Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
File photo

ಡೋಕ್ಲಾಮ್ ವಿವಾದ: ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳದಿದ್ದರೆ ಯೋಧರನ್ನು ಹತ್ಯೆ ಮಾಡುತ್ತೇವೆ- ಚೀನಾ ಬೆದರಿಕೆ

India stun defending champions Australia to enter ICC Women

ಮಹಿಳಾ ವಿಶ್ವಕಪ್: ಆಸ್ಪ್ರೇಲಿಯಾ ಮಣಿಸಿದ ಭಾರತ, ಫೈನಲ್'ಗೆ ಲಗ್ಗೆ

Karnataka Chief Minister Siddaramaiah

14ನೇ ರಾಷ್ಟ್ರಪತಿಯಾಗಿ ಕೋವಿಂದ್‌ ಆಯ್ಕೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿನಂದನೆ

Dhinakaran, (seated), and his supporters were stopped at the police check point

ಶಶಿಕಲಾ ಭೇಟಿಗೆ ಬಂದ ದಿನಕರನ್: ಅವಕಾಶ ನೀಡದೇ ವಾಪಸ್ ಕಳುಹಿಸಿದ ಜೈಲು ಸಿಬ್ಬಂದಿ

A powerful earthquake struck Greek islands

ಗ್ರೀಕ್ ನಲ್ಲಿ ಪ್ರಬಲ ಭೂಕಂಪ: ಇಬ್ಬರ ಸಾವು, 100 ಮಂದಿಗೆ ಗಾಯ

NDA candidate Ram Nath Kovind sweeps Presidential poll

ಭಾರತದ 14ನೇ ರಾಷ್ಟ್ರಪತಿಯಾಗಿ ರಾಮನಾಥ್ ಕೋವಿಂದ್‌ ಆಯ್ಕೆ

Representational image

ಆನಿಮೇಶನ್ ಮತ್ತು ಗ್ರಾಫಿಕ್ಸ್ ಕೇಂದ್ರವಾಗಲಿರುವ ಬೆಂಗಳೂರು ನಗರ

Ambareesh

ಉಸಿರಾಟದ ತೊಂದರೆ: ನಟ ಅಂಬರೀಷ್ ವಿಕ್ರಂ ಆಸ್ಪತ್ರೆಗೆ ದಾಖಲು

Action taken against accused in every instance of mob justice: Arun Jaitley

ಗೋರಕ್ಷಣೆ ಹೆಸರಿನಲ್ಲಿ ಹಿಂಸಾಚಾರ, ಪ್ರತಿ ಪ್ರಕರಣದಲ್ಲೂ ಕ್ರಮ ಕೈಗೊಳ್ಳಲಾಗಿದೆ: ಜೇಟ್ಲಿ

Diplomatic channels unimpeded, NSA Doval to visit Beijing for BRICS

ಸಿಕ್ಕಿಂ ಗಡಿ ಉದ್ವಿಗ್ನ; ಭಾರತ-ಚೀನಾ ರಾಜತಾಂತ್ರಿಕ ಮಾತುಕತೆ ಮುರಿದು ಬಿದ್ದಿಲ್ಲ: ಎಂಇಎ

Ravi Shastri-Virat Kohli

ಟೆಸ್ಟ್ ರ್ಯಾಂಕಿಂಗ್ ನಲ್ಲಿ ಅಗ್ರಸ್ಥಾನವನ್ನು ಕಾಯ್ದುಕೊಳ್ಳುತ್ತೇವೆ: ಕೊಹ್ಲಿ, ರವಿಶಾಸ್ತ್ರಿ

Roopa Ganguly, Kailash Vijayvargiya

ಮಕ್ಕಳ ಕಳ್ಳಸಾಗಾಣಿಕೆ: ರೂಪಾ ಗಂಗೂಲಿ, ಕೈಲಾಶ್ ವಿಜಯವರ್ಗೀಯಗೆ ಸಿಐಡಿ ಸಮನ್ಸ್

External Affairs Minister Sushma Swaraj

ಡೋಕ್ಲಾಮ್ ವಿವಾದ: ಸ್ವರಕ್ಷಣೆಗೆ ಭಾರತ ಸಮರ್ಥವಾಗಿದೆ- ಚೀನಾಗೆ ಸುಷ್ಮಾ ಸ್ವರಾಜ್ ಎಚ್ಚರಿಕೆ

ಮುಖಪುಟ >> ವಿಜ್ಞಾನ-ತಂತ್ರಜ್ಞಾನ

ಫ್ರಾನ್ಸ್ ನ ಗಯಾನಾದಿಂದ ಸಂವಹನ ಉಪಗ್ರಹ ಜಿಸ್ಯಾಟ್-17 ಯಶಸ್ವಿ ಉಡಾವಣೆ: ಇಸ್ರೊ

GSAT-17  Photo credits : www.isro.gov.in

ಜಿಸ್ಯಾಟ್(ಫೋಟೋ ಕೃಪೆ-www.isro.gov.in)

ಬೆಂಗಳೂರು: ಭಾರತದ ಅತ್ಯಾಧುನಿಕ ಸಂವಹನ ಉಪಗ್ರಹ ಜಿಸ್ಯಾಟ್-17 ನ್ನು ಫ್ರಾನ್ಸ್ ನ ಗಯಾನಾದ ಕೌರೌನ ಬಾಹ್ಯಾಕಾಶ ನಿಲ್ದಾಣದಿಂದ ಭಾರವಾದ ರಾಕೆಟ್ ಏರಿಯಾನ್ಸ್ಪೇಸ್ ಮೂಲಕ ಇಂದು ಬೆಳಗ್ಗೆ ಯಶಸ್ವಿಯಾಗಿ ಉಡಾಯಿಸಲಾಯಿತು.

ವಿವಿಧ ಸಂವಹನ ಸೇವೆಗಳನ್ನು ಒದಗಿಸುವ ವಿಸ್ತರಿತ ಸಿ ಬ್ಯಾಂಡ್ ಮತ್ತು ಎಸ್ ಬ್ಯಾಂಡ್, ಸಹಜ ಸ್ಥಿತಿಯ ಸಿ ಬ್ಯಾಂಡ್ ಗಳಲ್ಲಿ ಪೇ ಲೋಡ್ ಗಳನ್ನು  ಹೊತ್ತ ಸುಮಾರು 3,477 ಕಿಲೋ ತೂಕದ  ಜಿಸ್ಯಾಟ್-17 ಉಪಗ್ರಹ ಬಾನೆತ್ತರಕ್ಕೆ ಚಿಮ್ಮಿತು.

ಹವಾಮಾನ ಮಾಹಿತಿ ರಿಲೇ ಮತ್ತು ಉಪಗ್ರಹ ಆಧಾರಿತ ಶೋಧ ಮತ್ತು ರಕ್ಷಣಾ ಸೇವೆಗಳಿಗೆ ಉಪಕರಣಗಳನ್ನು ಇದು ಹೊತ್ತೊಯ್ಯುತ್ತದೆ.

ಯುರೋಪ್ ನ ಉಡಾವಣಾ ವಾಹಕ ಏರಿಯಾನ್ಸ್ಪೇಸ್ ಫ್ಲೈಟ್ ವಿಎ238 ದಕ್ಷಿಣ ಅಮೆರಿಕಾದ ಈಶಾನ್ಯ ಕರಾವಳಿಯ ಫ್ರಾನ್ಸ್ ಪ್ರಾಂತ್ಯದ ಕೋರಿಯೊದಲ್ಲಿ ಏರಿಯೆನ್ ಲಾಂಚ್ ಸಂಕೀರ್ಣ ಸಂಖ್ಯೆ 3ರಿಂದ ಸಿಡಿದು ನಭಕ್ಕೆ ಚಿಮ್ಮಿತು. ಅಂತಾರಾಷ್ಟ್ರೀಯ ಕಾಲಮಾನ ಇಂದು ಮಧ್ಯರಾತ್ರಿ 2.29ಕ್ಕೆ ಆಕಾಶಕ್ಕೆ ಉಡಾವಣೆಯಾಗಬೇಕಿದ್ದ ಉಪಗ್ರಹ ಕೆಲ ನಿಮಿಷಗಳು ತಡವಾಗಿ ನೆಗೆಯಿತು.

ಜಿಸ್ಯಾಟ್ ಆಕಾಶಕ್ಕೆ ಚಿಮ್ಮಿ ಕಕ್ಷೆಗೆ ಸೇರಿದ ತಕ್ಷಣ ಸಹ ಪ್ರಯಾಣಿಕ ಉಪಗ್ರಹವಾದ ಹೆಲ್ಲಾಸ್ ಸ್ಯಾಟ್ 3-ಇಮ್ಮರ್ಸಾಟ್ ಎಸ್ ಇಎನ್ಎನ್ ಜೊತೆ ಸೇರಿಸಲಾಯಿತು  ಎಂದು ಇಸ್ರೊ ಪ್ರಕಟಿಸಿದೆ.

ಜಿಯೋಸಿಂಕ್ರೋನಸ್ ಟ್ರಾನ್ಸ್ಫರ್ ಆರ್ಬಿಟ್(ಜಿಟಿಒ)ಗೆ ಉಡಾಯಿಸಿದ್ದ 17 ಟೆಲಿಕಮ್ಯುನಿಕೇಷನ್ ಸ್ಯಾಟಲೈಟ್ ಗಳ ಇಸ್ರೊದ ಕಾರ್ಯವೈಖರಿಯನ್ನು ಜಿಸ್ಯಾಟ್-17 ಬಲಗೊಳಿಸಲಿದೆ. ಈ ತಿಂಗಳು ಇಸ್ರೊ ಉಡಾಯಿಸಿದ ಮೂರನೇ ಉಪಗ್ರಹ ಇದಾಗಿದೆ. ಇದಕ್ಕೂ ಮುನ್ನ ಜಿಎಸ್ಎಲ್ ವಿ ಎಂಕೆ111 ಮತ್ತು  ಪಿಎಸ್ಎಲ್ ವಿ ಸಿ-38 ಉಪಗ್ರಹಗಳನ್ನು ಆಂಧ್ರ ಪ್ರದೇಶದ ಶ್ರೀಹರಿಕೋಟಾದಿಂದ ಉಡಾಯಿಸಲಾಗಿತ್ತು. 

ಜಿಎಸ್ಎಲ್ ವಿ ಎಂಕೆ111 ಜಿಸ್ಯಾಟ್-19 ಉಪಗ್ರಹಗಳನ್ನು ಯಶಸ್ವಿಯಾಗಿ ಜೂನ್ 5 ರಂದು ಮತ್ತು ಪಿಎಸ್ಎಲ್ ವಿ-ಸಿ38 ಕಾರ್ಟೊಸ್ಯಾಟ್-2 ಸರಣಿ ಉಪಗ್ರಹವನ್ನು 30 ಸಹ ಪ್ರಯಾಣಿಕ ಉಪಗ್ರಹಗಳ ಜೊತೆಗೆ ಜೂನ್ 23ರಂದು ಉಡಾಯಿಸಲಾಗಿತ್ತು. ಭಾರವಾದ ಉಪಗ್ರಹಗಳನ್ನು ಹೊತ್ತೊಯ್ಯಲು ಏರಿಯಾನ್ -5 ರಾಕೆಟ್ ಗಳನ್ನು ಅವಲಂಬಿಸಿರುವ ಇಸ್ರೊ ಈ ಉದ್ದೇಶಕ್ಕಾಗಿ ಜಿಎಸ್ಎಲ್ ವಿ ಎಂಕೆ111 ನ್ನು ಅಭಿವೃದ್ಧಿಪಡಿಸಿದೆ.

ಉಪಗ್ರಹದ ಯಶಸ್ವಿ ಉಡಾವಣೆಯನ್ನು ದೃಢಪಡಿಸಿ ಟ್ವೀಟ್ ಮಾಡಿದ ಏರಿಯೆನ್ ಸ್ಪೇಸ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸ್ಟೆಫನ್ ಇಸ್ರೇಲ್, ಜಿಸ್ಯಾಟ್-17 ಯಶಸ್ವಿಯಾಗಿ ಏರಿಯೆನ್ 5 ಉಡಾವಣಾ ಉಪಗ್ರಹದಿಂದ ಬೇರ್ಪಟ್ಟಿದೆ ಎಂದು ಹೇಳಿದ್ದಾರೆ.ಪಠ್ಯ ಪುಸ್ತಕ ಮಿಷನ್ ಎಂದು ವಿಕ್ರಮ್ ಸಾರಾಭಾಯಿ ಬಾಹ್ಯಾಕಾಶ ಕೇಂದ್ರದ ನಿರ್ದೇಶಕ ಡಾ.ಕೆ.ಶಿವನ್ ವಿಜ್ಞಾನಿಗಳು ಮತ್ತು ತಂತ್ರಜ್ಞಾನಿಗಳ ತಂಡಕ್ಕೆ ಧನ್ಯವಾದ ಹೇಳಿದ್ದಾರೆ.

ಈಗಾಗಲೇ ಅವಧಿಯಾಗಿರುವ ಉಪಗ್ರಹಗಳ ಮುಂದುವರಿಕೆ ಸೇವೆಗೆ, ನಮ್ಮ ಟ್ರಾನ್ಸ್ಪಾಂಡರ್ ಸಾಮರ್ಥ್ಯವನ್ನು ವೃದ್ಧಿಸಲು ಮತ್ತು ಮೊಬೈಲ್ ಉಪಗ್ರಹ ಸೇವೆಗಳಿಗೆ ಮತ್ತು ಅಂಟಾರ್ಟಿಕಾ ಪ್ರದೇಶಗಳಿಗೆ ನಮ್ಮ ಹಾರಿಜಾನ್ ವಿಸ್ತರಿಸಲು ಅಗತ್ಯವಾಗಿದೆ. 

ಜಿಸ್ಯಾಟ್-17ನ ಸಹ ಪ್ರಯಾಣಿಕ ಉಪಗ್ರಹ ಹೆಲ್ಲಸ್ ಸ್ಟಾಟ್ 3 ಇಮ್ಮರ್ಸತ್ ಎ ಇಯಾನ್ ಎರಡು ಪೆಲೊಡ್ ಕಾಂಡೋಸಾಟ್ ಗಳನ್ನು ಒಳಗೊಂಡಿದ್ದು ಅದನ್ನು ಥೇಲ್ಸ್ ಅಲೀನಿಯಾ ಸ್ಪೇಸ್ ಫಾರ್ ಹೆಲ್ಲಸ್ ಸ್ಯಾಟ್ ಮತ್ತು ಇನ್ಮಾರ್ಸಾಟ್ ತಯಾರಿಸಿದೆ. 

ಹೆಲ್ಲಸ್ ಸ್ಯಾಟ್ 3 ಘಟಕ ಪೂರ್ವಕ್ಕೆ 39ರ ಕಕ್ಷೆ ಸ್ಥಾನದಲ್ಲಿ ಯುರೋಪ್, ಮಧ್ಯ ಪೂರ್ವ ಮತ್ತು ದಕ್ಷಿಣ ಆಫ್ರಿಕಾಗಳಿಗೆ ಸೇವೆಗಳನ್ನು ಒದಗಿಸಲಿದೆ.

ಜಾಗತಿಕ ಮೊಬೈಲ್ ಉಪಗ್ರಹ ಸಂವಹನ ಸೇವೆಗಳಲ್ಲಿ ಇಮ್ಮರ್ಸತ್ ಪ್ರಮುಖವಾಗಿದೆ. ವಿಎ238 ವಾಹಕದಲ್ಲಿ ಒಟ್ಟು ಪೆಲೊಡ್ ಗಳ ಗಾತ್ರ 10,177 ಕಿಲೋವಾಗಿದೆ.

ಇಸ್ರೊ ಉಡಾಯಿಸಿದ 21ನೇ ಉಪಗ್ರಹ ಜಿಸ್ಯಾಟ್ ಆಗಿದ್ದು ಕಕ್ಷೆಯಲ್ಲಿ ಇದರ ಜೀವಿತಾವಧಿ 15 ವರ್ಷಗಳಾಗಿವೆ.ಕಕ್ಷೆಗೆ ಸೇರಿಸಿದ ನಂತರ ಇಸ್ರೊದ ಕೇಂದ್ರ ನಿಯಂತ್ರಣ ವ್ಯವಸ್ಥೆಯಾದ ಹಾಸನದಿಂದ ಜಿಸ್ಯಾಟ್-17ನ ನಿಯಂತ್ರಣವಿರಲಿದೆ.
Posted by: SUD | Source: PTI

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ !

Topics : ISRO, Communication satellite, GSAT-17, France, Guiana, ಇಸ್ರೊ, ಸಂವಹನ ಉಪಗ್ರಹ, ಜಿಸ್ಯಾಟ್-17, ಫ್ರಾನ್ಸ್, ಗಯಾನಾ
English summary
India's latest communication satellite GSAT-17 was today successfully launched by a heavy duty rocket of Arianespace from the spaceport of Kourou in French Guiana.

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Kannadaprabha.com App for Android Kannadaprabha.com App for IOS
Advertisement
Advertisement