Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
ಸಂಗ್ರಹ ಚಿತ್ರ

ಇಂಗ್ಲೆಂಡ್ ವಿರುದ್ಧ ಟಿ20 ಸರಣಿ ಗೆದ್ದು, ಏಕದಿನ ಸರಣಿ ಸೋತ ಟೀಂ ಇಂಡಿಯಾ!

Rahul Gandhi, Siddaramaiah

ಕಾಂಗ್ರೆಸ್ ಕಾರ್ಯಕಾರಿ ಸಮಿತಿಗೆ ಮೇಜರ್ ಸರ್ಜರಿ; ಸಿದ್ದರಾಮಯ್ಯಗೆ ಸ್ಥಾನ

ಸಂಗ್ರಹ ಚಿತ್ರ

ಆ್ಯಸಿಡ್ ದಾಳಿ, ರೇಪ್ ಸಂತ್ರಸ್ತರ ಪರಿಹಾರ ಮೊತ್ತ 3 ಲಕ್ಷದಿಂದ 7 ಲಕ್ಷಕ್ಕೆ ಏರಿಕೆ!

Government asks Congress to join hands for passage of bills on Women Reservation, Triple Talaq and Nikah Halala

ಮಹಿಳಾ ಮೀಸಲಾತಿ, ತ್ರಿವಳಿ ತಲಾಖ್ ಮಸೂದೆ ಪಾಸ್ ಮಾಡಲು ಕೈಜೋಡಿಸಿ: ಕಾಂಗ್ರೆಸ್ ಗೆ ಕೇಂದ್ರ ಮನವಿ

ಸಂಸದರಿಗೆ ಐಫೋನ್, ಬ್ಯಾಗ್ ಗಿಫ್ಟ್ ಕೊಟ್ಟಿದ್ದು ನಾನೇ: ಡಿಕೆಶಿ

ಸಂಸದರಿಗೆ ಐಫೋನ್, ಬ್ಯಾಗ್ ಗಿಫ್ಟ್ ಕೊಟ್ಟಿದ್ದು ನಾನೇ: ಸಚಿವ ಡಿಕೆ ಶಿವಕುಮಾರ್

Hasan Ali

ವಿಕೆಟ್ ಪಡೆದು ಸಂಭ್ರಮಿಸಲು ಹೋಗಿ ಕತ್ತು ಉಳುಕಿಸಿಕೊಂಡು ಅಪಹಾಸ್ಯಕ್ಕೀಡಾದ ಪಾಕ್ ಕ್ರಿಕೆಟಿಗ!

Arjun Tendulkar

ತಂದೆ ಕ್ರಿಕೆಟ್ ದಿಗ್ಗಜ, ಮಗ ವೇಗಿ, ಮೊದಲ ಅಂತಾರಾಷ್ಟ್ರೀಯ ವಿಕೆಟ್ ಪಡೆದ ಅರ್ಜುನ್ ತೆಂಡೂಲ್ಕರ್, ವಿಡಿಯೋ!

Nobody can take law into their hands, duty of states to curb cow vigilantism: Supreme Court

ಉದ್ರಿಕ್ತರ ಗುಂಪಿನಿಂದ ಅಮಾಯಕರ ಮೇಲಿನ ಹಲ್ಲೆಗೆ ಕಡಿವಾಣ ಹಾಕಲು ಕಾನೂನು ರಚಿಸಿ: ಕೇಂದ್ರ, ರಾಜ್ಯಗಳಿಗೆ 'ಸುಪ್ರೀಂ' ಸೂಚನೆ

Nilgai

ಶತ್ರುವಿನಿಂದಲೇ ಉಳಿಯಿತು 18 ಜನರ ಜೀವ, ಗುಜರಾತ್‍ನಲ್ಲೊಂದು ವಿಚಿತ್ರ ಘಟನೆ!

Priyanka Chopra

ನ್ಯೂಯಾರ್ಕ್ ಬೀದಿಗಳಲ್ಲಿ ನಟಿ ಪ್ರಿಯಾಂಕಾ ಚೋಪ್ರಾ ಹಾಟ್ ಡ್ಯಾನ್ಸ್, ವಿಡಿಯೋ ವೈರಲ್!

Religion, caste or beliefs matter little to me: Rahul hits back at BJP

ಧರ್ಮ, ಜಾತಿ, ನಂಬಿಕೆಗಳು ನಗಣ್ಯ; ನಾನು ಸಮಾಜದ ಪರ: ಬಿಜೆಪಿಗೆ ರಾಹುಲ್ ತಿರುಗೇಟು

India jump one place to 5th in latest FIH hockey rankings

ಎಫ್ಐಎಚ್ ಹಾಕಿ ಶ್ರೇಯಾಂಕ: ಜರ್ಮನಿಯನ್ನು ಹಿಂದಿಕ್ಕಿದ ಭಾರತಕ್ಕೆ 5ನೇ ಸ್ಥಾನ

Chris Gayle

ಒಂದೇ ಕೈಯಲ್ಲಿ ಕ್ಯಾಚ್ ಹಿಡಿದ ಗೇಯ್ಲ್, ಸೂಪರ್ ಕ್ಯಾಚ್‌ಗೆ ಅಭಿಮಾನಿಗಳು ಫಿದಾ, ವಿಡಿಯೋ ವೈರಲ್!

ಮುಖಪುಟ >> ವಿಜ್ಞಾನ-ತಂತ್ರಜ್ಞಾನ

ಅರ್ಥಪೂರ್ಣ ಸಂವಾದಗಳನ್ನು ಉತ್ತೇಜಿಸಲು ನ್ಯೂಸ್ ಫೀಡ್ ಗಳಲ್ಲಿ ಕೆಲವು ಬದಲಾವಣೆ ತರಲಿರುವ ಫೇಸ್ ಬುಕ್

Representational image

ಸಾಂದರ್ಭಿಕ ಚಿತ್ರ

ಸಾನ್ ಫ್ರಾನ್ಸಿಸ್ಕೊ: ತನ್ನ ನ್ಯೂಸ್ ಫೀಡ್ ಗುಣಲಕ್ಷಣಗಳಿಗೆ ಹಲವು ಬದಲಾವಣೆಗಳನ್ನು ಫೇಸ್ ಬುಕ್ ಮಾಡಿದ್ದು, ಇದರಿಂದ ಇನ್ನು ಮುಂದೆ ಫೇಸ್ ಬುಕ್ ಬಳಕೆದಾರರು ವಹಿವಾಟು, ಬ್ರಾಂಡ್ ಮತ್ತು ಮಾಧ್ಯಮಗಳ ವಿಷಯಗಳಿಗಿಂತ ತಮ್ಮ ಕುಟುಂಬದವರು ಮತ್ತು ಸ್ನೇಹಿತರಿಂದ ಹೆಚ್ಚಿನ ಅಪ್ ಡೇಟ್ ನೋಡಬಹುದಾಗಿದೆ ಎಂದು ಫೇಸ್ ಬುಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಾರ್ಕ್ ಝುಕರ್ ಬರ್ಗ್ ತಿಳಿಸಿದ್ದಾರೆ.

2018ರಲ್ಲಿ ಫೇಸ್ ಬುಕ್ ಸಾಮಾಜಿಕ ಮಾಧ್ಯಮದಲ್ಲಿ ನಮ್ಮ ಪ್ರಮುಖ ಗಮನ ಬಳಕೆದಾರರು ಫೇಸ್ ಬುಕ್ ನಲ್ಲಿ ಕಳೆಯುವ ಸಮಯವನ್ನು ಉತ್ತಮವಾಗಿ ಕಳೆಯಬೇಕೆಂಬುದು. ಜನರನ್ನು ಸಂಪರ್ಕಿಸಿ ಹತ್ತಿರಕ್ಕೆ ತರಲು ನಾವು ಫೇಸ್ ಬುಕ್ ನ್ನು ಆರಂಭಿಸಿದೆವು ಎಂದು ನಿನ್ನೆ ಝುಕರ್ ಬರ್ಗ್ ಫೇಸ್ ಬುಕ್ ನಲ್ಲಿ ಹೇಳಿಕೊಂಡಿದ್ದಾರೆ.

ಸಾರ್ವಜನಿಕರಿಗೆ ಉಪಯೋಗವಾಗುವಂತಹ ವಾಣಿಜ್ಯ, ಬ್ರಾಂಡ್ ಗಳು ಮತ್ತು ಮಾಧ್ಯಮಗಳ ಸುದ್ದಿಗಳು, ಪೋಸ್ಟ್ ಗಳು ಫೇಸ್ ಬುಕ್ ಪುಟಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ಖಾಸಗಿ ಕ್ಷಣಗಳನ್ನು ಮತ್ತು ಸಂಗತಿಗಳನ್ನು ಹಂಚಿಕೊಳ್ಳಲು ಕಡಿಮೆ ಅವಕಾಶಗಳಿವೆ ಎಂದು ಫೇಸ್ ಬುಕ್ ಬಳಕೆದಾರರಿಂದ ಪ್ರತಿಕ್ರಿಯೆ ಬರುತ್ತಿತ್ತು ಎಂದಿದ್ದಾರೆ.

ನಾವು ಫೇಸ್ ಬುಕ್ ಆರಂಭಿಸಿ ಹೇಗೆ ಬೆಳೆಸಿದ್ದೇವೆ ಎಂಬುದರ ಕುರಿತು ಪ್ರಮುಖ ಬದಲಾವಣೆಗಳನ್ನು ಮಾಡುತ್ತೇವೆ. ಸಾಮಾಜಿಕ ಸಂವಹನಕ್ಕೆ ಉಪಯೋಗವಾಗುವಂತಹ ಸಂಬಂಧಿತ ವಿಷಯಗಳನ್ನು ತಿಳಿದುಕೊಳ್ಳಲು ನಾವು ಸಹಾಯ ಮಾಡುತ್ತೇವೆ. ಈ ನಿಟ್ಟಿನಲ್ಲಿ ನಮ್ಮ ಉತ್ಪಾದನ ತಂಡಕ್ಕೆ ವಿಷಯಗಳನ್ನು ನೀಡುವುದು ನಮ್ಮ ಸದ್ಯದ ಗುರಿಯಾಗಿದೆ ಎಂದರು.

ಈ ನಿಟ್ಟಿನಲ್ಲಿ ಕಳೆದ ವರ್ಷದಿಂದ ನಮ್ಮ ತಂಡ ಕೆಲಸ ಮಾಡುತ್ತಿದ್ದು, ನ್ಯೂಸ್ ಫೀಡ್ ಮುಂದಿನ ದಿನಗಳಲ್ಲಿ ಕಾಣಬಹುದಾದ ಪ್ರಮುಖ ಬದಲಾವಣೆಯಾಗಿದೆ. ಇಲ್ಲಿ ಬಳಕೆದಾರರು ತಮ್ಮ ಕುಟುಂಬ, ಸ್ನೇಹಿತರು ಮತ್ತು ಗುಂಪಿನವರಿಂದ ಹೆಚ್ಚು ಮಾಹಿತಿಗಳನ್ನು ಪಡೆಯಬಹುದು.

ಇಂತಹ ಪೋಸ್ಟ್ ಗಳು ಇಬ್ಬರ ಮಧ್ಯೆ ಸಂವಾದಕ್ಕೆ ದಾರಿ ಮಾಡಿಕೊಡಲಿದೆ. ಉದಾಹರಣೆಗೆ ತಮ್ಮ ಸ್ನೇಹಿತ ಸಲಹೆ ಪಡೆಯಲು ಇಚ್ಛಿಸಿದರೆ ಪ್ರವಾಸ ಹೋಗಲು ಸಲಹೆ ಕೇಳಿದರೆ ಅಥವಾ ಸುದ್ದಿಗಳು, ವಿಡಿಯೋಗಳು ಅನೇಕ ಚರ್ಚೆಗಳಿಗೆ ದಾರಿ ಮಾಡಿಕೊಡಲಿದೆ.

ನ್ಯೂಸ್ ಫೀಡ್ ನ ಸ್ಥಳ ಸೀಮಿತವಾಗಿರುವುದರಿಂದ ಸ್ನೇಹಿತರ ಮತ್ತು ಕುಟುಂಬದವರ ಪೋಸ್ಟ್ ಗಳು ಹೆಚ್ಚಾಗಿ ಕಾಣಿಸಿಕೊಳ್ಳಲಿದೆ. 
Posted by: SUD | Source: IANS

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ !

Topics : Facebook, People, Interaction, News feed, ಫೇಸ್ ಬುಕ್, ಜನರು, ಸಂವಾದ, ನ್ಯೂಸ್ ಫೀಡ್
English summary
Facebook is making changes to its News Feed feature that will allow users to see more updates from family and friends than posts from businesses, brands and media, Facebook CEO Mark Zuckerberg has announced. "One of our big focus areas for 2018 is making sure the time we all spend on Facebook is time well spent. We built Facebook to help people stay connected and bring us closer together with the people that matter to us," Zuckerberg posted on Facebook late on Thursday.

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

FIFA World Cup 2019
Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS