Advertisement
ವಿಡಿಯೋ ಕುರಿತು : ಪೊಲೀಸ್ ಪೇದೆ ಹತ್ಯೆ ಮಾಡಿ ಜೈಲಿನಿಂದ ಪರಾರಿಯಾಗಿದ್ದ 8 ಮಂದಿ ಸಿಮಿ ಉಗ್ರರ ಪೊಲೀಸ್ ಎನ್ ಕೌಂಟರ್ ವಿಡಿಯೊವೊಂದು ವೈರಲ್ ಆಗಿ ಇದೀಗ ಚರ್ಚೆಗೆ ಗ್ರಾಸವಾಗಿದೆ. ಭೋಪಾಲ್ ಜೈಲಿನಿಂದ ಪರಾರಿಯಾಗಿದ್ದ ಉಗ್ರರನ್ನು ಈಟ್ ಖೇಡಿ ಎಂಬ ಗ್ರಾಮದ ಬಳಿ ಎನ್ ಕೌಂಟರ್ ಮಾಡಲಾಗಿತ್ತು. ಎನ್ ಕೌಂಟರ್ ಬಳಿಕ ಪೊಲೀಸ್ಸೋರ್ವ ಉಗ್ರನಿಗೆ ಗುಂಡು ಹೊಡೆಯುವುದು ಹಾಗೂ ಉಗ್ರನ ಬಳಿಯಿದ್ದ ಶಸ್ತ್ರಾಸ್ತ್ರವನ್ನು ವಶಕ್ಕೆ ಪಡೆದಿರುವುದು 59 ಸೆಕೆಂಡ್ ಗಳ ವಿಡಿಯೋ ಇದೀಗ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಇದು ವೈರಲ್ ವಿಡಿಯೋ ಆಗಿದ್ದು, ಅಧಿಕೃತವಾಗಿ ಇನ್ನೂ ದೃಢಪಟ್ಟಿಲ್ಲ.
Advertisement
Advertisement