Advertisement
ವಿಡಿಯೋ ಕುರಿತು : ಕನ್ನಡಿಗರು ಸತ್ಯರಾಜ್ ಮೇಲಿನ ಕೋಪವನ್ನು 'ಬಾಹುಬಲಿ' ಚಿತ್ರದ ಮೇಲೆ ತೋರಿಸುವುದು ಸರಿಯಲ್ಲ ಎಂದು ನಿರ್ದೇಶಕ ರಾಜಮೌಳಿಯವರು ಹೇಳಿದ್ದಾರೆ. ಸತ್ಯರಾಜ್ ಅವರು ನಟಿಸಿದ್ದಾರೆಂಬ ಮಾತ್ರಕ್ಕೆ ಬಾಹುಬಲಿ-2 ಪ್ರದರ್ಶನಕ್ಕೆ ತಡೆ ನೀಡುವುದು ಸರಿಯಲ್ಲ. ಸತ್ಯರಾಜ್ ಅವರು ಬಾಹುಬಲಿ-2 ಚಿತ್ರದ ನಿರ್ದೇಶಕ, ನಿರ್ಮಾಪಕಸ ಹೀರೋ ಅಲ್ಲ. ಅವರು ಈ ಚಿತ್ರದಲ್ಲಿ ನಟಿಸಿದರು. ಸಂಭಾವನೆ ಪಡೆದು ಹೊರಟು ಹೋದರು. ಹೀಗಾಗಿ ಬಾಹುಬಲಿ-2 ವಿರುದ್ಧ ಜನರು ಪ್ರತಿಭಟಿಸಿದರೆ ಅದರಿಂದ ಸತ್ಯರಾಜ್ ಅವರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಜನರು ಈ ವಿಷಯವನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.
Advertisement
Advertisement