ವಿಶ್ವ ಚೆಸ್ ಚಾಂಪಿಯನ್ ಡಿ.ಗುಕೇಶ್-Photos

Sumana Upadhyaya

ಈಗ ಗುಕೇಶ್, ವಿಶ್ವ ಚಾಂಪಿಯನ್ ಆದ ಭಾರತದ ಎರಡನೇ ಆಟಗಾರ ಎನಿಸಿದ್ದಾರೆ. ಚೀನಾದ ಡಿಂಗ್ ಲಿರೆನ್ ವಿರುದ್ಧ ವಿಶ್ವ ಚಾಂಪಿಯನ್‌ಶಿಪ್‌ನ 14 ಪಂದ್ಯಗಳ ಫೈನಲ್ ಅನ್ನು 7.5-6.5 ರಿಂದ ಗೆದ್ದು ಬಾಲ್ಯದ ಕನಸನ್ನು ನನಸಾಗಿಸಿಕೊಂಡಿದ್ದಾರೆ.

ಕ್ರಿಕೆಟ್ ಜನಪ್ರಿಯವಾಗಿರುವ ದೇಶದಲ್ಲಿ ಚೆಸ್ ಕ್ರಾಂತಿಗೆ ನಾಂದಿ ಹಾಡಿದ ವಿಶ್ವನಾಥನ್ ಆನಂದ್ ಈ ಹಿಂದೆ ಐದು ಬಾರಿ ವಿಶ್ವ ಚಾಂಪಿಯನ್ ಆಗಿದ್ದರು.

ಗುಕೇಶ್ ಗೆದ್ದ ಬಳಿಕದ ಆನಂದ ಭಾಷ್ಪದ ಕಣ್ಣೀರು

ಪಂದ್ಯದ ನಂತರ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದ ನಂತರದ ಕ್ಷಣ(video credit-International chess federation)

ಡಿ ಗುಕೇಶ್ ಅವರು ತಮ್ಮ ಪೋಷಕರಾದ ಡಾ ರಜಿನಿ ಕಾಂತ್ ದೊಮ್ಮರಾಜು ಮತ್ತು ಡಾ ಜೆ ಪದ್ಮಕುಮಾರಿ ಅವರೊಂದಿಗೆ ಟ್ರೋಫಿ ಹಿಡಿದು ಸಂಭ್ರಮಿಸಿದರು.

ವಿಶ್ವಚಾಂಪಿಯನ್ ಟ್ರೋಫಿಯೊಂದಿಗೆ ಡಿ ಗುಕೇಶ್

ವಿಶ್ವ ಚಾಂಪಿಯನ್ ಆದ ಮೇಲೆ ಡಿ ಗುಕೇಶ್ 11.45 ಕೋಟಿ ಬಹುಮಾನ ಪಡೆದರೆ, ಡಿಂಗ್ ಲಿರೆನ್ 9.75 ಕೋಟಿ ಬಹುಮಾನ ಪಡೆದರು. ಗುಕೇಶ್ ಅವರ ನಿವ್ವಳ ಮೌಲ್ಯವು ಸುಮಾರು 8.26 ಕೋಟಿ ರೂಪಾಯಿಗಳಷ್ಟಿತ್ತು, ಅದು ಈಗ 20 ಕೋಟಿ ರೂಪಾಯಿಗಳನ್ನು ದಾಟಿದೆ.FIDE ನಿಯಮಗಳ ಪ್ರಕಾರ, ಫೈನಲ್ ಆಡುವ ಆಟಗಾರರು ಪ್ರತಿ ಪಂದ್ಯವನ್ನು ಗೆದ್ದಾಗಲೂ 1.69 ಕೋಟಿ ರೂಪಾಯಿಗಳನ್ನು ಪಡೆಯುತ್ತಾರೆ

ಬೆಳ್ಳಿ ಪದಕ ಗಳಿಸಿದ ಡಿಂಗ್ ಲಿರೆನ್

ಡಿ ಗುಕೇಶ್ ಗೆ ದೇಶದ ಮೂಲೆಮೂಲೆಗಳಿಂದ ಪ್ರಶಂಸೆ, ಬಹುಮಾನಗಳ ಸುರಿಮಳೆ, ಜಾಹೀರಾತು ಪ್ರಾಯೋಜಕತ್ವ, ಸರ್ಕಾರಗಳ ನಗದು ಬಹುಮಾನ ಘೋಷಣೆಯಾಗುತ್ತಿವೆ.

ಟ್ರೋಫಿ ಸಿಕ್ಕಿದ ಕೂಡಲೇ ಪೋಷಕರಿಗೆ ಹಸ್ತಾಂತರಿಸಿ ಖುಷಿಪಟ್ಟ ಡಿ ಗುಕೇಶ್(video credit-International chess federation)

ಟ್ರೋಫಿಯನ್ನು ಕೇವಲ ಮುಟ್ಟುವುದು ಮಾತ್ರವಲ್ಲ ಎತ್ತಿ ಹಿಡಿದು ಮೆರೆಯಲು ಮನಸ್ಸಾಗುತ್ತಿದೆ ಎಂದು ಗುಕೇಶ್ ಹೇಳಿದ್ದಾರೆ.

ಸೋಷಿಯಲ್ ಮೀಡಿಯಾ ತುಂಬೆಲ್ಲ ಗುಕೇಶ್ ಗುಣಗಾನ ನಡೆಯುತ್ತಿದೆ. ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮುವ ಮೂಲಕ 2024ನೇ ವರ್ಷವನ್ನು ಅರ್ಥವತ್ತಾಗಿ ಮುಗಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos