ದ್ವಿಶತಕದ ಮೂಲಕ ಇಂಗ್ಲೆಂಡ್ ನ WTC ಫೈನಲ್ ಕನಸಿಗೆ ಕೊಳ್ಳಿಯಿಟ್ಟ ಜೈಸ್ವಾಲ್!

Vishwanath S

ಟೆಸ್ಟ್ ಕ್ರಿಕೆಟ್ ನಲ್ಲಿ ದ್ವಿಶತಕ ಸಿಡಿಸಿದ 3ನೇ ಯುವ ಬ್ಯಾಟರ್ ಯಶಸ್ವಿ ಜೈಸ್ವಾಲ್.

ಅತೀ ಚಿಕ್ಕ ವಯಸ್ಸಿಗೆ 22 ವರ್ಷ 52 ದಿನಕ್ಕೆ ದ್ವಿಶತಕ ಸಿಡಿಸಿದ ಜೈಸ್ವಾಲ್. ಭಾರತದ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳೆ 21 ವರ್ಷ 54 ದಿನಕ್ಕೆ ದ್ವಿಶತಕ ಸಿಡಿಸಿದ್ದರು. ಇನ್ನು ಆಸ್ಟ್ರೇಲಿಯಾದ ಡಾನ್ ಬ್ರಾಡ್ಮನ್ 21 ವರ್ಷ 318 ದಿನಕ್ಕೆ ಮೊದಲ ದ್ವಿಶತಕ ಸಿಡಿಸಿದ್ದರು.

ಬ್ಯಾಕ್ ಟು ಬ್ಯಾಕ್ ಟೆಸ್ಟ್ ಪಂದ್ಯಗಳಲ್ಲಿ ವಿನೋದ್ ಕುಂಬ್ಳೆ ಮತ್ತು ವಿರಾಟ್ ಕೊಹ್ಲಿ ನಂತರ ದ್ವಿಶತಕ ಸಿಡಿಸಿದ ಮೂರನೇ ಆಟಗಾರ ಯಶಸ್ವಿ ಜೈಸ್ವಾಲ್.

ಜೈಸ್ವಾಲ್ ಅವರ ದ್ವಿಶತಕ ಇಂಗ್ಲೆಂಡ್ ತಂಡದ ವಿರುದ್ಧ 434 ರನ್ ಗಳ ಅತ್ಯಧಿಕ ಮೊತ್ತದಿಂದ ಗೆಲ್ಲಲು ಕಾರಣವಾಯಿತು.

ಒಂದು ಇನ್ನಿಂಗ್ಸ್ ನಲ್ಲಿ ಅತೀ ಹೆಚ್ಚು ಸಿಕ್ಸರ್ ಸಿಡಿಸಿದ ಮೊದಲ ಭಾರತೀಯ ಆಟಗಾರ. ಇನ್ನು ಪಾಕಿಸ್ತಾನದ ವಾಸಿಂ ಅಕ್ರಂ 1996ರಲ್ಲಿ ಜಿಂಬಾಬ್ವೆ ವಿರುದ್ಧ ಸಿಡಿಸಿದ್ದ 12 ಸಿಕ್ಸ್ ದಾಖಲೆಯನ್ನು ಸಮಗಟ್ಟಿದ್ದಾರೆ.