ಹಿನ್ನೋಟ 2024:'100 ಕೋಟಿ ಕ್ಲಬ್‌' ಸೇರಿದ ದಕ್ಷಿಣ ಭಾರತದ ಸಿನಿಮಾಗಳು

Lingaraj Badiger

ಏಳೇ ದಿನಕ್ಕೆ '100 ಕೋಟಿ ಕ್ಲಬ್‌' ಸೇರಿದ 'ಕಾಟೇರ'

ಕಳೆದ ವರ್ಷ ಡಿಸೆಂಬರ್ ಅಂತ್ಯದಲ್ಲಿ ತೆರೆಕಂಡ ಚಾಲೆಂಜಿಗ್‌ ಸ್ಟಾರ್‌ ದರ್ಶನ್‌ ಅಭಿನಯದ `ಕಾಟೇರ’ ಸಿನಿಮಾ ಒಂದೇ ವಾರದಲ್ಲಿ 100 ಕೋಟಿ ರೂ. ಹೆಚ್ಚು ಕಲೆಕ್ಷನ್‌ ಮಾಡಿ ಹೊಸ ದಾಖಲೆ ನಿರ್ಮಿಸಿತ್ತು.

ಬಿಡುಗಡೆಗೂ ಮೊದಲೇ 100 ಕೋಟಿ ಕ್ಲಬ್ ಸೇರಿದ ‘ಪುಷ್ಪ 2’

ಡಿಸೆಂಬರ್ 5ರಂದು ಬಿಡುಗಡೆಯಾದ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಅಭಿನಯದ ‘ಪುಷ್ಪ 2’ ಸಿನಿಮಾ ಅಡ್ವಾನ್ಸ್ ಬುಕಿಂಗ್ ನಲ್ಲೇ ಬರೋಬ್ಬರಿ 100 ಕೋಟಿ ರೂಪಾಯಿ ಗಳಿಸಿದ್ದು, ಒಟ್ಟಾರೆ 1200 ಕೋಟಿ ರೂಪಾಯಿ ಹೆಚ್ಚು ಲೆಕ್ಷನ್‌ ಮಾಡಿದೆ.

1000 ಕೋಟಿ ರೂ. ಕ್ಲಬ್ ಸೇರಿದ 'ಕಲ್ಕಿ'

ನಾಗ್ ಅಶ್ವಿನ್ ನಿರ್ದೇಶನದಲ್ಲಿ ಪ್ರಭಾಸ್ ನಟನೆಯ 'ಕಲ್ಕಿ 2898 AD' ಸಿನಿಮಾ ಬಾಕ್ಸಾಫೀಸ್‌ನಲ್ಲಿ ದಾಖಲೆ ಬರೆದಿದೆ. 16 ದಿನಕ್ಕೆ ಸಿನಿಮಾ ವಿಶ್ವದಾದ್ಯಂತ 1000 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದೆ.

ವೆಟ್ಟೈಯನ್

ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಬಾಲಿವುಡ್ ಬಿಗ್‌ ಬಿ ಅಮಿತಾಬ್ ಬಚ್ಚನ್ ನಟನೆಯ ವೆಟ್ಟೈಯನ್ ಸಿನಿಮಾ 260 ಕೋಟಿ ರೂ. ಗಳಿಕೆ ಮಾಡಿತ್ತು. ಚಿತ್ರದಲ್ಲಿ ರಜನಿ ಪೊಲೀಸ್ ಅದಿಕಾರಿಯಾದ್ರೆ, ಅಮಿತಾಬ್ ನ್ಯಾಯಧೀಶರಾಗಿ ಕಾಣಿಸಿಕೊಂಡಿದ್ದರು.

100 ಕೋಟಿ ಕ್ಲಬ್ ಸೇರಿದ ಮಲಯಾಳ ಚಿತ್ರ ಎಆರ್‌ಎಂ

ಟೋವಿನೋ ಥಾಮಸ್ ನಾಯಕ ನಟನಾಗಿ ಅಭಿನಯಿಸಿದ ಮಲಯಾಳಂನ ಅಜಯೆಂದೆ ರಂಡಾಂ ಮೋಷಣಂ(ಅಜೆಯನ ಎರಡನೇ ಕಳ್ಳತನ) - ಎಆರ್‌ಎಂ ಚಿತ್ರ 100 ಕೋಟಿ ಕ್ಲಬ್ ಸೇರಿದೆ.

ಗೋಟ್

ದಳಪತಿ ವಿಜಯ್ ನಟನೆಯ 68ನೇ ಸಿನಿಮಾ ಗೋಟ್ ಬಾಕ್ಸಾಫೀಸ್‌ನಲ್ಲಿ 458 ಕೋಟಿ ರೂ. ಗಳಿಕೆ ಮಾಡಿತ್ತು. ವಿಜಯ್ ಜೊತೆಗೆ ಸ್ನೇಹಾ, ಮೀನಾಕ್ಷಿ, ಅಜ್ಮಲ್, ಕೋಕಿಲಾ ಮೋಹನ್ ಮುಂತಾದವರು ನಟಿಸಿದ್ದಾರೆ.

ಮಂಜುಮ್ಮೆಲ್ ಬಾಯ್ಸ್

ಮಲಯಾಳಂ ನಿರ್ದೇಶಕ ಚಿದಂಬರಂ ಅವರು ನಿರ್ದೇಶನದ ಮಂಜುಮ್ಮೆಲ್ ಬಾಯ್ಸ್ 240 ಕೋಟಿ ರೂಪಾಯಿ ಗಳಿಕೆ ಮಾಡಿದೆ.

ಗುಂಟುರ್ ಕಾರಮ್

ನಗರದ ಅಕ್ರಮ ಚಟುವಟಿಕೆಗಳನ್ನು ಬಹಿರಂಗಪಡಿಸಲು ನಿರ್ಧರಿಸಿದ ಪತ್ರಕರ್ತನೊಂದಿಗೆ ಪ್ರೀತಿಯಲ್ಲಿ ಸಿಕ್ಕಿಹಾಕಿಕೊಳ್ಳುವ ಗುಂಟೂರಿನ ಭೂಗತ ರಾಜನ ಸುತ್ತ ಕಥೆಯು ತೆರೆದುಕೊಳ್ಳುತ್ತದೆ.

ದೇವರಾ ಭಾಗ 1

ಈ ವರ್ಷ ತೆರೆಕಂಡ ಜೂನಿಯರ್ ಎನ್‌ಟಿಆರ್ ನಟಿಸಿರುವ ಆಕ್ಷನ್-ಪ್ಯಾಕ್ಡ್ ಥ್ರಿಲ್ಲರ್ ಸಿನಿಮಾ ದೇವರಾ ಭಾಗ 1 ಬಾಕ್ಸಾಫೀಸ್‌ನಲ್ಲಿ 443.8 ಕೋಟಿ ರೂ. ಕಲೆಕ್ಷನ್‌ ಮಾಡಿದೆ.

ಕ್ಯಾಪ್ಟನ್ ಮಿಲ್ಲರ್

ಶೋಷಿತ ವರ್ಗದ ಯುವಕನಾಗಿ ಕಾಣಿಸಿಕೊಂಡಿರುವ ನಟ ಧನುಷ್​​ ಅಭಿನಯದ ಕ್ಯಾಪ್ಟನ್​ ಮಿಲ್ಲರ್​ 100 ಕೋಟಿ ರೂಪಾಯಿ ಹೆಚ್ಚು ಗಳಿಕೆ ಮಾಡಿದೆ.