Kannadaprabha Sunday, April 20, 2014 9:21 PM IST
The New Indian Express

ಹಿರಿಯರ ಹಾದಿ

ನನಗೆ ಬೇಕಿರುವುದು ಅರ್ಹತಾ ಪತ್ರ, ಶಿಫಾರಸಲ್ಲ   Apr 19, 2014

1977 ರಿಂದ 1979ರವರೆಗೆ ಭಾರತದ ಪ್ರಧಾನಮಂತ್ರಿಯಾಗಿದ್ದ ಮೊರಾರ್ಜಿ ದೇಸಾಯಿಯವರು ಕಾಂಗ್ರೆಸ್ಸೇತರ ಸರ್ಕಾರವನ್ನು ರಚಿಸಿದ ಹಿರಿಮೆಗೆ ಪಾತ್ರರಾದವರು. ಅಪ್ಪಟ ಗಾಂಧೀವಾದಿಗಳಾಗಿದ್ದ ದೇಸಾಯಿಯವರು ಮೊದಲ ಬಾರಿಗೆ ಜನತಾ ಪಕ್ಷದ ಸರ್ಕಾರ ಬಂದಾಗ...

ಸಂಗೀತ ಸಾಮ್ರಾಟನ ಆಸೆ ಏನಾಗಿತ್ತು?   Apr 18, 2014

1940 ರಿಂದ ಸತತ ಅರವತೈದು ವರ್ಷಗಳ ಕಾಲ ಹಿಂದಿ ಚಿತ್ರರಂಗದಲ್ಲಿ ಸಂಗೀತ ನಿರ್ದೇರ್ಶಕರಾಗಿ ಅಳಿಸಲಾಗದ ಛಾಪು ಮೂಡಿಸಿ ಮರೆಯಾದವರು ನೌಷಾದ್ ಅಲಿಯವರು. ಅವರು ಸಂಗೀತ ನೀಡಿದ 65ಕ್ಕೂ ಹೆಚ್ಚು ಚಿತ್ರಗಳೆಲ್ಲಾ ಅದ್ಭುತ ಯಶಸ್ಸನ್ನು ಗಳಿಸಿದ್ದು ವಿಶೇಷ....

ಆ ಹಣವನ್ನೂ ಪುಸ್ತಕ ಪ್ರಕಟಣೆಗೆ ನೀಡು   Apr 17, 2014

ಬಂಗಾಳದ ಬಾಬು ಪ್ರತಾಪಚಂದ್ರ ರಾಯ್ ಒಬ್ಬ ಪುಸ್ತಕ ವ್ಯಾಪಾರಿ. ಅವರಿಗೆ ವ್ಯಾಸ ಮಹಾಭಾರತವನ್ನು ಆಂಗ್ಲ ಭಾಷೆಗೆ ತರ್ಜುಮೆ ಮಾಡಬೇಕೆಂಬ ಮಹತ್ವಾಕಾಂಕ್ಷೆಯಿತ್ತು. ಅವರ ಉದ್ದೇಶ ಭಾರತೀಯ ಪರಂಪರೆಯ ಶ್ರೀಮಂತಿಕೆಯನ್ನು ಪಾಶ್ಚಾತ್ಯರಿಗೆ ಪರಿಚಯಿಸುವುದೇ...

ಇಂತಹ ಸಚಿವರೂ ಇದ್ದರು   Apr 16, 2014

ಉತ್ತರ ಭಾರತದ ಒಂದು ದೊಡ್ಡ ಪ್ರಾಂತ್ಯದ ಸಚಿವರಾಗಿ, ಕೇಂದ್ರ ಸರ್ಕಾರದಲ್ಲಿ ವಿವಿಧ ಇಲಾಖೆಗಳ ಸಚಿವರಾಗಿ, ಸೇವೆ ಸಲ್ಲಿಸಿ ತಮ್ಮ ಪ್ರಾಮಾಣಿಕತೆ ಮತ್ತು ದಕ್ಷತೆಯಿಂದ ಅಪಾರ ಹೆಸರು ಗಳಿಸಿದವರೆಂದರೆ ರಫಿ ಅಹಮದ್ ಕಿದ್ವಾಯಿಯವರು. ತಮ್ಮ ಕಾರ್ಯ...

ಸ್ವಾಭಿಮಾನಿ ಸಯ್ಯಾಜಿರಾವ್ ಗಾಯಕ್‌ವಾಡ್   Apr 15, 2014

ಬ್ರಿಟಿಷರ ಕಾಲದಲ್ಲಿ ಕೆಲವು ವಿಚಿತ್ರ ಪದ್ಧತಿಗಳನ್ನು ಜಾರಿಗೆ ತರಲಾಗಿತ್ತು. ಅವುಗಳಲ್ಲಿ ಒಂದಂತೂ ಭಾರತದ ರಾಜರುಗಳಿಗೆ ಅವಮಾನ ಮಾಡುವಂತಿತ್ತು. ಅದೆಂದರೆ, ಇಂಗ್ಲೆಂಡಿನ ದೊರೆಯನ್ನು ಭೇಟಿ ಮಾಡಿದಾಗ ಅವನಿಗೆ ನಜರು ಒಪ್ಪಿಸಿ, ಬೆನ್ನು ತೋರಿಸದೆ,...

ಚಿನ್ನವನ್ನರಸಿ ಹೋದವನಿಗೆ ಸಿಕ್ಕ ಚಿನ್ನದಂಥ ಬಾಳು   Apr 14, 2014

ಸಾಮ್ಯುಟಿಜ ಲ್ಲಾಂಗ್ಹೋರ್ನ್ ಕ್ಲೆಮೆನ್ಸ್ ಅಮೆರಿಕದ ಫ್ಲೋರಿಡಾದ ಕಡುಬಡ ಕುಟುಂಬದಲ್ಲಿ ಜನಿಸಿದ. ಚಿಕ್ಕಂದಿನಲ್ಲಿಯೇ ಮುದ್ರಣಾಲಯವೊಂದರಲ್ಲಿ ಕೆಲಸಕ್ಕೆ ಸೇರಿ, ನಂತರ ಕೆಲವು ವರ್ಷ ನಾವಿಕನಾಗಿ, ಕೊನೆಗೆ ಚಿನ್ನವನ್ನರಸಿ ಪಶ್ಚಿಮದ ಕಡೆ ಹೊರಟ....

ಸ್ವಾತಂತ್ರ್ಯ ಜ್ಯೋತಿ ರಾಸ್ ಬಿಹಾರಿ   Apr 12, 2014

ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅನೇಕರು, ಹಲವಾರು ರೀತಿಯಲ್ಲಿ ಹೋರಾಡಿ ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ನೆರವಾಗಿದ್ದಾರೆ. ಅಂತಹ ಪ್ರಮುಖರಲ್ಲಿ ಒಬ್ಬರು ರಾಸ್ ಬಿಹಾರಿ ಬೋಸ್. ಅವರ ಹೆಸರು ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮರೆಯಲಾಗದ...

ವೈದ್ಯರಾಗಿ ಆದರ್ಶ ಮೆರೆದ ಡಾ.ಕೃಷ್ಣಮೂರ್ತಿ   Apr 11, 2014

ಶಿವಮೊಗ್ಗದ ಹಳೆಯ ತಲೆಮಾರಿಗೆ ಸೇರಿದ ವೈದ್ಯರಲ್ಲಿ ಡಾ.ಡಿ.ಕೃಷ್ಣಮೂರ್ತಿಯವರೂ ಒಬ್ಬರು. ಸೈನ್ಯಸೇವೆಯಿಂದ ನಿವೃತ್ತರಾಗಿ, 1947ರಿಂದ ತಮ್ಮ ಜೀವನದ ಕೊನೆಯವರೆಗೂ ಮಲೆನಾಡು ಡಾಕ್ಟರ್ ಎಂದೇ ಪ್ರಸಿದ್ಧಿ ಪಡೆದು ಜನಸೇವೆ ಮಾಡಿದ ನಿಷ್ಠಾವಂತ. ತಮ್ಮ...

ಎಡ್ಮಂಡ್ ಹಿಲರಿ ಮತ್ತು ಶೆರ್ಪಾಗಳು   Apr 10, 2014

ಎಡ್ಮಂಡ್ ಹಿಲರಿ ನಮ್ಮ ಗೌರಿಶಂಕರ ಶಿಖರವನ್ನು ಮೊದಲ ಬಾರಿಗೆ ತೇನ್ ಸಿಂಗ್‌ನ ಜೊತೆ ಏರಿದ ಮಹಾ ಸಾಹಸವಂತ. ನಂತರದ ದಿನಗಳಲ್ಲಿ ದಕ್ಷಿಣ ಧ್ರುವ ಮತ್ತು ಉತ್ತರ ಧ್ರುವಪ್ರದೇಶಗಳ ಮೇಲೂ ಕಾಲಿರಿಸಿ ದಾಖಲೆ ಸ್ಥಾಪಿಸಿದ ಸಾಹಸಿ. ಹಿಮಾಲಯ ಚಾರಣಕ್ಕೂ...

ಸಿ.ಪಿ. ರಾಮಸ್ವಾಮಿ ಅಯ್ಯರ್ ಮತ್ತು ಪ್ರತಿಭಟನೆ   Apr 09, 2014

ಡಾ.ಸರ್.ಸಿ. ಪಿ. ರಾಮಸ್ವಾಮಿ ಅಯ್ಯರ್‌ರವರು ಡಾ. ಅನಿಬೆಸಂಟರೊಡನೆ ಕೆಲಸ ಮಾಡಿದವರು. ಅನಿಬೆಸೆಂಟ್ ಹೋಂರೂಲ್ ಲೀಗ್ ಸ್ಥಾಪಿಸಿದಾಗ ಅದಕ್ಕೆ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದವರು ಅಯ್ಯರ್. ಮದ್ರಾಸಿನಲ್ಲಿ ಪ್ರಸಿದ್ಧ ವಕೀಲರಾಗಿ ಹಣ ಮತ್ತು...

ಕಂದಾಚಾರಗಳ ವಿರುದ್ಧ ಸೆಣಸಿದ ಕಾಣೆ   Apr 08, 2014

ಭಾರತರತ್ನ ಡಾ.ಪಾಂಡುರಂಗ ವಾಮನ ಕಾಣೆ(ಪಿ.ವಿ.ಕಾಣೆ) ವಕೀಲರಾಗಿ, ವೇದಶಾಸ್ತ್ರ ಪಂಡಿತರಾಗಿ, ಉತ್ತಮ ಲೇಖಕರಾಗಿ, ಸಮಾಜಸುಧಾರಕರಾಗಿ ಪ್ರಸಿದ್ಧರಾದವರು. ರತ್ನಗಿರಿ ಜಿಲ್ಲೆಯ ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರೂ ಸಹ...

ಅಧಿಕಾರಕ್ಕೆ ಅಂಟಿಕೊಳ್ಳದ ನಿಷ್ಠಾವಂತ   Apr 07, 2014

ಒಮ್ಮೆ ಅಧಿಕಾರದ ಗದ್ದುಗೆಗೇರಿದರೆ ಸಾಕು ಅದನ್ನು ಭದ್ರವಾಗಿ ಹಿಡಿದು ಕುಳಿತುಕೊಳ್ಳುವ ರಾಜಕಾರಣಿಗಳನ್ನು ನೋಡಿದ್ದೇವೆ. ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡುವ, ಯಾವ ಮಾರ್ಗವನ್ನಾದರೂ ಹಿಡಿಯುವ ಧುರೀಣರ ಉದಾಹರಣೆಗಳು ನಮ್ಮಲ್ಲಿವೆ. ಆದರೆ,...

ಸಮಾಜಸೇವೆಗೆ ಬೆಲೆ ತಂದುಕೊಟ್ಟ ಆಲಂ ಪಾಶಾ   Apr 05, 2014

ಬೆಂಗಳೂರಿನ ಉದ್ಯಮಿ ಆಲಂ ಪಾಶಾ ಶ್ರೀಮಂತ ಉದ್ಯಮಿಯಾಗಿ, ದಾನಿಯಾಗಿ, ಸಮಾಜಸೇವಕರಾಗಿ...

ಜ್ಞಾನಾರ್ಜನೆಗೇಕೆ ವಯಸ್ಸಿನ ಮಿತಿ?   Apr 04, 2014

ನೋಲಾ ಓಚ್ ಇತ್ತೀಚೆಗೆ ತನ್ನ 102 ಜನ್ಮದಿನವನ್ನು ಆಚರಿಸಿಕೊಂಡಾಗ ಆಕೆಗೆ ಬಂದ ಶುಭಾಶಯಗಳು ಅಪರಿಮಿತ. ...

ಗಿರಿಜನರ ಆಶಾಕಿರಣ ಅಚ್ಯುತ ಸಮಂತ   Apr 03, 2014

ಅಚ್ಯುತ ಸಮಂತ ಒಡಿಶಾದ ಒಂದು ಹಳ್ಳಿಯ ಹುಡುಗ. ಚಿಕ್ಕಂದಿನಲ್ಲಿಯೇ ತಂದೆಯನ್ನು ಕಳೆದುಕೊಂಡು ತಾಯಿಯ ಆಶ್ರಯದಲ್ಲಿ ಬೆಳೆದ. ಕಿತ್ತುತಿನ್ನುವ ಬಡತನದಲ್ಲಿಯೇ ಕಷ್ಟಪಟ್ಟು ಓದಿ, ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ. ಒಳ್ಳೆಯ ಉದ್ಯೋಗವೂ...

ಶಿವಮೊಗ್ಗವನ್ನು ಪ್ರೀತಿಸಿದ ಮೆಗ್ಗಾನ್   Mar 27, 2014

ನಾವು ಸಾರಾಸಗಟಾಗಿ ಆಂಗ್ಲರ ಅಧಿಕಾರಿಶಾಹಿ ಪ್ರವೃತ್ತಿಯನ್ನೂ, ಸಾಮ್ರಾಜ್ಯ ಶಾಹಿ ಮನೋಭಾವವನ್ನೂ ವಿರೋಧಿಸುತ್ತೇವೆ. ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬರುವವರೆಗೂ ಅವರ ವಿರುದ್ಧ ಹೋರಾಡಿದ ಕಥೆ ರೋಮಾಂಚಕ. ಆದರೆ ಅಲ್ಲೊಬ್ಬ ಇಲ್ಲೊಬ್ಬ ಆಂಗ್ಲ...

ನವಾಬರ ಆಸೆ ನೆರವೇರಿಸಿದ ಮೌಂಟ್‌ಬ್ಯಾಟನ್   Mar 26, 2014

1945 ರ ಸಮಯ. ಪಾಲನ್ಪುರ ನವಾಬರು ಇಂಗ್ಲಿಷರೊಡನೆ ಉತ್ತಮ ಬಾಂಧವ್ಯ ಹೊಂದಿದ್ದರು. ತಮ್ಮ ಪ್ರಾಂತ್ಯವನ್ನು ಅವರ ನೆರವಿನಿಂದಲೇ ಆಳುತ್ತಿದ್ದರು. ಅವರು ಆಸ್ಟ್ರೇಲಿಯನ್ ಯುವತಿಯನ್ನು ವಿವಾಹವಾಗಿ ಆಕೆಯನ್ನು ಮುಸ್ಲಿಂ ಆಗಿ ಮತಾಂತರಗೊಳಿಸಿದ್ದರು....

ಸೋತು ದಾಖಲೆ ಸೃಷ್ಟಿಸಿದ ರಂಗಸ್ವಾಮಿ   Mar 25, 2014

ಚುನಾವಣೆ ಬಂತೆಂದರೆ ಪ್ರತಿಯೊಬ್ಬ ಅಭ್ಯರ್ಥಿಗೂ ಸೋಲು-ಗೆಲುವಿನ ಚಿಂತೆ. ಗೆಲ್ಲಲು ಬೇಕಾದ ಎಲ್ಲ ಪ್ರಯತ್ನವನ್ನೂ ಪ್ರತಿಯೊಬ್ಬ ಅಭ್ಯರ್ಥಿಯೂ ಮಾಡುವುದು ಸಹಜ. ಆದರೆ ಸೋಲಲೆಂದೇ ಚುನಾವಣೆಗೆ ಸ್ಪರ್ಧಿಸುವ ವ್ಯಕ್ತಿ ಬಗ್ಗೆ ತಿಳಿದಿದೆಯೆ? ಅಂತಹ ಒಬ್ಬ...

ವಿಶ್ವದ ಹಿರಿಯ ಸಂಸದರಿಗೆ ನೀರಸ ಬೀಳ್ಕೊಡುಗೆ   Mar 24, 2014

1952ರಲ್ಲಿ ಮೊದಲ ಲೋಕಸಭೆ ಚುನಾವಣೆಯಲ್ಲಿ ಸ್ಫರ್ಧಿಸಿ ಜಯಗಳಿಸಿದ ರೇಶಂಗ್ ಕೇಶಿಂಗ್ ಇದೇ ಏಪ್ರಿಲ್ 9ರಂದು ರಾಜ್ಯಸಭೆಯ ಸದಸ್ಯ ಪದವಿಯಿಂದ ನಿವೃತ್ತರಾಗುತ್ತಿದ್ದಾರೆ. ರಾಜಕೀಯದಲ್ಲಿ ಒಟ್ಟು 62 ವರ್ಷಗಳ ಕಾಲ ವಿವಿಧ ಹುದ್ದೆಗಳಲ್ಲಿದ್ದು ವಿಶ್ವ...

ದೇಶಕ್ಕಾಗಿ ನೊಬೆಲ್ ಪ್ರಶಸ್ತಿ ತಿರಸ್ಕರಿಸಿದ!   Mar 22, 2014

ರಷ್ಯಾ ಕ್ರಾಂತಿ ನಡೆದು ಸಾಮಾಜಿಕ ಪರಿವರ್ತನೆಯಾಗುತ್ತಿತ್ತು. ರಷ್ಯಾ, ವ್ಯಕ್ತಿ ಸ್ವಾತಂತ್ರ್ಯವನ್ನು ನಿರಾಕರಿಸಿತ್ತು. ಆದರೆ ಲೇಖಕರು ಅದರ ಗುಣಗಳನ್ನು ವರ್ಣಿಸಿ ಬರೆಯಬೇಕಿತ್ತು. ಆದರೆ ಬೋರಿಸ್ ತಮ್ಮ ಕಾದಂಬರಿ ಡಾ.ಜಿವಾಗೋದಲ್ಲಿ ರಷ್ಯಾ...

ಭಾರತಕ್ಕಾಗಿ ಹೋರಾಡಿದವನನ್ನು ನಿರ್ಲಕ್ಷಿಸಿದ ಭಾರತ   Mar 21, 2014

ಬ್ರಿಟಿಷ್ ಚಕ್ರಾಧಿಪತ್ಯದಲ್ಲಿದ್ದ ಬೆಂಜಮಿನ್  ಗೈ ಹಾರ್ನಿಮನ್ ಎಂಬ ಆಂಗ್ಲ ವ್ಯಕ್ತಿ ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಕಥೆ ನಿಜಕ್ಕೂ ರೋಮಾಂಚನವಾದುದು. ಅಲ್ಲದೆ ಭಾರತದ ಪತ್ರಿಕೋದ್ಯಮದಲ್ಲಿ ಐದು ದಶಕಗಳನ್ನು ಕಳೆದು, ಬಾಂಬೇ...

ಸಮಾಜಸೇವೆಗೆ ಪ್ರೇರಣೆಯಾದ ಮಹಿಳೆ   Mar 20, 2014

ಈ ಘಟನೆ ತುಂಬಾ ವರ್ಷಗಳ ಹಿಂದೆ ಗುಜರಾತಿನ ಆನಂದನಲ್ಲಿ ನಡೆ ಯಿತು. ರೈಲು ನಿಲ್ದಾಣಕ್ಕೆ ಒಬ್ಬ ಮಹಿಳೆ ಭಾರವಾದ ಪೆಟ್ಟಿಗೆ ಹಿಡಿದು ಬರಿಗಾಲಲ್ಲಿ ನಡೆದು ಬರುತ್ತಿದ್ದಳು. ಆದರೆ ಬಿಸಿಲಿನ ಪ್ರಖರತೆ ಮತ್ತು ಕಾದ ನೆಲ ಹಾಗೂ ಪೆಟ್ಟಿಗೆಯ...

ನೆಹರೂ ವಿರೋಧವನ್ನು ಧಿಕ್ಕರಿಸಿದ ರಾಜೇಂದ್ರ ಪ್ರಸಾದ್   Mar 17, 2014

ಅನೇಕ ಬಾರಿ ನಾಶಮಾಡಿದರೂ ಮತ್ತೆ ಮತ್ತೆ ಎದ್ದುನಿಂತ ದೇವಾಲಯವೆಂದರೆ ಗುಜರಾತಿನ ಸೋಮನಾಥ ದೇವಾಲಯ. ಮಹಮದ್ ಘಜ್ನಿ, ಅಲ್ಲಾವುದ್ದೀನ್ ಖಿಲ್ಜಿ, ಮಹಮದ್‌ಬಿನ್ ತುಘಲಕ್, ಮಹಮದ್ ಮಗ್ದಾ ಮತ್ತು ಔರಂಗಜೇಬ್ ಸೋಮನಾಥ ದೇವಾಲಯವನ್ನು ನಾಶಮಾಡಿದಾಗಲೆಲ್ಲ...

ಬೀದಿನಾಯಿಗಳು ಬದುಕಿಸುವ ಎಲೀನಾ   Mar 15, 2014

ನಮ್ಮಲ್ಲಿ ಬೀದಿ ನಾಯಿಗಳದ್ದೇ ಒಂದು ಸಮಸ್ಯೆ. ಎಲ್ಲೆಂದರಲ್ಲಿ ತಿರುಗುವ ಈ ನಾಯಿಗಳು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿ, ಎಲ್ಲರಿಂದ ಹಚಾ ಹಚಾ ಅನ್ನಿಸಿಕೊಂಡು ಜೀವಿಸುವುದನ್ನು ನೋಡಿದರೆ ಕರುಳು ಮಿಡಿಯುತ್ತದೆ. ಇಂತಹ ನಾಯಿಗಳ ಶುಶ್ರೂಷೆ ಮಾಡುವ...

ಶೇಷಣ್ಣ ಜಲತರಂಗ ಕಲಿತದ್ದು ಹೇಗೆ?   Mar 14, 2014

ಬರೋಡಾದ ಜಲತರಂಗ ವಾದಕರಾದ ಉಸ್ತಾದ್ ಮೌಲಾ ಭಕ್ಷ್ ಕರ್ನಾಟಕ ಸಂಗೀತ ಮತ್ತು ವೀಣಾವಾದನ ಕಲಿಯಲು ಮೈಸೂರಿಗೆ ಬಂದು ನೆಲೆಸಿದ್ದರು. ಮಹಾರಾಜರ ದರ್ಬಾರ್ ಸಂಗೀತಗಾರನಾಗಿ ನೇಮಕವಾದ ಮೇಲೆ ಒಂದು ದಿನ ಮಹಾರಾಜರ ಸಮ್ಮುಖದಲ್ಲಿ ಜಲತರಂಗ ನುಡಿಸಲು...

ಕೃಷ್ಣರಾಜ ಭೂಪ ಮನೆಯೆಲ್ಲ ದೀಪ   Mar 13, 2014

ಮುಮ್ಮಡಿ ಕೃಷ್ಣರಾಜ ಒಡೆಯರ್ ಮೈಸೂರು ಸಿಂಹಾಸನವೇರಿದಾಗ ಅವರಿಗೆ ಕೇವಲ ಐದು ವರ್ಷ. ಹೈದರಾಲಿ ಮತ್ತು ಟಿಪ್ಪುವಿನ ದಿವಾನರಾಗಿದ್ದ ಪೂರ್ಣಯ್ಯನವರನ್ನೇ ಆಗಲೂ ದಿವಾನರನ್ನಾಗಿ ಮುಂದುವರೆಸಲಾಯಿತು. ಆದರೆ ಪೂರ್ಣಯ್ಯ ಮುಮ್ಮಡಿ ಕೃಷ್ಣರಾಜ...

ಚಿಕ್ಕ ವಯಸ್ಸಿನಲ್ಲಿಯೇ ದೊಡ್ಡ ಸಾಧನೆ   Mar 12, 2014

ಮಧ್ಯ ಪ್ರದೇಶದ ಇಂದೂರಿನ ಪಲಕ್ ಮುಚ್ಚಲ್ ಇನ್ನೂ 21ರ ಸ್ಫುರದ್ರೂಪಿ ತರುಣಿ. ಒಳ್ಳೆಯ ಹಾಡುಗಾರ್ತಿ. ಇಷ್ಟೇ ಆಗಿದ್ದರೆ, ಈ ಕಾಲಂನಲ್ಲಿ ಬರೆಯುವ ಅವಶ್ಯಕತೆ ಇರಲಿಲ್ಲ. ಆದರೆ ಅವರು ಮಾಡಿರುವ ಅದ್ಭುತ ಸಾಧನೆ ಇತರರಿಗೆ ಮಾರ್ಗದರ್ಶಿಯಾಗಿದೆ. ಕೇವಲ...

ಎಸ್. ಕರಿಯಪ್ಪನವರ ಶಿಕ್ಷಣ ಕ್ರಾಂತಿ   Mar 11, 2014

ಸ್ವಾತಂತ್ರ್ಯ ಪೂರ್ವದ ಕಾನಕಾನಹಳ್ಳಿ ಈಗ ಕನಕಪುರವಾಗಿದೆ. ಇದು ಒಂದು ಕಾಲಕ್ಕೆ ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದ ಪ್ರದೇಶವಾಗಿತ್ತು. ಶಿಕ್ಷಣವಂತೂ ಕೆಲವೇ ಕೆಲವರ ಸ್ವತ್ತಾಗಿತ್ತು. ಇಂತಹ ಸಮಯದಲ್ಲಿ ಇದೇ ತಾಲೂಕಿನಲ್ಲಿ ಜನಿಸಿದ...

ಕಾಲಿಲ್ಲ ಆದರೆ ಕನಸಿದೆ   Mar 10, 2014

ಕಾಲಿಲ್ಲ ಆದರೆ ಕನಸಿದೆ
ಗಿರೀಶ್ ಶರ್ಮ ಎಂಬ ಯುವಕನ ಕಥೆ ಕೇಳಿ. ಗುಜರಾತ್‌ನ ರಾಜ್ಕೋಟ್‌ನ ಗಿರೀಶ್ ಎರಡು ವರ್ಷದವನಿದ್ದಾಗ ಒಂದು ರೈಲು ದುರಂತಕ್ಕೆ ಸಿಲುಕಿದ. ಮೊಳಕಾಲವರೆಗೆ ಅವನ ಬಲಗಾಲನ್ನು ತೆಗೆದು ಹಾಕಲಾಯಿತು. ಒಂಟಿಕಾಲಿನ ಆ ಬಾಲಕನನ್ನು...

ಭಾರತವನ್ನು ಪ್ರೀತಿಸಿದ ರಿಚರ್ಡ್ ಕೈಥಾನ್   Mar 08, 2014

ರೆವರೆಂಡ್ ರಾಲ್ಫ್ ರಿಚರ್ಡ್ ಕೈಥಾನ್ ದೂರದ ಅಮೆರಿಕದಿಂದ ಕ್ರೈಸ್ತ ಪಾದ್ರಿಯಗಿ ಸ್ವಾತಂತ್ರ್ಯ ಪೂರ್ವದಲ್ಲಿ ಭಾರತಕ್ಕೆ ಬಂದಾಗ ಅವರಿಗೆ ಕೇವಲ ಹದಿನಾಲ್ಕು ವರ್ಷ. ಭಾರತದ ಜನತೆಗೆ ಬೇಕಾಗಿರುವುದು ಕೇವಲ ಒಣ ಬೋಧೆಯಲ್ಲ, ಬದಲಾಗಿ ಸ್ವಾತಂತ್ರ್ಯ,...

    Next