Anant Radhika Wedding: ದುರ್ಗಾ ಶ್ಲೋಕವಿರುವ ಲೆಹೆಂಗಾ ಧರಿಸಿದ ರಾಧಿಕಾ ಮರ್ಚೆಂಟ್; ಮಾಮೇರು ಸಂಭ್ರಮ

Srinivas Rao BV

ಅಂಬಾನಿ ಪುತ್ರ ಅನಂತ್ ಅಂಬಾನಿ, ರಾಧಿಕಾ ಮರ್ಚೆಂಟ್ ಅವರ ವಿವಾಹ ಪೂರ್ವ ಕಾರ್ಯಕ್ರಮಗಳು ಆರಂಭವಾಗಿವೆ.

ಜು.03 ರಂದು ಮಾಮೇರು ಕಾರ್ಯಕ್ರಮ ನಡೆದಿದ್ದು, ವರನ ತಾಯಿಯ ತವರು ಕುಟುಂಬದವರ ಸಾಂಪ್ರದಾಯಿಕ ಆಚರಣೆ ಇದಾಗಿದೆ.

ನೀತಾ ಅಂಬಾನಿ ಅವರ ತವರು ಕುಟುಂಬದವರು ಉಡುಗೊರೆ ಮತ್ತು ಕೊಡುಗೆಗಳೊಂದಿಗೆ ದಂಪತಿಗಳನ್ನು ಆಶೀರ್ವದಿಸಿದ್ದಾರೆ.

ಈ ಕಾರ್ಯಕ್ರಮದಲ್ಲಿ ರಾಧಿಕಾ ಮರ್ಚೆಂಟ್ ದುರ್ಗಾ ಶ್ಲೋಕವಿರುವ ಲೆಹೆಂಗಾ ಧರಿಸಿದ್ದು ಎಲ್ಲರ ಗಮನ ಸೆಳೆದಿದೆ.

ಮಾಮೇರು ಕಾರ್ಯಕ್ರಮದಲ್ಲಿ ರಾಧಿಕಾ ಸಹ ತಮ್ಮ ತಾಯಿಯ ಚಿನ್ನಾಭರಣಗಳನ್ನು ಧರಿಸಿದ್ದರು. ಮನೀಶ್ ಮಲ್ಹೋತ್ರಾ ಅವರು ತಯಾರಿಸಿದ ಕಸ್ಟಮ್-ಮೇಡ್ ಲೆಹಂಗಾ ಇದಾಗಿದೆ.

ಅನಂತ್ ಅಂಬಾನಿ- ರಾಧಿಕಾ ಮರ್ಚೆಂಟ್ ಮಾಮೇರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಬಾಲಿವುಡ್ ನಟಿ ಜಾಹ್ನವಿ ಕಪೂರ್

ಅನಂತ್ ಅಂಬಾನಿ- ರಾಧಿಕಾ ಮರ್ಚೆಂಟ್ ಮಾಮೇರು ಕಾರ್ಯಕ್ರಮದಲ್ಲಿ ಅನಿಲ್ ಅಂಬಾನಿ ದಂಪತಿ