Kannadaprabha Tuesday, September 23, 2014 7:49 PM IST
The New Indian Express

ವಕ್ರತುಂಡೋಕ್ತಿ

ಹೊಸ ಪುಸ್ತಕಗಳನ್ನು ಖರೀದಿಸುವ ಒಂದು..   Aug 05, 2014

ಹೊಸ ಪುಸ್ತಕಗಳನ್ನು ಖರೀದಿಸುವ ಒಂದು ಲಾಭವೆಂದರೆ ಆ ಬಗ್ಗೆ ಫೇಸ್‌ಬುಕ್‌ನಲ್ಲಿ ಹೇಳಿಕೊಳ್ಳಬಹುದು.

...

ಕೆಲವರಿಗೆ ಬಹಳ ತಾಳ್ಮೆ.   Aug 04, 2014

ಕೆಲವರಿಗೆ ಬಹಳ ತಾಳ್ಮೆ. ಕಾರಣ ಅಂಥವರಿಗೆ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ.

...

ಹೆಂಡತಿಗೆ ಐ ಲವ್ ಯೂ ಹೇಳಿ.   Aug 02, 2014

ಹೆಂಡತಿಗೆ ಐ ಲವ್ ಯೂ ಹೇಳಿ. ಸಂಸಾರವನ್ನು ಸುಸೂತ್ರವಾಗಿಡುವುದಕ್ಕೆ ಹೇಳುವ ಸುಳ್ಳಿನಿಂದ ಪಾಪ ಬರುವುದಿಲ್ಲ.
...

ಕೆಲವು ಹುಡುಗಿಯರಿಗೆ ಸಂಗಾತಿಯಾದವನು ...   Aug 01, 2014

ಕೆಲವು ಹುಡುಗಿಯರಿಗೆ ಸಂಗಾತಿಯಾದವನು ತಮ್ಮ ಹೆಸರನ್ನು ತೋಳಿನ ಮೇಲೆ, ಎದೆ ಮೇಲೆ ಬರೆಸಿಕೊಳ್ಳಬೇಕು ಎಂದಿರುತ್ತದೆ. ಕೆಲವರು ಮಾತ್ರ ಆತನ ಆಸ್ತಿ ದಾಖಲೆಗಳಲ್ಲಿ ತಮ್ಮ ಹೆಸರಿದ್ದರೆ ಸಾಕು ಎಂದುಕೊಳ್ಳುವ ಜಾಣೆಯರು...

ಹೆಚ್ಚಿನ ಮಹಿಳೆಯರು ಹಣಕ್ಕಾಗಿ ಮದುವೆಯಾಗುತ್ತಾರೆ   Jul 31, 2014

ಹೆಚ್ಚಿನ ಮಹಿಳೆಯರು ಹಣಕ್ಕಾಗಿ ಮದುವೆಯಾಗುತ್ತಾರೆ ಎಂಬುದೊಂದು ಆರೋಪ. ಹಾಗೇನೂ ಇಲ್ಲ. ಕೆಲವರು ಹಣಕ್ಕಾಗಿ ಮದುವೆ ಮಾತ್ರವಲ್ಲ, ವಿಚ್ಛೇದನವನ್ನೂ ಪಡೆಯುತ್ತಾರೆ.

...

ಪೆಟ್ರೋಲ್ ಬೆಲೆ ಏರಿಕೆ ಬಗ್ಗೆ ಜನ ತಲೆ..   Jul 30, 2014

ಪೆಟ್ರೋಲ್ ಬೆಲೆ ಏರಿಕೆ ಬಗ್ಗೆ ಜನ ತಲೆ ಕೆಡಿಸಿಕೊಳ್ಳದಂತೆ ಮಾಡಬೇಕಾದರೆ ಟೊಮೆಟೊ ಬೆಲೆಯನ್ನು ಅದಕ್ಕಿಂತ ಹೆಚ್ಚಿರುವಂತೆ ನೋಡಿಕೊಳ್ಳಬೇಕು.

...

ಶ್ರೀಮಂತರಾದರೆ ಸಂತೋಷವನ್ನೂ..   Jul 29, 2014

ಶ್ರೀಮಂತರಾದರೆ ಸಂತೋಷವನ್ನೂ ಖರೀದಿಸಬಹುದು. ಆದರೆ ಅಷ್ಟರಲ್ಲಿ ಅದರ ಬೆಲೆ ಇನ್ನೂ ಹೆಚ್ಚಾಗಿರುತ್ತದೆ.

...

ವಿವಾಹಿತ ಗಂಡಸು 'ನಾನು ಯೋಚಿಸಿ ಹೇಳುತ್ತೇನೆ...   Jul 28, 2014

ವಿವಾಹಿತ ಗಂಡಸು 'ನಾನು ಯೋಚಿಸಿ ಹೇಳುತ್ತೇನೆ' ಎಂದರೆ, ಆತ ಇನ್ನೂ ತನ್ನ ಹೆಂಡತಿಯ ಅಭಿಪ್ರಾಯವನ್ನು ಕೇಳಿಲ್ಲ ಎಂದರ್ಥ.

...

ನಿಮ್ಮನ್ನು ಕಂಡು ಜನರು 'ನೀವು ತುಂಬಾ ಯಂಗ್ ಆಗಿ ಕಾಣುತ್ತೀರ'...   Jul 26, 2014

ನಿಮ್ಮನ್ನು ಕಂಡು ಜನರು 'ನೀವು ತುಂಬಾ ಯಂಗ್ ಆಗಿ ಕಾಣುತ್ತೀರ' ಎಂದರೆ, ನೀವು ಮುದುಕರಾಗಿರುವುದನ್ನು ಅವರು ಗಮನಿಸಿದ್ದಾರೆ ಎಂದು ಅರ್ಥ.

...

ಮದುವೆಯಲ್ಲಿ ಎಲ್ಲರೂ ಊಟದ ಬಗ್ಗೆ ಗಮನ ಕೊಡುತ್ತಾರೆ...   Jul 25, 2014

ಮದುವೆಯಲ್ಲಿ ಎಲ್ಲರೂ ಊಟದ ಬಗ್ಗೆ ಗಮನ ಕೊಡುತ್ತಾರೆ. ವಧು- ವರರು ಮಾತ್ರ ಊಟದ ನಂತರದ ಪ್ರಕ್ರಿಯೆ ಬಗ್ಗೆ  ಆಲೋಚಿಸುತ್ತಿರುತ್ತಾರೆ.

...

ಸೋಫಾದಲ್ಲಿ ಜೋಡಿಗಳು ಮುದ್ದಿಸುವುದನ್ನು...   Jul 24, 2014

ಸೋಫಾದಲ್ಲಿ ಜೋಡಿಗಳು ಮುದ್ದಿಸುವುದನ್ನು ಪ್ರೇಮಪರ್ವ ಎಂತಲೂ, ಒಬ್ಬರೇ ಬಿದ್ದುಕೊಂಡಿರುವುದನ್ನು ದಾಂಪತ್ಯ ಎಂತಲೂ ಕರೆಯಬಹುದು.

...

ಆಮ್‌ಆದ್ಮಿ ಪಕ್ಷದಲ್ಲಿರುವವರನ್ನು ಗುರುತಿಸುವುದು ಸುಲಭ.   Jul 23, 2014

ಆಮ್‌ಆದ್ಮಿ ಪಕ್ಷದಲ್ಲಿರುವವರನ್ನು ಗುರುತಿಸುವುದು ಸುಲಭ. ವ್ಯವಸ್ಥೆ ಭ್ರಷ್ಟವಾಗಿದೆ ಎಂಬ ವಾದ ವೈಖರಿಯ ಕೊನೆಯ ಭಾಗದಲ್ಲಿ ಅವರು ಕಾಂಗ್ರೆಸ್ಸನ್ನು ಬೆಂಬಲಿಸುತ್ತಾರೆ.

...

ವರ್ಷವಿಡೀ ಕಚೇರಿಗೆ ಒಂದೇ ಬಗೆಯ ಪ್ರಯಾಣ...   Jul 22, 2014

ವರ್ಷವಿಡೀ ಕಚೇರಿಗೆ ಒಂದೇ ಬಗೆಯ ಪ್ರಯಾಣ ಎಂಬ ಬೇಸರ ಬೇಡವೆಂದೇ ಮಳೆಗಾಲದಲ್ಲಿ ಜಲಸಂಚಾರದ ಅನುಭವ ಪಡೆಯುವಂತೆ ನಗರದ ರಸ್ತೆಗಳನ್ನು ರೂಪಿಸಲಾಗಿದೆ.

...

ಒನ್ ವೇ ರಸ್ತೆ ದಾಟುವಾಗ ಎರಡೂ ಬದಿಯಲ್ಲಿ ನೋಡಿ...   Jul 21, 2014

ಒನ್ ವೇ ರಸ್ತೆ ದಾಟುವಾಗ ಎರಡೂ ಬದಿಯಲ್ಲಿ ನೋಡಿ ನಡೆಯುತ್ತೀರೆಂದರೆ, ನೀವು ನಿಜವಾದ ಭಾರತೀಯರು.

...

ಪ್ರೀತಿಸಿ, ಯುದ್ಧ ಬೇಡ ಎಂದು ಎಲ್ಲರೂ ಉಪದೇಶಿಸುತ್ತಾರೆ...   Jul 19, 2014

ಪ್ರೀತಿಸಿ, ಯುದ್ಧ ಬೇಡ ಎಂದು ಎಲ್ಲರೂ ಉಪದೇಶಿಸುತ್ತಾರೆ. ಆದರೆ ಮಾರಕಾಸ್ತ್ರ ಸಿಗುವಷ್ಟು ಸುಲಭದಲ್ಲಿ ಗರ್ಲ್‌ಫ್ರೆಂಡ್ ಸಿಗೋದಿಲ್ಲ.

...

ಗಾಜಿಯಾಬಾದ್‌ನ ಸ್ಥಿತಿ ಬಗ್ಗೆ ಗೊತ್ತಿಲ್ಲದಿದ್ದರೂ...   Jul 18, 2014

ಗಾಜಿಯಾಬಾದ್‌ನ ಸ್ಥಿತಿ ಬಗ್ಗೆ ಗೊತ್ತಿಲ್ಲದಿದ್ದರೂ ಗಾಜಾ ಪಟ್ಟಿಯಲ್ಲಿ ಶಾಂತಿ ಸ್ಥಾಪನೆ ಕುರಿತು ಸಂಸತ್ತಿನಲ್ಲಿ ಚರ್ಚೆಯಾಗಬೇಕು ಎನ್ನುವವನೇ ಭಾರತದಲ್ಲಿ ಸಮರ್ಥ ಪ್ರತಿಪಕ್ಷ ಮುಖಂಡನಾಗುತ್ತಾನೆ.

...

ಮುಂಗಾರು ಮಳೆ ಕೈ ಕೊಟ್ಟಾಗ ಎಂಥ ಕೆಟ್ಟ ಪರಿಸ್ಥಿತಿ ಎದುರಾಗುತ್ತದೆ...   Jul 17, 2014

ಮುಂಗಾರು ಮಳೆ ಕೈ ಕೊಟ್ಟಾಗ ಎಂಥ ಕೆಟ್ಟ ಪರಿಸ್ಥಿತಿ ಎದುರಾಗುತ್ತದೆ ಎಂದರೆ ಈ ವಿಷಯದಲ್ಲಿ ನಾವು ಸರ್ಕಾರವನ್ನೂ ಬಯ್ಯುವಂತಿಲ್ಲ.

...

ಹೆಂಡತಿ ಅಂದ್ರೆ ರೋಮ್ಯಾಂಟಿಕ್ ಕವಿತೆ ಇದ್ದಂತೆ.   Jul 16, 2014

ಹೆಂಡತಿ ಅಂದ್ರೆ ರೋಮ್ಯಾಂಟಿಕ್ ಕವಿತೆ ಇದ್ದಂತೆ. ಗರ್ಲ್ಫ್ರೆಂಡ್ಸ್ ಅಂದ್ರೆ ವರ್ಣಮಾಲೆ ಅಕ್ಷರಗಳಂತೆ. ಕವಿತೆ ಅರ್ಥ ಮಾಡಿಕೊಳ್ಳಲು ಅಕ್ಷರಗಳು ಬೇಕೇಬೇಕು.

...

ತಲುಪಬೇಕಾದ ಸ್ಥಳಕ್ಕೆ ಹತ್ತೇ ನಿಮಿಷದಲ್ಲಿ ಹೋಗಿ   Jul 15, 2014

ತಲುಪಬೇಕಾದ ಸ್ಥಳಕ್ಕೆ ಹತ್ತೇ ನಿಮಿಷದಲ್ಲಿ ಹೋಗಿ, 20 ನಿಮಿಷ ಪಾರ್ಕಿಂಗ್ ಹುಡುಕಾಟಕ್ಕೆ ವ್ಯಯಿಸುತ್ತೀರಿ ಎಂದಾದರೆ ಮಹಾನಗರದಲ್ಲಿ ಇದ್ದೀರಿ ಎಂದರ್...

ಜ್ಞಾಪಕಶಕ್ತಿ ವೃದ್ಧಿಯಾಗಬೇಕಾದರೆ..   Jul 14, 2014

ಜ್ಞಾಪಕಶಕ್ತಿ ವೃದ್ಧಿಯಾಗಬೇಕಾದರೆ, ಸಾಲ ಕೊಡಲು ಶುರು ಮಾಡಬಹುದು.

...

ತಿಜೋರಿಯಲ್ಲಿ ಬಂಗಾರ ಇಡುವ..   Jul 12, 2014

ತಿಜೋರಿಯಲ್ಲಿ ಬಂಗಾರ ಇಡುವ ಭಾಗ್ಯವೇ ಬಂದಿಲ್ಲ ಎಂದು ಕೊರಗಿಕೊಂಡಿರುವ ವ್ಯಸನಿಗಳು ಇದೀಗ ಸಿಗರೆಟ್ ಪ್ಯಾಕ್ ಇಟ್ಟು ಬೀಗಹಾಕಿ ಸಂಭ್ರಮಿಸಬಹುದು.

...

ಪ್ರತಿವರ್ಷದ ಬಜೆಟ್‌ನಲ್ಲೂ ಬದಲಾಗದೇ..   Jul 11, 2014

ಪ್ರತಿವರ್ಷದ ಬಜೆಟ್‌ನಲ್ಲೂ ಬದಲಾಗದೇ ಉಳಿಯುವ ಸಂಗತಿ ಎಂದರೆ ಪ್ರತಿಪಕ್ಷಗಳ ಪ್ರತಿಕ್ರಿಯೆ.

...

ನಿಮ್ಮ ಪಾಲಕರನ್ನು ಖುಷಿಪಡಿಸಲು ಆಗಾಗ ಗ್ರೀಟಿಂಗ್ ..   Jul 10, 2014

ನಿಮ್ಮ ಪಾಲಕರನ್ನು ಖುಷಿಪಡಿಸಲು ಆಗಾಗ ಗ್ರೀಟಿಂಗ್ ಕಾರ್ಡ್ ಕೊಡುತ್ತಿರಿ. ಏಕೆಂದರೆ ಅವರೇ ನಿಮ್ಮ ಪಾನ್‌ಕಾರ್ಡ್ ಆಗಿರುತ್ತಾರೆ.

...

    Next