ನಟ ಪ್ರಭಾಸ್ ಹೊಸ ಚಿತ್ರಕ್ಕೆ Reels ಸ್ಟಾರ್ 'ಹಿರೋಯಿನ್'; Iman Esmail ಯಾರು ಗೊತ್ತಾ!

Srinivasa Murthy VN

ಸಲಾರ್ ಮತ್ತು ಕಲ್ಕಿ ಚಿತ್ರಗಳ ಯಶಸ್ಸಿನಿಂದ ಮತ್ತೆ ಗೆಲುವಿನ ಟ್ರ್ಯಾಕ್ ಮರಳಿರುವ ನಟ ಪ್ರಭಾಸ್ ಇದೀಗ ತಮ್ಮ ಮತ್ತೊಂದು ನೂತನ ಚಿತ್ರಕ್ಕೆ ತಯಾರಿ ನಡೆಸಿದ್ದಾರೆ.

ಈಗಾಗಲೇ ಪ್ರಭಾಸ್ ರಾಜಾಸಾಬ್ ಚಿತ್ರದಲ್ಲಿ ಬಿಸಿಯಾಗಿದ್ದು, ಇದರ ಜೊತೆಗೆ ನಿರ್ದೇಶಕ ಹನು ರಾಘವಪುಡಿ ನಿರ್ದೇಶನದ ಮತ್ತೊಂದು ಚಿತ್ರದಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

Mythri Movie Makers ನಿರ್ಮಾಣದಲ್ಲಿ ಈ ಬಹು ನಿರೀಕ್ಷಿತ ಚಿತ್ರ ತಯಾರಾಗುತ್ತಿದ್ದು, ಈ ಚಿತ್ರ ನಾಯಕಿ ವಿಚಾರವಾಗಿ ಮತ್ತಷ್ಟು ಸುದ್ದಿ ಮಾಡುತ್ತಿದೆ.

ಹೌದು.. ಈ ಚಿತ್ರಕ್ಕೆ ಚಿತ್ರತಂಡ ಹೊಸ ಮುಖದ ಪರಿಚಯ ಮಾಡುತ್ತಿದ್ದು ಅದೂ ಕೂಡ ರೀಲ್ಸ್ ನಲ್ಲಿ ಸ್ಟಾರ್ ಆಗಿರುವ Iman Esmailರನ್ನು..

ವೃತ್ತಿಯಲ್ಲಿ ಡ್ಯಾನ್ಸ್ ಕೊರಿಯೋಗ್ರಾಫರ್ ಆಗಿರುವ ಇಮಾನ್ ಇಸ್ಮಾಯಿಲ್ ಇದೀಗ ನಟ ಪ್ರಭಾಸ್ ಜೊತೆಗೆ ಸ್ಕ್ರೀನ್ ಶೇರ್ ಮಾಡುತ್ತಿದ್ದಾರೆ.

ಈತ್ತೀಚೆಗಷ್ಟೇ ಅದ್ಧೂರಿ ಕಾರ್ಯಕ್ರಮದಲ್ಲಿ ಪ್ರಭಾಸ್ ಮತ್ತು ಹನು ರಾಘವಪುಡಿ ಚಿತ್ರ ಸೆಟ್ಟೇರಿದ್ದು, ಇದರ ಫೋಟೋಗಳು ಮತ್ತು ವಿಡಿಯೋಗಳು ವೈರಲ್ ಆಗುತ್ತಿವೆ.

ಮೂಲತಃ ದೆಹಲಿಯವರಾದ ಇಮಾನ್ ಬಾಲ್ಯದಿಂದಲೂ ಡ್ಯಾನ್ಸರ್. ಒಂದೆಡೆ ನೃತ್ಯ ಕಲಿಯುತ್ತಿದ್ದರೆ ಇನ್ನೊಂದೆಡೆ ವಿದ್ಯಾಭ್ಯಾಸ ಮುಗಿಸಿದ್ದಾರೆ.

ಈಗಾಗಲೇ ಇಮಾನ್ ಸಾಮಾಜಿಕ ಜಾಲತಾಣ ಮತ್ತು ಯೂಟ್ಯೂಬ್‌ನಲ್ಲಿ ತನ್ನ ಡ್ಯಾನ್ಸ್ ವಿಡಿಯೋಗಳ ಮೂಲಕ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ.

ಇಮಾನ್ ಅದ್ಭುತವಾಗಿ ನೃತ್ಯಗಾರ್ತಿಯಾಗಿದ್ದು, ಅವರ ಡ್ಯಾನ್ಸ್ ವಿಡಿಯೋಗಳು ಈ ಹಿಂದೆ ವ್ಯಾಪಕ ವೈರಲ್ ಆಗಿದ್ದವು.

ಪ್ರಭಾಸ್ ಎದುರು ಅಂತಹ ಟ್ಯಾಲೆಂಟೆಡ್ ಡ್ಯಾನ್ಸರ್ ಅನ್ನು ಹೀರೋಯಿನ್ ಆಗಿ ತೆಗೆದುಕೊಂಡಿರುವುದು ಚಿತ್ರದ ಮೇಲಿನ ನಿರೀಕ್ಷೆಗಳನ್ನು ಇಮ್ಮಡಿಗೊಳಿಸಿದೆ.

ಇತ್ತ ಇಮಾನ್ ಇಸ್ಮಾಯಿಲ್ ಪ್ರಭಾಸ್ ಚಿತ್ರಕ್ಕೆ ನಾಯಕಿಯಾಗುತ್ತಿದ್ದಂತೆಯೇ ಸೋಷಿಯಲ್ ಮೀಡಿಯಾದಲ್ಲಿ ಅವರ ಫಾಲೋವರ್ಸ್ ಏಕಾಏಕಿ ಹೆಚ್ಚಾಗಿದ್ದಾರೆ.

ಪ್ರಭಾಸ್ ಅಭಿಮಾನಿಗಳು ಟಾಲಿವುಡ್‌ಗೆ ಸ್ವಾಗತ ಎಂದು ಅವರ ವೀಡಿಯೊಗಳ ಅಡಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.

ಸೋನಲ್-ತರುಣ್ ಸುಧೀರ್ ವಿವಾಹ