ಸಮುದ್ರದಲ್ಲಿ ಮುಳುಗಿರುವ ದ್ವಾರಕಾ ನಗರಕ್ಕೆ ತಲುಪಿ, ಪೂಜೆ ಸಲ್ಲಿಸಿದ ಪ್ರಧಾನಿ ಮೋದಿ

Vishwanath S

ಪ್ರಧಾನಿ ನರೇಂದ್ರ ಮೋದಿ ಗುಜರಾತ್‌ನ ದ್ವಾರಕಾದಲ್ಲಿ ಸಮುದ್ರದ ಆಳಕ್ಕೆ ತೆರಳಿ ದ್ವಾರಕಾ ಮುಳುಗಿರುವ ಸ್ಥಳದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಈ ಅನುಭವ ನನಗೆ ಭಾರತದ ಆಧ್ಯಾತ್ಮಿಕ ಮತ್ತು ಐತಿಹಾಸಿಕ ಬೇರುಗಳೊಂದಿಗೆ ಅಪರೂಪದ ಮತ್ತು ಆಳವಾದ ಸಂಪರ್ಕವನ್ನು ಒದಗಿಸಿದೆ ಎಂದು ಹೇಳಿದರು.

ಶ್ರೀಕೃಷ್ಣನ ಕಾರ್ಯಕ್ಷೇತ್ರವಾದ ದ್ವಾರಕಾಧಾಮಕ್ಕೆ ಗೌರವಪೂರ್ವಕವಾಗಿ ನಮಿಸುತ್ತೇನೆ. ಶ್ರೀಕೃಷ್ಣನು ದೇವಭೂಮಿ ದ್ವಾರಕಾದಲ್ಲಿ ದ್ವಾರಕಾಧೀಶನ ರೂಪದಲ್ಲಿ ನೆಲೆಸಿದ್ದಾನೆ. ಇಲ್ಲಿ ಏನೇ ನಡೆದರೂ ದ್ವಾರಕಾಧೀಶನ ಇಚ್ಛೆಯಂತೆಯೇ ನಡೆಯುತ್ತದೆ ಎಂದರು.

ಪ್ರಧಾನಿ ಮೋದಿ ಕೃಷ್ಣನಿಗೆ ಅರ್ಪಿಸಲು ಸಮುದ್ರಕ್ಕೆ ತನ್ನೊಂದಿಗೆ ನವಿಲು ಗರಿಗಳನ್ನು ತೆಗೆದುಕೊಂಡು ಹೋಗಿದ್ದರು. 'ಮುಳುಗಿದ ದ್ವಾರಕಾ ನಗರದಲ್ಲಿ ಪ್ರಾರ್ಥನೆ ಸಲ್ಲಿಸುವುದು ಬಹಳ ದೈವಿಕ ಅನುಭವವಾಗಿದೆ. ಆಧ್ಯಾತ್ಮಿಕ ವೈಭವ ಮತ್ತು ಶಾಶ್ವತ ಭಕ್ತಿಯ ಪ್ರಾಚೀನ ಯುಗಕ್ಕೆ ನಾನು ಸಂಪರ್ಕ ಹೊಂದಿದ್ದೇನೆ. ಶ್ರೀ ಕೃಷ್ಣನು ನಮ್ಮೆಲ್ಲರನ್ನು ಆಶೀರ್ವದಿಸಲಿ ಎಂದು ಹೇಳಿದರು.

ಇಂದು ಬೆಳಗ್ಗೆ ಪ್ರಧಾನಿ ಮೋದಿ ಬೆಟ್ ದ್ವಾರಕಾ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಇಲ್ಲಿ ದರ್ಶನ ನೀಡಿದ ನಂತರ ಅವರು ಓಖಾದಿಂದ ಬೆಟ್ ದ್ವಾರಕಾ ದ್ವೀಪಕ್ಕೆ ಸಂಪರ್ಕ ಕಲ್ಪಿಸುವ 2.32 ಕಿಮೀ ಉದ್ದದ ಸಮುದ್ರ ಸೇತುವೆ ಸುದರ್ಶನ ಸೇತುವನ್ನು ಉದ್ಘಾಟಿಸಿದರು.