Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Triple talaq

ತ್ರಿವಳಿ ತಲಾಖ್ ಶಿಕ್ಷಾರ್ಹ ಅಪರಾಧ: ಸುಗ್ರೀವಾಜ್ಞೆಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ

Can break your leg, says Babul Supriyo at event for differently abled

ನಿನ್ನ ಕಾಲು ಮುರಿದು, ವೀಲ್ ಚೇರ್ ಕೊಡುತ್ತೇನೆ: ಅಂಗವಿಕಲರ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವನ ದರ್ಪ!

Higher education minister G T Deve Gowda

ಇಲ್ಲಿ ಸಚಿವರದ್ದು ಏನೂ ಇಲ್ಲ ಕಾರುಬಾರು, ಅಧಿಕಾರಿಗಳದ್ದೇ ಎಲ್ಲ ದರ್ಬಾರು!

Cubbon Park police Station,

ಆಪರೇಷನ್ ಕಮಲ 'ಕಿಂಗ್ ಪಿನ್' ಮನೆ ಮೇಲೆ ಪೊಲೀಸರ ದಾಳಿ; ದಾಖಲೆ ವಶ

ಬೇಕಿದ್ರೆ ಶೂಟ್ ಮಾಡಿ, ಆದ್ರೆ ಸೇನಾ ಮಾಹಿತಿ ಕೇಳಬೇಡಿ: ಉಗ್ರರಿಂದ ಹತ್ಯೆಯಾದ ವೀರ ಯೋಧನ ಕೊನೆಯ ಮಾತು!

Amit Shah

ಗೋವಾ ಸರ್ಕಾರ ರಚನೆಗೆ ಕಾಂಗ್ರೆಸ್ ಕಸರತ್ತು: ಬಿಜೆಪಿ ಏನು ಮಾಡಲಿದೆ ಎಂಬುದು ಅಮಿತ್ ಶಾ ಗೆ ಮಾತ್ರ ಗೊತ್ತು!

If Muslims are unwanted, then there is no Hindutva: Mohan Bhagwat at RSS event

ಮುಸ್ಲಿಮರಿಗೆ ಇಲ್ಲಿ ಅವಕಾಶವ ಇಲ್ಲವಾದರೆ ಹಿಂದುತ್ವವೇ ಅಪೂರ್ಣ: ಮೋಹನ್ ಭಾಗವತ್

A still from kgf

ಯಶ್ ಅಭಿಮಾನಿಗಳಿಗೆ ಸಿಹಿಸುದ್ದಿ: ಪಂಚ ಭಾಷೆಗಳಲ್ಲಿ 'ಕೆಜಿಎಫ್' ನವೆಂಬರ್ ನಲ್ಲಿ ರಿಲೀಸ್!

Representational image

ಕಳ್ಳತನ ಮಾಡಿದ್ದ ಚಿನ್ನವನ್ನು ಖರೀದಿಸಿದ ಆರೋಪದ ಮೇಲೆ ಅಟ್ಟಿಕಾ ಗೋಲ್ಡ್ ಕಂಪೆನಿ ಮಾಲಿಕ ಬಂಧನ

Restrictions in Srinagar to prevent Muharram procession

ಮೊಹರಂ ಮೆರವಣಿಗೆಗೆ ಹಿನ್ನೆಲೆಯಲ್ಲಿ ಶ್ರೀನಗರದಲ್ಲಿ ನಿರ್ಬಂಧ ಹೇರಿಕೆ

Congress to meet CAG today over Rafale row

ರಾಫೆಲ್ ಹಗರಣ: ಸಿಎಜಿಗೆ ದೂರು ನೀಡಲು ಕಾಂಗ್ರೆಸ್ ಸಜ್ಜು

Christian Michel, AgustaWestland Middleman, To Be Extradited says Dubai Court

ಅಗಸ್ಟಾ ವೆಸ್ಟ್‌ಲ್ಯಾಂಡ್‌ ಹಗರಣ: ಮಧ್ಯವರ್ತಿ ಕ್ರಿಶ್ಚಿಯನ್‌ ಮೈಕಲ್‌ ಗಡಿಪಾರಿಗೆ ದುಬೈ ಕೋರ್ಟ್ ಆದೇಶ

Representational image

ದೆಹಲಿ ಮಾದರಿ ಶಾಲೆ ಕ್ರಮ ಅನುಸರಿಸಲು ರಾಜ್ಯ ಸರ್ಕಾರ ನಿರ್ಧಾರ

ಮುಖಪುಟ >> ಪ್ರವಾಸ-ವಾಹನ

ಪ್ರವಾಸಿಗರ ಕೈ ಬೀಸಿ ಕರೆಯುತ್ತಿದೆ 12 ವರ್ಷಗಳಿಗೊಮ್ಮೆ ಕಂಡುಬರುವ ನೀಲಕುರಿಂಜಿ ಹೂ

Kerala Tourism, Munnar gets ready for Neelakurinji - the flower that blooms once every 12 years

ಸಂಗ್ರಹ ಚಿತ್ರ

ತಿರುವನಂತಪುರ: ಕೇರಳ ಪ್ರವಾಸೋಧ್ಯಮ ಇಲಾಖೆ 12 ವರ್ಷಗಳಿಗೊಮ್ಮೆ ಕಂಡುಬರುವ ವಿಶೇಷ ನೀಲ ಕುರಿಂಜಿ ಹೂವಿಗೆ ಸ್ವಾಗತ ಕೋರಲು ಸಿದ್ಧತೆ ನಡೆಸಿಕೊಂಡಿದೆ.

ಸಾಮಾನ್ಯವಾಗಿ ಪಶ್ಚಿಮಘಟಗಳಲ್ಲಿ ಕಂಡುಬರುವ ಈ ವಿಶಿಷ್ಠ ನೀಲ ಕುರಿಂಜಿ ಹೂಗಳು ಇದೀಗ ಕೇರಳದ ಮುನ್ನಾರ್ ನಲ್ಲಿ ಕಂಡುಬಂದಿದ್ದು, ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ. ನೀಲಕುರಂಜಿಯು ಹೊರನೋಟಕ್ಕೆ ತೀರಾ ಸಾಮಾನ್ಯವಾದ ಸಣ್ಣ ಕುರುಚಲು ಸಸ್ಯ, 1300ರಿಂದ 2400 ಮೀಟರ್‌ ಎತ್ತರದ ಬೆಟ್ಟ ಶ್ರೇಣಿಗಳ ಕಣಿವೆಗಳಲ್ಲಿ ಇದು ಬೆಳೆಯುತ್ತದೆ. 30ರಿಂದ 60 ಸೆಂ.ಮೀ. ಎತ್ತರ ಬೆಳೆಯುವ ಈ ಪೊದರು ಸಸ್ಯವನ್ನು ವೈಜ್ಞಾನಿಕವಾಗಿ ಸ್ಟ್ರೋಬಿಲ್ಯಾಂಥಸ್‌ ಕುಂತಿಯಾನ ಎಂದು ಕರೆಯಲಾಗುತ್ತದೆ. ಅಂತೆಯೇ ಈ ವಿಶೇಷ ಸಸ್ಯವನ್ನು ಅಕಾಂಥೇಸೀ ಸಸ್ಯ ಕುಟುಂಬಕ್ಕೆ ಸೇರಿಸಲಾಗಿದೆ.

ಕುರಂಜಿ ಹೂವು 250 ಜಾತಿಗಳಲ್ಲಿ ಕಂಡುಬರುತ್ತವೆ. ಅವುಗಳಲ್ಲಿ 46 ಜಾತಿಯವು ಭಾರತದಲ್ಲಿ ಕಂಡು ಬರುತ್ತವೆ. ಸಾಮಾನ್ಯವಾಗಿ 12 ವರ್ಷಗಳಿಗೊಮ್ಮೆ ಅರಳುವ ಈ ಹೂವಿನ ಕೆಲವು ಜಾತಿಗಳು 12 ವರ್ಷಗಳ ಬದಲಿಗೆ 16 ವರ್ಷಗಳಿಗೊಮ್ಮೆ ಅರಳುತ್ತವೆ. ದೀರ್ಘ‌ ಕಾಲಕ್ಕೊಮ್ಮೆ ಅರಳುವ ಈ ತೆರನಾದ ಹೂವುಗಳನ್ನು "ಪಿಲಿಟೆಸಿಯಲ್ಸ್‌' ಎನ್ನುವರು. ಪ್ರಸ್ತುತ ಕೇರಳದ ಮುನ್ನಾರ್ ನಲ್ಲಿ ಈ ಹೂಗಳು ಕಂಡುಬಂದಿದ್ದು, ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಿದೆ.

ನೀಲಕುರಂಜಿ ಯೌವನದ ಪರಿಶುದ್ಧ ಪ್ರೇಮದ ಪ್ರತೀಕವೂ ಆಗಿದ್ದು, ತಮಿಳು ನಾಡಿನ ನೀಲಗಿರಿ, ಪಳನಿ, ಅಣ್ಣಾಮಲೈಗಳನ್ನು ಒಳಗೊಂಡಂತೆ ನೀಲ ಕುರಿಂಜ ಪ್ರದೇಶದ ಒಡೆಯನೇ ಮುರುಗ, ಬೆಟ್ಟಗಾಡಿನ ತರುಣಿ "ವಲ್ಲಿ'ಯನ್ನು ಮುರುಗ ವರಿಸಿದಾಗ ನೀಲಕುರಿಂಜಿಯ ಹಾರವನ್ನು ಮುರುಗ ಧರಿಸಿದ್ದನಂತೆ ಎಂಬ ಐತಿಹ್ಯವಿದೆ. ಕೊಡೈಕೆನಾಲ್‌ನಲ್ಲಿ ಮುರುಗನೇ ಆರಾಧ್ಯ ದೈವವಾದ "ಕುರಿಂಜಿ ಆಂಡವರ್‌' ದೇವಸ್ಥಾನವಿದೆ.

ಕರ್ನಾಟಕದಲ್ಲೂ ಕಂಡುಬರುವ ನೀಲ ಕುರಿಂಜಿ
ಇನ್ನು ಕೇರಳ ಮಾತ್ರವಲ್ಲದೇ ಪಶ್ಚಿಮಘಟ್ಟಗಳ ಭಾಗವಾಗಿರುವ ಕರ್ನಾಟಕದಲ್ಲೂ ಈ ವಿಶೇಷ ಹೂ ಕಂಡುಬರುತ್ತದೆ. ಬಳ್ಳಾರಿಯ ಸಂಡೂರಿನ ಪರ್ವತ ಶ್ರೇಣಿಯಲ್ಲಿ ಸೆಪ್ಟೆಂಬರ್ ನಲ್ಲಿ ಈ ನೀಲಿ ಪುಷ್ಪವು ಕಂಡುಬರುತ್ತದೆ. ಹೂವುಗಳು ಜೇನ್ನೊಣ, ದುಂಬಿಗಳನ್ನು ಆಕರ್ಷಿಸಿ ಪರಾಗಸ್ಪರ್ಶಗೊಂಡು ತದನಂತರ ಹೂಗಳು ಬಾಡಿ ನೆಲಕ್ಕೆ ಉರುಳುತ್ತವೆ. ಆಗ ತೆನೆಗಳಲ್ಲಿ ಬೀಜಗಳು ಫ‌ಲಿತಗೊಳ್ಳುತ್ತವೆ.  
Posted by: SVN | Source: The New Indian Express

ಕನ್ನಡ ಮ್ಯಾಟ್ರಿಮನಿಯಲ್ಲಿ
ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ -
ನೋಂದಣಿ ಉಚಿತ!

Topics : Western Ghats, Kerala Tourism, Munnar, Neelakurinji, Nilgiri Tahr, ಪಶ್ಚಿಮ ಘಟ್ಟಗಳು, ಕೇರಳ ಪ್ರವಾಸೋಧ್ಯಮ, ಮುನ್ನಾರ್, ನೀಲ ಕುರಿಂಜಿ, ನೀಲಗಿರಿ

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS