು: ಡಿಕೆಶಿಗೆ ದೇವೇಗೌಡರ ಎಚ್ಚರಿಕೆ!

ಡಿ.ಕೆ. ಶಿವಕುಮಾರ್ ಪರ ದೇವೇಗೌಡ ಕುಟುಂಬದ ಮೃದು ಧೋರಣೆ: ಪರೋಕ್ಷವಾಗಿ ಸಿಎಂ ವಿರುದ್ಧ ವಾಗ್ದಾಳಿ
D K Shivakumar. And Deve Gowda  At the Krishik Sarvodaya Foundation silver jubilee programme

ಕಾರ್ಯಕ್ರಮ ಉದ್ಘಾಟಿಸಿದ ದೇವೇಗೌಡ ಮತ್ತು ಡಿ.ಕೆ ಶಿವಕುಮಾರ್

ಬೆಂಗಳೂರು:  ಡಿ.ಕೆ.ಶಿವಕುಮಾರ್‌, ಆರ್.ಅಶೋಕ್‌, ಎಚ್‌.ಡಿ.ಕುಮಾರಸ್ವಾಮಿ ಯಾರಾದರೂ ಮುಖ್ಯಮಂತ್ರಿ ಆಗಲಿ ಅವರ ಹಾದಿ ಹೂವಿನ ಹಾಸಿಗೆಯಾಗಿರುವುದಿಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಹೇಳಿದ್ದಾರೆ.

ಚಾಮರಾಜಪೇಟೆ ಕಿಮ್ಸ್‌ ಆಸ್ಪತ್ರೆ ಆವರಣದಲ್ಲಿರುವ ಕುವೆಂಪು ಕಲಾಕ್ಷೇತ್ರದಲ್ಲಿ ಕೃಷಿಕ್ ಸರ್ವೋದಯ ಫೌಂಡೇಶನ್ ಸಂಸ್ಥೆಯ ಬೆಳ್ಳಿ ಮಹೋತ್ಸವದಲ್ಲಿ   ಸಚಿವ ಡಿ.ಕೆ.ಶಿವಕುಮಾರ್‌ರನ್ನು ಉದ್ದೇಶಿಸಿ ಮಾತನಾಡಿದ ಅವರು, ನಿಮ್ಮನ್ನು ಸುಲಭವಾಗಿ ಮುಖ್ಯಮಂತ್ರಿ ಆಗಲು ಬಿಡುತ್ತಾರೆ ಎಂದು ತಿಳಿಯಬೇಡಿ. ಅದು ಅಷ್ಟು ಸುಲಭವಲ್ಲ ಎಂದು ಹೇಳಿದರು. 

ರಾಜಕೀಯ ಜೀವನದಲ್ಲಿ ಮೊದಲಿನಿಂದಲೂ  ಶಿಕ್ಷೆ ಅನುಭವಿಸುತ್ತಲೇ ಬಂದಿದ್ದೇನೆ. ಸಿಎಂ ಆಗುವುದು ಅಷ್ಟು ಸುಲಭವಲ್ಲ,  ಡಿ.ಕೆ. ಶಿವಕುಮಾರ್, ಆರ್. ಅಶೋಕ್, ಕುಮಾರಸ್ವಾಮಿ ಸೇರಿದಂತೆ ಯಾರಾದ್ರೂ ಮುಖ್ಯಮಂತ್ರಿ ಆಗಲಿ. ಅವರರವರ ಹಣೆಬರಹ ಹೇಗಿದೆಯೋ.. ಅದೇ ಆಗಲಿದೆ ಎಂದರು.

ದೇವೇಗೌಡರ ಈ ಮಾತು ಕೇಳುತ್ತಿದ್ದಂತೆ ದೇವೇಗೌಡರ ಮುಖ ನೋಡಿ ಕೈ ಜೋಡಿಸಿ ನಮಸ್ಕರಿಸುತ್ತಲೇ ಡಿ.ಕೆ. ಶಿವಕುಮಾರ್ ಮುಗುಳ್ನಕ್ಕರು. ನಾನು ಅನುಭವಿಸಿದ್ದನ್ನೇ ಹೇಳ್ತಿದ್ದೀನಿ. ನಾವು ಎರಡನೇ ದರ್ಜೆಯಲ್ಲಿದ್ದೇವೆ. ನಮ್ಮನ್ನು ಮೊದಲ ದರ್ಜೆಗೆ ಹೋಗೋಕೆ ಬಿಡಲ್ಲ ಎಂದು ಹೇಳಿದರು. ಜೀವನದ ಕೊನೆ ದಿನಗಳಲ್ಲಿ ನಮ್ಮ ಒಕ್ಕಲಿಗ ಸಮಾಜ ಎಲ್ಲಿ ಸಾಗ್ತಿದೆ. ಕಾವೇರಿ ಕಣಿವೆಯಲ್ಲಿ ಜನರ ಪರಿಸ್ಥಿತಿ ಏನಾಗಿದೆ. ಕಾವೇರಿ ನದಿ ತೀರದಲ್ಲಿರುವ ಎರಡೂವರೆ ಕೋಟಿ ಜನರ ಬಗ್ಗೆ ಯೋಚಿಸ್ತಿದೀನಿ. ಆದರೆ ಕಾವೇರಿ ನೀರಿನ ಸಮಸ್ಯೆ ಪರಿಹಾರ ಮಾಡೋದು ನಮ್ಮಿಂದ ಆಗುತ್ತೋ ಇಲ್ವೋ ಗೊತ್ತಿಲ್ಲ. ಆದರೆ ಎಲ್ಲರೂ ಸೇರಿ ಪ್ರಯತ್ನಿಸೋಣ ಎಂದು ಕರೆ ಕೊಟ್ಟರು.

ಇದೇ ವೇಳೆ ಮಾತನಾಡಿದ ಡಿಕೆಶಿ ನಾನು 30 ವರ್ಷಗಳಿಂದ ರಾಜಕಾರಣದಲ್ಲಿದ್ದೇನೆ. ನನಗೂ ಎಲ್ಲಾ ರೀತಿಯ ಪೆಟ್ಟುಗಳು ಬಿದ್ದಿವೆ. ಉಳಿ ಏಟು, ಅಗರಿ ಏಟು ಬಿದ್ದಿವೆ. ನಾನಾಗಿದ್ದಕ್ಕೆ ಏಟು ತಿಂದರೂ ಇಲ್ಲಿ ನಿಂತಿದ್ದೇನೆ. ಬೇರೆಯವರಾಗಿದ್ದರೆ ಏನಾಗುತ್ತಿತ್ತು? ಐ.ಟಿ ದಾಳಿಯಾದ ಕಷ್ಟ ಕಾಲದಲ್ಲಿ ಎಲ್ಲರೂ ನನ್ನ ಪರವಾಗಿ ನಿಂತಿದ್ದರು. ಅವರಿಗೆ ಧನ್ಯವಾದ ಎಂದರು. 

ಡಿಕೆಶಿ ಮತ್ತು ದೇವೇಗೌಡರ ಕುಟುಂಬ ಹಲವು ವರ್ಷಗಳಿಂದ ರಾಜಕೀಯವಾಗಿ ಬದ್ಧ ವೈರಿಗಳೆಂದು ಗುರುತಿಸಿಕೊಂಡಿದ್ದಾರೆ, ಆದರೆ ಇತ್ತೀಚೆಗೆ ದೇವೇಗೌಡ ಕುಟುಂಬ ಡಿಕೆಶಿ ಪರ ಮೃದು ಧೋರಣೆ ತಳೆಯುತ್ತಿದೆ, ಶಿವಕುಮಾರ್ ಮನೆ ಮೇಲೆ ಐಟಿ ದಾಳಿ ನಡೆಸಿದ ನಂತರ ಬಿಜೆಪಿ ಮುಖಂಡರು ಡಿಕೆಶಿ ರಾಜೀನಾಮೆಗೆ ಒತ್ತಾಯಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಕುಮಾರ ಸ್ವಾಮಿ ಬಿಜೆಪಿ ಅವರಿಗೆ ಶಿವಕುಮಾರ್ ಅವರ ರಾಜಿನಾಮೆ ಕೇಳುವ ನೈತಿಕ ಹಕ್ಕಿಲ್ಲ ಎಂದು ಹೇಳಿದ್ದರು.

ಸಮಾರಂಭದಲ್ಲಿ ಇಂಧನ ಸಚಿವ ಡಿ.ಕೆ. ಶಿವಕುಮಾರ್‍ ಅವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿದ ನಂತರ ಡಿಕೆಶಿ ನೇರವಾಗಿ ಪಕ್ಕದಲ್ಲೇ ಇದ್ದ ಮಾಜಿ ಪ್ರಧಾನಿ ಹೆಚ್‍.ಡಿ. ದೇವೇಗೌಡರ ಕಾಲಿಗೆರಗಿ ಆಶೀರ್ವಾದ ಪಡೆದರು. 
Posted by: SD | Source: The New Indian Express

ಇನ್ನೂ ವಿವಾಹವಾಗಿಲ್ಲವೇ?
ಇಂದೇ ಕನ್ನಡ ಮ್ಯಾಟ್ರಿಮನಿ ಯಲ್ಲಿ ನೋಂದಾಯಿಸಿ -
ನೋಂದಣಿ ಉಚಿತ!

Topics : H D Deve Gowda, D.K Shivakumar, R Ashok, H D Kumaraswamy, Chief Minister, ಎಚ್.ಡಿ ದೇವೇಗೌಡ, ಡಿ.ಕೆ ಶಿವಕುಮಾರ್, ಎಚ್.ಡಿ ಕುಮಾರ ಸ್ವಾಮಿ, ಆರ್ .ಅಶೋಕ, ಮುಖ್ಯಮಂತ್ರಿ
English summary
JD(S) supremo H D Deve Gowda took a dig at Chief Minister Siddaramaiah while advising Energy Minister D K Shivakumar. At the Krishik Sarvodaya Foundation silver jubilee programme on Saturday, where Shivakumar was also present, Deve Gowda said that whether it was Shivakumar or R Ashok (BJP) or H D Kumaraswamy (JD-S) who became the Chief Minister, it would not be an easy road for them.

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS
Advertisement
Advertisement