Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Union minister Ananth Kumar Hegde

ಶಿಷ್ಟಾಚಾರಕ್ಕೆ ಹೆಸರು ಹಾಕಿದರೆ, ವೇದಿಕೆಯಲ್ಲೇ ಟಿಪ್ಪು ಇತಿಹಾಸ ಬಿಚ್ಚಿಡುತ್ತೇನೆ: ಹೆಗ್ಡೆ ಎಚ್ಚರಿಕೆ

India

ಏಷ್ಯಾ ಕಪ್ ಟೂರ್ನಿ: ಬದ್ಧವೈರಿ ಪಾಕ್ ವಿರುದ್ಧ ಗೆದ್ದ ಭಾರತ ಫೈನಲ್‌ಗೆ ಲಗ್ಗೆ

Opposing the Tippu Jayanthi celebration is not correct says HD Devegowda

25 ಕೋಟಿ ಮುಸ್ಲಿಮರನ್ನು ದೇಶದಿಂದ ಹೊರಹಾಕಬೇಕೆ?: ಟಿಪ್ಪು ಜಯಂತಿ ಪರ ದೇವೇಗೌಡ ಬ್ಯಾಟಿಂಗ್

RBI says linking Aadhaar number to bank accounts mandatory

ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡುವುದು ಕಡ್ಡಾಯ: ಆರ್‏ಬಿಐ ಸ್ಪಷ್ಟನೆ

Narendra Modi

ಪಾಕ್ ಜತೆಗಿನ ಶಾಂತಿಗಾಗಿ ಪ್ರಧಾನಿ ಮೋದಿ ಭಾರತದ ಭದ್ರತೆ ಬಲಿಗೊಡುವುದಿಲ್ಲ: ಅಮೆರಿಕ

Man claiming to be Salman Khan

'ಸಲ್ಮಾನ್ ಖಾನ್ ಬಾಡಿಗಾರ್ಡ್ ನಿಂದ ಮಹಿಳೆಗೆ ಗ್ಯಾಂಗ್ ರೇಪ್ ಬೆದರಿಕೆ'

Virat Kohli

ಮುಂಬರುವ ಸಾಗರೋತ್ತರ ಪ್ರವಾಸಗಳಿಗಾಗಿ ತಂಡದ ಪ್ರಮುಖ ಬ್ಯಾಟ್ಸ್‌ಮನ್‌ಗಳಿಗೆ ವಿಶ್ರಾಂತಿ: ಕೊಹ್ಲಿ

Gujarat Patidar agitation leader Alpesh Thakore to join Congress

ಗುಜರಾತ್ ಪಟಿದಾರ್ ಆಂದೋಲನದ ನಾಯಕ ಅಲ್ಪೇಶ್ ಥಾಕೂರ್ ಕಾಂಗ್ರೆಸ್ ಸೇರ್ಪಡೆ

Anil Kumbl, R Ashwin

ಟೆಸ್ಟ್‌ನಲ್ಲಿ ಅನಿಲ್ ಕುಂಬ್ಳೆ ದಾಖಲೆ ಮುರಿದರೇ ಅಂದೇ ವಿದಾಯ ಘೋಷಿಸುತ್ತೇನೆ: ಅಶ್ವಿನ್

Mersal

ಮೆರ್ಸಲ್ ಚಿತ್ರದ ವಿವಾದಾತ್ಮಕ ಜಿಎಸ್ ಟಿ ಸಂಭಾಷಣೆಗೆ ಕತ್ತರಿ ಹಾಕಲು ಸಿದ್ಧ: ನಿರ್ಮಾಪಕರು

Terrorists frustrated, situation improving in Kashmir: Army chief

ಕಾಶ್ಮೀರದಲ್ಲಿ ಪರಿಸ್ಥಿತಿ ಸುಧಾರಿಸುತ್ತಿರುವುದು ಉಗ್ರರಿಗೆ ಸಹಿಸಲಾಗುತ್ತಿಲ್ಲ: ಬಿಪಿನ್ ರಾವತ್

Sarfraz Ahmed

ಫಿಕ್ಸಿಂಗ್‌ಗಾಗಿ ಪಾಕಿಸ್ತಾನ ನಾಯಕ ಸರ್ಫರಾಜ್‌ಗೆ ಬುಕ್ಕಿಗಳಿಂದ ಭರ್ಜರಿ ಆಫರ್!

BS Yeddyurappa

ಕೆಪಿಸಿಎಲ್ ಕಲ್ಲಿದ್ದಲು ಗಣಿಗಾರಿಕೆ ಅಕ್ರಮ: ಸಿಎಂ ಸಿದ್ದು ವಿರುದ್ಧ ಬಿಎಸ್‌ವೈ ದಾಖಲೆ ಬಿಡುಗಡೆ

ಮುಖಪುಟ >> ಅಂತಾರಾಷ್ಟ್ರೀಯ

ಪಾಕಿಸ್ತಾನ ಕ್ಷಿಪಣಿ ಪರೀಕ್ಷೆಯನ್ನೇ ನಡೆಸಿಲ್ಲ: ನೌಕಾದಳದ ಮಾಹಿತಿ

ನಿನ್ನೆ ಪಾಕಿಸ್ತಾನ ನಡೆಸಿದ್ದ ಬಾಬುರ್ ಕ್ಷಿಪಣಿ ಪರೀಕ್ಷೆ ಯಶಸ್ವಿ ಎಂದು ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು
Pakistan

ಸಂಗ್ರಹ ಚಿತ್ರ

ಇಸ್ಲಾಮಾಬಾದ್: ಮಂಗಳವಾರ ಪಾಕಿಸ್ತಾನ ಸಬ್ ಮೆರಿನ್ ನಿಂದ ಕ್ಷಿಪಣಿಯನ್ನು ಯಶಸ್ವಿಯಾಗಿ ಉಡಾವಣೆ ಮಾಡಿತ್ತು ಎಂಬ ಸುದ್ದಿ ವಿಶ್ವಾದ್ಯಂತ ವ್ಯಾಪಕವಾಗಿ ಹರಿದಾಡಿತ್ತು. ಆದರೆ ಈ ಸುದ್ದಿಯೇ ಸುಳ್ಳು ಎಂದು ಹೇಳಲಾಗುತ್ತಿದೆ.

ಖಾಸಗಿ ಸುದ್ದಿವಾಹಿನಿಯೊಂದು ವರದಿ ಮಾಡಿರುವಂತೆ ಪಾಕಿಸ್ತಾನದ ಕರಾವಳಿ ತೀರದ ಮೇಲೆ ಕಣ್ಣಿಟ್ಟಿರುವ ಭಾರತೀಯ ನೌಕಾಪಡೆಗಳು ಈ ಮಾಹಿತಿಯನ್ನು ಅಲ್ಲಗಳೆದಿದ್ದು, ಅಸಲಿಗೆ ಪಾಕಿಸ್ತಾನದ ವಲಯದಿಂದ ಯಾವುದೇ ಕ್ಷಿಪಣಿಗಳು ಹಾರಿಲ್ಲ ಎಂದು ತಿಳಿಸಿವೆ ಎಂದು ವರದಿ ಮಾಡಿದೆ. ನಿನ್ನೆಯಷ್ಟೇ ಪಾಕಿಸ್ತಾನ ತನ್ನ ಕರಾವಳಿ ತೀರದಿಂದ ಸಬ್ ಮೆರಿನ್ ಮೂಲಕ ಅಣ್ವಸ್ತ್ರ ಸಾಮರ್ಥ್ಯದ ಬಾಬುರ್-3 ಕ್ಷಿಪಣಿಯನ್ನು ಯಶಸ್ವಿಯಾಗಿ ಉಡಾಯಿಸಿದೆ. ಆ ಮೂಲಕ 'ಪರಮಾಣು ಟ್ರಯಾಡ್' (ಸಮುದ್ರ, ಭೂಮಿ ಮತ್ತು ಆಗಸದಿಂದ ಎದುರಾಗುವ ಪರಮಾಣು ದಾಳಿ ಎದುರಿಸುವ) ಸಾಮರ್ಥ್ಯವನ್ನು ಹೊಂದಿರುವ ರಾಷ್ಟ್ರಗಳ ಪಟ್ಟಿಗೆ ಸೇರ್ಪಡೆಯಾಗಿದೆ ಎಂದು ಸುದ್ದಿಗಳು ಪ್ರಸಾರವಾಗಿತ್ತು.

ಆದರೆ ಈ ಸುದ್ದಿಗಳನ್ನು ಭಾರತೀಯ ಸೇನೆ ಅಲ್ಲಗಳೆದಿದ್ದು, ಪಾಕಿಸ್ತಾನದ ಕರಾವಳಿ ತೀರದಲ್ಲಿ ಯಾವುದೇ ಕ್ಷಿಪಣಿ ಪರೀಕ್ಷೆ ನಡೆದಿಲ್ಲ. ಈ ಸಂಬಂಧ ಬಿಡುಗಡೆಯಾಗಿದ್ದ ವಿಡಿಯೋ ಬಹುಶಃ ಸುಳ್ಳಾಗಿರಬಹುದು ಎಂದು ಸುದ್ದಿ ಮಾಧ್ಯಮವೊಂದಕ್ಕೆ ಮಾಹಿತಿ ನೀಡಿದೆ. ವಾಹಿನಿಯ ವರದಿಯಲ್ಲಿರುವ ಮಾಹಿತಿಗಳಂತೆ, ನೌಕಾಪಡೆ ಕ್ಷಿಪಣಿ ಪರೀಕ್ಷೆಯನ್ನು ಅಲ್ಲಗಳೆದಿದೆ. ಸೇನಾಧಿಕಾರಿಗಳು ಅಭಿಪ್ರಾಯಪಟ್ಟಿರುವಂತೆ ವಿಡಿಯೋವನ್ನು ಸೂಕ್ಷ್ಮವಾಗಿ ಪರಿಶೀಲಿಸಿದರೆ ಒಂದಲ್ಲ ಬದಲಿಗೆ ಎರಡು ಕ್ಷಿಪಣಿಗಳು ಕಾಣಸಿಗುತ್ತವೆ. ನೀರಿನಿಂದ ಸಿಡಿದ ಒಂದು ಕ್ಷಿಪಣಿ ಬೂದು ಬಣ್ಣದ ಕ್ಷಿಪಣಿ ಮತ್ತೊಂದು ಕಿತ್ತಳೆ ಬಣ್ಣದ ಕ್ಷಿಪಣಿಯಾಗಿದೆ. ಇದು ಕ್ಷಿಪಣಿ ಪರೀಕ್ಷೆ ಮೇಲೆ ಅನುಮಾನ ಮೂಡುವಂತಾಗಿದೆ ಎಂದು ಹೇಳಲಾಗುತ್ತಿದೆ.

ಮತ್ತೊಂದೆಡೆ ಪಾಕಿಸ್ತಾನ ತಾನು ಅಗೋಸ್ಟಾ90 ಬಿ ಸಬ್ ಮೆರಿನ್ ನಿಂದ ಅಣ್ವಸ್ತ್ರ ಸಿಡಿತಲೆಯ ಕ್ಷಿಪಣಿ ಪರೀಕ್ಷೆ ನಡೆಸಿರುವುದಾಗಿ ಹೇಳಿಕೊಳ್ಳುತ್ತಿದ್ದರೂ, ಭಾರತೀಯ ನೌಕಾದಳದ ಅಧಿಕಾರಿಗಳು ಮಾತ್ರ ಇದನ್ನು ನಂಬುತ್ತಿಲ್ಲ. ಕರಾವಳಿ ತೀರದಲ್ಲಿ ಅಂತಹ ಯಾವುದೇ ಜಲಾಂತರ್ಗಾಮಿಗಳ ಕಾರ್ಯಚಟುವಟಿಕೆ ಕಂಡುಬಂದಿಲ್ಲ. ಹೀಗಾಗಿ ಪಾಕಿಸ್ತಾನದ ಕ್ಷಿಪಣಿ ಪರೀಕ್ಷೆಯೇ ಸುಳ್ಳಾಗಿರಬಹುದು ಎಂದು ಅಭಿಪ್ರಾಯಪಟ್ಟಿದೆ.

ಆದರೂ ಈ ಸುದ್ದಿಯನ್ನು ಗಂಭೀರವಾಗಿ ಪರಿಗಣಿಸಿರುವ ನೌಕಾಪಡೆಗಳ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ಸಂಬಂಧಿಸಿದ್ದು...
Posted by: SVN | Source: Online Desk

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು
ಆಯ್ಕೆ ಮಾಡಿ -
ಉಚಿತ ನೋಂದಣಿ !

Topics : New Delhi, Pakistan, Babur-3, cruise missile, Mislead News, ನವದೆಹಲಿ, ಪಾಕಿಸ್ತಾನ, ಬಾಬರ್-3, ಕ್ಷಿಪಣಿ, ಸುಳ್ಳು ಸುದ್ದಿ
English summary
A day after Pakistan tweeted a video of what it claimed was the test launch of its Babur missile, claiming a giant leap in its naval nuclear programme, top sources have said that the video may be fudged. The video showed the missile exiting the water after apparently being launched from a submarine, cruising towards and then striking its target.

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Kannadaprabha.com App for Android Kannadaprabha.com App for IOS
Advertisement
Advertisement