Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Inteligence agencies warn of infiltration bids in Jammu and Kashmir ahead of Republic Day

ಗಣರಾಜ್ಯೋತ್ಸವ ದಿನದಂದು ಉಗ್ರದಾಳಿಗೆ ಭಾರಿ ಸಂಚು: ಗುಪ್ತಚರ ಇಲಾಖೆ ಎಚ್ಚರಿಕೆ

President order disqualifying MLAs

ಶಾಸಕರನ್ನು ಅನರ್ಹಗೊಳಿಸುವ ರಾಷ್ಟ್ರಪತಿಗಳ ನಿರ್ಧಾರ ಪ್ರಜಾಪ್ರಭುತ್ವಕ್ಕೆ ಮಾರಕ: ಆಪ್

Protests erupt across Kerala as CM Pinarayi Vijayan mulls to withdraw vandalism cases against MLAs

ಶಾಸಕರ ವಿರುದ್ಧ ಪ್ರಕರಣ ಹಿಂಪಡೆಯಲು ಮುಂದಾದ ಕೇರಳ ಸರ್ಕಾರ, ವ್ಯಾಪಕ ಪ್ರತಿಭಟನೆ

Mayor of North Delhi Preeti Aggarwal

ದೆಹಲಿ ಕಾರ್ಖಾನೆ ಅಗ್ನಿ ದುರಂತ: ನಕಲಿ ವಿಡಿಯೋ ವೈರಲ್ ಆಗುತ್ತಿದೆ- ಮೇಯರ್ ಪ್ರೀತಿ ಅಗರ್'ವಾಲ್

Om Prakash Rawat

ಭಾರತದ ಮುಖ್ಯ ಚುನಾವಣಾ ಆಯುಕ್ತರಾಗಿ ಓಂ ಪ್ರಕಾಶ್ ರಾವತ್ ನೇಮಕ

Facebook

ಫೇಸ್ ಬುಕ್ ನಲ್ಲಿರುವ ಅಂಧ ನೌಕರನಿಂದ ಅಂಧರಿಗಾಗಿಯೇ ತಂತ್ರಜ್ಞಾನ ಅಭಿವೃದ್ಧಿ!

Vatal Nagaraj faces Kalasa Bhanduri Protester’s wrath Over Karnataka Bandh

'ಯಾರನ್ನು ಕೇಳಿ ಬಂದ್ ಗೆ ಕರೆ ನೀಡಿದ್ದೀರಿ': ವಾಟಾಳ್ ವಿರುದ್ಧ ಕಳಸಾ ಬಂಡೂರಿ ಹೋರಾಟಗಾರರ ಆಕ್ರೋಶ

Kabul Intercontinental hotel attack: 5 killed, 4 assailants neutralised in Afghanistan capital

ಕಾಬೂಲ್ ಹೋಟೆಲ್ ದಾಳಿ: 4 ಉಗ್ರರನ್ನು ಹೊಡೆದುರುಳಿಸಿದ ಸೇನೆ

Sushmita Dev (File Photo)

ಹರ್ಯಾಣ ಭಾರತದ ರೇಪ್ ರಾಜಧಾನಿ, ಸಿಎಂ ಖಟ್ಟರ್ ವಿರುದ್ಧ ಕಾಂಗ್ರೆಸ್ ವಾಗ್ದಾಳಿ

16 shops burnt after cylinder explosion by accidental fire in Koppal

ಕೊಪ್ಪಳ: ಆಕಸ್ಮಿಕ ಅಗ್ನಿ ಅನಾಹುತ, 16 ಅಂಗಡಿಗಳು ಭಸ್ಮ

Three dead in fire at fertilizer factory in Vadodara

ವಡೋದರ: ರಾಸಾಯನಿಕ ಕಾರ್ಖಾನೆಯಲ್ಲಿ ಬೆಂಕಿ ಅವಘಡ, ಮೂವರ ಸಾವು, 12 ಮಂದಿಗೆ ಗಾಯ

Rohan Bopanna

ಆಸ್ಟ್ರೇಲಿಯನ್ ಓಪನ್: ಮಿಶ್ರ ಡಬಲ್ಸ್ ನಲ್ಲಿ ಪ್ರಿ ಕ್ವಾರ್ಟರ್ ಸುತ್ತು ಪ್ರವೇಶಿಸಿದ ರೋಹನ್ ಬೋಪಣ್ಣ

Savamma Erappa Hongal serving the staff at a government school;

ಶಿಕ್ಷಕರಿಗೆ ಊಟ ಉಪಚಾರ ನೀಡಿ ಖುಷಿ ಕಾಣುತ್ತಿರುವ ಅಜ್ಜಿ ಸವಮ್ಮ

ಮುಖಪುಟ >> ಪ್ರವಾಸ-ವಾಹನ

ಬೆಂಗಳೂರು ನಗರದಲ್ಲಿರುವ ಪ್ರಸಿದ್ಧ ಶಿವನ ದೇವಾಲಯಗಳು

Kempfort Shiva Temple

ಕೆಂಪ್ ಫೋರ್ಟ್ ನಲ್ಲಿರುವ ಶಿವ ದೇವಾಲಯ

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ಆಧುನಿಕ ಕಟ್ಟಡಗಳಿಂದ ತುಂಬಿಹೋಗಿದೆ. ಇದರ ನಡುವೆಯೂ ಭಕ್ತರ ಮನಸ್ಸಿಗೆ ಮುದ ನೀಡುವ ಐತಿಹಾಸಿಕ ಮಹತ್ವವಿರುವ ಅನೇಕ ದೇವಸ್ಥಾನಗಳಿವೆ. ಭಕ್ತರು ತಮ್ಮ ಇಷ್ಟಾರ್ಥ ಸಿದ್ದಿಗಾಗಿ ಹರಕೆ ಕಟ್ಟಿಕೊಂಡು ತಮ್ಮ ಆರಾಧ್ಯನನ್ನು ಪೂಜೆ ಮಾಡುತ್ತಾರೆ. ನಗರದಲ್ಲಿರುವ ಹಲವು ಸುಪ್ರಸಿದ್ದ ಶಿವನ ದೇವಾಲಯಗಳ ವಿವರ ಇಲ್ಲಿದೆ.

ಕೆಂಪ್ ಫೋರ್ಟ:
ಕೆಂಪ್ ಫೋರ್ಟ್ ನಲ್ಲಿರುವ ಶಿವನ ದೇವಾಲಯ ಮತ್ತೊಂದು ಪ್ರಮುಖ ದೇಗುಲವಾಗಿದೆ,  ಇಲ್ಲಿ 65 ಅಡಿ ಎತ್ತರವಿರುವ ಶಿವನ ವಿಗ್ರಹವಿದೆ, ಓಲ್ಡ್ ಏರ್ ಪೋರ್ಟ್ ರಸ್ತೆಯಲ್ಲಿರುವ ಈ ದೇವಾಲಯದಲ್ಲಿ ಅತಿ ದೊಡ್ಡ ಗಣೇಶನ ವಿಗ್ರಹ ಕೂಡ ಇದೆ, ಶಿವ ಕೈಲಾಸದಲ್ಲಿರುವಂತೆ ಇಲ್ಲಿನ ವಿಗ್ರಹವನ್ನು ನೀರುಕೊಳದ ಮೇಲೆ ಪ್ರತಿಷ್ಠಾಪಿಸಲಾಗಿದೆ, ಬಿಳಿಯ ಮಾರ್ಬಲ್ ನಿಂದ ಈ ವಿಗ್ರಹ ಕೆತ್ತಲಾಗಿದೆ.

ಕಾಡು ಮಲ್ಲೇಶ್ವರ:

ಮಲ್ಲೇಶ್ವರದಲ್ಲಿರುವ ಪ್ರಮುಖ ಶಿವನ ದೇವಾಲಯ ಕಾಡು ಮಲ್ಲೇಶ್ವರ 17ನೇ ಶತಮಾನದಲ್ಲಿ ನಿರ್ಮಿತವಾಗಿರುವ ಈ ದೇವಾಲಯ ಶಿವನಿಗಾಗಿ ಅರ್ಪಿತವಾಗಿದೆ,  ಇದರ ಪಕ್ಕದಲ್ಲೇ ಮತ್ತೊಂದು ಪ್ರಮುಖ ಆಕರ್ಷಣೀಯ ಸ್ಥಳವಿದೆ, ಅದೇ ನಂದಿ ತೀರ್ಥ, ಇಲ್ಲಿ ನಂದಿಯ ಬಾಯಿಂದ ಬರುವ ನೀರು ಸತತವಾಗಿ ಹರಿದು ಬಂದು ಶಿವಲಿಂಗದ ಮೇಲೆ ಬೀಳುತ್ತದೆ. ಈ ನೀರು  ವೃಷಬಾವತಿ ನದಿಯಿಂದ ಬರುತ್ತದೆ ಎಂಬ ನಂಬಿಕೆಯಿದೆ.

ಗವಿ ಗಂಗಾಧರೇಶ್ವರ:

ಬೆಂಗಳೂರಿನ ಗವಿಪುರಂನಲ್ಲಿರುವ ಗವಿ ಗಂಗಾಧರೇಶ್ವರ ದೇವಾಲಯ ಕೆಲವೇ ಕೆಲವು ಪ್ರಾಚೀನ ಗುಹಾಂತರ ದೇವಾಲಯಗಳಲ್ಲೊಂದು.  ಬೃಹತ್ ಬಂಡೆಯೊಂದನ್ನು ಕೊರೆದು ಈ ದೇವಾಲಯ ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತದೆ. ಪ್ರತಿವರ್ಷ 'ಮಕರ ಸಂಕ್ರಾತಿಯ ದಿನ' ಸಂಜೆ ಸೂರ್ಯನ ಕಿರಣಗಳು ಲಿಂಗದ ಮುಂದಿರುವ ನಂದಿಯ ಕೊಂಬಿನಿಂದ ಹಾದು, ಶಿವಲಿಂಗವನ್ನು ಸ್ಪರ್ಶಿಸುತ್ತದೆ. ಈ ದೃಶ್ಯವನ್ನು ವೀಕ್ಷಿಸಲು ಸಾವಿರಾರು ಭಕ್ತರು ಬಹಳ ದೂರ ಪ್ರದೇಶಗಳಿಂದ ಬರುತ್ತಾರೆ. 

ಹಲಸೂರು ಸೋಮೇಶ್ವರ:

ಮತ್ತೊಂದು ಪ್ರಸಿದ್ದ ದೇವಾಲಯ ಹಲಸೂರು ಸೋಮೇಶ್ವರ, ಚೋಳರ ಕಾಲದಲ್ಲಿ ನಿರ್ಮಾಣವಾಗಿರುವ ಈ ದೇಗುಲ ನಗರದಲ್ಲಿರುವ ಅತಿ ಪುರಾತನ ದೇವಾಲಯವಾಗಿದೆ. ಈ ದೇವಾಲಯದಲ್ಲಿ ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾಗಿರುವ ಚೌಕಾಕಾರದ ಕಲ್ಯಾಣಿಯಿದೆ. ಇದು 1,250 ವರ್ಷ ಹಳೇಯದ್ದು ಎಂದು ಹೇಳಲಾಗಿದೆ.
Posted by: SD | Source: The New Indian Express

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು
ಆಯ್ಕೆ ಮಾಡಿ -
ನೋಂದಣಿ ಉಚಿತ!

Topics : Bengaluru, Kadu Malleshwara, Kempfort Shiva Temple, Halasuru Someshwara, ಬೆಂಗಳೂರು, ಕೆಂಪ್ ಫೋರ್ಟ್ ಶಿವ ದೇವಾಲಯ, ಕಾಡು ಮಲ್ಲೇಶ್ವರ, ಹಲಸೂರು ಸೋಮೇಶ್ವರ
English summary
For the devout Shiva bhakts, Bengaluru has many beautiful temples where the lord is worshipped. Here are some of the most famous that you can visit. The locality Malleswaram got its name from the Kadu Malleshwara Temple. It is a 17th century temple dedicated to Lord Shiva.

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS
Advertisement
Advertisement