Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
BJP is threatening to carry out encounters just because they are in power in Delhi: West Bengal Chief Minister Mamata Banerjee

ಕೇಂದ್ರದಲ್ಲಿ ಅಧಿಕಾರದಲ್ಲಿದ್ದೇವೆ ಎಂಬ ಕಾರಣಕ್ಕೆ ಬಿಜೆಪಿಯಿಂದ ಎನ್ ಕೌಂಟರ್ ಬೆದರಿಕೆ: ಮಮತಾ ಬ್ಯಾನರ್ಜಿ

HD Kumaraswamy-Siddaramaiah

ವಿಧಾನಪರಿಷತ್ ಅಧ್ಯಕ್ಷ ಸ್ಥಾನದ ಮೇಲೆ ಜೆಡಿಎಸ್ ಕಣ್ಣು, ಬಿಟ್ಟುಕೊಡದ ಮನಸ್ಥಿತಿಯಲ್ಲಿ ಕಾಂಗ್ರೆಸ್!

Cooperative bank with Amit Shah as a director collected highest amount of demonetised notes among DCCBs

ಅಮಾನ್ಯೀಕರಣ: ಅತಿ ಹೆಚ್ಚು ಹಳೆಯ ನೋಟುಗಳನ್ನು ಸಂಗ್ರಹಿಸಿದ ಅಮಿತ್ ಶಾ ನಿರ್ದೇಶಕತ್ವದ ಸಹಕಾರಿ ಬ್ಯಾಂಕ್!

ಲಿಯೋನಲ್ ಮೆಸ್ಸಿ

ಫಿಫಾ ವಿಶ್ವಕಪ್ 2018: ಕ್ರೊಯೇಷಿಯಾ ವಿರುದ್ಧ ಸೋತ ಅರ್ಜೇಂಟಿನಾ ಮುಂದಿನ ಹಂತಕ್ಕೆ ಡೌಟ್!

Gilu Joseph

ಅಶ್ಲೀಲತೆ ನೋಡುಗರ ದೃಷ್ಟಿಯಲ್ಲಿದೆ, ಸ್ತನ್ಯಪಾನದಲ್ಲಲ್ಲ: ಕೇರಳ ಹೈಕೋರ್ಟ್

Kylian Mbappe

ಫಿಫಾ ವಿಶ್ವಕಪ್ 2018: ಡೆನ್ಮಾರ್ಕ್-ಆಸ್ಟ್ರೇಲಿಯಾ ಪಂದ್ಯ ಡ್ರಾ, ಪೆರು ವಿರುದ್ಧ ಗೆದ್ದ ಫ್ರಾನ್ಸ್

India hits back at US, hikes import duty on 29 products

29 ಉತ್ಪನ್ನಗಳ ಆಮದು ಸುಂಕ ಏರಿಸಿದ ಭಾರತ: ಅಮೆರಿಕಕ್ಕೆ ತಿರುಗೇಟು

D K Shivakumar

ನನ್ನ ಬಳಿಯೂ ಡೈರಿಗಳಿವೆ, ಸಮಯ ಬಂದಾಗ ಬಿಚ್ಚಿಡುತ್ತೇನೆ: ಡಿಕೆಶಿ; ಸಚಿವರ ಬೆಂಬಲಕ್ಕೆ ನಿಂತ ಜೆಡಿಎಸ್

Team India

ದಾಖಲೆ ಪಂದ್ಯಗಳು: ಟೀಂ ಇಂಡಿಯಾ ಮುಂದಿನ 5 ವರ್ಷದಲ್ಲಿ ಬರೋಬ್ಬರಿ 203 ಪಂದ್ಯಗಳನ್ನು ಆಡಲಿದೆ!

ಶಿಕ್ಷಕ-ವಿದ್ಯಾರ್ಥಿಗಳು

ಗುರು ಶಿಷ್ಯರ ಬಾಂಧವ್ಯ ಅಂದ್ರೆ ಇದೇ ಏನೋ! ವರ್ಗವಾಗಿದ್ದ ಶಿಕ್ಷಕನನ್ನು ಬಿಟ್ಟು ಹೋಗಬೇಡಿ ಎಂದು ಕಣ್ಣೀರಿಟ್ಟ ವಿದ್ಯಾರ್ಥಿಗಳು

CoA issues showcause notice to BCCI acting secretary over

ಬಿಸಿಸಿಐ ಹಂಗಾಮಿ ಕಾರ್ಯದರ್ಶಿಗೆ ಸಿಒಎ ನೊಟೀಸ್

RPF Police

ರೈಲ್ವೆ ನಿಲ್ದಾಣದಲ್ಲೇ ಆರ್‌ಪಿಎಫ್ ಪೊಲೀಸ್‍ನಿಂದ ಮಹಿಳೆಗೆ ಲೈಂಗಿಕ ಕಿರುಕುಳ, ಪೇದೆಗೆ ಕಪಾಳಮೋಕ್ಷ!

Maharashtra to launch bicycle ambulance pilot project soon: Official

ಮಹಾರಾಷ್ಟ್ರದಲ್ಲಿ ದ್ವಿಚಕ್ರ ಆಂಬುಲೆನ್ಸ್ ಯೋಜನೆಗೆ ಶೀಘ್ರವೇ ಚಾಲನೆ

ಮುಖಪುಟ >> ಪ್ರವಾಸ-ವಾಹನ

ಶಿಲ್ಪಿಯ ಕೆತ್ತನೆಯಲ್ಲಿ ಮೂಡಿದ ಕೈಲಾಸ ಕಾಂಚೀಪುರದ ಕೈಲಾಸನಾಥ ದೇವಾಲಯ

Kanchi Kailasanathar temple

ಕೈಲಾಸನಾಥ ದೇವಾಲಯ

ಕಾಂಚೀಪುರ ದೇವಳಗಳ ನಗರಿ, ರೇಷ್ಮೆ ಸೀರೆಗಳಿಗೆ ಪ್ರಸಿದ್ದಿ, ತಮಿಳುನಾಡಿನ ವಿಶಿಷ್ಟ ಪೊಂಗಲ್, ಕೈ ಮುರುಕು, ತೆಂಗೋಳು, ಹಲ್ಲಿಗೆ ಷಾಕ್, ಪುಳಿಯೋಗರೆಗಳಿಗೆ ಹೆಸರುವಾಸಿ.

ಇಲ್ಲಿನ ಏಕಾಂಬರನಾಥ, ಕಾಮಾಕ್ಷಿ, ವರದರಾಜ ಪೆರುಮಾಳ್, ಕೈಲಾಸನಾಥ ದೇವಾಲಯ ಸೇರಿ ಅನೇಕ ದೇವಾಲಯಗಳು ಜನರನ್ನು ತಮ್ಮತ್ತ ಆಕರ್ಷಿಸುತ್ತದೆ.

ಇದರಲ್ಲಿಯೂ ಕೈಲಾಸನಾಥ ದೇವಾಲಯ ಶಿಲ್ಪಕಲೆ ಕುಸುರಿ ಕೆತ್ತನೆಗಳಿಂದ ಪ್ರವಾಸಿಗರ ಮನಸೂರೆಗೊಳ್ಳುತ್ತದೆ. ಭಾರತದಲ್ಲಿನ ಮೂರು ಪ್ರಮುಖ ಕೈಲಾಸನಾಥ ಮಂದಿರಗಳಲ್ಲಿ ಇದೂ ಒಂದು (ಇನ್ನೆರಡು ದೇವಾಲಯಗಳು ಕ್ರಮವಾಗಿ ಮಹಾರಾಷ್ಟ್ರದ ಎಲ್ಲೋರಾ ಹಾಗೂ ತಮಿಳುನಾಡಿನ ಉತ್ತಿರೂರು ಎನ್ನುವಲ್ಲಿದೆ)

ಕಾಂಚೀಪುರದಲ್ಲಿ ಪಲ್ಲವರಿಂದ ನಿರ್ಮಿತವಾಗಿರುವ ಈ ದೇವಾಲಯ ಸುಮಾರು 1200 ವರ್ಷಗಳಷ್ಟು ಹಳೆಯದು. ಪಲ್ಲವ ರಾಜ 2ನೆಯ ನರಸಿಂಹ ವರ್ಮ ನಿರ್ಮಾಣ ಮಾಡಿದ್ದ ಈ ದೇವಾಲಯ ಎದುರಿನ ಗೋಪುರ ಹಾಗೂ ಬಸವ ಅತ್ಯಂತ ಆಕರ್ಷಕವಾಗಿದೆ

ಸುಂದರವಾದ ಗರ್ಭಗುಡಿಯ ಮೇಲಿರುವ ವಿಮಾನ, ಕಂಬಗಳಿಂದ ಕೂಡಿದ ಮಂಟಪ, ಮುಂಭಾಗ ಮತ್ತು ಸುತ್ತಲೂ ಪ್ರಾಕಾರದಲ್ಲಿರುವ 58 ಪುಟ್ಟ ಗುಡಿಗಳೂ ಅವುಗಳಲ್ಲಿರುವ ಮೆದುವಾದ ಮರಳುಗಲ್ಲಿನಿಂದ ಮಾಡಲ್ಪಟ್ಟಿರುವ ಶಿವ ವಿಗ್ರಹಗಳೂ ಈ ದೇವಾಲಯದ ಹಿರಿಮೆಯ ಪ್ರತೀಕಗಳು. ಮೊದಲಿಗೆ ಈ ವಿಗ್ರಹಗಳನ್ನು ಅಲಂಕರಿಸಲು ಬಳಸಿದ ಆ ಬಣ್ಣಗಳ ಚಿಹ್ನೆಗಳು ಮಾತ್ರ ಈಗ ಉಳಿದುಬಂದಿದೆ.

ಒಂದು ಐತಿಹ್ಯದ ಪ್ರಕಾರ, ರಾಜ ರಾಜ ಚೋಳ ಈ ದೇವಸ್ಥಾನಕ್ಕೆ ಭೇಟಿ ನೀಡಿದ ಮೇಲೆಯೇ ತಂಜಾವೂರಿನಲ್ಲಿ ಬೃಹದೀಶ್ವರ ದೇವಸ್ಥಾನ ಸ್ಥಾಪಿಸಲು ಸ್ಪೂರ್ತಿ ದೊರೆಯಿತು ಎನ್ನಲಾಗುತ್ತದೆ.

ದೇವಾಲಯದ ಮುಂಭಾಗದಲ್ಲಿ ಹಲವಾರು ಪುಟ್ಟ ಗುಡಿಗಳಿವೆ ಮತ್ತು ಕೋಷ್ಟಕಗಳಿದ್ದು ಅದರಲ್ಲಿ ಶಿವಲಿಂಗಗಳಿವೆ.ಒಳಾಂಗಣದ ಭಿತ್ತಿಯಲ್ಲಿ ಸಾಲು ಸಾಲು ಕಂಭಗಳು, ಎಲ್ಲೆಲ್ಲು ನೋಡಿದರೂ ಸಿಂಹಗಳ ಚಿತ್ರ! ದೊಡ್ಡ ಸಿಂಹಗಳು ಬಾಯ್ದೆರೆದು ನಮ್ಮನ್ನು ನೋಡುತ್ತದೆ!

ಮಧ್ಯದಲ್ಲಿರುವ ಕೈಲಾಸನಾಥನ ಆಲಯದ ಗೋಪುರ ಸಾಧಾರಣ ಎತ್ತರವಿದೆ. ಗರ್ಭಗೃಹದಲ್ಲಿ ಕರಿಶಿಲೆಯಲ್ಲಿ ಕೆತ್ತಿದ ದೊಡ್ಡ ಶಿವಲಿಂಗವಿದೆ. ಬಹಳ ಸುಂದರವಾಗಿದೆ. ಇಲ್ಲೇ ಪಕ್ಕದ ಗೋಡೆಗೆ ಒರಗಿಸಿರುವ ಭಿನ್ನವಾಗಿರುವ ಬಹಳ ದೊಡ್ಡ ಪಾಣಿ ಪೀಠ ಒಂದನ್ನು ಇರಿಸಿದ್ದಾರೆ. ಇದು ಮುರುಕಲು ಆದ್ದರಿಂದ ಪೂಜೆಗೆ ಯೋಗ್ಯವಲ್ಲ. ಅದರ ಗಾತ್ರ ನೋಡಿಯೇ ಅಚ್ಚರಿಪಡಬೇಕು. 

ದೇವಾಲಯ ಪ್ರಾಕಾರದಲ್ಲಿ ಶಬರ ಶಂಕರ ವಿಳಾಸದ ಚಿತ್ರಗಳು ಕಣ್ಣಿಗೆ ಕಟ್ಟಿದಂತಿದೆ ಒಟ್ಟಾರೆ ಪಲ್ಲವ ಶಿಲ್ಪಕಲಾ ವೈಭವಕ್ಕೆ ಈ ದೇವಾಲಯ ಸಾಕ್ಷಿಯಾಗಿದೆ.  ಭಾರತದಲ್ಲಿ ಬೇರಾವ ದೇವಾಲಯದಲ್ಲಿಯೂ ಸಿಕ್ಕದ ಶಿವನ 64 ಕಲಾ ವೈಭವಯುತ ರೂಪವನ್ನು ಈ ದೇವಾಲಯದಲ್ಲಿ ಮಾತ್ರ ಕಾಣಬಹುದು. 

ಇನ್ನು ಈ ದೇವಾಲಯದಲ್ಲಿ ಕಂಬವೊಂದರ ಮೇಲೆ ಚಾಲುಕ್ಯ ಅರಸ 2ನೆಯ ವಿಕ್ರಮಾದಿತ್ಯ ಕಂಚಿಯನ್ನು ಗೆದ್ದಾಗ ಕೆತ್ತಿಸಿದ ಕನ್ನಡ ಶಾಸನ ಇರುವುದು ಗಮನಾರ್ಹ ಸಂಗತಿ.

-ರಾಘವೇಂದ್ರ ಅಡಿಗ ಎಚ್ಚೆನ್.
raghavendraadiga1000@gmail.com
Posted by: RHN | Source: Online Desk

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Topics : Kanchipuram, Kailasanathar temple, Pallavas architecture, Kamakshi Amman Temple, ಕಾಂಚೀಪುರ, ಕೈಲಾಸನಾಥ ದೇವಾಲಯ, ಪಲ್ಲವರ ವಾಸ್ತುಶಿಲ್ಪ, ಕಾಮಾಕ್ಷಿ ದೇವಾಲಯ

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

FIFA World Cup 2019
Advertisement
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS
Advertisement
Advertisement