ಡೆಂಗ್ಯೂ ಜ್ವರ: ಲಕ್ಷಣಗಳು, ಚಿಕಿತ್ಸೆ ಮತ್ತು ತಡೆಗಟ್ಟುವ ಸಲಹೆಗಳು

Prasad SN

ಡೆಂಗ್ಯೂ ವೈರಸ್‌ನಿಂದ ಉಂಟಾಗುವ ಡೆಂಗ್ಯೂ ಜ್ವರವು ಈಡಿಸ್ ಈಜಿಪ್ಟಿ ಸೊಳ್ಳೆಯಿಂದ ಹರಡುತ್ತದೆ.

ಇದು ಸಾಮಾನ್ಯವಾಗಿ ಮೂರು ಹಂತಗಳಲ್ಲಿ ಕಾಣಿಸಿಕೊಳ್ಳುತ್ತದೆ: ಜ್ವರದ ಹಂತ, ನಿರ್ಣಾಯಕ ಹಂತ ಮತ್ತು ಚೇತರಿಕೆಯ ಹಂತ

ಸೊಳ್ಳೆ ಕಡಿತದ ನಂತರ 8-12 ದಿನಗಳಲ್ಲಿ ರೋಗಲಕ್ಷಣಗಳು ಕಾಣಿಸಿಕೊಳ್ಳುತ್ತದೆ, ಇದು ಜ್ವರದ ಹಂತ. ಇವುಗಳಲ್ಲಿ ವಿಷಮ ಜ್ವರ, ತೀವ್ರವಾದ ಮೈಯಾಲ್ಜಿಯಾ, ಬೆನ್ನುನೋವು, ತಲೆನೋವು ಮತ್ತು ದದ್ದು ಉಂಟಾಗುವುದು ಸೇರಿವೆ. ಈ ರೋಗಲಕ್ಷಣಗಳು ಮಕ್ಕಳು ಮತ್ತು ವಯಸ್ಕರಲ್ಲಿ ಸಾಮಾನ್ಯ ಮತ್ತು 3-5 ದಿನಗಳವರೆಗೆ ಇರುತ್ತದೆ.

ಮಕ್ಕಳಲ್ಲಿ, ಮೂರು ದಿನಗಳ ನಂತರ ಜ್ವರ ಕಡಿಮೆಯಾಗದಿದ್ದರೆ, ಪೋಷಕರು ತಮ್ಮ ಮಗುವನ್ನು ಮಕ್ಕಳ ವೈದ್ಯರ ಬಳಿಗೆ ಕರೆದುಕೊಂಡು ಹೋಗಬೇಕು. ವೈದ್ಯರು ಅವರ ಸ್ಥಿತಿಯನ್ನು ನಿರ್ಣಯಿಸಿ ಅದಕ್ಕೆ ಅನುಗುಣವಾಗಿ ಚಿಕಿತ್ಸೆ ನೀಡುತ್ತಾರೆ.

ಡೆಂಗ್ಯೂಗೆ ಚಿಕಿತ್ಸೆಯು ಪ್ರಧಾನವಾಗಿ ರೋಗಲಕ್ಷಣವನ್ನು ಆಧರಿಸಿದ್ದಾಗಿದೆ ಮತ್ತು ಸರಿಯಾದ ಪ್ರಮಾಣದಲ್ಲಿ ದ್ರವ್ಯ ಪದಾರ್ಥ ಸೇವಿಸುವುದು ಅತಿಮುಖ್ಯ.

ಇದಲ್ಲದೆ, ಮಕ್ಕಳಲ್ಲಿ ಹೊಟ್ಟೆ ನೋವು, ವಾಂತಿ, ಮೂಗಿನಲ್ಲಿ ರಕ್ತಸ್ರಾವ ಮತ್ತು ವಸಡು ರಕ್ತಸ್ರಾವ ಉಂಟಾಗಬಹುದು.

ರೋಗನಿರ್ಣಯ ಮತ್ತು ರೋಗಿಯ ಆರೈಕೆಯಲ್ಲಿ ವಿಳಂಬವಾದರೆ, ರಕ್ತಸ್ರಾವ, ತೀವ್ರ ಆಯಾಸ, ನಿಂತಿರುವಾಗ ತಲೆತಿರುಗುವಿಕೆ ಮತ್ತು ಆಘಾತದಂತಹ ಸಮಸ್ಯೆ ಉಂಟಾಗಬಹುದು.

ಮನೆಯಲ್ಲಿ, ಪ್ಯಾರಸಿಟಮಾಲ್‌ನಂತಹ ಔಷಧಿಗಳೊಂದಿಗೆ ಜ್ವರವನ್ನು ಒಂದು ಮಟ್ಟಕ್ಕೆ ನಿರ್ವಹಿಸಬಹುದು. ನೀವು ದಿನಕ್ಕೆ ಗರಿಷ್ಠ ನಾಲ್ಕು ಬಾರಿ ಇದನ್ನು ತೆಗೆದುಕೊಳ್ಳಬಹುದು.

ನೀರು, ಎಳನೀರು, ಮಜ್ಜಿಗೆ ಮತ್ತು ಮನೆಯಲ್ಲಿ ತಯಾರಿಸಿದ ತಾಜಾ ಹಣ್ಣಿನ ಜ್ಯೂಸ್ ಗಳೊಂದಿಗೆ ಹೈಡ್ರೇಟೆಡ್ ಆಗಿರಿ

ಗರ್ಭಾವಸ್ಥೆಯಲ್ಲಿ ಡೆಂಗ್ಯೂ ಜ್ವರವು ತಾಯಿ ಮತ್ತು ಭ್ರೂಣಕ್ಕೆ ಅಪಾಯವನ್ನುಂಟುಮಾಡುವ ಸಾಧ್ಯತೆ ಇರುತ್ತದೆ. ಡೆಂಗ್ಯೂ ಸೋಂಕು ಅವಧಿಪೂರ್ವ ಹೆರಿಗೆಯಾಗುವ (ಗರ್ಭಧಾರಣೆಯ 37 ವಾರಗಳ ಮೊದಲು ಜನನ) ಮತ್ತು ಕಡಿಮೆ ತೂಕದ (2,500 gm ಗಿಂತ ಕಡಿಮೆ) ಮಗು ಹುಟ್ಟುವ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ.

ಮಗುವನ್ನು ಪೋಷಿಸುವ ಪ್ರಮುಖ ಅಂಗವಾದ ಜರಾಯುವಿನ ಹಾನಿಯಿಂದ ಉಂಟಾಗುವ ನಿರ್ಬಂಧಿತ ಭ್ರೂಣದ ಬೆಳವಣಿಗೆಯಿಂದಾಗಿ ಈ ತೊಡಕುಗಳು ಉದ್ಭವಿಸುತ್ತವೆ.

ಅವಧಿಪೂರ್ವ ಮಕ್ಕಳ ಜನನ