FIDE Candidates 2024: ಟೂರ್ನಿ ಗೆದ್ದ ಅತ್ಯಂತ ಕಿರಿಯ ಚೆಸ್ ಪಟು ಗುಕೇಶ್!

Srinivas Rao BV

FIDE ಕ್ಯಾಂಡಿಡೇಟ್ಸ್ 2024ರ ಚೆಸ್ ಟೂರ್ನಿಯನ್ನು ಗೆದ್ದ ಅತ್ಯಂತ ಕಿರಿಯ ಎಂಬ ಹೆಗ್ಗಳಿಕೆಗೆ ಗುಕೇಶ್ ಭಾಜನರಾಗಿದ್ದಾರೆ. ಭಾರತದ 17 ವರ್ಷದ ಗ್ರ್ಯಾಂಡ್‌ಮಾಸ್ಟರ್ ಡಿ ಗುಕೇಶ್ ಕ್ಯಾಂಡಿಡೇಟ್ಸ್ ಚೆಸ್ ಪಂದ್ಯಾವಳಿಯನ್ನು ಗೆದ್ದು, ವಿಶ್ವ ಚಾಂಪಿಯನ್‌ಶಿಪ್ ಪ್ರಶಸ್ತಿಗೆ ಕಿರಿಯ ಸವಾಲು ಎದುರಿಸಲು ಸಿದ್ಧರಾಗಿದ್ದಾರೆ.

ವಿಶ್ವ ಚಾಂಪಿಯನ್ ಷಿಪ್ ಟೈಟಲ್ ಗೆ ಈ ವರ್ಷದ ಉತ್ತರಾರ್ಧದಲ್ಲಿ ಡಿ ಗುಕೇಶ್ ಹಾಲಿ ವಿಶ್ವ ಚಾಂಪಿಯನ್ ಚೀನಾದ ಡಿಂಗ್ ಲಿರೆನ್ ಅವರನ್ನು ಎದುರಿಸಲಿದ್ದಾರೆ.

ಈಗ ಗೆದ್ದಿರುವ ಪಂದ್ಯದಲ್ಲಿ ಅಮೇರಿಕಾದ ಹಿಕರು ನಕಮುರ ವಿರುದ್ಧ ಗುಕೇಶ್, 9 ಪಾಯಿಂಟ್ ಗಳನ್ನು ಪಡೆದು ಗೆದ್ದಿದ್ದಾರೆ.

ಚೆಸ್ ನಲ್ಲಿ ಪ್ರಸಿದ್ಧ ಹೆಸರಾಗಿರುವ ವಿಶ್ವನಾಥನ್ ಅವರ ನಂತರ ಕ್ಯಾಂಡಿಡೇಟ್ಸ್ ನ್ನು ಗೆದ್ದಿರುವ 2 ನೇ ಭಾರತೀಯ ಎಂಬ ಹೆಗ್ಗಳಿಕೆಗೆ ಡಿ ಗುಕೇಶ್ ಪಾತ್ರರಾಗಿದ್ದಾರೆ.

ಭಾರತದ 17 ವರ್ಷದ ಗ್ರ್ಯಾಂಡ್‌ಮಾಸ್ಟರ್ ಡಿ ಗುಕೇಶ್ ಕ್ಯಾಂಡಿಡೇಟ್ಸ್ ಚೆಸ್ ಟ್ರೋಫಿಯೊಂದಿಗೆ ಪೋಸ್ ನೀಡಿದ ಕ್ಷಣ.

12 ನೇ ವಯಸ್ಸಿನಲ್ಲಿ ಗ್ರ್ಯಾಂಡ್ ಮಾಸ್ಟರ್ ಪ್ರಶಸ್ತಿಯನ್ನು ಗಳಿಸಿದ ಚೆಸ್ ಇತಿಹಾಸದಲ್ಲಿ ಮೂರನೇ ಕಿರಿಯ ವ್ಯಕ್ತಿಯಾದ ನಂತರ ಗುಕೇಶ್ ಇತ್ತೀಚಿನ ದಿನಗಳಲ್ಲಿ ನಿರೀಕ್ಷೆ ಹೆಚ್ಚಿಸುತ್ತಿದ್ದರು.