Advertisement
ವಿಡಿಯೋ ಕುರಿತು : ಸಂಚಾರ ದಟ್ಟಣೆ ರಸ್ತೆಯಲ್ಲಿ ಜೀವದ ಹಂಗನ್ನು ತೊರೆದು ಟ್ರಾಫಿಕ್ ಪೊಲೀಸ್ ಮಗುವನ್ನು ರಕ್ಷಿಸಿ ನಿಜ ಜೀವನದಲ್ಲಿ ಹೀರೋ ಆಗಿದ್ದಾರೆ. ಚೀನಾದ ಗುಯಿಝೌ ಪ್ರಾಂತ್ಯದಲ್ಲಿ ಪೇದೆಯೊಬ್ಬರು ಟ್ರಾಫಿಕ್ ನಿಯಂತ್ರಣ ಕೆಲಸದಲ್ಲಿ ತೊಡಗಿದ್ದರು.ಈ ವೇಳೆ ವ್ಯಕ್ತಿಯೊಬ್ಬ ತನ್ನ ಸ್ಕೂಟಿಯ ಮುಂದುಗಡೆ ಮಗುವನ್ನು ನಿಲ್ಲಿಸಿಕೊಂಡು ಕರೆತರುತ್ತಿದ್ದ. ಸಿಗ್ನಲ್ ಬಿದ್ದಿದ್ದರಿಂದ ವ್ಯಕ್ತಿ ಬೈಕ್ ನಿಲ್ಲಿಸಿದ ಕೂಡಲೇ ಬೈಕ್ ನಲ್ಲಿದ್ದ ಮಗು ಇಳಿದು ರಸ್ತೆ ಮಧ್ಯಕ್ಕೆ ಓಡಿ ಬಂದಿತು. ಈ ವೇಳೆ ಅಲ್ಲೆ ರಸ್ತೆ ಬದಿಯಿದ್ದ ಟ್ರಾಫಿಕ್ ಪೊಲೀಸ್ ಕೂಡಲೇ ಅಪಾಯವನ್ನು ಗಮನಿಸಿ ಓಡಿ ಬಂದು ಮಗುವನ್ನು ಎತ್ತಿಕೊಂಡು ರಕ್ಷಿಸಿದ್ದಾರೆ.
Advertisement
Advertisement