Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Donald Trump

ಲಕ್ಷಾಂತರ ಜನರನ್ನು ಬಡತನದಿಂದ ಮೇಲೆತ್ತುವುದರಲ್ಲಿ ಭಾರತ ಯಶಸ್ವಿ: ಟ್ರಂಪ್

Will Aadhaar be made a must? Supreme Court verdict tomorrow

ಎಲ್ಲದಕ್ಕೂ ಕಡ್ಡಾಯವಾಗುತ್ತಾ ಆಧಾರ್?: ನಾಳೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

Casual Photo

ದಬ್ಬಾಳಿಕೆಯಿಂದ ರೈತರ ಸಾಲ ವಸೂಲಿ ವಿರುದ್ಧ ಕ್ರಮ- ಹೆಚ್. ಡಿ. ಕುಮಾರಸ್ವಾಮಿ

Vijay , Panipuri kitti

ನಟ ವಿಜಯ್ ಪ್ರತಿ ದೂರು : ಮಾರುತಿ ಗೌಡ, ಪಾನಿಪೂರಿ ಕಿಟ್ಟಿ ವಿರುದ್ಧ ಎಫ್ ಐಆರ್ ದಾಖಲಿಸಿದ ಪೊಲೀಸರು !

Kannada actor Devaraj and his son Prajwal discharged from hospital

ಕಾರು ಅಪಘಾತ: ಆಸ್ಪತ್ರೆಯಿಂದ ದೇವರಾಜ್, ಪ್ರಜ್ವಲ್ ಡಿಸ್ಚಾರ್ಜ್

CM HDKumaraswamy

ಬೆಂಗಳೂರು : ರಾಜಕಾಲುವೆ ಒತ್ತುವರಿದಾರರ ವಿರುದ್ದ ಕಠಿಣ ಕ್ರಮ- ಹೆಚ್. ಡಿ. ಕುಮಾರಸ್ವಾಮಿ

File Image

ಅಂತರ್ಧರ್ಮೀಯ ಅಪ್ರಾಪ್ತೆಯೊಡನೆ ಪ್ರೇಮ, ಯುವತಿ ಪ್ರಾಪ್ತ ವಯಸ್ಥಳಾದ ಬಳಿಕ ನಡೆದದ್ದೇನು?

Police slapping

ಮುಸ್ಲಿಮ್ ಯುವಕನ ಜೊತೆ ಕುಳಿತ ಯುವತಿಗೆ ಪೊಲೀಸರಿಂದ ಥಳಿತ : ವಿಡಿಯೋ ವೈರಲ್

Mohammad Shahzad

ಏಷ್ಯಾಕಪ್: ಶೆಹ್ಜಾದ್ ಶತಕ, ಭಾರತಕ್ಕೆ ಗೆಲ್ಲಲು 253 ರನ್ ಗುರಿ!

N. Mahesh

ಕಾಂಗ್ರೆಸ್ 'ದೊಡ್ಡ ಸಹೋದರ ' ರೀತಿಯಲ್ಲಿ ವರ್ತಿಸಬೇಕು - ಎನ್. ಮಹೇಶ್

Bad debts on decline, loan recovery picking up of PSU banks: Arun Jaitley

ಕೆಟ್ಟ ಸಾಲ ಕುಸಿತ, ಪಿಎಸ್ ಯು ಬ್ಯಾಂಕ್ ಗಳ ಸಾಲ ಮರುಪಡೆಯುವಿಕೆ ಚೇತರಿಕೆ: ಜೇಟ್ಲಿ

ಸರ್ಫರಾಜ್-ಪಾಕ್ ಯುವತಿ

ಪಾಕ್ ವಿರುದ್ಧದ ಗೆಲುವನ್ನು ಭಾರತೀಯರಷ್ಟೇ ಅಲ್ಲ, ಪಾಕ್‌ನವರು ತ್ರಿವರ್ಣ ಧ್ವಜ ಹಾರಿಸಿ ಸಂಭ್ರಮಿಸಿದ್ದೇಕೆ ಗೊತ್ತ?

Randeep Surjewala

1 ಸುಳ್ಳನ್ನು ಮುಚ್ಚಿಡಲು 1000 ಸುಳ್ಳುಹೇಳುವ ಬಿಜೆಪಿ: ರಾಫೆಲ್ ಡೀಲ್ ನಲ್ಲಿ ವಾಧ್ರಾಗೆ ಪಾಲು ಹೇಳಿಕೆಗೆ ಕಾಂಗ್ರೆಸ್ ತಿರುಗೇಟು

ಮುಖಪುಟ >> ರಾಜಕೀಯ

ಹಳೇ ಮೈಸೂರು ಭಾಗದಲ್ಲಿ ಹಾವು-ಮುಂಗುಸಿಯಂತಿರುವ ಕೈ-ತೆನೆ ಕಾರ್ಯಕರ್ತರು: ದೋಸ್ತಿ ಪಕ್ಷಗಳಿಗೆ ಅಗ್ನಿ ಪರೀಕ್ಷೆ!

Representational image

ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಜ್ಯದ 105 ಸ್ಥಳೀಯ ಸಂಸ್ಥೆಗಳಿಗೆ ರಾಜ್ಯ ಚುನಾವಣಾ ಆಯೋಗ ಆಗಸ್ಟ್ 29ಕ್ಕೆ ಚುನಾವಣೆ ನಿಗದಿ ಪಡಿಸಿ ಆದೇಶ ಹೊರಡಿಸಿದೆ.  ಎಚ್ ಡಿ ಕುಮಾರ ಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರಕ್ಕೆ ಇದು ಮೊದಲ ಪರೀಕ್ಷೆಯಾಗಿದ್ದು, ಜನರಿಗೆ ಸಮ್ಮಿಶ್ರ ಸರ್ಕಾರದ ಬಗ್ಗೆ ಇರುವ ಗ್ರಹಿಕೆ ಹೊರಬರುವುದು ಮಾತ್ರವಲ್ಲ, 2019ರ ಲೋಕಸಭೆ ಚುನಾವಣೆಗೆ ಈ ಎಲೆಕ್ಷನ್ ಕಠಿಣ ಪರೀಕ್ಷೆಯಾಗಿದೆ.

ನಗರ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಏಕಾಂಗಿಯಾಗಿ ಸ್ಪರ್ಧಿಸಬೇಕೆ ಅಥವಾ ಮೈತ್ರಿ ಮಾಡಿಕೊಳ್ಳಬೇಕೆ ಎಂಬುದರ ಬಗ್ಗೆ ಇನ್ನೂ ದೋಸ್ತಿ ಪಕ್ಷಗಳು ನಿರ್ಧರಿಸಿಲ್ಲ, ಆದರೆ ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಹೊಂದಾಣಿಕೆ ಮಾಡಿಕೊಳ್ಳಲು ಕಾಂಗ್ರೆಸ್ ಮುಖಂಡರು, ಹಾಗೂ ಸ್ಥಳೀಯ ಕಾರ್ಯಕರ್ತರು ತೀವ್ರ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಈ ವಿಷಯವನ್ನು ಇತ್ತೀಚೆಗೆ ಸಿದ್ದರಾಮಯ್ಯ ಆಯೋಜಿಸಿದ್ದ ಭೋಜನ ಕೂಟದಲ್ಲಿ ಚರ್ಚಿಸಲಾಗಿದೆ.

ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಫರ್ಧಿಸಬೇಕೆಂಬುದು ಅನೇಕ ಕಾಂಗ್ರೆಸ್ ಸಚಿವರ ಬಯಕೆಯಾಗಿದೆ, ಜೆಡಿಎಸ್ ಜೊತೆಗಿನ  ಮೈತ್ರಿಗೆ ಈಗಾಗಲೇ ಹಲವು ತಾಲೂ ಮತ್ತು ಜಿಲ್ಲಾ ಮುಖ್ಯಸ್ಥರು ವಿರೋಧ ವ್ಯಕ್ತ ಪಡಿಸಿದ್ದಾರೆ, ಒಂದು ವೇಳೆ ಮೈತ್ರಿ ಮಾಡಿಕೊಂಡಿದ್ದೇ ಆದರೆ ತಳ ಮಟ್ಟದಲ್ಲಿ ಕಾಂಗ್ರೆಸ್ ಗೆ ದೊಡ್ಡ ಹೊಡೆತ ಬೀಳುತ್ತದೆ ಎಂದು ಅಭಿಪ್ರಾಯ ವ್ಯಕ್ತ ಪಡಿಸಲಾಗಿದೆ. ಸ್ಥಳೀಯ ಮಟ್ಟದಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲುವಿಗೆ ಕಾಂಗ್ರೆಸ್ ಕಾರ್ಯಕರ್ತರು ಕೆಲಸ ಮಾಡುವುದು ಅಸಾಧ್ಯ ಎಂದು ಕಾಂಗ್ರೆಸ್ ಕಾರ್ಯಕರ್ತರೊಬ್ಬರು ತಿಳಿಸಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಜೆಡಿಎಸ್ ಸರ್ವೋಚ್ಚ ನಾಯಕ ಎಚ್ ಡಿ ದೇವೇಗೌಡ., 2019ರ ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳಲು ಈಗಾಗಲೇ ನಿರ್ಧರಿಸಿದ್ದಾರೆ, ಆದರೆ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಎರಡು ಪಕ್ಷಗಳು ಸ್ವತಂತ್ರ್ಯವಾಗಿ ಸ್ಪರ್ಧಿಸಬೇಕು ಎಂಬ ಕೂಗು ಕೇಳಿ ಬರುತ್ತಿದೆ. 

ಈ ಸ್ಥಳೀಯ ಸಂಸ್ಥೆ ಚುನಾವಣೆ ದೋಸ್ತಿ ಪಕ್ಷಗಳ ಬಾಂಧವ್ಯದ ಪರೀಕ್ಷೆಯ ಚುನಾವಣೆಯಾಗಿದೆ, ಮೈಸೂರು, ಮಂಡ್ಯ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ  ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ ನಡೆಯಲಿದೆ, ಆದರೆ ಬಿಜೆಪಿಗೆ ಆ ಶಕ್ತಿಯಿಲ್ಲ.

ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಇತ್ತೀಚೆಗೆ ಉತ್ತರ ಕರ್ನಾಟಕದ ಬಗ್ಗೆ ನೀಡಿದ ಹೇಳಿಕೆ ಹಾಗೂ ಸಾಲಮನ್ನಾ ವಿಷಯ ಎರಡು ಪಕ್ಷಗಳ ಪ್ರಚಾರಕ್ಕೆ ಕಾರಣವಾಗಿವೆ. ಕುಮಾರ ಸ್ವಾಮಿ ನೇತೃತ್ವದ ಸರ್ಕಾರ ಚುನಾವಣೆಯಲ್ಲಿ ಉತ್ತಮ ಫಲಿತಾಂಶ ಪಡೆಯಲು ಬಯಸುತ್ತಿದೆ. ಈ ಚುನಾವಣೆಯಲ್ಲಿ  ಜೆಡಿಎಸ್ ಹೆಚ್ಚಿನ ಸ್ಥಾನ ಗಳಿಸಿದರೇ ಲೋಕಸಭೆ ಚುನಾವಣೆಯಲ್ಲಿ ಅಧಿಕ ಸಂಖ್ಯೆಯ  ಸೀಟುಗಳನ್ನು ಕೇಳಲು ಸಾದ್ಯವಾಗುತ್ತದೆ. ಜೆಡಿಎಸ್ ಗೆ ಹೆಚ್ಚಿನ ಸ್ಥಾನ ನೀಡಿದರೇ  ಕಾಂಗ್ರೆಸ್ ಒಳಗೆ ಮತ್ತಷ್ಟು ಸಮಸ್ಯೆ ಎದುರಿಸಬೇಕಾಗುತ್ತದೆ.
Posted by: SD | Source: The New Indian Express

ಕನ್ನಡ ಮ್ಯಾಟ್ರಿಮನಿಯಲ್ಲಿ
ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ -
ನೋಂದಣಿ ಉಚಿತ!

Topics : coalition government , urban local bodies , Election, Congress, JDs, ಸಮ್ಮಿಶ್ರ ಸರ್ಕಾರ, ನಗರ ಸ್ಥಳೀಯ ಸಂಸ್ಥೆ, ಚುನಾವಣೆ, ಜೆಡಿಎಸ್, ಕಾಂಗ್ರೆಸ್
English summary
The coalition government in the state, headed by H D Kumaraswamy, is bracing up for its first test with the State Election Commission fixing August 29 as the date for elections to 105 urban local bodies (ULBs).

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS