Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Narendra Modi spoke at Kedarnath

ಕೇದಾರನಾಥವನ್ನು ಮಾದರಿ ತೀರ್ಥಯಾತ್ರಾ ಕ್ಷೇತ್ರವನ್ನಾಗಿ ಮಾಡುವೆ: ಪ್ರಧಾನಿ ಮೋದಿ

Protester killed in riot at Bihar police station. Cops deny they shot him

ಬಿಹಾರ ಪೊಲೀಸ್ ಠಾಣೆಯಲ್ಲಿ ಗಲಭೆ: ಪ್ರತಿಭಟನಾಕಾರ ಸಾವು, ನಾವು ಶೂಟ್ ಮಾಡಿಲ್ಲ ಎಂದ ಪೊಲೀಸರು

500 long distance trains to run quicker from next month

ಮುಂದಿನ ತಿಂಗಳಿಂದ 500 ಕಿಮೀ. ದೂರ ಸಂಚರಿಸುವ ರೈಲುಗಳ ಪ್ರಯಾಣದ ಅವಧಿ ಕಡಿತ!

Will not speak on

'ಶಾ-ಜಾದ' ಬಗ್ಗೆ ಮಾತನಾಡುವುದಿಲ್ಲ: ಕೋರ್ಟ್ ಆದೇಶದ ಬಳಿಕ ರಾಹುಲ್ ಗಾಂಧಿ

Sreesanth says he might play for another country

ನಾನು ಬೇರೆ ದೇಶದ ಪರವಾಗಿ ಆಡಬಲ್ಲೆ: ಬಿಸಿಸಿಐಗೆ ಶ್ರೀಶಾಂತ್ ಬೆದರಿಕೆ

Rupani slams Chidambaram over EC remarks; says Cong scared of polls

ಕಾಂಗ್ರೆಸ್ ಗೆ ಚುನಾವಣಾ ಭೀತಿ: ಚಿದಂಬರಂ ವಿರುದ್ಧ ಗುಜರಾತ್ ಸಿಎಂ ವಾಗ್ದಾಳಿ

Hero MotoCorp

ಧನತ್ರಯೋದಶಿ ದಿನದಂದು ಮಾರಾಟವಾದ ಹಿರೋ ಮೋಟೊ ಕಾರ್ಪ್ ಸಂಖ್ಯೆ ಎಷ್ಟು ಗೊತ್ತೆ?

Man gets stuck in Bengaluru

ಬೆಂಗಳೂರು: ಜಿಟಿ ಮಾಲ್​ನ ಲಿಫ್ಟ್ ಒಳಗೆ ಸಿಲುಕಿ ವ್ಯಕ್ತಿ ಸಾವು

Virat Kohli, Jasprit Bumrah drop in ICC ODI rankings

ಐಸಿಸಿ ಏಕದಿನ ರ್ಯಾಂಕಿಂಗ್ ನಲ್ಲಿ ಕುಸಿದ ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ

Grenade lobbed at house of PDP legislator in Tral in south Kashmir

ಮತ್ತೋರ್ವ ಪಿಡಿಪಿ ಶಾಸನಕ ಮನೆ ಮೇಲೆ ಗ್ರೆನೇಡ್ ದಾಳಿ

Virender Sehwag,

ವೀರೇಂದ್ರ ಸೆಹ್ವಾಗ್ ಜನ್ಮದಿನ, ಉಲ್ಟಾ ಸಂದೇಶ ಕಳಿಸಿದ ತೆಂಡೂಲ್ಕರ್!

Karnataka

ವಿಧಾನಸಭೆ ಚುನಾವಣೆ: ಅ.29ರಂದು ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆ ಸಮಿತಿಯ ಮೊದಲ ಸಭೆ

Solicitor General Ranjit Kumar Resigns: Sources

ಸಾಲಿಸಿಟರ್ ಜನರಲ್ ರಂಜಿತ್ ಕುಮಾರ್ ರಾಜಿನಾಮೆ!

ಮುಖಪುಟ >> ವಿಶೇಷ

ಸುಂದರ ಸೆಲ್ಫಿ ಹಿಂದೆ ರೋಚಕ ಭಯಾನಕತೆ?: ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್

ಕೆಲವರು ಈಕೆ ಅತ್ಯಂತ ಭಯಾನಕವಾಗಿದ್ದಾಳೆ ಎಂದಿದ್ದರೆ, ಮತ್ತೆ ಕೆಲವರು ಇದನ್ನು "ಫೋಟೋಶಾಪ್ ಪವಾಡ" ಶಂಕೆ
This cute couple selfie is actually freaking every one out in Social Media

ಟ್ವಿಟರ್ ಚಿತ್ರ

ನವದೆಹಲಿ: ಇತ್ತೀಚೆಗೆ ಜೋಡಿಯೊಂದು ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಮಾಡಿದ್ದ ಸೆಲ್ಫಿಯೊಂದು ಇದೀಗ ವ್ಯಾಪಕ ವೈರಲ್ ಆಗಿದ್ದು, ಸುಂದರ ಸೆಲ್ಪಿ ಹಿಂದಿನ ರೋಚಕ ಭಯಾನಕತೆಯಿಂದಾಗಿ ಈ ಫೋಟೋ ವೈರಲ್ ಆಗುತ್ತಿದೆ.

ಆ್ಯಂಡಿ ಎಂಬ ಟ್ವಿಟರ್ ಖಾತೆದಾರ ಈ ಫೋಟೋವನ್ನು ಆಪ್ಲೋಡ್ ಮಾಡಿದ್ದು, ಐ ಲವ್ ಮೈ ಗರ್ಲ್ ಫ್ರೆಂಡ್ ಈವನ್ ಶೀ ಇಸ್ ಜೆಮಿನಿ ("I love my girlfriend even if she's a Gemini") ಎಂದು ಟ್ವೀಟ್ ಮಾಡಿದ್ದ.  ಆದರೆ ಮೇಲ್ನೋಟಕ್ಕೆ ಈ ಫೋಟೋ ಜೋಡಿಯ ಪ್ರೀತಿಯನ್ನು ತೋರಿಸುತ್ತದೆಯಾದರೂ, ಇದೇ ಫೋಟವನ್ನು ಕೊಂಚ ಕೂಲಂಕುಷವಾಗಿ ಪರಿಶೀಲಿಸಿದರೆ ಫೋಟೋ ಹಿಂದಿನ ಭಯಾನಕತೆ ಬಯಲಾಗುತ್ತದೆ.

ಈ ಟ್ವೀಟ್ ನೋಡಿದ ಲಕ್ಷಾಂತರ ಟ್ವೀಟಿಗರು ಇದಕ್ಕೆ ರೀ-ಟ್ವೀಟ್ ಮಾಡಿದ್ದು, ಇದು ಹೇಗೆ ಸಾಧ್ಯ...ಇನ್ನು ಕೆಲವರು 'ಈಕೆ ಅತ್ಯಂತ ಭಯಾನಕವಾಗಿದ್ದಾಳೆ' ಎಂದಿದ್ದಾರೆ. ಮತ್ತೆ ಕೆಲವರು ಆಕೆ ಮನುಷ್ಯಳೋ ಅಥವಾ ಭೂತವೋ ಎಂಬ  ಉದ್ಗಾರಗಳೊಂದಿಗೆ ಪ್ರಶ್ನೆಗಳ ಸುರಿಮಳೆ ಗೈದಿದ್ದಾರೆ. ಮತ್ತೆ ಕೆಲವರು ಇದನ್ನು ವ್ಯಂಗ್ಯ ಮಾಡಿದ್ದು, ಇದು ಫೋಟೋಶಾಪ್ ಪವಾಡ ಎಂದು ಟೀಕಿಸಿದ್ದಾರೆ.

ಇಷ್ಟಕ್ಕೂ ಈ ಫೋಟೋ ಹಿಂದಿರುವ ಕಥೆಯೇನು?

ಇಷ್ಟಕ್ಕೆಲ್ಲಾ ಕಾರಣವಾಗಿದ್ದು, ನೋಡುಗರು ಆ ಫೋಟೋದಲ್ಲಿ ಕಂಡ ನಂಬಲಸಾಧ್ಯವಾದ ಸತ್ಯ!. ಈ ಸೆಲ್ಫೀಯನ್ನು ಮೇಲ್ನೋಟಕ್ಕೆ ನೋಡಿದರೆ ಇಬ್ಬರ ನಡುವಿನ ಪ್ರೀತಿ ಎದ್ದು ಕಾಣುತ್ತದೆ. ಆದರೆ ಸೂಕ್ಷ್ಮವಾಗಿ ಗಮನಿಸಿದಾಗಲೇ ಈ  ಸುಂದರ ಜೋಡಿಯ ಹಿಂದಿನ ಭಯಾನಕ ರೂಪ ಕಾಣುತ್ತದೆ. ಯಾಕೆಂದರೆ ಫೋಟೋಗೆ ಫೋಸ್ ಕೊಡುವ ಯುವತಿ ಏಕಕಾಲದಲ್ಲಿ ಎರಡೆರಡು ದಿಕ್ಕಿಗೆ ಮುಖ ತೋರಿಸಿದ್ದಾಳೆ. ಸೆಲ್ಫಿ ವೇಳೆ ಯುವತಿ ಯಾವುದಾದರೂ ಒಂದೇ ದಿಕ್ಕಿಗೆ  ನೋಡಬೇಕಿತ್ತು. ಆದರೆ ಇವರ ಹಿಂದಿದ್ದ ಕನ್ನಡಿಯಲ್ಲಿ ಯುವತಿ ಅದೇ ಕ್ಷಣದಲ್ಲಿ ಹಿಂಬದಿಗೆ ನೋಡುವುದೂ ಕಾಣುತ್ತದೆ. ಓರ್ವ ವ್ಯಕ್ತಿಗೆ ಎರಡು ಮುಖಗಳಿರಲು ಸಾಧ್ಯವಿಲ್ಲ. ಇನ್ನು ಫೋಟೋ ನೋಡಿದರೆ ಆಕೆ ಸೆಲ್ಫೀಗೆ ಫೋಸ್  ನೀಡಿರುವುದು ಸ್ಪಷ್ಟವಾಗುತ್ತದೆ. ಆದರೆ ಆದೇ ಸಂದರ್ಭದಲ್ಲಿ ಆ ಕನ್ನಡಿಯಲ್ಲಿ ಕಾಣುತ್ತಿರುವುದೇನು ಎಂಬ ಪ್ರಶ್ನೆಯೂ ಮೂಡುತ್ತದೆ.

ಫೋಟೋ ಹಿಂದಿನ ಅಸಲೀಯತ್ತು?

ಈ ಫೋಟೋ ನಿಜಕ್ಕೂ ವೈರಲ್ ಆಗಿದೆಯಾದರೂ ಇದನ್ನು ಅಪ್ಲೋಡ್ ಮಾಡಿರುವ ಆ್ಯಂಡಿ ಎಂಬ ಟ್ವಿಟರ್ ಖಾತೆದಾರನದ್ದೇ ಅಲ್ಲ... ಈ ಫೋಟೋ ಬ್ರೆಜಿಲ್ ಮೂಲದ ಜೆಫರ್ಸನ್ ನೆಗ್ರಾವ್ ಎಂಬಾತನದ್ದು ಎಂಬುದು ಟ್ವಿಟರ್  ಮೂಲಕ ಬಯಲಾಗಿದೆ. ಈತನ ಗರ್ಲ್ ಫ್ರೆಂಡ್ ಆಡ್ರಿಯಾನೆ ಅಲ್ಫೈಯಾಳೊಂದಿಗೆ ಸೆಲ್ಫಿತೆಗೆದು ಅದನ್ನು ಟ್ವೀಟ್ ಮಾಡಿದ್ದ. ಇದೇ ಫೋಟೋವನ್ನು ಆ್ಯಂಡಿ ಎಂಬ ಖಾತೆದಾರ ತನ್ನ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದ ಎಂಬ ವಿಚಾರ  ಬೆಳಕಿಗೆ ಬಂದಿದೆ. ಇನ್ನು ಈ ಫೋಟೋದ ಮೂಲಕ ಆ್ಯಂಡಿ ಖಾತೆದಾರ ಫೇಮಸ್ ಆದನಾದರೂ ಈ ಟ್ವೀಟ್ ನಿಂದಾಗಿ ವ್ಯಾಪಕ ಟೀಕೆಗಳನ್ನು ಕೂಡ ಏದುರಿಸಿದ್ದಾನೆ.

ಒಟ್ಟಾರೆ ಒಂದು ಸುಂದರ ಸೆಲ್ಫಿ ಹಿಂದಿನ ಭಯಾನಕತೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

Posted by: SVN | Source: Online Desk

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು
ಆಯ್ಕೆ ಮಾಡಿ -
ಉಚಿತ ನೋಂದಣಿ !

Topics : New Delhi, Viral News, Twitter, Brazil, Selfie, ನವದೆಹಲಿ, ವೈರಲ್ ಸುದ್ದಿ, ಟ್ವಿಟರ್, ಬ್ರೆಜಿಲ್, ಸೆಲ್ಫಿ
English summary
In the world of social media and selfies, couples sharing their romantic, candid moments online is not unusual.

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Kannadaprabha.com App for Android Kannadaprabha.com App for IOS
Advertisement
Advertisement