Xiaomi ಕಂಪನಿಯ ಮೊದಲ EV ಐಷಾರಾಮಿ ಕ್ರೀಡಾ ಸೆಡಾನ್ 'SU7 ಮ್ಯಾಕ್ಸ್'!

Prasad SN

Xiaomi ಕಂಪನಿಯು ತನ್ನ ಮೊದಲ EV ಐಷಾರಾಮಿ ಸ್ಪೋರ್ಟ್ಸ್ ಸೆಡಾನ್ ಆಗಿರುವ 'SU7 ಮ್ಯಾಕ್ಸ್' ಪ್ರದರ್ಶಿಸಿದೆ. ಇದು ಕಾರ್ಯಕ್ಷಮತೆ, ಪರಿಸರ ವ್ಯವಸ್ಥೆಯ ಏಕೀಕರಣ ಮತ್ತು ಮೊಬೈಲ್ ಸ್ಮಾರ್ಟ್ ಸೌಕರ್ಯಗಳನ್ನು ಹೊಂದಿದ್ದು, "ಪೂರ್ಣ-ಗಾತ್ರದ ಉನ್ನತ-ಕಾರ್ಯಕ್ಷಮತೆಯ ಪರಿಸರ-ತಂತ್ರಜ್ಞಾನ ಸೆಡಾನ್" ಎಂಬ ಹೆಸರು ಪಡೆದಿದೆ.

Xiaomi ಐದು ಪ್ರಮುಖ EV ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಿದೆ: E-ಮೋಟರ್, CTB ಇಂಟಿಗ್ರೇಟೆಡ್ ಬ್ಯಾಟರಿ, Xiaomi ಡೈ-ಕಾಸ್ಟಿಂಗ್, Xiaomi ಪೈಲಟ್ ಸ್ವಾಯತ್ತ ಡ್ರೈವಿಂಗ್ ಮತ್ತು ಸ್ಮಾರ್ಟ್ ಕ್ಯಾಬಿನ್.

Xiaomi SU7 ಮ್ಯಾಕ್ಸ್ 673 ಪಿಎಸ್ ಪವರ್ ಮತ್ತು ಒಂದೇ ಚಾರ್ಜ್‌ನಲ್ಲಿ ಗರಿಷ್ಠ 800 ಕಿಮೀ ದೂರವನ್ನು ಕ್ರಮಿಸುತ್ತದೆ.

838 nm ಟಾರ್ಕ್ ಹೊಂದಿರುವ SU7 ಮ್ಯಾಕ್ಸ್ 2.78 ಸೆಕೆಂಡುಗಳಲ್ಲಿ ಪ್ರತಿ ಗಂಟೆಗೆ 100 ಕಿಮೀ ವೇಗ ತಲುಪುತ್ತದೆ ಮತ್ತು ಗಂಟೆಗೆ 265 ಕಿಮೀ ವೇಗದಲ್ಲಿ ಹೋಗಬಹುದು ಎಂದು ಕಂಪನಿ ಹೇಳಿಕೊಂಡಿದೆ.

ಇದು 360-ಡಿಗ್ರಿ ರಕ್ಷಣೆಯನ್ನು ಒದಗಿಸಲು 16 ಸಕ್ರಿಯ ಸುರಕ್ಷತಾ ವೈಶಿಷ್ಟ್ಯಗಳ ಸಮಗ್ರ ಸೂಟ್‌ನೊಂದಿಗೆ ಸಜ್ಜುಗೊಂಡಿದೆ.

"Xiaomi SU7 ಅನ್ನು ಕೇವಲ ಪ್ರದರ್ಶನ ಉದ್ದೇಶಗಳಿಗಾಗಿ ಭಾರತಕ್ಕೆ ತರಲಾಗಿದೆ. ಇದು ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟಕ್ಕಿಲ್ಲ" ಎಂದು ಕಂಪನಿ ಹೇಳಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos