Advertisement
ವಿಡಿಯೋ ಕುರಿತು : 4 ವರ್ಷದ ಪುಟ್ಟ ಪೋರನೊಬ್ಬ ರಗ್ಬಿ ಲೆಜೆಂಡ್ ಗಳೊಂದಿಗೆ ಸೆಣಸಿ ಗೆದ್ದಿದ್ದಾನೆ...ಆಶ್ಚರ್ಯವಾದರೂ ಇದು ಸತ್ಯ. ಕ್ವೀನ್ಸ್ ಲ್ಯಾಂಡ್ ನ ತವೂಂಬಾದಲ್ಲಿ ಕ್ವೀನ್ಸ್ ಲ್ಯಾಂಡ್ ಮತ್ತು ನ್ಯೂ ಸೌಥ್ ವೇಲ್ಸ್ ತಂಡಗಳ ನಡುವೆ ರಗ್ಬಿ ಪಂದ್ಯ ನಡೆಯುತ್ತಿತ್ತು. ಈ ವೇಳೆ ಪಂದ್ಯ ವೀಕ್ಷಿಸುತ್ತಿದ್ದ ಬಾಲಕ ಮೈದಾನದ ಆವರಣಕ್ಕೆ ಬಂದಿದ್ದಾನೆ. ಇದನ್ನು ಗಮನಿಸಿದ ನ್ಯೂಸೌಥ್ ವೇಲ್ಸ್ ತಂಡದ ಆಟಗಾರರು ಆತನ ಕೈಗೆ ಬಾಲ್ ನೀಡಿ ಆಟ ಆಡುವಂತೆ ಪ್ರೇರೇಪಿಸಿದ್ದಾರೆ. ಬಾಲಕನಿಗೆ ಎರಡೂ ತಂಡಗಳ ಆಟಗಾರರು ಪ್ರೋತ್ಸಾಹ ನೀಡುವ ಮೂಲಕ ಬಾಲಕನನ್ನು ಜಯಶೀಲರನ್ನಾಗಿ ಮಾಡಿದ್ದಾರೆ.
Advertisement
Advertisement