ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್; ಕ್ರಿಕೆಟ್ ವಲಯ ಸ್ವಾಗತಿಸಿದ್ದು ಹೀಗೆ...

Prasad SN

ನೂತನವಾಗಿ ನೇಮಕಗೊಂಡಿರುವ ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರು, ಈ ಉನ್ನತ ಸ್ಥಾನದಲ್ಲಿ ನಿಂತು ತ್ರಿವರ್ಣ ಧ್ವಜಕ್ಕೆ ಸೇವೆ ಸಲ್ಲಿಸುವುದು ಸಂಪೂರ್ಣ ಗೌರವ ಎಂದು ಮಂಗಳವಾರ ಹೇಳಿದ್ದಾರೆ ಮತ್ತು ತಂಡಕ್ಕೆ ಉತ್ತಮ ಫಲಿತಾಂಶಗಳನ್ನು ನೀಡಲು ತಮ್ಮ ಕೈಲಾದ ಎಲ್ಲಾ ಪ್ರಯತ್ನ ಮಾಡುವುದಾಗಿ ಹೇಳಿದ್ದಾರೆ.

ಭಾರತದ 2011 ರ ODI ವಿಶ್ವಕಪ್ ವಿಜಯದ ತಂಡದ ಹೀರೋಗಳಲ್ಲಿ ಒಬ್ಬರಾದ ಗಂಭೀರ್, ಇತ್ತೀಚೆಗೆ T20 ವಿಶ್ವಕಪ್ ವಿಜಯದ ನಂತರ ರಾಹುಲ್ ದ್ರಾವಿಡ್ ಅವರ ನಿರ್ಗಮನದ ನಂತರ ಭಾರತ ತಂಡದ ಜವಾಬ್ದಾರಿಯನ್ನು ವಹಿಸಿಕೊಂಡರು.

ಭಾರತವು ನನ್ನ ಗುರುತಾಗಿದೆ ಮತ್ತು ನನ್ನ ದೇಶಕ್ಕೆ ಸೇವೆ ಸಲ್ಲಿಸುವುದು ನನ್ನ ಜೀವನದ ಬಹುದೊಡ್ಡ ಅವಕಾಶ. ವಿಭಿನ್ನ ಜವಾಬ್ದಾರಿಯೊಂದಿಗೆ ನಾನು ಹಿಂತಿರುಗಿರುವುದು ನನಗೆ ಗೌರವವಾಗಿದೆ. ಆದರೆ ನನ್ನ ಗುರಿ ಯಾವಾಗಲೂ ಒಂದೇ ಆಗಿರುತ್ತದೆ, ಪ್ರತಿಯೊಬ್ಬ ಭಾರತೀಯನು ಹೆಮ್ಮೆಪಡುವಂತೆ ಮಾಡುವುದು.

"ಟೀಮ್ ಇಂಡಿಯಾ ಪುರುಷರು 1.4 ಶತಕೋಟಿ ಭಾರತೀಯರ ಕನಸುಗಳನ್ನು ಹೊತ್ತಿದ್ದಾರೆ ಮತ್ತು ಈ ಕನಸುಗಳನ್ನು ನನಸಾಗಿಸಲು ನಾನು ನನ್ನ ಕೈಲಾದ ಎಲ್ಲಾ ಪ್ರಯತ್ನ ಮಾಡುತ್ತೇನೆ!" ಎಂದು ಗಂಭೀರ್ 'X' ನಲ್ಲಿ ಪೋಸ್ಟ್ ಮಾಡಿದ್ದಾರೆ.

BCCI ಕಾರ್ಯದರ್ಶಿ ಜಯ್ ಶಾ 'X' ನಲ್ಲಿ ಪೋಸ್ಟ್ ಮಾಡಿ ಪ್ರತಿಕ್ರಿಯಿಸಿದ್ದು ಹೀಗೆ...

ವಿವಿಧ ಕ್ರಿಕೆಟಿಗರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿ ಪ್ರತಿಕ್ರಿಯಿಸಿದ್ದು ಹೀಗೆ...

ಅನಿಲ್ ಕುಂಬ್ಳೆ ಪೋಸ್ಟ್ ಮಾಡಿ ಪ್ರತಿಕ್ರಿಯಿಸಿದ್ದು ಹೀಗೆ...

ಗೌತಮ್ ಗಂಭೀರ್ ಮೆಂಟರ್ ಆಗಿದ್ದ ಕೋಲ್ಕತಾ ನೈಟ್ ರೈಡರ್ಸ್ ತಂಡ 2024 ವರ್ಷದ ಐಪಿಎಲ್ ಗೆದ್ದಿದ್ದು ಅವರ ಮುಡಿಗೆ ಸಂದ ಮತ್ತೊಂದು ಗರಿ.