Kannadaprabha Wednesday, July 23, 2014 5:07 PM IST
The New Indian Express

ಪದ ಪದರ

ಪರದಾಟ   Jul 23, 2014

ದಿಕ್ಕೇ ತೋಚದ ಮುಗ್ಧನಂತೆ ಮೂಢನಾದಾಗ ಬೇರೆ ದಿಕ್ಕೇ ಇಲ್ಲದೇ ದುಃಖಿಸಬೇಕೆಂಬಂತೆ ಮಾಡುವ ಸನ್ನಿವೇಶ
    ಪಾಚಿಯ ಮೇಲೆ ಕಾಲಿಟ್ಟಾಗ ಫಸಲ್ ಎಂದು ಜಾರುತ್ತದಲ್ಲಾ ಆಗ ಒದಗುವ ಪೇಚು
  ...

ಪರದಾಟ   Jul 22, 2014

ಪರ ಊರಿಗೆ ಹೋದಾಗ ಪಡುವ ಸಂಕಟ
    ಪರ ಪರ ಎಂದು ಕೆರೆದುಕೊಳ್ಳಬೇಕೆನಿಸುವಂಥ ಅವಸ್ಥೆ
    ಪ್ರಮುಖರೆಲ್ಲ ಔಟಾಗಿ ಪರಾಜಯಕ್ಕೆ ಹತ್ತಿರವಾಗುತ್ತಿದ್ದಂತೆ ಆಟ ಗೆಲ್ಲಲೇಬೇಕೆಂದು ಪಡುವ...

ಹಸಿವು   Jul 21, 2014

ಹಸಿವು ಹೊಟ್ಟೆಗೆ ಮಾತ್ರ ಆಗುವುದಿಲ್ಲ. ಮನಸಿಗೂ ಒದಗುತ್ತದೆ
    ಕೆಲವರಿಗೆ ಹಣದ ಹಸಿವು, ಹಲವರಿಗೆ ಮನ್ನಣೆಯ ಹಸಿವು
    ಬುದ್ಧಿಯ ಹಸಿವು ಹೆಚ್ಚಿಸಿಕೊಂಡವ 'ನಮಸ್ಕಾರ...

ಹಸಿವು   Jul 19, 2014

ಹೊಟ್ಟೆಬಾಕ, ತಿಂಡಿಪೋತ
    ಹಕಾರದಿಂದ ಪ್ರಾರಂಭವಾಗುವ ಹಾಹಾಕಾರದ ಬೀಜಮಂತ್ರ
    ದುಡ್ಡು ಇದನ್ನು ನೀಗಿಸುವುದಿಲ್ಲ. ಫುಡ್ಡು ಮಾತ್ರದಿಂದ ಅದು ಸಾಧ್ಯ
    ಇದು ಬಡವ ಬಲ್ಲಿದ...

ಹಸಿವು   Jul 18, 2014

ಜಾತರೆಲ್ಲರ ಜೊತೆಯಲ್ಲೇ ಬರುವ ಮತ್ತು ಇರುವ ಜಾಠರಾಗ್ನಿಯ ಸಂತಾನ.
    ಬಾಯ್ಕಳೆದು ದುರುಗುಟ್ಟುವ ಬಕಾಸುರನ ಬರಗೆಟ್ಟ ಮಿತ್ರ
    ಹೊಟ್ಟೆಯ ಕಿಚ್ಚಿನ ಪರಿಣಾಮ
    ವಾಸಿಯಾಗದ ಈ...

ಜಡೆ   Jul 17, 2014

= ಆಗಾಗ ಜಡಕು ಬೀಳುವಂಥದ್ದು ಮತ್ತು ಜಡಕು ಉಂಟು ಮಾಡುವಂಥದ್ದು
= ಕಟ್ಟಿದರೆ ವೇಣಿ ಸಂಹಾರ, ಕೆಟ್ಟರೆ ಸಂಹಾರ ವೇಣಿ
= ಇದು ಕೆಲವೊಮ್ಮೆ ಹಾವಿನಂತೆ, ಕೆಣಕಿದರೂ ಹಾವಿನಂತೆಯೇ
= ಹಿಂದಿನ ಕಾಲದ ಸ್ತ್ರೀಯರು ಇದನ್ನು ಹೊಂದಿರುತ್ತಿದ್ದರು....

ಸಾಧ್ಯತೆ   Jul 16, 2014

= ಪ್ರಯತ್ನಕ್ಕಿಂತ ಸಾಧ್ಯಾಸಾಧ್ಯತೆಗಳ ಲೆಕ್ಕಾಚಾರಕ್ಕೇ ಆದ್ಯತೆ ಕೊಡುವವನಿಗೆ ಯಶಸ್ಸು ಸಿಗುವ ಸಾಧ್ಯತೆಗಳು ಕಡಿಮೆ
'ಏಕ್ ಮಾರ್ ದೋ ತುಕಡಾ' ಎಂಬಂತೆ 'ಖಂಡತುಂಡ'ವಾಗಿ ಹೇಳಲಾಗದ ಸಂದರ್ಭ
= ಖಾಚಿತ್ಯವಿಲ್ಲದಿದ್ದರೂ...

ಸಾಧ್ಯತೆ   Jul 15, 2014

ಸಾಧ್ಯತೆ
= ಇದನ್ನು ಸುಲಭದಲ್ಲಿ ಅರ್ಥೈಸಬಹುದಾದ ಸಾಧ್ಯತೆ ಕಡಿಮೆಯೇ
= ಬಹುವಾಗಿ ಉಪಯೋಗಿಸಲ್ಪಡುವ 'ಬಹುದು'
= ಆಗಲೂ ಬಹುದು, ಆಗದೇ ಇರಲೂ ಬಹುದು ಎಂಬಂಥ ಸ್ಥಿತಿ ಇದರದ್ದು
= ಭುವಿಯಲ್ಲಿ ಸಂಭವಿಸಬಹುದಾದ ಸಂಭವನೀಯತೆಗಳು
= ಭವದ...

ಕರಾರುವಾಕ್   Jul 14, 2014

ಕರಾರುವಾಕ್
= ಕರಾರಿನ ಪ್ರಕಾರ ನಡೆದುಕೊಳ್ಳುವಿಕೆ (ವಾಕ್)
= ಹಾಕಿದ ಗೆರೆಯನ್ನು ದಾಟದಿರುವಿಕೆ
= ಒಂದು ಹೆಜ್ಜೆಯನ್ನೂ ಅಪ್ಪಿತಪ್ಪಿಯೂ ತಪ್ಪಿ ನಡೆಯದವ
= ಎಲ್ಲದರಲ್ಲೂ ಪಕ್ಕಾ, ವ್ಯಕ್ತಿತ್ವವೂ ಚೊಕ್ಕ
  ...

ಮಜಾ   Jul 12, 2014

ಮಜಾ
= ಮನುಜನಾಗಿ ಹುಟ್ಟಿರುವುದೇ ಮಜಾ ಮಾಡಲು ಎಂಬುದು ಕೆಲವರ ತತ್ತ್ವ
= ಒಂದು ದಿನ ಇಲ್ಲವಾಗುವ ಈ ದೇಹ ಇರುವವರೆಗೆ ಮಾಡಬೇಕಾದ ನಿತ್ಯ ಕರ್ಮ ಎಂಬುದು ಚಾರ್ವಾಕನ ಸುಚಾರು ವಾಕ್
= ಸಾಲ ಮಾಡಿಯಾದರೂ ಪಿಜ್ಜಾ ತಿನ್ನು ಎನ್ನುವವರ...

ಮಜಾ   Jul 10, 2014

ಮಜಾ
    ಕದ್ದು ಬೀಡಿ ಸೇದುವುದರಲ್ಲಿ ಇರುವಂಥದ್ದು
    ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳ ಹೆಸರಿನಲ್ಲಿ ಪ್ರಭುಗಳು ನಡೆಸೋದು
    ಮೂಜಗದ ಜನರೆಲ್ಲರ ಪರಮ...

ಅಪಾಯ   Jul 09, 2014

    ಅಡಿಪಾಯ ಸರಿ ಇಲ್ಲದೇ ಇದ್ದರೆ.....
    ತಪ್ಪು ಮಾಡುವುದು ಅಪಾಯವಲ್ಲ, ಸಿಕ್ಕಿಬೀಳುವುದು ಅಪಾಯ
    ಉಪಾಯಗಳೆಲ್ಲ ನಿಷ್ಕ್ರಿಯವಾದ ಸಂದರ್ಭ
  ...

ಟೆನ್ಶನ್   Jul 08, 2014

   'ಡೆಡ್ ಲೈನ್' ಹುಟ್ಟಿಸುವ ಡೆಡ್ಲೀ ಮನೋಭಾವ
    ಪರೀಕ್ಷೆ, ಇಂಟರ್ವ್ಯೂವ್, ಪ್ರಪೋಸ್, ಫಲಿತಾಂಶ ಇತ್ಯಾದಿಗಳ ಮುನ ತಲೆಗೊದಗುವ ಗುನ
    ಮನುಷ್ಯ ಟೆನ್ಶನ್ ಇಲ್ಲದೇ ಬದುಕಲಾರ....

ಟೆನ್ಶನ್   Jul 07, 2014

ಇದು ಕೆಲವೊಮ್ಮೆ ಆಗುವಂಥದ್ದು, ಇನ್ನು ಕೆಲವೊಮ್ಮೆ ಮಾಡಿಕೊಳ್ಳುವಂಥದ್ದು
    ಇದು ಶುದ್ಧ ಸ್ವಯಾರ್ಜಿತ
    ಟೆನ್ಶನ್ ಮಾಡಿಕೊಂಡರೆ ಏನೂ ಆಗುವುದಿಲ್ಲ. 'ಇನ್ನಷ್ಟು ಟೆನ್ಶನ್' ಅನ್ನು...

ಏಕಾಂತ   Jul 05, 2014

ಏಕಾಂತ
    ಕಾಂತೆ ದೂರ ತೆರಳಿದಾಗ ಒದಗುವ ಸ್ಥಿತಿ
    ಅಂಟಿಕೊಂಡೇ ಇರುತ್ತಿದ್ದವರು ಅಗಲಿದಾಗ ಉಂಟಾಗುವ ಒಬ್ಬಂಟಿತನ
    ಲೋನ್ ಬೇಕು ಎನಿಸಿದಾಗ ಯಾರೂ ಕೊಡದೇ ಕೈ ಎತ್ತಿದಾಗ...

ದುಬಾರಿ   Jun 30, 2014

ಬಾರಿ ಬಾರಿ ಶಾಪಿಂಗ್ ಮಾಡಬೇಕು ಎಂಬ ಆಸೆಗೆ ತಣ್ಣೀರೆರಚುವ ಸಂಗತಿ
    ದರ ಏರಿಕೆಯ ಪರಿಣಾಮ
    ಬೇಡಿಕೆ ಜಾಸ್ತಿ, ನೀಡಿಕೆ ನಾಸ್ತಿ ಆಗಿದ್ದರ ಫಲಿತ
    ಬಾರಿಗೆ ದುಬಾರಿ ಎಂಬ...

ಪೈಪೋಟಿ   Jun 28, 2014

ಪೈಪು ಮಾರಾಟಗಾರರ ನಡುವಿನ ಸ್ಪರ್ಧೆ
    'ಪೈ' ಕಂಪೆನಿ ಹುಟ್ಟುಹಾಕಿದ ಬೆಲೆ ಸಮರ
    ತಾ ಹೆಚ್ಚು ನಾ ಹೆಚ್ಚು ಎನ್ನುವಂಥ ಹೆಚ್ಚುಗಾರಿಕೆಗಾಗಿನ ಹುಚ್ಚು
    ಆರೋಗ್ಯದಾಯಕ...

ಸಿಂಹಾಸನದಲ್ಲಿ ವಿ'ರಾಜ'ನಾದವ   Jun 26, 2014

ಸಿಂಹಾಸನದಲ್ಲಿ ವಿ'ರಾಜ'ನಾದವ
    ಈತನಿಗೆ ಎಂದೂ ರಜೆಯೇ ಇಲ್ಲ
    ಪೃಥ್ವಿಯಲ್ಲಿರುವ ಯಾರನ್ನೂ ಪೃಥಕ್ ಆಗಿ ನೋಡದೇ ತನ್ನ ಮಕ್ಕಳಂತೆ ನೋಡಿಕೊಳ್ಳುವ ಪಾರ್ಥಿವ
    ಅನೇಕ...

ಅಪಚಾರ   Jun 25, 2014

ಆಚಾರವೇ ಸ್ವರ್ಗ, ಅಪಚಾರವೇ ನರಕ
    ಚಾರಣಕ್ಕೆ ಹೋದಾಗ ಮಾಡಿದ ಅನಾಚಾರ
    ಉಪಚಾರ ಮಾಡಿದವರಿಗೇ ಎರಡು ಬಗೆಯುವುದು
    ಇಟ್ಟ ಚೂರು ನಂಬಿಕೆಯನ್ನೂ ಚೂರು ಚೂರು...

ಅಬ್ಧಿ   Jun 24, 2014

ನದಿನದಿಗಳ ಸಂಗಮದಿಂದ ಜನಿಸಿದ ಜಲಸಂತಾನ
    ಬೀಚುಗಳೆಂಬ ತಟದಲ್ಲಿ ಬಿಚ್ಚಿ ಮಲಗುವ ಬಿಳುಚರ ಸ್ವರ್ಗ
    ಅಲೆಲೆಲೆಲೆ....ಎನಿಸುವ ಅಲೆಗಳ ಆಗರ
    ಅಪ್(ನೀರು)ನ ನಿಧಿ,...

ಅಬ್ಧಿ   Jun 23, 2014

ಶತಾಬ್ದವನ್ನು ದಾಟಿದವರಿಂದಲೂ ದಾಟಲಾಗದ್ದು
    ಹಸ್ತಸಾಮುದ್ರಿಕ ನೋಡುವ ಜ್ಯೋತಿಷಿಗಳಿಂದಲೂ ಹೇಳಲಾಗದಷ್ಟು ವಿಸ್ತೀರ್ಣದ 'ಸಮುದ್ರ'
    ಅಪಾರ 'ಅಕೂಪಾರ'
    ಪರಿವಾರವನ್ನೆಲ್ಲ...

ಆಲಾಪ   Jun 21, 2014

ಮಾತಿನ ಲೇಪ ಇರುವುದೆಲ್ಲ ಆಲಾಪವೇ
    ಹುಡುಗರಷ್ಟೇ ಇರುವಾಗ ವಿನಿಮಯವಾಗುವ ಅಶ್ಲೀಲ ಮಾತುಗಳೆಲ್ಲ ದುರಾಲಾಪ
    ಕಟ್ಟೆ ಮೇಲೆ ಕುಳಿತು ಕಟ್ಟೆ ಪಂಚಾಯ್ತಿ ಮಾಡಿದರೆ ಅದು ವಾರ್ತಾಲಾಪ
  ...

ಆಲಾಪ   Jun 20, 2014

Assssssss ಎಂದು (ಶ್ರುತಿ) ಲೋಪವಾಗದಂತೆ ತೆಗೆಯುವ ರಾಗ
    'ಆಭಾಷಣ'ವೇ ಆಲಾಪ
= ಆಲಾಪದ ನಡುವೆ ಅನರ್ಥಕವಾದ ಮಾತುಗಳೂ ಬಂದರೆ ಅದು ಪ್ರಲಾಪ
    ಇಬ್ಬರು ಪಟ್ಟಾಗಿ ಕೂತು ಪಟ್ಟಂಗ ಹೊಡೆಯುತ್ತಾ...

ಕಾಲಘಟ್ಟ   Jun 19, 2014

ಈ ಘಟ್ಟದಿಂದ ಕಾಲು ಜಾರಿ ಬಿದ್ದರೆ ಸೀದಾ ಯಮಾಲಯಕ್ಕೇ ಪ್ರವೇಶ
    ಕುಳಿತಲ್ಲೇ ಕುಳಿತಿದ್ದವರೂ ಈ ಘಟ್ಟ ಹತ್ತಬಹುದು
    ಜೀವನ ಮಟ್ಟವನ್ನು ನಿರ್ಧರಿಸಿ ದಾಖಲಿಸುವ ಇತಿಹಾಸದ ಪುಟ
  ...

ಪುಳಕ   Jun 17, 2014

ಪುಳಕ
    ಕೈ ಚಳಕ ಕಂಡು ಮೈಯ್ಯಲ್ಲಾಗುವ ಪುಳುಪುಳು
    ಥಳಕು ಲೋಕವ ಕಂಡು ಆಗುವ ಸೆಳಕು
    "ಛೀ ಕೊಳಕ..." ಎಂದು ಗೆಳತಿ ಹೇಳಿದರೆ ಅವಳು ಪುಳಕಗೊಂಡಿದ್ದಾಳೆಂದೇ...

ವಿದ್ಯಾವಂತ   Jun 16, 2014

ವಿದ್ಯಾವಂತ
    ನಗರದಲ್ಲಿ ಬದುಕುವ ಅರ್ಹತೆಯನ್ನು ಗಳಿಸಿಕೊಂಡವ ಮತ್ತು ಹಳ್ಳಿಯನ್ನು ದೂರಲು ಬಲ್ಲವ
    ಈತ ಸಮಸ್ಯೆಗೆ ಕಾರಣವನ್ನು ಹುಡುಕಬಲ್ಲ. ಪರಿಹಾರ ಗೊತ್ತಿಲ್ಲ
= ಆಧುನಿಕ ಶಿಕ್ಷಣ...

ವಿದ್ಯಾವಂತ   Jun 14, 2014

ವಿದ್ಯಾವಂತ
= ಹಣ ಗಳಿಕೆಯೇ ಜೀವನದ ಪರಮ ಲಕ್ಷ್ಯವೆಂದು ಬಗೆದು ಮೌಲ್ಯಗಳನ್ನು ಅಲಕ್ಷ್ಯ ಮಾಡುವವ
= ಹಲವಾರು ಉಪಾಯಗಳನ್ನು ಅಭ್ಯಸಿಸಿದವ, ಅವುಗಳ ಉಪಯೋಗಗಳನ್ನು ಅರಿಯದವ
= ಕಾಳಿಗಾಗಿ ಮೈ ಬಗ್ಗಿ ಕೂಲಿ ಮಾಡುವುದು ಕೀಳು ಎಂದುಕೊಳ್ಳುವ...

ವಿದ್ಯಾವಂತ   Jun 13, 2014

   ಸಹಿ ಹಾಕಲು ಬರುವವ
    ಶಾಲೆಗೆ ಹೋಗಿ ಸ್ಯಾನೆ ಕಲಿತು ಶಾಣ್ಯಾ ಅನಿಸಿಕೊಂಡವ
    ವಿದ್ಯೆಯನ್ನೇ ಜ್ಞಾನ ಎಂದು ಭಾವಿಸಿ ಅದನ್ನಷ್ಟೇ ಗಳಿಸಿದವ
    ಬುದ್ಧಿಯ ಬದಲು...

ಮಾತು   Jun 10, 2014

   ಮೋದಿ ಶಬ್ದದ ಸಮಾನಾರ್ಥಕ
    ಮನಮೋಹನ್ ಪದದ ವಿರುದ್ಧಾರ್ಥಕ
    ದಿಗ್ವಿಜಯರಿಗೆ ದಿಕ್ಕು ದಿಕ್ಕಿನಲ್ಲಿ ಧಿಕ್ಕಾರ ಮೊಳಗುವಂತೆ ಮಾಡಿದ್ದು
    ಭಾವದ...

ಮಾತೃಭಾಷೆ   Jun 09, 2014

    ಎಲ್ಲ ಭಾಷೆಗಳ ಮಾತೃವಾದ ಸಂಸ್ಕೃತವೇ ಎಲ್ಲರ ಮಾತೃಭಾಷೆ
    ಅಮ್ಮ, ಅಪ್ಪನಿಗೆ ಬೈಯ್ಯುವ ಭಾಷೆ
    ನೋವಾದಾಗ ಯಾವ ಭಾಷೆಯಲ್ಲಿ ಅಮ್ಮಾ ಎಂದು ಕೂಗುತ್ತೀರೋ ಆ...

    Next