Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
CM H.D Kumaraswamy

ನಾನು ರಾಜ್ಯದ ಜನತೆಯ ಮುಲಾಜಿನಲ್ಲಿಲ್ಲ, ಕಾಂಗ್ರೆಸ್ ಪಕ್ಷದ ಮುಲಾಜಿನಲ್ಲಿದ್ದೇನೆ: ಸಿಎಂ ಹೆಚ್ ಡಿ ಕುಮಾರಸ್ವಾಮಿ

PM Modi

ಮನ್ ಕೀ ಬಾತ್ : ಐಎನ್ ವಿಎಸ್ ತರುಣ ಮಹಿಳಾ ತಂಡಕ್ಕೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ

Team India

ಟೀಂ ಇಂಡಿಯಾ-ಶ್ರೀಲಂಕಾ ನಡುವಿನ ಗಾಲೆ ಟೆಸ್ಟ್‌ನಲ್ಲಿ ಪಿಚ್ ಫಿಕ್ಸಿಂಗ್?

Narendra Modi-Nitish Kumar

ಯೂ-ಟರ್ನ್ ಹೊಡೆದ್ರಾ ನಿತೀಶ್, ಮೋದಿ ಸರ್ಕಾರದ ನೋಟು ನಿಷೇಧ ಕುರಿತು ಪ್ರಶ್ನೆ!

PM Modi

ದಲಿತರ ಉದ್ದಾರಕ್ಕಾಗಿ ಸರ್ಕಾರ ಪ್ರಯತ್ನಿಸುತ್ತಿದ್ದರೂ ಕಾಂಗ್ರೆಸ್ ಅಪಹಾಸ್ಯ- ಪ್ರಧಾನಿ ಮೋದಿ

Pranab mukherjee

ನಾಗ್ಪುರ: ಜೂ.07 ರಂದು ಆರ್ ಎಸ್ ಎಸ್ ಕಾರ್ಯಕರ್ತರನ್ನುದ್ದೇಶಿಸಿ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಭಾಷಣ

Ireland overturns abortion ban: Justice in Dublin comforts a father in Belgaum

ಬೆಳಗಾವಿ ಸವಿತಾ ಸಾವಿಗೆ ನ್ಯಾಯ: ಐರ್ಲೆಂಡಿನಲ್ಲಿ ಗರ್ಭಪಾತ ನಿಷೇಧ ಕಾನೂನು ರದ್ದು

RJD leader Lalu Prasad Yadav

2019 ಲೋಕಸಭಾ ಚುನಾವಣೆ: ಆರ್ ಜೆಡಿಯಿಂದ ಐಶ್ವರ್ಯ ರೈ ಸ್ಪರ್ಧೆ?

Gyan Dev Ahuja

ಹನುಮಂತ ಜಗತ್ತಿನ ಮೊದಲ ಆದಿವಾಸಿ: ಬಿಜೆಪಿ ಶಾಸಕ

PM Modi inagurated photo

ದೆಹಲಿ- ಮೀರತ್ ಎಕ್ಸ್ ಪ್ರೆಸ್ ವೇ ಮೊದಲ ಹಂತಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ

Hatrik Hero Shiva Rajkumar couples meet CM Kumaraswamy at his house

ಸಿಎಂ ಕುಮಾರಸ್ವಾಮಿಯನ್ನು ಭೇಟಿಯಾದ ಶಿವರಾಜ್‍ಕುಮಾರ್ ದಂಪತಿ

ಸಂಗ್ರಹ ಚಿತ್ರ

ಊಟಿಯಲ್ಲಿ ಪ್ರಪಾತಕ್ಕೆ ಬಿದ್ದ ಬೆಂಗಳೂರಿನ ಪ್ರವಾಸಿಗರ ಬಸ್: ನಾಲ್ವರ ದುರ್ಮರಣ, 10 ಗಾಯ

Casual photo

ಸ್ಟರ್ಲೈಟ್ ಪ್ರತಿಭಟನೆ: ತಮಿಳುನಾಡಿನ ತೂತುಕುಡಿಯಲ್ಲಿ ಸೆಕ್ಷನ್ 144 ಹಿಂತೆಗೆತ

ಮುಖಪುಟ >> ಪ್ರಧಾನ ಸುದ್ದಿ

ಪಳನಿ ಸ್ವಾಮಿಗೆ "ಬಹುಮತ" ಅಗ್ನಿ ಪರೀಕ್ಷೆ; ನಾಳೆ ತಮಿಳುನಾಡು ವಿಶೇಷ ಅಧಿವೇಶನ!

ಪಳನಿಸ್ವಾಮಿಗೆ ಬೆಂಬಲ ನೀಡದಂತೆ "ಕೈ" ಶಾಸಕರಿಗೆ ವಿಪ್ ಜಾರಿ, ಶಶಿಕಲಾ ಬಣಕ್ಕೆ ಮೊದಲ ಶಾಕ್!
Tamil Nadu chief minister Palanisamy to seek vote of confidence on Saturday

ಸಂಗ್ರಹ ಚಿತ್ರ

ಚೆನ್ನೈ: ತೀವ್ರ ಕುತೂಹಲ ಕೆರಳಿಸಿರುವ ತಮಿಳುನಾಡು ರಾಜ್ಯ ರಾಜಕೀಯ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ನೂತನ ಸಿಎಂ ಆಗಿ ಎಡಪಾಡಿ ಪಳನಿಸ್ವಾಮಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಹಲವು ರಾಜಕೀಯ ವಿದ್ಯಾಮಾನಗಳು ನಡೆಯುತ್ತಿವೆ.

ಶನಿವಾರ ವಿಶೇಷ ಅಧಿವೇಶನ ಕರೆದು ಬಹುಮತ ಸಾಬೀತು ಪಡಿಸಲು ಶಶಿಕಲಾ ಬಣದಲ್ಲಿ ಗುರುತಿಸಿಕೊಂಡಿರುವ ಎಡಪಾಡಿ ಪಳನಿಸ್ವಾಮಿ ಸಿದ್ಧತೆ ನಡೆಸಿಕೊಂಡಿದ್ದರೆ, ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ಮಾಜಿ ಸಿಎಂ ಪನ್ನೀರ್  ಸೆಲ್ವಂ ಬಣ ಪಳನಿಸ್ವಾಮಿ ವಿರುದ್ಧ ಮತಹಾಕುವ ಕುರಿತು ಚಿಂತನೆಯಲ್ಲಿ ತೊಡಗಿವೆ. ಏತನ್ಮಧ್ಯೆ ಎಐಎಡಿಎಂಕೆಯಲ್ಲಿನ ರಾಜಕೀಯ ಬೆಳವಣಿಗೆಳನ್ನು ಕುತೂಹಲದಿಂದ ವೀಕ್ಷಿಸುತ್ತಿರುವ ಪ್ರತಿಪಕ್ಷಗಳು ರಾಜಕೀಯ ಬಿಕ್ಕಟ್ಟನ್ನು ತಮ್ಮ  ಲಾಭಕ್ಕೆ ಬಳಸಿಕೊಳ್ಳಲು ಯತ್ನಿಸುತ್ತಿದ್ದು, ಪ್ರಸ್ತುತ ರಾಜಕೀಯ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ತಟಸ್ಥವಾಗಿರಲು ನಿರ್ಧರಿಸಿದಂತಿವೆ.

ಇದೇ ಕಾರಣಕ್ಕೆ ಕಾಂಗ್ರೆಸ್ ರಾಜಕೀಯದಾಟದಿಂದ ದೂರ ಉಳಿಯಲು ನಿರ್ಧರಿಸಿದ್ದು, ಈಗಾಗಲೇ ತನ್ನ ಎಲ್ಲ 8 ಶಾಸಕರಿಗೆ ವಿಪ್ ಜಾರಿ ಮಾಡಿದೆ. ಅಲ್ಲದೆ ನಾಳೆ ಎಲ್ಲ ಶಾಸಕರೂ ಕಡ್ಡಾಯವಾಗಿ ಕಲಾಪದಲ್ಲಿ ಪಾಲ್ಗೊಂಡು ಪಳನಿ  ಸ್ವಾಮಿ ಅವರ ವಿರುದ್ಧ ಮತ ಚಲಾಯಿಸುವಂತೆ ವಿಪ್ ಜಾರಿ ಮಾಡಿದೆ. ಇನ್ನು ಪ್ರಮುಖ ವಿಪಕ್ಷ ಡಿಎಂಕೆ ಕೂಡ ಇಂದು ಸಂಜೆ ತನ್ನ ಶಾಸಕರ ಸಭೆ ನಡೆಸುತ್ತಿದ್ದು, ನಾಳಿನ ಅಧಿವೇಶನದಲ್ಲಿ ತಾನು ಕೈಗೊಳ್ಳಬೇಕಾದ ನಿರ್ಣಯಗಳ  ಕುರಿತು ಚರ್ಚೆ ನಡೆಸಲಿದೆ. ಡಿಎಂಕೆ ಮೂಲಗಳು ತಿಳಿಸಿರುವಂತೆ ಪಳನಿ ಸ್ವಾಮಿ ವಿರುದ್ಧ ಡಿಎಂಕೆ ಶಾಸಕರ ಮತ ಚಲಾಯಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಬಹುಮತ ಸಾಬೀತಿಗೂ ಮುನ್ನವೇ ಶಶಿಕಲಾ ಬಣಕ್ಕೆ ಮೊದಲ ಶಾಕ್!

ಇನ್ನು ನೂತನ ಸಿಎಂ ಪಳನಿಸ್ವಾಮಿ ಬಹುಮತ ಸಾಬೀತಿಗೆ ಸಿದ್ಧವಾಗುತ್ತಿರುವಂತೆಯೇ ತಮ್ಮದೇ ಪಕ್ಷದಿಂದ ಮೊದಲ ಶಾಕ್ ಎದುರಾಗಿದ್ದು, ಎಐಎಡಿಎಂಕೆಯ ಮೈಲಾಪುರ ಶಾಸಕ ನಟರಾಜ್ ಅವರು ತಾವು ಪಳನಿ ಸ್ವಾಮಿ ವಿರುದ್ಧ  ಮತ ಚಲಾಯಿಸುವುದಾಗಿ ಘೋಷಣೆ ಮಾಡಿದ್ದಾರೆ. ಅಲ್ಲದೆ ತಾವು ಪನ್ನೀರ್ ಸೆಲ್ವಂ ಅವರಿಗೆ ಬೆಂಬಲ ನೀಡುತ್ತಿರುವುದಾಗಿ ಹೇಳಿದ್ದಾರೆ.

ಬೆಂಬಲಿಗ ಶಾಸಕರೊಂದಿಗೆ ಪನ್ನೀರ್ ಸೆಲ್ವಂ ಸಭೆ

ಇನ್ನು ನಾಳಿನ ಬಹುಮತ ಸಾಬೀತು ವೇಳೆ ಎಐಎಡಿಎಂಕೆ ಪಕ್ಷ ವಿಪ್ ಜಾರಿ ಮಾಡಲಿರುವ ಹಿನ್ನಲೆಯಲ್ಲಿ ಬಂಡಾಯವೆದ್ದಿರುವ ತಾವು ಯಾವ ನಿರ್ಧಾರ ಕೈಗೊಳ್ಳಬೇಕು. ಸರ್ಕಾರದ ಪರ ಅಥವಾ ವಿರುದ್ಧ ಮತ ಚಲಾಯಿಸಬೇಕೇ  ಎನ್ನುವ ಕುರಿತು ಪನ್ನೀರ್ ಸೆಲ್ವಂ ತಮ್ಮ ಬೆಂಬಲಿಗ ಶಾಸಕರೊಂದಿಗೆ ಚರ್ಚಿಸುತ್ತಿದ್ದಾರೆ.

ಸಂಬಂಧಿಸಿದ್ದು...
Posted by: SVN | Source: Online Desk

ಇನ್ನೂ ವಿವಾಹವಾಗಿಲ್ಲವೇ?
ಇಂದೇ ಕನ್ನಡ ಮ್ಯಾಟ್ರಿಮನಿ ಯಲ್ಲಿ ನೋಂದಾಯಿಸಿ -
ನೋಂದಣಿ ಉಚಿತ!

Topics : Chennai, Politics, Tamil Nadu, Palanisamy, O Panneerselvam, Sasikala, ಚೆನ್ನೈ, ರಾಜಕೀಯ, ತಮಿಳುನಾಡು, ಓ ಪನ್ನೀರ್ ಸೆಲ್ವಂ, ಶಶಿಕಲಾ
English summary
The twists and turns in Tamil Nadu politics — which three Chief Ministers in under two weeks — reached its final outcome on Thursday after ‘Edappadi’ K Palaniswami and his new Cabinet were sworn in by Governor Ch Vidyasagar Rao. The climax has been fixed for Saturday when the Tamil Nadu Assembly will convene a special session to vote on the confidence motion that the new Chief Minister will move.

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS
Advertisement
Advertisement