ಉಕ್ರೇನ್‌ಗೆ ಭಾರತದ ಮೊದಲ PM ಭೇಟಿ: ಅಧ್ಯಕ್ಷ ಝೆಲೆನ್ಸ್ಕಿ ಹೆಗಲ ಮೇಲೆ ಕೈ ಹಾಕಿ ಧೈರ್ಯ ತುಂಬಿದ Modi

Vishwanath S

ಇದೇ ಮೊದಲ ಬಾರಿಗೆ ಉಕ್ರೇನ್‌ಗೆ ಭಾರತದ ಪ್ರಧಾನಿ ಒಬ್ಬರು ತೆರಳಿದ್ದಾರೆ. ಯುದ್ಧ ಪೀಡಿತ ಉಕ್ರೇನ್‌ಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದ್ದಾರೆ.

ಉಕ್ರೇನ್‌ಗೆ ಅಧ್ಯಕ್ಷ ವ್ಲಾದಿಮಿರ್ ಝೆಲೆನ್ಸ್ಕಿ ಅವರೊಂದಿಗೆ ಕೈವ್ ನಲ್ಲಿರುವ ಮಕ್ಕಳಿಗೆ ಸಂಬಂಧಿಸಿದ ಹುತಾತ್ಮ ಸ್ಮಾರಕಕ್ಕೆ ಭೇಟಿ ನೀಡಿದ್ದರು. ಇದೇ ವೇಳೆ ಝೆಲೆನ್ಸ್ಕಿ ಹೆಗಲ ಮೇಲೆ ಕೈ ಹಾಕಿ ಧೈರ್ಯ ತುಂಬಿದರು.

ಇದೇ ವೇಳೆ ಮಾತನಾಡಿರುವ ಪ್ರಧಾನಿ ಮೋದಿ ಅವರು, ಸಂಘರ್ಷ ಮಕ್ಕಳಿಗೆ ವಿನಾಶಕಾರಿ ಎಂದು ಹೇಳಿದ್ದಾರೆ.

ರಷ್ಯಾ ಹಾಗೂ ಯುಕ್ರೇನ್ 2.5 ವರ್ಷಗಳಿಂದ ಸಂಘರ್ಷದಲ್ಲಿ ತೊಡಗಿವೆ. ಈ ಸಂಘರ್ಷದಲ್ಲಿ ಯುಕ್ರೇನ್ ನ ಹಲವು ಪ್ರದೇಶಗಳಲ್ಲಿ ಪ್ರಾಣ ಕಳೆದುಕೊಂಡ ಮಕ್ಕಳ ನೆನಪಿಗಾಗಿ ಸ್ಮಾರಕ ನಿರ್ಮಾಣ ಮಾಡಲಾಗಿದೆ.

ರಷ್ಯಾ-ಉಕ್ರೇನ್ ಸಂಘರ್ಷಕ್ಕೆ ಸಂಧಾನದ ಇತ್ಯರ್ಥವನ್ನು ಕಂಡುಕೊಳ್ಳುವ ಮಾರ್ಗಗಳ ಮೇಲೆ ಕೇಂದ್ರೀಕರಿಸಿ ಪರಸ್ಪರ ಮತ್ತು ನಿಯೋಗ ಮಟ್ಟದ ಮಾತುಕತೆಗಳನ್ನು ನಡೆಸಲು ಉಭಯ ರಾಷ್ಟ್ರಗಳ ನಾಯಕರು ನಿರ್ಧರಿಸಿದ್ದಾರೆ.

ಕೈವ್ ನಲ್ಲಿರುವ ಒಯಸಿಸ್ ಆಫ್ ಪೀಸ್ ಪಾರ್ಕ್ ನಲ್ಲಿರುವ ರಾಷ್ಟ್ರಪಿತ ಮಹಾತ್ಮಾ ಗಾಂಧಿ ಅವರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದರು.

ಉಕ್ರೇನ್ ಮತ್ತು ರಷ್ಯಾ ನಡುವಿನ ಸಂಘರ್ಷದಲ್ಲಿ ಮೃತಪಟ್ಟ ಮಕ್ಕಳ ನೆನಪಿಗಾಗಿ ನಿರ್ಮಿಸಲಾಗಿರುವ ಸ್ಮಾರಕಕ್ಕೆ ಭೇಟಿ ನೀಡಿದ ಮೋದಿ ಕಂಬನಿ ಮಿಡಿದರು.

ಸಂಘರ್ಷ ಮಕ್ಕಳಿಗೆ ವಿನಾಶಕಾರಿ: ಯುಕ್ರೇನ್ ನಲ್ಲಿ ಪ್ರಧಾನಿ ಮೋದಿ