Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
ಐಎಎಫ್ ವಿಮಾನಕ್ಕಾಗಿ ಮುಂದುವರೆದ ಶೋಧ ಕಾರ್ಯ (ಸಂಗ್ರಹ ಚಿತ್ರ)

ಐಎಎಫ್ ವಿಮಾನಕ್ಕಾಗಿ ಮುಂದುವರೆದ ಶೋಧ ಕಾರ್ಯ: ಪರಿಕ್ಕರ್ ವೈಮಾನಿಕ ಸಮೀಕ್ಷೆ

Munich Mall

ಜರ್ಮನಿ: ಮ್ಯೂನಿಚ್ ಮಾಲ್ ಗುಂಡಿನ ದಾಳಿ: ಬಂಧೂಕುದಾರಿ ಸೇರಿ 10 ಮಂದಿ ಸಾವು

Accident

ಆಂಧ್ರದಲ್ಲಿ ಭೀಕರ ಅಪಘಾತ: ಕರ್ನಾಟಕದ ಐವರು ಸಾವು

Munich Mall Shooting Rampage Caught on camera

ಮ್ಯೂನಿಚ್ ಮಾಲ್ ಶೂಟಿಂಗ್ ಕ್ಯಾಮರಾದಲ್ಲಿ ಸೆರೆ

PM Modi-Tilak-Azad

ಆಜಾದ್, ತಿಲಕರಿಗೆ ನಮನ ಸಲ್ಲಿಸಿದ ಪ್ರಧಾನಿ ಮೋದಿ

Narendra Modi

ಪ್ರಧಾನಿ ಮೋದಿ ಅವರ ಸಹಿಯನ್ನೇ ಫೋರ್ಜರಿ ಮಾಡಿದ್ದ ಭೂಪನ ಬಂಧನ

Munirathna

ಕಬಾಲಿ ಚಿತ್ರದ ಟಿಕೆಟ್ ಗಳನ್ನು ಫ್ರೀಯಾಗಿ ಹಂಚಿದ ಶಾಸಕ ಮುನಿರತ್ನ

vijaya

ಹಾಸನ: ಆತ್ಮಹತ್ಯೆಗೆ ಯತ್ನಿಸಿದ ಉಪ ವಿಭಾಗಾಧಿಕಾರಿ ವಿರುದ್ಧವೇ ಎಫ್ ಐ ಆರ್

Pokemon Go

ಫೇಸ್ ಬುಕ್ ನ್ನು ಹಿಂದಿಕ್ಕಿದ ಪೋಕ್ಮನ್ ಗೋ ಗೇಮ್

Snake spotted in borewell

ಮಧ್ಯ ಪ್ರದೇಶ: ಮಗು ಬಿದ್ದಿರುವ ಕೊಳವೆ ಬಾವಿಯಲ್ಲಿ ಹಾವು ಪತ್ತೆ

Virat Kohli

ವೆಸ್ಟ್ ಇಂಡೀಸ್ ವಿರುದ್ಧ ದ್ವಿಶತಕ ಸಿಡಿಸಿದ ಕೊಹ್ಲಿ

Sushma Swaraj

ಮ್ಯೂನಿಚ್ ದಾಳಿಯಲ್ಲಿ ಭಾರತೀಯರಿಗೆ ಯಾವುದೇ ಅಪಾಯವಿಲ್ಲ: ವಿದೇಶಾಂಗ ಇಲಾಖೆ

Sumathi

4 ತಿಂಗಳಿಂದ ಸಿಗದ ಸಂಬಳ: ಹಿರಿಯ ಅಧಿಕಾರಿ ಮುಂದೆ ಮಹಿಳಾ ಹೋಂ ಗಾರ್ಡ್ ಆತ್ಮಹತ್ಯೆ ಯತ್ನ

ಮುಖಪುಟ >> ಪ್ರಧಾನ ಸುದ್ದಿ

ಹತ್ಯಾಚಾರ ಸಾಬೀತು

ದಿಲ್ಲಿ ಗ್ಯಾಂಗ್ ರೇಪ್ ನಾಲ್ವರ ವಿರುದ್ಧ ಇಂದು ಶಿಕ್ಷೆ ಪ್ರಕಟ

 ಕನ್ನಡಪ್ರಭ ಪ್ರತಿನಿಧಿಯಿಂದ

ನವದೆಹಲಿ: ರಾಷ್ಟ್ರವನ್ನು ತಲ್ಲಣಗೊಳಿಸಿದ್ದ, ಕಳೆದ ಡಿಸೆಂಬರ್ 16ರ ರಾತ್ರಿ ದೆಹಲಿಯಲ್ಲಿ ನಡೆದಿದ್ದ ಫಿಸಿಯೋಥೆರಪಿ ವಿದ್ಯಾರ್ಥಿನಿ 'ನಿರ್ಭಯಾ'ಳ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಭಾಗಿಯಾಗಿದ್ದ ಎಲ್ಲ ನಾಲ್ವರೂ ಅಪರಾಧಿಗಳೆಂದು ದೆಹಲಿ ತ್ವರಿತ ನ್ಯಾಯಾಲಯ ಮಂಗಳವಾರ ಘೋಷಿಸಿದೆ.

ಬುಧವಾರ ಮತ್ತೊಂದು ಸುತ್ತು ವಾದ ಆಲಿಸಿದ ನಂತರ ಅಪರಾಧಿಗಳಿಗೆ ಶಿಕ್ಷೆ ಪ್ರಮಾಣವನ್ನು ನ್ಯಾಯಾಲಯ ಪ್ರಕಟಿಸಲಿದೆ. ಯುವತಿಯನ್ನು ಅತ್ಯಂತ ಕ್ರೂರವಾಗಿ ಹಿಂಸಿಸಿ, ಸಾಮೂಹಿಕವಾಗಿ ಅತ್ಯಾಚಾರ ಎಸಗಿದ ಅತಿ ಅಪರೂಪದ ಪ್ರಕರಣ ಇದಾಗಿರುವುದರಿಂದ ಎಲ್ಲಾ ನಾಲ್ವರಿಗೂ ಮರಣ ದಂಡನೆ ಶಿಕ್ಷೆ ವಿಧಿಸಲಾಗುತ್ತದೆಂದು ನಿರೀಕ್ಷಿಸಲಾಗಿದೆ.

ಭಾರತದಲ್ಲಿ ಅತ್ಯಂತ ಅಪರೂಪದ ಪ್ರಕರಣಗಳಲ್ಲಿ ಮಾತ್ರ ನ್ಯಾಯಾಲಯಗಳು ಮರಣದಂಡನೆ ವಿಧಿಸುತ್ತವೆ.'ನಿರ್ಭಯಾ' ಪ್ರಕರಣವೂ ಅಪರೂಪದಲ್ಲಿ ಅತ್ಯಪರೂಪದ ಪ್ರಕರಣವಾಗಿದೆ.

ಇಡೀ ರಾಷ್ಟ್ರದ ಸಾಕ್ಷಿಪ್ರಜ್ಞೆ ಕೆಣಕಿದ್ದ ಈ ಅತ್ಯಾಚಾರ ಪ್ರಕರಣದ ಅತ್ಯಾಚಾರಿಗಳಿಗೆ ಮರಣದಂಡನೆ ವಿಧಿಸಬೇಕೆಂಬ ರಾಷ್ಟ್ರವ್ಯಾಪಿ ಹೋರಾಟಕ್ಕೂ ಕಾರಣವಾಗಿತ್ತು. ಈ ಪ್ರಕರಣ ನಡೆದ ಒಂಭತ್ತು ತಿಂಗಳೊಳಗೆ ವಿಚಾರಣೆ ಮುಗಿದು ಅಪರಾಧಿಗಳನ್ನು ಶಿಕ್ಷೆಗೊಳಪಡಿಸುತ್ತಿರುವುದು ಇದೇ ಮೊದಲು.

ಆರೋಪಗಳು ಸಾಬೀತು: ಈ ಪ್ರಕರಣದಲ್ಲಿ ಆರೋಪಿಗಳಾಗಿದ್ದ ಮುಖೇಶ್ ಸಿಂಗ್, ಅಕ್ಷಯ್ ಸಿಂಗ್, ವಿನಯ್ ಶರ್ಮ ಮತ್ತು ಪವನ್ ಗುಪ್ತ ವಿರುದ್ಧ ಅತ್ಯಾಚಾರ, ಕೊಲೆ, ಅಪಹರಣ, ಕೊಲೆ ಯತ್ನ, ಸಾಕ್ಷ್ಯನಾಶ ಸೇರಿದಂತೆ 14 ಪ್ರಕರಣಗಳನ್ನು ದಾಖಲಿಸಲಾಗಿತ್ತು. ಎಲ್ಲಾ ಪ್ರಕರಣಗಳಲ್ಲೂ ನಾಲ್ವರ ಆರೋಪಗಳು ಸಾಬೀತಾಗಿವೆ ಎಂದು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಯೋಗೇಶ್ ಖನ್ನಾ ಪ್ರಕಟಿಸಿದರು.         

ಸಾಯುವ ಮುನ್ನ 'ನಿರ್ಭಯಾ' ನೀಡಿದ ಹೇಳಿಕೆ, ಆಕೆಯ ಗೆಳೆಯ ನೀಡಿದ ಸಾಕ್ಷ್ಯ, ಇತರ 85 ಮಂದಿ ಸಾಕ್ಷಿಗಳು, ಡಿಎನ್ಎ ಮತ್ತು ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಮತ್ತು ವಿದ್ಯುನ್ಮಾನ ಸಾಕ್ಷಿಗಳು ಆರೋಪಿಗಳ ಅಪರಾಧವನ್ನು ಸಾಬೀತು ಮಾಡಿವೆ ಎಂದು ನ್ಯಾಯಾಲಯ ಹೇಳಿದೆ.

ಸಾಯುವ ಮುನ್ನ 'ನಿರ್ಭಯಾ' ನೀಡಿದ್ದ ಹೇಳಿಕೆಯಲ್ಲಿ ಆರು ಮಂದಿ ಮನುಷ್ಯ ರೂಪದ ರಾಕ್ಷಸರು ಹೇಗೆ ತನ್ನ ಮೇಲೆರಗಿ ಅತ್ಯಾಚಾರ ಎಸಗಿದರು, ದೇಹದೊಳಕ್ಕೆ ರಾಡ್ ಅನ್ನು ಹಾಕಿ ಕರುಳನ್ನು ಹೊರಗೆಳೆದರು. ಅಮಾನುಷವಾಗಿ ಥಳಿಸಿ ದೇಹವನ್ನೆಲ್ಲ ಕಚ್ಚಿದ್ದರು ಎಂಬುದನ್ನು ವಿವರಿಸಿದ್ದಳು.

ಏನಾಗಿತ್ತು ಅಂದು?: ಡಿಸೆಂಬರ್ 16ರಂದು ರಾತ್ರಿ ದಕ್ಷಿಣ ದೆಹಲಿಯ ಮುನಿರ್ಕಾದಲ್ಲಿ ತನ್ನ ಗೆಳೆಯನೊಂದಿಗೆ ದ್ವಾರಕಕ್ಕೆ ತೆರಳಬೇಕಿದ್ದ 'ನಿರ್ಭಯಾ' ಖಾಸಗಿ ಬಸ್ ಹತ್ತಿದ್ದಳು. ಚಾಲಕ ಸೇರಿದಂತೆ ಆರು ಮಂದಿ ಚಲಿಸುತ್ತಿದ್ದ ಬಸ್ನಲ್ಲಿ ನಿರ್ಭಯಾಳ ಗೆಳೆಯನಿಗೆ ಥಳಿಸಿ, ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದರು. ನಿರ್ಭಯಾಳ ದೇಹಕ್ಕೆ ಕಬ್ಬಿಣದ ರಾಡ್ ತೂರಿಸಿ ಆಕೆಯ ಕರಳನ್ನು ಹೊರಗೆಳೆದು ಅಮಾನುಷವಾಗಿ ವರ್ತಿಸಿದ್ದರು. ಅರೆಪ್ರಜ್ಞಾವಸ್ಥೆಯಲ್ಲಿದ್ದ ನಿರ್ಭಯಾ ಮತ್ತು ಆಕೆಯ ಗೆಳೆಯನನ್ನು ಅರೆಬೆತ್ತಲುಗೊಳಸಿ ಬಸ್ನಿಂದ ತಳ್ಳಿ ಹೋಗಿದ್ದರು. ಎರಡು ವಾರಗಳ ಕಾಲ ಸಾವಿನೊಡನೆ ಸೆಣಸಿದ ನಿರ್ಭಯಾ ಸಿಂಗಾಪೂರ್ ಆಸ್ಪತ್ರೆಯಲ್ಲಿ ಡಿಸೆಂಬರ್ 29ರಂದು ಕೊನೆಯುಸಿರೆಳೆದಿದ್ದಳು.

ಒಬ್ಬ ಅಪರಾಧಿ ಆತ್ಮಹತ್ಯೆ: ಆಕೆಯ ಸಾವಿನೊಂದಿಗೆ ರಾಷ್ಟ್ರಾದ್ಯಂತ ಪ್ರತಿಭಟನೆಗಳು ಮತ್ತಷ್ಟು ತೀವ್ರಗೊಂಡಿದ್ದವು. ಈ ಘೋರ ಅಪರಾಧದಲ್ಲಿ ಭಾಗಿಯಾಗಿದ್ದ ಆರು ಮಂದಿ ಪೈಕಿ ಪ್ರಮುಖ ಆರೋಪಿ ರಾಮ್ ಸಿಂಗ್ ತಿಹಾರ್ ಜೈಲ್ನಲ್ಲಿ ಮಾ.11ರಂದು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ. ಮತ್ತೊಬ್ಬ ಬಾಲಾಪರಾಧಿ ಆದ್ದರಿಂದ ಆತನನ್ನು ಬಾಲ ನ್ಯಾಯಾಲಯದಲ್ಲಿ ವಿಚಾರಣೆಗೊಳಪಡಿಸಲಾಗಿದ್ದು, ಅತ್ಯಾಚಾರ ಮತ್ತು ಕೊಲೆ ಆರೋಪ ಸಾಬೀತಾಗಿದೆ. ಬಾಲ ನ್ಯಾಯಾಲಯದಡಿ ನೀಡಬಹುದಾದ ಅತಿ ಹೆಚ್ಚಿನ ಶಿಕ್ಷೆಯನ್ನು ನೀಡಲಾಗಿದೆ. ಬಾಲಾಪರಾಧಿ ಈಗ ಪರಿವರ್ತನಾ ಕೇಂದ್ರದಲ್ಲಿದ್ದಾನೆ.

ಡಿಸೆಂಬರ್ 17- 20: ಪ್ರಮುಖ ಆರೋಪಿ ಬಸ್ ಚಾಲಕ ರಾಮ್ ಸಿಂಗ್, ಆತನ ಸಹೋದರ ಮುಖೇಶ್ ಸಿಂಗ್ನನ್ನು ರಾಜಾಸ್ಥಾನದಲ್ಲಿ ಬಂಧಿಸಲಾಯಿತು. ವಿನಯ ಶರ್ಮ ಮತ್ತು ಪವನ್ ಗುಪ್ತ ಮತ್ತೊಬ್ಬ ಬಾಲಾಪರಾಧಿಯನ್ನು ದೆಹಲಿಯಲ್ಲಿ ಬಂಧಿಸಲಾಯಿತು. ಅಕ್ಷಯ್ನನ್ನು ಔರಂಗಾಬಾದ್ನಲ್ಲಿ ಬಂಧಿಸಲಾಯಿತು. ಆರೋಪಿ ವಿನಯ್ ಶರ್ಮ ನ್ಯಾಯಾಲಯದಲ್ಲಿ ತಾನು ಘೋರ ತಪ್ಪೆಸಗಿದ್ದೇನೆ, ತನನ್ನು ಗಲ್ಲಿಗೆ ಏರಿಸಿ ಎಂದು ಕೋರಿಕೊಂಡಿದ್ದ.

- ಅತ್ಯಂತ ಹಿನಾಯವಾಗಿ ಅತ್ಯಾಚಾರ ನಡೆದ ಸುದ್ದಿ ಹರಡುತ್ತಿದ್ದಂತೆ ರಾಷ್ಟ್ರಾದ್ಯಂತ ಪ್ರತಿಭಟನೆಗಳಾದವು. ವಿದ್ಯಾರ್ಥಿಗಳು, ಹಿರಿಯ ನಾಗರಿಕರು ಸೇರಿದಂತೆ ಸಮಾಜದ ಎಲ್ಲಾ ವರ್ಗದ ಜನರು ಬೀದಿಗಿಳಿದು ಪ್ರತಿಭಟಿಸಿದರು. ಅಲ್ಲಲ್ಲಿ ಪೊಲೀಸರ ನಡುವೆ ಘರ್ಷಣೆ ನಡೆಸಿದರು.

ಡಿಸೆಂಬರ್ 27: ಸಾವಿನೊಡನೆ ಸೆಣೆಸುತ್ತಿದ್ದ ನಿರ್ಭಯಾಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಸಿಂಗಾಪೂರ್ಗೆ ಕರೆದೊಯ್ಯಲು ಭಾರತ ಸರ್ಕಾರ  ನಿರ್ಧರಿಸಿತು. ಏರ್ ಆ್ಯಂಬುಲೆನ್ಸ್ನಲ್ಲಿ ಸಿಂಗಾಪೂರ್ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಡಿಸೆಂಬರ್ 29 : ನಿರ್ಭಯಾ ಕೊನೆಯುಸಿರೆದಳು.

ಜನವರಿ 3: ಅಪರಾಧದಲ್ಲಿ ಭಾಗಿಯಾದವರ ವಿರುದ್ಧ ಕೊಲೆ, ಅತ್ಯಾಚಾರ, ಸುಲಿಗೆ, ಕೊಲೆ ಪ್ರಯತ್ನ, ಅಪಹರಣ ಸೇರಿದಂತೆ ಹಲವು ಪ್ರಕರಣಗಳನ್ನು ಐವರ ವಿರುದ್ಧ ನ್ಯಾಯಾಲಯದಲ್ಲಿ, ಬಾಲಾಪರಾಧಿ ವಿರುದ್ಧ ಬಾಲ ನ್ಯಾಯಾಲಯದಲ್ಲಿ  ದಾಖಲಿಸಲಾಯಿತು.  

ಮಾರ್ಚ್ 11: ರಾಮ್ ಸಿಂಗ್ ತಿಹಾರ್ ಜೈಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡ.

ಏಪ್ರಿಲ್ 4: ಜೈಲಿನಲ್ಲಿ ತನ್ನನ್ನು ಹೆದರಿಸಲಾಗುತ್ತಿದೆ ಎಂದು ಅಕ್ಷಯ್ ನ್ಯಾಯಾಲಯದಲ್ಲಿ ದೂರಿದ.

ಏಪ್ರಿಲ್ 5: ನ್ಯಾಯಾಲಯಕ್ಕೆ ಹಾಜರಾದ ವಿನಯ್ ಶರ್ಮಾ ಜೈಲಿನಲ್ಲಿ ಸಹ ಕೈದಿಗಳು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆಂದು ದೂರಿದ.

ಜೂನ್ 4: ಬಾಲಾಪರಾಧಿಗೆ 18 ವರ್ಷ ತುಂಬಿತು.

ಜುಲೈ 11: ಬಾಲಾಪರಾಧಿ ಮೇಲಿನ ಅತ್ಯಾಚಾರ ಕೊಲೆ ಆರೋಪ ದೃಢೀಕರಿಸಿದ ನ್ಯಾಯಾಲಯ.

ಆಗಸ್ಟ್ 31: ಬಾಲ ನ್ಯಾಯಾಲಯವು ಅಪರಾಧಿಗೆ ಕಾನೂನು ಪ್ರಕಾರ ನೀಡಬಹುದಾದ ಅತಿ ಹೆಚ್ಚಿನ ಶಿಕ್ಷೆ ಅಂದರೆ ಮೂರು ವರ್ಷ ಶಿಕ್ಷೆ ವಿಧಿಸಿತು. ಪರಿವರ್ತನಾ ಕೇಂದ್ರಕ್ಕೆ ರವಾನಿಸಿತು. ಈಗಾಗಲೇ 8 ತಿಂಗಳು ಜೈಲಿನಲ್ಲಿದ್ದುದರಿಂದ ಆತನ ಶಿಕ್ಷೆಯನ್ನು ಎರಡು ವರ್ಷ ನಾಲ್ಕು ತಿಂಗಳಿಗೆ ತಗ್ಗಿಸಲಾಯಿತು.

ಡಿಸೆಂಬರ್ 16 ರ ಕರಾಳ ರಾತ್ರಿ

ಫಿಸಿಯೋಥೆರಪಿ ವಿದ್ಯಾರ್ಥಿನಿ ನಿರ್ಭಯಾ ತನ್ನ ಗೆಳೆಯನೊಂದಿಗೆ ದಕ್ಷಿಣ ದೆಹಲಿಯ ಮುನಿರ್ಕಾದಿಂದ ದ್ವಾರಕಕ್ಕೆ ತೆರಳಲು ಖಾಸಗಿ ಬಸ್ ಏರಿದ್ದಳು. ಬಸ್ ಚಲಿಸುತ್ತಿದ್ದಂತೆ ಬಸ್ಸ್ನಲ್ಲಿದ್ದವರು ಆಕೆಯ ಗೆಳೆಯನ ಮೇಲೆ ಹಲ್ಲೆ ನಡೆಸಿ, ನಂತರ ಆಕೆಯ ಮೇಲೆ ಎರಗಿದ್ದರು. ಬಸ್ ಚಾಲಕ, ಕ್ಲಿನರ್ ಸೇರಿದಂತೆ ಆರು ಮಂದಿ ಚಲಿಸುತ್ತಿದ್ದ ಬಸ್ನಲ್ಲೇ ದಾರುಣವಾಗಿ ಹಲ್ಲೆ ನಡೆಸಿ ಅತ್ಯಾಚಾರ ಮಾಡಿದ್ದರು. ನಿರ್ಜನ ಪ್ರದೇಶದಲ್ಲಿ ರಸ್ತೆ ಬದಿಯಲ್ಲಿ ಅರೆಬೆತ್ತಲೆ ಸ್ಥಿತಿಯಲ್ಲಿದ್ದ ಇಬ್ಬರನ್ನು ಎಸೆದು ಹೋಗಿದ್ದರು.

ಪವನ್ ಗುಪ್ತ

ನಿರ್ಭಯಾ ಮತ್ತು ಆಕೆಯ ಗೆಳೆಯನ ಮೇಲೆ ಹಲ್ಲೆ ಮಾಡಿದ್ದ. ನಿರ್ಭಯಾ ಮೇಲೆ ಅತ್ಯಾಚಾರ ಎಸಗಿದ್ದ ನಂತರ ಇಬ್ಬರನ್ನೂ ಬಸ್ನಿಂದ ಆಚೆಗೆ ಎಸೆಯಲು ನೆರವಾಗಿದ್ದ.

ಮುಖೇಶ್ ಸಿಂಗ್

ನಿರ್ಭಯಾ, ಆಕೆಯ ಗೆಳೆಯನ ಮೇಲೆ ಹಲ್ಲೆ ನಡೆಸಿ, ಅತ್ಯಾಚಾರ ಮಾಡಿದ್ದ. ನಂತರ ಸಾಕ್ಷಿಗಳನ್ನು ನಾಶಪಡಿಸಲು ಯತ್ನಿಸಿದ್ದ.

ವಿನಯ್ ಶರ್ಮ

ನಿರ್ಭಯಾಳ ಗೆಳೆಯನ ಮೇಲೆ ದಾರುಣ ಹಲ್ಲೆ ನಡೆಸಿದ್ದ, ನಿರ್ಭಯಾ ಮೇಲೆ ಅತ್ಯಾಚಾರ ಎಸಗಿದ್ದ. ತನ್ನ ಸಹಚರ ಕಬ್ಬಿಣದ ರಾಡಿನಿಂದ ಹಲ್ಲೆ ಮಾಡುವಾಗ ನಿರ್ಭಯಾ ಗೆಳೆಯನನ್ನು ಹಿಡಿದಿದ್ದ.

ಅಕ್ಷಯ್ ಸಿಂಗ್

ಹಲ್ಲೆ ನಡೆಸಿ ಅತ್ಯಾಚಾರ ಎಸಗಿದ್ದ.

ರಾಮ್ಸಿಂಗ್

ನಿರ್ಭಯಾ ಮತ್ತು ಆಕೆಯ ಗೆಳೆಯನ ಮೇಲೆ ಹಲ್ಲೆ ನಡೆಸಿದ್ದ. ನಂತರ ನಿರ್ಭಯಾ ಮೇಲೆ ಅತ್ಯಾಚಾರ ಎಸಗಿದ್ದ. (ಪ್ರಮುಖ ಆರೋಪಿಯಾಗಿದ್ದ ರಾಮ್ಸಿಂಗ್ ತಿಹಾರ್ ಜೈಲ್ನಲ್ಲಿ ಮಾರ್ಚ್ 11 ರಂದು ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.)

ಬಾಲಾಪರಾಧಿ

ದಾರುಣ ಅತ್ಯಾಚಾರ ನಡೆಸಿದ್ದಲ್ಲದೇ, ಕಬ್ಬಿಣದ ರಾಡನ್ನು ದೇಹಕ್ಕೆ ತೂರಿಸಿ ಆಕೆಯ ಕರುಳನ್ನು ಹೊರಗೆಳೆದಿದ್ದ. ಆಗಸ್ಟ್ 31ರಂದು ಬಾಲಾಪರಾಧಿಗಳ ನ್ಯಾಯಾಲಯವು ಆತನಿಗೆ ಮೂರು ವರ್ಷ ಶಿಕ್ಷೆ ವಿಧಿಸಿ ಪರಿವರ್ತನಾ ಕೇಂದ್ರಕ್ಕೆ ರವಾನಿಸಿದೆ.

ಈ ತೀರ್ಪು ಎಲ್ಲರಿಗೂ ಮಾದರಿಯಾಗಬೇಕು. ಇನ್ನು ಮುಂದೆ ಯಾರೂ ಈ ರೀತಿಯ ಪೈಚಾಚಿಕ ಕೃತ್ಯ ನಡೆಸಲು ಹಿಂದೇಟು ಹಾಕುವಂತಿರಬೇಕು. ನನ್ನ ಮಗಳ ಮೇಲೆ ನಡೆಸಿದ ಪೈಚಾಚಿಕ ದೌರ್ಜನ್ಯಕ್ಕಾಗಿ ದೋಷಿಗಳಿಗೆ ಮರಣದಂಡನೆ ಹೊರತು ಬೇರಿನ್ಯಾವ ಶಿಕ್ಷೆ ನೀಡಿದರೂ ನಮಗೆ ತೃಪ್ತಿ ಸಿಗದು.

- ಯುವತಿ ತಂದೆ

Posted by: Rashmi

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ !

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

comments powered by Disqus

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Kannadaprabha.com App for Android Kannadaprabha.com App for IOS
Advertisement
Advertisement