Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Aadhaar gives dignity to marginalised sections, which outweighs the harm says Supreme Court

ಆಧಾರ್ ಮಾಹಿತಿ ಕಳವು ಸಂವಿಧಾನಕ್ಕೆ ವಿರುದ್ಧ; ಆಧಾರ್ ಸಿಂಧುತ್ವ ಎತ್ತಿ ಹಿಡಿದ ಸುಪ್ರೀಂ ಕೋರ್ಟ್

Supreme Court allows live streaming of court proceedings, says,

ನ್ಯಾಯಾಲಯಗಳ ಕಲಾಪ ನೇರ ಪ್ರಸಾರಕ್ಕೆ ಸುಪ್ರೀಂ ಕೋರ್ಟ್ ಅನುಮತಿ

Asia Cup 2018: worst Umpiring Costs india

ಏಷ್ಯಾ ಕಪ್ 2018: ಅಂಪೈರ್ ತಪ್ಪು ತೀರ್ಪಿನಿಂದಾಗಿ ಭಾರತಕ್ಕೆ ತಪ್ಪಿದ ಜಯ!

ಸಂಗ್ರಹ ಚಿತ್ರ

ಮುಸ್ಲಿಂ ವ್ಯಕ್ತಿ ವಿವಾಹವಾದ ಕೋಪ; ತಮ್ಮನಿಂದ 13 ವರ್ಷ ಬಳಿಕ ಮನೆಗೆ ಬಂದ ಅಕ್ಕ-ಬಾವನ ಬರ್ಬರ ಕೊಲೆ!

File Image

ಬೆಂಗಳೂರು: 2 ಸಾವಿರ ಕೋಟಿ ರು. ಮೌಲ್ಯದ ಬೃಹತ್ ಜಿಎಸ್‌ಟಿ ಹಗರಣ ಬೆಳಕಿಗೆ, ವಂಚಕ ದುಗಾಲ್ ಸೆರೆ

File Image

ಬೆಂಗಳೂರು: ಕಾಂಗ್ರೆಸ್ ನಾಯಕನ ಹತ್ಯೆ ಆರೋಪಿಗಳ ಮೇಲೆ ಪೋಲೀಸ್ ಫೈರಿಂಗ್!

Ravi Channannavar-Virat Kohli

ವಿರಾಟ್ ಕೊಹ್ಲಿಗೆ ಕನ್ನಡದಲ್ಲೇ ಅಭಿನಂದನೆ ಸಲ್ಲಿಸಿದ ಡಿಸಿಪಿ ರವಿ ಚನ್ನಣ್ಣನವರ್, ಯಾಕೆ ಗೊತ್ತ!

Rambha

ಮೂರನೇ ಮಗುವಿಗೆ ತಾಯಿಯಾದ ನಟಿ ರಂಭಾ

ಸಂಗ್ರಹ ಚಿತ್ರ

'ನಮೋ' ಎಫೆಕ್ಟ್; ಬಿಜೆಪಿ ಸೇರಿದ ಇಬ್ಬರು ಕೇರಳದ ಕೈಸ್ತ ಪಾದ್ರಿಗಳು!

Terrorist killed in Jammu and Kashmir encounter identified as top LeT commander

ಕಾಶ್ಮೀರ: ಎನ್ ಕೌಂಟರ್ ಗೆ ಬಲಿಯಾದ ಉಗ್ರ ಎಲ್ ಇಟಿ ಕಮಾಂಡರ್

Kamal Haasan calls on Odisha CM, gets

ಒಡಿಶಾ ಸಿಎಂ ಪಾಟ್ನಾಯಕ್ ಭೇಟಿ ಮಾಡಿ ಸಲಹೆ ಪಡೆದ ಕಮಲ್ ಹಾಸನ್

ಸಂಗ್ರಹ ಚಿತ್ರ

ಅಯ್ಯೋ, ಟೀಂ ಇಂಡಿಯಾ ವಿರುದ್ಧ ಆಫ್ಘಾನಿಸ್ತಾನವೇ ಗೆಲ್ಲಬೇಕಿತ್ತು, ಭಾರತೀಯ ಕ್ರಿಕೆಟ್ ಪ್ರೇಮಿಗಳು ಬಯಸಿದ್ದೇಕೆ!

Delhi: Five dead in Ashok Vihar building collapse

ದೆಹಲಿಯಲ್ಲಿ ಕಟ್ಟಡ ಕುಸಿತ: ನಾಲ್ಕು ಮಕ್ಕಳು ಸೇರಿ ಐವರು ಸಾವು

ಮುಖಪುಟ >> ರಾಜಕೀಯ

ಸಿದ್ದರಾಮಯ್ಯನವರ ಜೊತೆ ಸೇರಿಕೊಂಡು 'ರಾಜಕೀಯ' ಮಾಡಿದರೆ ಹುಷಾರ್: ಪರಮೇಶ್ವರ್ ಎಚ್ಚರಿಕೆ

DyChief Minister G Parameshwara with ministers D K Shivakumar and KJ George at the party meeting

ಪಕ್ಷದ ಸಭೆಯಲ್ಲಿ ಉಪ ಮುಖ್ಯಮಂತ್ರಿ ಡಾ ಜಿ ಪರಮೇಶ್ವರ್ ಹಾಗೂ ಸಚಿವರುಗಳಾದ ಕೆ ಜೆ ಜಾರ್ಜ್ ಮತ್ತು ಡಿ ಕೆ ಶಿವಕುಮಾರ್

ಬೆಂಗಳೂರು: ಸಮ್ಮಿಶ್ರ ಸರ್ಕಾರದ ಆಡಳಿತ ಮತ್ತು ಕಾರ್ಯವೈಖರಿ ಬಗ್ಗೆ ಪದೇ ಪದೇ ಮಾಧ್ಯಮಗಳ ಮುಂದೆ ಪ್ರತಿಕ್ರಿಯೆ ನೀಡಬಾರದು ಎಂದು ಉಪ ಮುಖ್ಯಮಂತ್ರಿ ಡಾ ಜಿ ಪರಮೇಶ್ವರ್ ಸಚಿವರುಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಇತ್ತೀಚೆಗೆ ಕೆಲವು ಸಚಿವರುಗಳು ಮತ್ತು ಶಾಸಕರು ಮಾಧ್ಯಮಗಳ ಮುಂದೆ ಹೋಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪರ ತಮ್ಮ ಒಗ್ಗಟ್ಟನ್ನು ಪ್ರದರ್ಶಿಸಿದ್ದಕ್ಕೆ ಹಾಗೂ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ಕೆಲವು ಹೇಳಿಕೆಗಳನ್ನು ನೀಡಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಪರಮೇಶ್ವರ್, ಸರ್ಕಾರದ ವಿರುದ್ಧ ಮಾಧ್ಯಮಗಳ ಎದುರು ಅಸಮಾಧಾನ ವ್ಯಕ್ತಪಡಿಸುವುದು ಸರಿಯಲ್ಲ ಎಂದು ಹೇಳಿದ್ದಾರೆ.

ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರಾಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪರವಾಗಿ ಕೆಲವು ಶಾಸಕರು ಮತ್ತು ಸಚಿವರು ಸೇರಿಕೊಂಡು ತಮ್ಮ ಶಕ್ತಿ ಪ್ರದರ್ಶನಕ್ಕೆ ಮುಂದಾಗಿ ಸಮ್ಮಿಶ್ರ ಸರ್ಕಾರದ ಸುಗಮ ಆಡಳಿತಕ್ಕೆ ತೊಂದರೆ ಕೊಡಲು ನೋಡಿದರೆ ತಕ್ಕ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

 ಸಿದ್ದರಾಮಯ್ಯನವರು ಧರ್ಮಸ್ಥಳದ ಶಾಂತಿವನದಲ್ಲಿ ಪ್ರಕೃತಿ ಚಿಕಿತ್ಸೆ ಪಡೆಯುತ್ತಿದ್ದಾಗ ನೀಡಿದ್ದ ಹೇಳಿಕೆಗಳ ವಿಡಿಯೊ ಮಾಧ್ಯಮಗಳಲ್ಲಿ ವರದಿಯಾದ ನಂತರ ಸರ್ಕಾರದಲ್ಲಿ ಉಂಟಾಗಿರುವ ಸಂಕಷ್ಟಗಳನ್ನು ಬಗೆಹರಿಸಲು ನಾಯಕರುಗಳು ಹರಸಾಹಸಪಡುತ್ತಿದ್ದಾಗ ರಮೇಶ್ ಜಾರಕಿಹೊಳಿ ಮತ್ತು ಶಿವಾನಂದ್ ಪಾಟೀಲ್ ಅವರು ಪಕ್ಷದ ಕೆಲವು ಶಾಸಕರುಗಳೊಡನೆ ಸೇರಿಕೊಂಡು ಸಿದ್ದರಾಮಯ್ಯನವರ ಜೊತೆ ರಹಸ್ಯ ಮಾತುಕತೆ ನಡೆಸಿದ್ದರು ಎನ್ನಲಾಗುತ್ತಿದ್ದು ಇದು ಪರಮೇಶ್ವರ್ ಅವರಿಗೆ ತೀವ್ರ ಸಿಟ್ಟು ತರಿಸಿದೆ ಎನ್ನಲಾಗುತ್ತಿದೆ.

ಇನ್ನೊಂದೆಡೆ, ಪಕ್ಷದ ಮತ್ತು ಸಮ್ಮಿಶ್ರ ಸರ್ಕಾರದ ಹಿತಾಸಕ್ತಿಗೆ ವಿರುದ್ಧವಾಗಿ ಕೆಲಸ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಈ ಸಮ್ಮಿಶ್ರ ಸರ್ಕಾರ 5 ವರ್ಷ ಸುಭದ್ರವಾಗಿ ಆಡಳಿತ ನಡೆಸಬೇಕು, ಅದಕ್ಕೆ ಪಕ್ಷದ ಹೈಕಮಾಂಡ್ ಹೇಳಿದಂತೆ ಕೇಳಬೇಕು ಎಂದು ಕಾಂಗ್ರೆಸ್ ನ ಪ್ರಭಾವಿ ನಾಯಕ ಹಾಗೂ ನೀರಾವರಿ ಸಚಿವ ಡಿ ಕೆ ಶಿವಕುಮಾರ್ ಕೂಡ ಎಚ್ಚರಿಕೆ ನೀಡಿದ್ದಾರೆ.

ಪರಮೇಶ್ವರ್ ಮತ್ತು ಡಿ ಕೆ ಶಿವಕುಮಾರ್ ಈ ಬಗ್ಗೆ ಪಕ್ಷದ ಸಚಿವರಿಗೆ ಹಾಗೂ ಶಾಸಕರಿಗೆ ಆದೇಶ ಹೊರಡಿಸಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಮತ್ತು ಪರಮೇಶ್ವರ್ ಅವರು ಸಮ್ಮಿಶ್ರ ಸರ್ಕಾರದ ಬಗ್ಗೆ ಹೇಳಿಕೆ ನೀಡಲು ಅಧಿಕಾರ ಹೊಂದಿರುತ್ತಾರೆ ಎಂದು ಹೇಳಿರುವುದಾಗಿ ತಿಳಿದುಬಂದಿದೆ.

ಜೆಡಿಎಸ್ ಬಗ್ಗೆ ಪಕ್ಷದ ಹೈಕಮಾಂಡ್ ಮೃದು ಧೋರಣೆ ತಳೆದಿದೆ ಎಂದು ತಮ್ಮ ಅಸಮಾಧಾನವನ್ನು ಧರ್ಮಸ್ಥಳದ ಪ್ರಕೃತಿ ಚಿಕಿತ್ಸೆಯಲ್ಲಿರುವಾಗ ಸಿದ್ದರಾಮಯ್ಯನವರು ಹೊರಹಾಕಿದ್ದಾರೆ. ಅವರು ಸಮ್ಮಿಶ್ರ ಸರ್ಕಾರದಲ್ಲಿ ಪ್ರಭಾವಿ ನಾಯಕನಾಗಿ ಬೆಳೆಯಬೇಕೆಂಬ ಹಂಬಲ ಹೊಂದಿರುವುದು ಸಿದ್ದರಾಮಯ್ಯನವರ ಇತ್ತೀಚಿನ ನಡವಳಿಕೆಗಳು ಮತ್ತು ಹೇಳಿಕೆಗಳಿಂದ ತಿಳಿದುಬರುತ್ತಿದೆ.

ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಡಾ ಜಿ ಪರಮೇಶ್ವರ್, ಲೋಕಸಭೆ ಚುನಾವಣೆ ಸನ್ನಿಹಿತವಾಗಿರುವುದರಿಂದ ಪಕ್ಷದಲ್ಲಿ ಮತ್ತು ಸರ್ಕಾರದಲ್ಲಿನ ಕೆಲವೊಂದು ಗೊಂದಲಗಳನ್ನು ಬಗೆಹರಿಸಲು ಈ ಸಭೆಯನ್ನು ಕರೆಯಲಾಗಿದೆ. ಸಮ್ಮಿಶ್ರ ಸರ್ಕಾರದ ಸುಗಮ ಆಡಳಿತಕ್ಕೆ ಸಚಿವರು ಸಹಕರಿಸಬೇಕು ಎಂದು ಸಭೆಯಲ್ಲಿ ಕೋರಿದ್ದೇವೆ ಎಂದು ಹೇಳಿದರು.

Posted by: SUD | Source: The New Indian Express

ಕನ್ನಡ ಮ್ಯಾಟ್ರಿಮನಿಯಲ್ಲಿ
ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ -
ನೋಂದಣಿ ಉಚಿತ!

Topics : Ministers, Coalition government, Dr G Parameshwar, Siddaramaiah, ಸಚಿವರುಗಳು, ಸಮ್ಮಿಶ್ರ ಸರ್ಕಾರ, ಡಾ ಜಿ ಪರಮೇಶ್ವರ್, ಸಿದ್ದರಾಮಯ್ಯ

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS