ಮೆಟ್ಟುಪಾಳ್ಯಂ: ಪ್ರತಿಷ್ಠೆಯ ಪಂದ್ಯವಾಗಿರುವ ಕೋಳಿ ಕಾಳಗ

Srinivas Rao BV

ಪುದುಚೇರಿಯ ಮೆಟ್ಟುಪಾಳ್ಯಂ ಜುಲೈ 2024 ರ ಮೊದಲ ವಾರದಲ್ಲಿ ಕೋಳಿಗಳ ಚಟುವಟಿಕೆಗಳ ಕೇಂದ್ರವಾಗಿತ್ತು.

ಹತ್ತು ವರ್ಷಗಳ ನಂತರ, ಪಟ್ಟಣವು ಎರಡು ದಿನಗಳ ಕೋಳಿ (ಹುಂಜ) ಕಾಳಗ ಪಂದ್ಯಾವಳಿಯನ್ನು ಆಯೋಜಿಸಿತು.

ದೇಶಾದ್ಯಂತದ ಸಾವಿರಾರು ಕೋಳಿಗಳ ಕೂಗು ನೂರಾರು ಜನರನ್ನು ಸ್ವಾಗತಿಸಿದವು.

ಈ ಸಂಪ್ರದಾಯವನ್ನು ವೀಕ್ಷಿಸಲು ಜನರು ಜಮಾಯಿಸಿದ್ದರು. ಸುರಕ್ಷತೆಯ ಕಾಳಜಿಯಿಂದಾಗಿ ಕೋಳಿ ಕಾಳಗ ನಿಷೇಧವನ್ನೂ ಕಂಡಿತ್ತು.

ಪ್ರಾಣಿಗಳ ಮೇಲಿನ ಕ್ರೌರ್ಯವನ್ನು ಕೊನೆಗಾಣಿಸಲು 2014 ರಲ್ಲಿ ಸುಪ್ರೀಂ ಕೋರ್ಟ್ ಕೋಳಿ ಕಾದಾಟವನ್ನು ನಿಷೇಧಿಸಿದ ಹೊರತಾಗಿಯೂ, ಕ್ರೀಡೆಯು ಅಭಿವೃದ್ಧಿ ಹೊಂದುತ್ತಲೇ ಇದೆ ಮತ್ತು ತಮಿಳುನಾಡಿನ ಗ್ರಾಮೀಣ ಭಾಗಗಳಲ್ಲಿ ಜನಪ್ರಿಯವಾಗಿದೆ.

ಕಾಳಗದಲ್ಲಿ ತೊಡಗಿ ಬಳಲಿದ್ದ ಕೋಳಿಗಳಿಗೆ ವಿರಾಮದಲ್ಲಿ ಅವುಗಳ ಮಾಲಿಕರು ಗರಿಗಳು, ಕೊಕ್ಕುಗಳಿಗೆ ಆರೈಕೆ ಮಾಡಿದರು.

ಗೆಲ್ಲುವ ಮತ್ತು ದೊಡ್ಡ ಬಹುಮಾನದ ಹಣವನ್ನು ಗಳಿಸುವುದರ ಹೊರತಾಗಿ, ಪ್ರತಿಷ್ಠೆಯ ದೃಷ್ಟಿಯಿಂದ ಈ ಕ್ರೀಡೆಯಲ್ಲಿ ಜನರು ಭಾಗವಹಿಸುತ್ತಾರೆ.

ಸಾಕುವವರು ಹಾಗೂ ಹುಂಜದ ನಡುವಿನ ಸಂವಹನ, ಸಾಕುವವರು- ಪ್ರಾಣಿಗಳ ನಡುವಿನ ಸಂಬಂಧವನ್ನು ತೋರುತ್ತದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಂಬಾನಿ ಸೊಸೆ ನವ ವಧು ರಾಧಿಕಾ ಉಡುಪು ಹೇಗಿತ್ತು ನೋಡಿ...