ಬ್ಯಾಡ್ಮಿಂಟನ್ ತಾರೆ ಪಿ.ವಿ ಸಿಂಧು ಮದುವೆ | Photos

Sumana Upadhyaya

ಭಾರತದ ಸ್ಟಾರ್ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಅವರು ವೆಂಕಟ ದತ್ತ ಸಾಯಿ ಅವರೊಂದಿಗೆ ಡಿಸೆಂಬರ್ 22 ರ ಭಾನುವಾರ ಬೆಳಗ್ಗೆ ರಾಜಸ್ತಾನದ ಉದಯಪುರದಲ್ಲಿ ಅದ್ಧೂರಿ ಸಾಂಪ್ರದಾಯಿಕ ತೆಲುಗು ಶೈಲಿಯಲ್ಲಿ ವಿವಾಹವಾಗಿದ್ದಾರೆ.

ಮದುವೆಗೆ, ಸಿಂಧು ಕೆನೆ-ಬಣ್ಣದ ಸೀರೆಯಲ್ಲಿ ಕಾಂತಿಯುತವಾಗಿ ಕಾಣುತ್ತಿದ್ದರೆ ದತ್ತ ಸಾಯಿ ಕೆನೆ ಶೆರ್ವಾನಿ ಧರಿಸಿದ್ದರು. ಸೊಗಸಾದ ಉಡುಗೆ ಆ ಕ್ಷಣದ ಸೌಂದರ್ಯವನ್ನು ಎತ್ತಿ ತೋರಿಸಿತು.

ಸಿಂಧು ಮದುವೆ ಆಗಿರುವ ಹುಡುಗನ ಹೆಸರು ವೆಂಕಟ್ ದತ್ತ ಸಾಯಿ (Venkata Datta Sai). ಇವರು ಕೂಡ ಮೂಲತಃ ಹೈದರಾಬಾದ್​ನವರು.

ಉದ್ಯಮಿಯಾಗಿರುವ ವೆಂಕಟ್ ದತ್ತ ಸಾಯಿ, ಸದ್ಯ Posidex Technologies ಸಂಸ್ಥೆಯ ಎಕ್ಸಿಕ್ಯೂಟಿವ್ ಡೈರೆಕ್ಟರ್ ಆಗಿದ್ದಾರೆ. ಲಿಬರಲ್ ಸ್ಟಡೀಸ್​ನಲ್ಲಿ ಡಿಪ್ಲೊಮಾ ಪದವಿ ಪಡೆದುಕೊಂಡಿದ್ದಾರೆ. Flame Universityಯಲ್ಲಿ ಬಿಬಿಎ ಅಕೌಂಟಿಂಗ್ ಮತ್ತು ಫಿನಾನ್ಸ್​​ ಪದವಿ ಮುಗಿಸಿದ್ದಾರೆ.

ವೆಂಕಟ್ ದತ್ತ ಸಾಯಿ ಅವರು, ಜೆಎಸ್​ಡಬ್ಲೂ ಕಂಪನಿಗೆ ಆಂತರಿಕ ಸಲಹೆಗಾರರಾಗಿಯೂ ಕೆಲಸ ಮಾಡಿದ್ದಾರೆ. 2019ರಲ್ಲಿ ಆ್ಯಪಲ್ ಅಸೆಟ್​ ಮ್ಯಾನೇಜ್ಮೆಂಟ್​ನಲ್ಲಿ ಮ್ಯಾನೇಜಿಂಗ್ ಡೈರೆಕ್ಟರ್ ಆಗಿಯೂ ಕಾರ್ಯನಿರ್ವಹಿಸಿದ್ದಾರೆ. ಇದೀಗ Posidexನಲ್ಲಿ ಎಕ್ಸಿಕ್ಯೂಟಿವ್ ಡೈರೆಕ್ಟರ್​ ಆಗಿದ್ದಾರೆ.

ಪಿವಿ ಸಿಂಧು ಅವರು ಭಾರತದ ಅತ್ಯಂತ ಪ್ರಸಿದ್ಧ ಕ್ರೀಡಾಪಟುಗಳಲ್ಲಿ ಒಬ್ಬರು, ಅವರ ಸಾಧನೆಗಳು ಬ್ಯಾಡ್ಮಿಂಟನ್‌ನಲ್ಲಿ ಸಾರ್ವಕಾಲಿಕ ಶ್ರೇಷ್ಠರಲ್ಲಿ ಸ್ಥಾನ ಪಡೆದಿದೆ.

2019 ರಲ್ಲಿ ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದ ಏಕೈಕ ಭಾರತೀಯ ಮಹಿಳೆ, ಸಿಂಧು ಒಟ್ಟು ಐದು ವಿಶ್ವ ಚಾಂಪಿಯನ್‌ಶಿಪ್ ಪದಕಗಳನ್ನು ಹೊಂದಿದ್ದಾರೆ. ಅವರು ರಿಯೊ 2016 ನಲ್ಲಿ ಒಲಿಂಪಿಕ್ ಬೆಳ್ಳಿ ಮತ್ತು ಟೋಕಿಯೊ 2020 ನಲ್ಲಿ ಕಂಚಿನ ಪದಕವನ್ನು ಗಳಿಸಿದರು.

2017 ರಲ್ಲಿ, ಸಿಂಧು ವಿಶ್ವ ನಂ. 2 ರ ವೃತ್ತಿಜೀವನದ ಉನ್ನತ ಶ್ರೇಯಾಂಕವನ್ನು ಸಾಧಿಸಿದರು, ಇದು ಕ್ರೀಡೆಯಲ್ಲಿ ಅವರ ಪ್ರಾಬಲ್ಯ ಮತ್ತು ಸಮರ್ಪಣೆಗೆ ಸಾಕ್ಷಿಯಾಗಿದೆ. ಇತ್ತೀಚೆಗೆ, ಅವರು ಲಕ್ನೋದಲ್ಲಿ ಸೈಯದ್ ಮೋದಿ ಇಂಟರ್‌ನ್ಯಾಶನಲ್ ನ್ನು ಗೆಲ್ಲುವ ಮೂಲಕ ಮತ್ತೆ ಬ್ಯಾಡ್ಮಿಂಟನ್ ನಲ್ಲಿ ಸ್ಥಿರತೆ ಕಂಡುಕೊಂಡಿದ್ದಾರೆ.

ಕುಟುಂಬ, ಅಭಿಮಾನಿಗಳು ಮತ್ತು ಹಿತೈಷಿಗಳ ಸಮ್ಮುಖದಲ್ಲಿ ಜೋಡಿ ಸಾಂಪ್ರದಾಯಿಕ ಮತ್ತು ಆಧುನಿಕ ಸ್ಪರ್ಶದಲ್ಲಿ ವಿವಾಹ ಬಂಧನಕ್ಕೊಳಗಾಗಿದ್ದಾರೆ.

ಮದುವೆ ನಂತರ ಡಿಸೆಂಬರ್ 24 ರಂದು ಹೈದರಾಬಾದ್‌ನಲ್ಲಿ ಭವ್ಯವಾದ ಆರತಕ್ಷತೆಯನ್ನು ಆಯೋಜಿಸಲಾಗಿತ್ತು.ಅದರಲ್ಲಿ ತೆಲಂಗಾಣ ಮುಖ್ಯಮಂತ್ರಿ ರೇವಂತ ರೆಡ್ಡಿಯವರಿಂದ ಹಿಡಿದು ಅತಿ ಗಣ್ಯರು, ಟಾಲಿವುಡ್ ತಾರೆಯರು ಭಾಗವಹಿಸಿದ್ದರು.

ಆರತಕ್ಷತೆ ಕಾರ್ಯಕ್ರಮಕ್ಕೆ ಫಲ್ಗುಣಿ ಶೇನ್ ಪಿಕಾಕ್ ಅವರ ಲೆಹೆಂಗಾವನ್ನು ಸಿಂಧು ಧರಿಸಿದ್ದರು. ಮಧುಮಗ ವೆಂಕಟ ದತ್ತ ಅದೇ ಡಿಸೈನರ್ ನ ನಯವಾದ ಕಪ್ಪು ಬಂಧಗಾಲಾ ಶರ್ಟ್ ಧರಿಸಿದ್ದರು.

ಮಧುಮಗಳು ಪಿ ವಿ ಸಿಂಧು

ತಮ್ಮ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಪಿ ವಿ ಸಿಂಧು ಜೋಡಿ

ಪಿ ವಿ ಸಿಂಧು-ವೆಂಕಟದತ್ತ ಸಾಯಿ

ವಿವಾಹ ಪೂರ್ವ ಶಾಸ್ತ್ರದಲ್ಲಿ ಜೋಡಿ

ನವಜೋಡಿ

ಶ್ವೇತವರ್ಣದ ಉಡುಪಿನಲ್ಲಿ