2024 ರಲ್ಲಿ ಗಮನ ಸೆಳೆದ ಅದ್ಧೂರಿ ವಿವಾಹಗಳು: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಗಣ್ಯರು!
Shilpa D
ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆಯು ಜುಲೈ 12ರಂದು ನಡೆಯಿತು. ವಿಶ್ವದ ಗಮನ ಸೆಳೆದ ಈ ಅದ್ಧೂರಿ ವಿವಾಹದಲ್ಲಿ ಜಗತ್ತಿನ ವಿವಿಧ ಭಾಗಗಳ ಹಲವು ಗಣ್ಯರು ವಿವಿಧ ಕ್ಷೇತ್ರಗಳ ಮಹನೀಯರು ಭಾಗವಹಿಸಿದ್ದರು. ಅತ್ಯಂತ ದುಬಾರಿ ಮದುವೆ ಎಂದೇ ಈ ವಿವಾಹವನ್ನು ಪರಿಗಣಿಸಲಾಗಿದೆ.
ಸ್ಯಾಂಡಲ್‌ವುಡ್ ನಿರ್ದೇಶಕ ದಿವಂಗತ ನಟ ಸುಧೀರ್ ಪುತ್ರ ತರುಣ್ ಸುಧೀರ್ ಹಾಗೂ ನಟಿ ಸೋನಲ್ ಮೊಂಥೆರೋ ಅವರು ಆಗಸ್ಟ್ 11 ರಂದು ಬೆಂಗಳೂರಿನಲ್ಲಿ ವಿವಾಹವಾದರು.
ನಾಗ ಚೈತನ್ಯ ಮತ್ತು ಶೋಭಿತಾ ಧೂಳಿಪಾಲ ಅವರು ಡಿಸೆಂಬರ್ 4 ರಂದು ಹೈದರಾಬಾದ್‌ನ ತಮ್ಮ ಆಪ್ತರು ಮತ್ತು ಕುಟುಂಬಸ್ಥರ ಸಮ್ಮುಖದಲ್ಲಿ ತೆಲುಗು ಸಂಪ್ರದಾಯದಂತೆ ವಿವಾಹವಾದರು.
ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಮತ್ತು ಜಹೀರ್ ಇಕ್ಬಾಲ್ ಜೂನ್ 23 ರಂದು ಮುಂಬೈನಲ್ಲಿರುವ ಅವರ ಮನೆಯಲ್ಲಿ ಕುಟುಂಬಸ್ಥರು ಮತ್ತು ಸ್ನೇಹಿತರು ಭಾಗವಹಿಸಿದ್ದ ಆತ್ಮೀಯ ಸಮಾರಂಭದಲ್ಲಿ ವಿವಾಹವಾದರು.
ಫೆಬ್ರವರಿ 21 ರಂದು ಐಟಿಸಿ ಗ್ರ್ಯಾಂಡ್ ಗೋವಾದ ಬೀಚ್‌ಸೈಡ್ ನಲ್ಲಿ ನಡೆದ ಸಮಾರಂಭದಲ್ಲಿ ರಾಕುಲ್ ಪ್ರೀತ್ ಸಿಂಗ್ ಮತ್ತು ಜಾಕಿ ಭಗ್ನಾನಿ ವಿವಾಹ ಬಂಧನಕ್ಕೊಳಗಾದರು.
ಸೆಪ್ಟೆಂಬರ್ 16 ರಂದು ತೆಲಂಗಾಣದ ಶ್ರೀರಂಗಾಪುರದಲ್ಲಿರುವ 400 ವರ್ಷಗಳಷ್ಟು ಹಳೆಯದಾದ ಶ್ರೀ ರಂಗನಾಯಕಸ್ವಾಮಿ ದೇವಸ್ಥಾನದಲ್ಲಿ ಅದಿತಿ ರಾವ್ ಹೈದರಿ ಮತ್ತು ಸಿದ್ಧಾರ್ಥ್ ದಕ್ಷಿಣ ಭಾರತದ ಸಂಪ್ರದಾಯದಂತೆ ಸಪ್ತಪದಿ ತುಳಿದರು.
ಡಿಸೆಂಬರ್ 12 ರಂದು ಗೋವಾದಲ್ಲಿ ನಡೆದ ಖಾಸಗಿ ಸಮಾರಂಭದಲ್ಲಿ ಕೀರ್ತಿ ಸುರೇಶ್ ಮತ್ತು ಅವರ ಬಹುಕಾಲದ ಗೆಳೆಯ, ಉದ್ಯಮಿ ಆಂಟೋನಿ ತಟ್ಟಿಲ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಸ್ಟಾರ್ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಅವರು ವೆಂಕಟ ದತ್ತ ಸಾಯಿ ಅವರೊಂದಿಗೆ ಡಿಸೆಂಬರ್ 22 ರ ಭಾನುವಾರ ಬೆಳಗ್ಗೆ ರಾಜಸ್ತಾನದ ಉದಯಪುರದಲ್ಲಿ ಅದ್ಧೂರಿ ಸಾಂಪ್ರದಾಯಿಕ ತೆಲುಗು ಶೈಲಿಯಲ್ಲಿ ವಿವಾಹವಾಗಿದ್ದಾರೆ.
ಮಾರ್ಚ್ನಲ್ಲಿ ತಾಪ್ಸಿ ಪನ್ನು ಮತ್ತು ಬಹುಕಾಲದ ಗೆಳೆಯ ಬ್ಯಾಡ್ಮಿಂಟನ್ ಆಟಗಾರ ಮಥಿಯಾಸ್ ಬೋ ಅವರ ಮದುವೆ ಕಾರ್ಯಕ್ರಮ ಜನರ ಗಮನ ಸೆಳೆದಿತ್ತು.
ಈ ವರ್ಷದ ಜನವರಿ 3 ರಂದು ಮುಂಬೈನ ಬಾಂದ್ರಾದಲ್ಲಿರುವ ತಾಜ್ ಲ್ಯಾಂಡ್ಸ್ ಎಂಡ್‌ನಲ್ಲಿ ಅಮೀರ್ ಖಾನ್ ಅವರ ಪುತ್ರಿ ಇರಾ ಖಾನ್ ಮತ್ತು ನೂಪುರ್ ಶಿಖರೆ ದಾಂಪತ್ ಜೀವನಕ್ಕೆ ಕಾಲಿರಿಸಿದರು.
ಕನ್ನಡ ನಟ ಅರ್ಜುನ್ ಸರ್ಜಾ - ಆಶಾರಾಣಿ ದಂಪತಿ ಹಿರಿಯ ಪುತ್ರಿ ಐಶ್ವರ್ಯಾ ಅವರು ವೈವಾಹಿಕ ಜೀವನಕ್ಕೆ ನಾಂದಿ ಹಾಡಿದ್ದು ಇದೇ ವರ್ಷ. ಚೆನ್ನೈನಲ್ಲಿ ಐಶ್ವರ್ಯಾ - ಉಮಾಪತಿ ವಿವಾಹ ಮಹೋತ್ಸವ ಅದ್ಧೂರಿಯಾಗಿ ಜರುಗಿತು.
ಕನ್ನಡ ಚಿತ್ರಗಳಲ್ಲೂ ನಟಿಸಿರುವ ತಮಿಳಿನ ಖ್ಯಾತ ನಟ ಶರತ್ ಕುಮಾರ್ ಅವರ ಪುತ್ರಿ ವರಲಕ್ಷ್ಮೀ ವಿವಾಹವಾದರು. ತಮ್ಮ ದೀರ್ಘಕಾಲದ ಗೆಳೆಯ ನಿಕೋಲೈ ಸಚ್‌ದೇವ್ ಅವರನ್ನ ವರಲಕ್ಷ್ಮೀ ಶರತ್ ಕುಮಾರ್ ಥೈಲ್ಯಾಂಡ್‌ನಲ್ಲಿ ಮದುವೆಯಾದರು.
ಟಗರು ಪುಟ್ಟಿ ಮಾನ್ವಿತಾ ಹರೀಶ್ ಮೇ 1 ರಂದು ಹಿಂದೂ ಸಂಪ್ರದಾಯದಂತೆ ಸಂಗೀತ ನಿರ್ಮಾಪಕ ಅರುಣ್ ಕುಮಾರ್ ಅವರ ಜೊತೆ ಸಪ್ತಪದಿ ತುಳಿದರು.
ಕಿರುತೆರೆ ನಟಿ ಚಂದನಾ ಅನಂತಕೃಷ್ಣ -ಪ್ರತ್ಯಕ್ಷ್ ಮದುವೆ ಸಮಾರಂಭ ನವೆಂಬರ್ ತಿಂಗಳಲ್ಲಿ ಬೆಂಗಳೂರಿನಲ್ಲಿ ಜರುಗಿತು.