ನಟಿ ದೀಪಿಕಾ ಪಡುಕೋಣೆ ಗರ್ಭಿಣಿ?: ಪುಷ್ಟಿ ಕೊಟ್ಟ BAFTA 2024 Photos!

Srinivas Rao BV

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಲಂಡನ್ ನಲ್ಲಿ ನಡೆದ BAFTA Awards 2024 ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ಗ್ಲಾಮರ್ ಲುಕ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದ ನಟಿ ಇಂದು ಸೀರೆಯುಟ್ಟು ಕಾಣಿಸಿಕೊಂಡಿರುವುದು ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ.

ದೀಪಿಕಾ ಪಡುಕೋಣೆ ತಮ್ಮ ಹೊಟ್ಟೆ ಭಾಗವನ್ನು ಮರೆ ಮಾಡಲು ಯತ್ನಿಸಿರುವುದು ಫೋಟೊದಲ್ಲಿ ಸೆರೆಯಾಗಿದ್ದು, ಅಭಿಮಾನಿಗಳು ತಮ್ಮ ನೆಚ್ಚಿನ ನಟಿ ಗರ್ಭಿಣಿಯಾಗಿರಬಹುದು ಎಂದು ಊಹಿಸುತ್ತಿದ್ದಾರೆ.

ದೀಪಾ ಪಡುಕೋಣೆ ಅವರ ಹೊಟ್ಟೆ ನೋಡಿದರೆ ಅವರು ಗರ್ಭಿಣಿ ಹೌದೋ ಅಲ್ಲವೋ ಎಂಬ ಬಗ್ಗೆ ಸಾರ್ವಜನಿಕವಾಗಿ ಚರ್ಚಿಸುವುದು ಅನವಶ್ಯಕ. ಅದು ಆಕೆಯ ವೈಯಕ್ತಿಕ ಜೀವನ ಎಂದು ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸೆಲಬ್ರಿಟಿಗಳ ಉಡುಪನ್ನು ಕಂಡು ಆಕೆ ಗರ್ಭಿಣಿಯಾಗಿದ್ದಾರೆ ಎಂಬ ಊಹಾಪೋಹಗಳೆದ್ದಿರುವುದು ಇದೇ ಮೊದಲಲ್ಲ. ದೀಪಿಕಾ ಹಾಗೂ ಕತ್ರೀನಾ ಸೀರೆ ಉಟ್ಟಾಗ ಪಲ್ಲು ಹಿಡಿದುಕೊಳ್ಳುವುದು ಸಾಮಾನ್ಯ, ಅದನ್ನು ಗಮನಿಸಿ ಜನರು ಆಕೆ ಗರ್ಭಿಣಿಯಾಗಿದ್ದಾರೆ ಎನ್ನುತ್ತಾರೆ ಎಂದು ಕೆಲವು ಮಂದಿ ಅಭಿಮಾನಿಗಳು ಹೇಳಿದ್ದಾರೆ.