Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Sonia gandhi

ಪ್ರಧಾನಿ ಮೋದಿ ಸರ್ಕಾರದ ವಂಚನೆ ಮತ್ತು ಭ್ರಷ್ಟಾಚಾರವನ್ನು ನಾವು ಹೊರಗೆಳೆಯುತ್ತಿದ್ದೇವೆ: ಸೋನಿಯಾ ಗಾಂಧಿ

Rajnath Singh

ಕಾಶ್ಮೀರ ರಕ್ಷಣೆಗಾಗಿ ಗಡಿ ದಾಟಲೂ ಸಿದ್ಧ: ರಾಜನಾಥ್ ಸಿಂಗ್

Siddaramaiah

2019 ರಲ್ಲಿ ರಾಹುಲ್ ಪ್ರಧಾನಿಯಾಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಸಿದ್ದರಾಮಯ್ಯ

Fodder scam case: Verdict against Lalu Prasad, Jagannath Mishra deferred till March 19

ಮೇವು ಹಗರಣ: ಲಾಲು, ಜಗನ್ನಾಥ್ ಮಿಶ್ರಾ ವಿರುದ್ಧದ ತೀರ್ಪು ಮಾ. 19ಕ್ಕೆ ಮುಂದೂಡಿಕೆ

Narendra modi

ರೈತರಿಗೆ ಘೋಷಿತ ಕನಿಷ್ಟ ಬೆಂಬಲ ಬೆಲೆ ಸಿಗುವಂತೆ ಮಾಡಲು ಕಾರ್ಯೋನ್ಮುಖ: ಪ್ರಧಾನಿ ಮೋದಿ

Police head constable dies in hit and run case near Byatarayanapura in Bangalore

ಬೆಂಗಳೂರು: ಹಿಟ್ ಆಂಡ್ ರನ್ ಪ್ರಕರಣ, ಪೋಲೀಸ್ ಪೇದೆ ಸಾವು

Another blow for BJP in UP, Yogi’s minister Swami Prasad Maurya’s son-in-law joins SP

ಬಿಜೆಪಿಗೆ ಮತ್ತೆ ಹಿನ್ನಡೆ: ಎಸ್ಪಿ ಸೇರಿದ ಉತ್ತರ ಪ್ರದೇಶ ಸಚಿವರ ಅಳಿಯ

Rohingyas

ರೋಹಿಂಗ್ಯ ನ್ನರು ಭದ್ರತೆಗೆ ಅಪಾಯ, ಗಡಿಪಾರು ಮಾಡಿ: ಆರ್ ಎಸ್ಎಸ್

Jackfruit

ಕೇರಳದ ರಾಜ್ಯ ಫಲವಾಗಲಿರುವ ಹಲಸು, ಮಾರ್ಚ್ 21ಕ್ಕೆ ಘೋಷಣೆ

Arun Jaitley, Finance minister

ಅನಾಣ್ಯೀಕರಣ ಜಾರಿ ನಂತರ ಹಣಕಾಸು ಸಚಿವಾಲಯದಿಂದ ಅತಿಹೆಚ್ಚು ಆರ್ ಟಿಐ ಅರ್ಜಿ ತಿರಸ್ಕೃತ: ಸಿಐಸಿ ವರದಿ

Sergei Skripal and his daughter Yulia were found in a serious condition in the cathedral city of Salisbury on March 4

ಬೇಹುಗಾರಿಕೆ ಬಿಕ್ಕಟ್ಟು: 23 ಬ್ರಿಟಿಷ್‌ ರಾಜತಾಂತ್ರಿಕರನ್ನು ಉಚ್ಚಾಟಿಸಿದ ರಷ್ಯಾ

Narendra Modi

ಕೊಯ್ದ ಪೈರಿನ ಕೂಳೆ ದಹಿಸುವುದು ತಪ್ಪು: ರೈತರಿಗೆ ಪ್ರಧಾನಿ ನರೇಂದ್ರ ಮೋದಿ

Power Star Puneet and Navarasa Nayaka Jaggesh are celebrating their birthday

ಪವರ್ ಸ್ಟಾರ್ ಪುನೀತ್, ನವರಸ ನಾಯಕ ಜಗ್ಗೇಶ್ ಗೆ ಜನ್ಮ ದಿನ ಸಂಭ್ರಮ

ಮುಖಪುಟ >> ವಿಶೇಷ

ವೈದ್ಯಲೋಕದ ಅಪರೂಪ: ನವಜಾತ ಗಂಡು ಶಿಶುವಿನ ಹೊಟ್ಟೆಯಲ್ಲಿತ್ತು ಅವಳಿ ಮಕ್ಕಳ ಭ್ರೂಣ!

Representational image

ಸಾಂದರ್ಭಿಕ ಚಿತ್ರ

ನವದೆಹಲಿ: ಇದು ವೈದ್ಯಲೋಕಕ್ಕೆ ವಿಸ್ಮಯ ಮೂಡಿಸಿದ ಪ್ರಕರಣ. ನವಜಾತ ಶಿಶುವಿನ ಗರ್ಭದಲ್ಲಿ ಅವಳಿ ಮಕ್ಕಳ ಭ್ರೂಣ ವಿರುವುದು ಭಾರತದಲ್ಲಿ ಪತ್ತೆಯಾಗಿರುವುದು ಎಲ್ಲರನ್ನೂ ಆಶ್ಚರ್ಯ ಚಕಿತಗೊಳಿಸಿದೆ. 

ನವಜಾತ ಶಿಶುವಿನ ಭ್ರೂಣದೊಳಗಿನ ಅವಳಿ ಭ್ರೂಣವು ಸಂಪೂರ್ಣ ಬೆಳವಣಿಗೆ ಕಂಡು ಮೆದುಳು, ಕೈ, ಕಾಲುಗಳನ್ನು ಹೊಂದಿರುವುದನ್ನು ವೈದ್ಯರ ಗಮನಕ್ಕೆ ಬಂದಿದೆ. 

ವಿಶ್ವದಲ್ಲಿ ಈ ವರೆಗೆ ಪತ್ತೆಯಾಗಿರುವ ಸುಮಾರು 200 ಅತ್ಯಪರೂಪದ ಭ್ರೂಣದೊಳಗಿನ ಭ್ರೂಣದ ಪ್ರಕರಣಗಳಲ್ಲಿ ಇದೂ ಒಂದೆನಿಸಿದೆ. 

ನವಜಾತ ಶಿಶುವಿನ ಗರ್ಭದಲ್ಲಿದ್ದ ಸುಮಾರು 7 ಸೆ.ಮೀ. ಉದ್ದದ ಈ ಭ್ರೂಣವನ್ನು ಶಸ್ತ್ರ ಚಿಕಿತ್ಸೆಯ ಮೂಲಕ ವೈದ್ಯರು ಯಶಸ್ವಿಯಾಗಿ ಹೊರ ತೆಗೆದಿದ್ದಾರೆ. 

ಮುಂಬ್ರಾದ ಬಿಲಾಲ್‌ ಆಸ್ಪತ್ರೆಯ ರೇಡಿಯಾಲಜಿಸ್ಟ್‌  ಡಾ. ಭಾವನಾ ಥೋರಟ್‌ ಅವರು 19 ವರ್ಷದ ಗರ್ಭಿಣಿ ತಾಯಿಯ ಸ್ಕ್ಯಾನಿಂಗ್‌ ನಡೆಸುವಾಗ ಆಕೆಯ ಹೊಟ್ಟೆಯೊಳಗಿನ ಮಗುವಿನ ಗರ್ಭದೊಳಗೆ ಅದರ ಅವಳಿ ಮಕ್ಕಳ ಭ್ರೂಣ ಇರುವುದನ್ನು ಪತ್ತೆ ಮಾಡಿದ್ದರು. 

ಮಗು ಜನಿಸಿದ 9 ದಿನಗಳ ನಂತರ ನವಜಾತ ಶಿಶುವಿನ ಹೊಟ್ಟೆಯ ಸ್ಕ್ಯಾನ್ ಮಾಡಿದಾಗ ಅದರಲ್ಲಿ ಅವಳಿ ಸಹೋದರರ ಭ್ರೂಣವಿರುವುದು ತಿಳಿದು ಬಂದಿದೆ. 

ಮಗುವಿನ ಗರ್ಭದೊಳಗೆ ಭ್ರೂಣ ಇರುವುದನ್ನು ಮತ್ತು ಅದರ ಮೇಲ್ಭಾಗ ಮತ್ತು ಕಾಲುಗಳ ಕೆಳ ಭಾಗದ ಎಲುಬನ್ನು ನಾನು ಗರ್ಭಿಣಿ ತಾಯಿಯ ಸ್ಕ್ಯಾನಿಂಗ್‌ ವೇಳೆ ಪತ್ತೆ ಹಚ್ಚಿದೆ. ಇದರಲ್ಲಿನ ಅತ್ಯಂತ ವಿಶೇಷದ ಸಂಗತಿ ಎಂದರೆ ಆ ಬೆಳೆದ ಭ್ರೂಣದ ತಲೆಯನ್ನು ಮತ್ತು ಅದರೊಳಗಿನ ಮೆದುಳನ್ನು ಗುರುತಿಸಿದ್ದಾಗಿ ರೇಡಿಯಾಲಜಿಸ್ಟ್ ಡಾ.ಥ್ರೋಟ್ ಹೇಳಿದ್ದಾರೆ. 

ನವಜಾತ ಶಿಶುವಿನ ಗರ್ಭದೊಳಗಿನ ಸುಮಾರು 150 ಗ್ರಾಂ ತೂಕದ ಈ ಬೆಳೆದ ಭ್ರೂಣವನ್ನು ಹೊರತೆಗೆಯುವ ಶಸ್ತ್ರಚಿಕಿತ್ಸೆಯನ್ನು ಥಾಣೆಯ ಟೈಟಾನ್‌ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ನಡೆಸಲಾಯಿತು. 

ಶಸ್ತ್ರ ಚಿಕಿತ್ಸೆಗೆ ಒಳಗಾದ ನವಜಾತ ಶಿಶು ಹಾಗೂ ತಾಯಿ ಆರೋಗ್ಯವಾಗಿದ್ದಾರೆ. ಕೆಲವೊಂದು ಬಾರಿ ಈ ರೀತಿಯಾದಾಗ ಪೌಷ್ಟಿಕಾಂಶದ ಕೊರತೆಯಿಂದ ಶಿಶು ಸಾವನ್ನಪ್ಪುವ ಸಾಧ್ಯತೆಯಿರುತ್ತದೆ ಎಂದು ವೈದ್ಯರು ಹೇಳಿದ್ದಾರೆ. 
Posted by: SD | Source: Online Desk

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು
ಆಯ್ಕೆ ಮಾಡಿ -
ನೋಂದಣಿ ಉಚಿತ!

Topics : India, New born Baby, pregnant, twin brother, Scan, ಭಾರತ, ನವಜಾತ ಶಿಶು, ಗರ್ಭಿಣಿ, ಅವಳಿ ಸಹೋದರರು, ಸ್ಕ್ಯಾನಿಂಗ್
English summary
The doctor's attention is that the twin fetus within the fetus of the newborn has full growth and has the brain, hands and feet.

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS
Advertisement
Advertisement