Advertisement
ವಿಡಿಯೋ ಕುರಿತು : ಇದೊಂದು ನೈಜ ಚಿತ್ರಣವಾಗಿದ್ದು, ಖ್ಯಾತ ಒಲಿಂಪಿಕ್ಸ್ ಓಟಗಾರ ಡೆರೆಕ್ ಓಟ ಚಾಲ್ತಿಯಲ್ಲಿರುವಂತೆಯೇ ಓಡುತ್ತಿದ್ದಾಗ ಸ್ನಾಯು ಸೆಳೆತಕ್ಕೆ ಸಿಲುಕು ಮೈದಾನದಲ್ಲಿಯೇ ಕುಸಿಯುತ್ತಾನೆ. ಆದರೆ ತನ್ನ ಅಷ್ಟೂ ವರ್ಷಗಳ ಕನಸಾದ ಒಲಿಂಪಿಕ್ಸ್ ಓಟವನ್ನು ಪೂರ್ಣಗೊಳಿಸಲೇಬೇಕು ಎಂಬ ಒಂದೇ ಕಾರಣದಿಂದ ನೋವಿನಿಂದಲೇ ಟ್ರ್ಯಾಕ್ ನಲ್ಲಿ ಓಡುತ್ತಿದ್ದಾಗ ಮಗನ ಸ್ಥಿತಿ ಕಂಡ ತಂದೆ ರಕ್ಷಣಾ ಸಿಬ್ಬಂದಿಗಳ ತಡೆಯನ್ನೂ ಲೆಕ್ಕಿಸದೇ ಮಗನ ಜೊತೆಗೂಡುತ್ತಾನೆ. ಅಲ್ಲದೇ ಮಗ ಓಟವನ್ನು ಪೂರ್ಣಗೊಳಿಸುವಲ್ಲಿ ನೆರವಾಗುವ ಮೂಲಕ ಮಗನ ಕನಸನ್ನು ನನಸಾಗಿಸುತ್ತಾನೆ.
Advertisement
Advertisement