ಹತ್ರಾಸ್ ಕಾಲ್ತುಳಿತ: ಸಾವಿನ ಸಂಖ್ಯೆ 122 ಕ್ಕೆ ಏರಿಕೆ, FIR ನಲ್ಲಿ ದೇವಮಾನವ ಭೋಲೆ ಬಾಬಾ ಹೆಸರಿಲ್ಲ!
Prasad SN
ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ‘ಸತ್ಸಂಗ’ ಕಾರ್ಯಕ್ರಮದ ಮುಕ್ತಾಯದ ವೇಳೆ ಕಾಲ್ತುಳಿತ ಸಂಭವಿಸಿ 122 ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ.
ಪರಿಹಾರ ಆಯುಕ್ತರ ಕಚೇರಿಯ ಪ್ರಕಾರ, ಮಂಗಳವಾರದ ಘಟನೆಯಲ್ಲಿ ಗಾಯಗೊಂಡವರ ಸಂಖ್ಯೆ 28 ರಷ್ಟಿದೆ.
ಸ್ಥಳೀಯ ಗುರುಗಳಾದ ಭೋಲೆ ಬಾಬಾ ಅಕಾ ನಾರಾಯಣ ಸಾಕರ್ ಹರಿ ಅವರ ಗೌರವಾರ್ಥ ಆಯೋಜಿಸಲಾಗಿದ್ದ 'ಸತ್ಸಂಗ'ದ ವೇಳೆ ಈ ಘಟನೆ ಸಂಭವಿಸಿದ್ದು, ಮಧ್ಯಾಹ್ನ 3.30ರ ಸುಮಾರಿಗೆ ಕಾರ್ಯಕ್ರಮದಿಂದ ಜನರು ಹೊರಹೋಗಲು ಆರಂಭಿಸುತ್ತಿದ್ದಂತೆ ಕಾಲ್ತುಳಿತ ಉಂಟಾಗಿದೆ.
ಏಳು ಮಕ್ಕಳು ಮತ್ತು ಒಬ್ಬ ಪುರುಷನನ್ನು ಹೊರತುಪಡಿಸಿ, ಮೃತರೆಲ್ಲರೂ ಮಹಿಳೆಯರು.
ಹತ್ರಾಸ್ ಜಿಲ್ಲಾಡಳಿತವು ಮುಖ್ಯ ಸೇವಾದಾರ್ ದೇವಪ್ರಕಾಶ್ ಮಧುಕರ್ ಸೇರಿದಂತೆ ಸಂಘಟಕರ ವಿರುದ್ಧ ಎಫ್‌ಐಆರ್ ದಾಖಲಿಸಿದೆ ಮತ್ತು ಹೆಸರಿಸದ ಹಲವಾರು ಸಂಘಟಕರ ವಿರುದ್ಧ ದಾಖಲಿಸಿದೆ.
ಆದರೆ, ಎಫ್‌ಐಆರ್‌ನಲ್ಲಿ ದೇವಮಾನವ ಬೋಲೆ ಬಾಬಾ ಹೆಸರಿಲ್ಲ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಬುಧವಾರ ಬೆಳಗ್ಗೆ ಹತ್ರಾಸ್‌ಗೆ ಆಗಮಿಸಿ ಪರಿಸ್ಥಿತಿಯನ್ನು ಅವಲೋಕಿಸಿದರು ಮತ್ತು ಗಾಯಾಳುಗಳನ್ನು ಭೇಟಿ ಮಾಡಿದರು.