Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Sarveswara Rao

ಆಂಧ್ರಪ್ರದೇಶ: ಇಬ್ಬರು ಟಿಡಿಪಿ ನಾಯಕರನ್ನು ಗುಂಡಿಕ್ಕಿ ಹತ್ಯೆ ಮಾಡಿದ ಮಹಿಳಾ ಮಾವೋವಾದಿಗಳು!

Team India-Pakistan

ಪಾಕ್-ಭಾರತ ಹಣಾಹಣಿ, ಪ್ರತಿಷ್ಠಿತ ಪಂದ್ಯದಲ್ಲಿ ಗೆಲ್ಲೊರ್ಯಾರು? ಟಾಸ್ ಗೆದ್ದ ಪಾಕ್ ಬ್ಯಾಟಿಂಗ್ ಆಯ್ಕೆ!

Duniya Vijay-Maruthi Gowda

ದುನಿಯಾ ವಿಜಯ್ ಹಲ್ಲೆಯ ಭಯಾನಕ ಕ್ಷಣಗಳನ್ನು ಬಿಚ್ಚಿಟ್ಟ ಗಾಯಾಳು ಮಾರುತಿ ಗೌಡ!

ಸಂಗ್ರಹ ಚಿತ್ರ

ಪಾಕ್ ವಿರುದ್ಧದ ಇಂದಿನ ಪಂದ್ಯದಲ್ಲಿ ಟೀಂ ಇಂಡಿಯಾ ಪರ ದಾಖಲಾಗುವ 4 ಐತಿಹಾಸಿಕ ದಾಖಲೆಗಳು ಯಾವುವು ಗೊತ್ತ?

Arun Jaitley

ರಾಹುಲ್ ಗಾಂಧಿ ಟ್ವೀಟ್ , ಫ್ರಾಂಕೊಯಿಸ್ ಹೊಲಾಂಡ್ ಹೇಳಿಕೆ ಸಂಘಟಿತ ಪಿತೂರಿಯೇ?; ಅರುಣ್ ಜೇಟ್ಲಿ ಸಂದೇಹ

ಸ್ಟಾಲಿನ್

ಎಐಎಡಿಎಂಕೆ ವಿರುದ್ಧ ಅ. 3,4ರಂದು ರಾಜ್ಯಾದ್ಯಂತ ಬೃಹತ್ ಪ್ರತಿಭಟನೆಗೆ ಡಿಎಂಕೆ ಕರೆ!

File photo

ಯುದ್ಧಕ್ಕೆ ಸಿದ್ಧ, ಆದರೂ ಜನರ ಹಿತಾಸಕ್ತಿಗಾಗಿ ಶಾಂತಿ ಮಾರ್ಗ ಅನುಸರಿಸುತ್ತೇವೆ: ರಾವತ್ ಹೇಳಿಕೆಗೆ ಪಾಕಿಸ್ತಾನ

Filmmaker Kalpana Lajmi, Director Of Acclaimed Film

ಖ್ಯಾತ ಚಲನಚಿತ್ರ ನಿರ್ದೇಶಕಿ ಕಲ್ಪನಾ ಲಜ್ಮಿ ನಿಧನ

PM Narendra Modi inaugarated health programme

ವಿಶ್ವದ ಅತಿದೊಡ್ಡ ಆರೋಗ್ಯ ಸೇವೆ 'ಆಯುಷ್ಮಾನ್ ಭಾರತ್'ಗೆ ಪ್ರಧಾನಿ ಮೋದಿ ಚಾಲನೆ

Duniya vijay, Panipuri Kitty

ಪೊಲೀಸರ ಮುಂದೆ 'ಕರಿ ಚಿರತೆ' ದುನಿಯಾ ವಿಜಯ್‌ಗೆ ಡಿಚ್ಚಿ ಹೊಡೆದ ಪಾನಿಪುರಿ ಕಿಟ್ಟಿ!

Bengaluru: High Grounds Police Arrests Actor Duniya vijay Over Kidnap And Assault case

ಮಧ್ಯರಾತ್ರಿ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಹೈಡ್ರಾಮಾ, ನಟ ದುನಿಯಾ ವಿಜಿ ಬಂಧನ

America president Donald Trump

ಸರ್ಕಾರಿ ಸೌಲಭ್ಯ ಪಡೆಯುವ ವಲಸಿಗರಿಗೆ ಗ್ರೀನ್ ಕಾರ್ಡು ನಕಾರ; ಅಮೆರಿಕಾ ಸರ್ಕಾರ ಕಾನೂನು ಜಾರಿ?

Fuel prices up again: Check out prices for petrol and diesel in major cities

ತೈಲ ಬೆಲೆ ಮತ್ತೆ ಹೆಚ್ಚಳ: ಯಾವ ನಗರದಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟು?

ಮುಖಪುಟ >> ಅಂತಾರಾಷ್ಟ್ರೀಯ

ಇನ್ನು ಮುಂದೆ ಭಾರತ, ಚೀನಾಕ್ಕೆ ಸಬ್ಸಿಡಿ ಇಲ್ಲ, ಅವು ಅಭಿವೃದ್ಧಿ ಹೊಂದುತ್ತಿರುವ ದೇಶಗಳು: ಡೊನಾಲ್ಡ್ ಟ್ರಂಪ್

Donald Trump

ಡೊನಾಲ್ಡ್ ಟ್ರಂಪ್

ಚಿಕಾಗೊ: ಅಮೆರಿಕಾವು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರವೆಂದು ಅಲ್ಲಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪರಿಗಣಿಸುವುದರಿಂದ ಅದು ಇನ್ನಷ್ಟು ವೇಗವಾಗಿ ಅಭಿವೃದ್ಧಿ ಹೊಂದಲು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಾದ ಭಾರತ ಮತ್ತು ಚೀನಾಕ್ಕೆ ಅದು ನೀಡುತ್ತಿದ್ದ ಸಬ್ಸಿಡಿಗಳನ್ನು ನಿಲ್ಲಿಸಲು ಮುಂದಾಗಿದೆ.

ಉತ್ತರ ಡಕೊಟಾದ ಫರ್ಗೊ ನಗರದಲ್ಲಿ ಹಣ ಸಂಗ್ರಹ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಚೀನಾ ದೇಶವು ಅತಿ ಪ್ರಬಲ ಆರ್ಥಿಕ ರಾಷ್ಟ್ರವಾಗಿ ಬೆಳೆಯಲು ವಿಶ್ವ ವ್ಯಾಪಾರ ಸಂಘಟನೆ ಅನುಮತಿ ನೀಡಿದೆ ಎಂದು ಆರೋಪಿಸಿದ್ದಾರೆ.

ಕೆಲವು ದೇಶಗಳನ್ನು ನಾವು ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕ ರಾಷ್ಟ್ರವೆಂದು ಪರಿಗಣಿಸುತ್ತೇವೆ. ಇನ್ನೂ ಪ್ರವರ್ಧಮಾನಕ್ಕೆ ಬಾರದಿರುವ ಕೆಲವು ದೇಶಗಳಿಗೆ ನಾವು ಸಬ್ಸಿಡಿಗಳನ್ನು ನೀಡುತ್ತೇವೆ. ಇಲ್ಲಿ ಇಡೀ ವಿಷಯ ತುಂಬಾ ಆಸಕ್ತಿಕರವಾಗಿದೆ. ಭಾರತ, ಚೀನಾ ಮೊದಲಾದ ದೇಶಗಳು ಅಭಿವೃದ್ಧಿ ಹೊಂದುತ್ತಿರುವ ದೇಶಗಳಾಗಿವೆ ಎಂದು ಡೊನಾಲ್ಡ್ ಟ್ರಂಪ್ ಹೇಳಿದರು.

ನಾವು ಅಭಿವೃದ್ಧಿ ಹೊಂದಿದ ದೇಶಗಳು ಎಂದು ಈ ದೇಶಗಳು ಹೇಳಿಕೊಳ್ಳುತ್ತಿದ್ದು ಇನ್ನೊಂದು ಕಡೆ ಸಬ್ಸಿಡಿಗಳನ್ನು ಪಡೆಯುತ್ತಿದ್ದಾರೆ. ಅವರಿಗೆ ನಾವು ಹಣ ನೀಡಬೇಕು. ಈ ಇಡೀ ವಿಷಯಗಳನ್ನು ನೋಡಿದರೆ ತುಂಬಾ ಆಸಕ್ತಿಕರವಾಗಿದೆ. ಮುಂದಿನ ದಿನಗಳಲ್ಲಿ ನಾವು ಸಬ್ಸಿಡಿಗಳನ್ನು ನಿಲ್ಲಿಸುತ್ತೇವೆ. ನಾವು ನಿಲ್ಲಿಸಿದ್ದೇವೆ, ನಾವು ಕೂಡ ಅಭಿವೃದ್ಧಿ ಹೊಂದಿದ ದೇಶದವರಾಗಿದ್ದೇವೆ, ನನಗೆ ತಿಳಿದಿರುವ ಮಟ್ಟಿಗೆ ನಾವು ಅಭಿವೃದ್ಧಿ ಪಡೆದ ದೇಶದವರು. ಹಿಂದೆಂದಿಗಿಂತಲೂ ಹೆಚ್ಚು ನಾವು ಅಭಿವೃದ್ಧಿ ಹೊಂದಬೇಕಾಗಿದೆ ಎಂದು ಟ್ರಂಪ್ ಹೇಳಿದಾಗ ಪ್ರೇಕ್ಷಕರಿಂದ ಕರತಾಡನ ಕೇಳಿಬಂತು.

ವಿಶ್ವ ವ್ಯಾಪಾರ ಸಂಘಟನೆ ಮೇಲೆ ವಾಗ್ದಾಳಿ ನಡೆಸಿದ ಅವರು, ವಿಶ್ವ ವ್ಯಾಪಾರ ಸಂಘಟನೆ ಎಲ್ಲದಕ್ಕಿಂತಲೂ ಕೆಟ್ಟದು. ಅನೇಕರಿಗೆ ಅದೇನೆಂದು ಗೊತ್ತಿಲ್ಲ. ಅದು ಚೀನಾವನ್ನು ಪ್ರಬಲ ರಾಷ್ಟ್ರ ಮಾಡಲು ಬಿಟ್ಟಿದೆ ಎಂದು ಆರೋಪಿಸಿದರು.

ಅಮೆರಿಕಾ ಮತ್ತು ಚೀನಾ ಮಧ್ಯೆ ವ್ಯಾಪಾರ ಕೊರತೆಯಿಂದಾಗಿ ವಿಶ್ವದ ಎರಡು ಪ್ರಬಲ ಆರ್ಥಿಕ ರಾಷ್ಟ್ರಗಳ ನಡುವೆ ದರ ಯುದ್ಧ ನಡೆದಿದೆ ಎಂದರು. ನಾನು ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರ ಅತಿದೊಡ್ಡ ಅಭಿಮಾನಿ, ಆದರೆ ವ್ಯವಹಾರ ವಿಷಯದಲ್ಲಿ ಸರಿಯಾಗಿರಬೇಕೆಂದು ನಾನು ಅವರಿಗೆ ಹೇಳಿದ್ದೇನೆ ಎಂದರು.

ಹಲವು ವರ್ಷಗಳಿಂದ ಅಮೆರಿಕಾ ಬೇರೆ ದೇಶಗಳನ್ನು ಕಾಪಾಡುತ್ತಾ ಬಂದಿದೆ. ಅವರು ಸಂಪತ್ತು ಮಾಡಿಕೊಂಡಿದ್ದಾರೆ. ಆ ರಾಷ್ಟ್ರಗಳಿಗೆ ಹೆಚ್ಚಿನ ಮಿಲಿಟರಿ ವೆಚ್ಚವಿಲ್ಲ. ವಿಶ್ವದಲ್ಲಿ ಅತಿ ಹೆಚ್ಚು ಮಿಲಿಟರಿ ವೆಚ್ಚ ಮಾಡುತ್ತಿರುವುದು ನಾವು. ಅದರಲ್ಲಿ ಬಹುತೇಕ ಪಾಲು ಬೇರೆ ದೇಶಗಳನ್ನು ರಕ್ಷಿಸಲು ಹೋಗುತ್ತದೆ. ಆದರೆ ಅವರಲ್ಲಿ ಕೆಲವರು ನಮ್ಮನ್ನು ಇಷ್ಟಪಡುವುದು ಕೂಡ ಇಲ್ಲ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

Posted by: SUD | Source: PTI

ಕನ್ನಡ ಮ್ಯಾಟ್ರಿಮನಿಯಲ್ಲಿ
ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ -
ನೋಂದಣಿ ಉಚಿತ!

Topics : Donald Trump, India, China, Subsidy, ಡೊನಾಲ್ಡ್ ಟ್ರಂಪ್, ಭಾರತ, ಚೀನಾ, ಸಬ್ಸಿಡಿ

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS