ಮಹಿಳಾ ವಿಶ್ವಕಪ್ 2025 ಗೆದ್ದ ನಂತರ ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಗೆ ಮತ್ತೊಂದು ಜಾಕ್ ಪಾಟ್ ಹೊಡೆದಿದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ ನ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ. ಕೌರ್ ತನ್ನ ಮೊದಲ ಮಹಿಳಾ ಬ್ರಾಂಡ್ ಅಂಬಾಸಿಡರ್ ಎಂದು ಬ್ಯಾಂಕ್ ಹೇಳಿಕೆಯಲ್ಲಿ ತಿಳಿಸಿದೆ. ಅವರ ಹೆಸರು ಮತ್ತು ಸಂಖ್ಯೆಯನ್ನು ಹೊಂದಿರುವ ಫ್ರೇಮ್ ಮಾಡಿದ PNB ಜೆರ್ಸಿ ಮತ್ತು ಬ್ಯಾಟ್ ನ್ನು ನೀಡಲಾಗಿದೆ.
ಈ ಕುರಿತು ಪ್ರತಿಕ್ರಿಸಿರುವ ಹರ್ಮನ್ ಪ್ರೀತ್ ಕೌರ್, "ಇದು ನಿಜಕ್ಕೂ ಕನಸು ಅನಿಸುತ್ತಿದೆ. ನಾನು 18 ವರ್ಷ ವಯಸ್ಸಿನಿಂದಲೂ ಪಂಜಾಬ್ ನ್ಯಾಷನಲ್ ಬ್ಯಾಂಕ್ ನೊಂದಿಗೆ ಬ್ಯಾಂಕಿಂಗ್ ವ್ಯವಹಾರ ಮಾಡುತ್ತಿದ್ದೇನೆ. ನನ್ನ ಮೊದಲ ಖಾತೆ ಪಿಎನ್‌ಬಿ ಮೋಗಾ ಶಾಖೆಯಲ್ಲಿತ್ತು. ಇಂದು ಬ್ಯಾಂಕಿನ ಬ್ರಾಂಡ್ ಅಂಬಾಸಿಡರ್ ಆಗಿ ಇಲ್ಲಿ ನಿಲ್ಲುವುದು ಅತ್ಯಂತ ಗೌರವ ತಂದುಕೊಟ್ಟಿದೆ ಎಂದಿದ್ದಾರೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ ಭಾರತೀಯರ ತಲೆಮಾರುಗಳ ಆರ್ಥಿಕ ಆಕಾಂಕ್ಷೆಗಳನ್ನು ಅರಿತುಕೊಳ್ಳುವಲ್ಲಿ ಬೆಂಬಲ ನೀಡಿದೆ ಮತ್ತು ಜನರನ್ನು, ವಿಶೇಷವಾಗಿ ಮಹಿಳೆಯರು ಮತ್ತು ಯುವ ಪ್ರತಿಭೆಗಳನ್ನು ಸಬಲೀಕರಣಗೊಳಿಸುವ ಅದರ ಬದ್ಧತೆಯು ನನ್ನಲ್ಲಿ ಹೆಚ್ಚಿನ ಗೌರವ ಮೂಡಿಸಿದೆ ಎಂದು ಹೇಳಿದ್ದಾರೆ.
ದೇಶಾದ್ಯಂತ ಇನ್ನೂ ಅನೇಕ ಚಾಂಪಿಯನ್‌ಗಳನ್ನು ಪ್ರೇರೇಪಿಸಲು ಒಟ್ಟಾಗಿ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ. ಪಿಎನ್‌ಬಿ ಮೆಟಲ್ ಕ್ರೆಡಿಟ್ ಕಾರ್ಡ್ ಲಕ್ಸುರಾದ ಮೊದಲ ಗ್ರಾಹಕಿಯಾಗಲು ನನಗೆ ಸಂತೋಷವಾಗಿದೆ" ಎಂದು ಅವರು ತಿಳಿಸಿದ್ದಾರೆ.
ಹರ್ಮನ್ ಪ್ರೀತ್ ಕೌರ್ ಅವರ ನಾಯಕತ್ವ, ಸ್ಥಿರತೆ ಮತ್ತು ಅಚಲ ಬದ್ಧತೆ ನಮ್ಮ ಬ್ಯಾಂಕಿನ ನೀತಿಯನ್ನು ಪ್ರತಿಬಿಂಬಿಸುತ್ತದೆ" ಎಂದು ಪಂಜಾಬ್ ನ್ಯಾಷನಲ್ ಬ್ಯಾಂಕಿನ ಎಂಡಿ ಮತ್ತು ಸಿಇಒ ಅಶೋಕ್ ಚಂದ್ರ ಹೇಳಿದ್ದಾರೆ.