ನಟಿ ಪ್ರಣಿತಾ ಸುಭಾಷ್; ಬೇಬಿ ಬಂಪ್ ಕ್ಯೂಟ್ ಫೋಟೋಗಳು!

Vishwanath S

ನಟ ದರ್ಶನ್ ಅಭಿನಯದ ಪೊರ್ಕಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ನಟಿ ಪ್ರಣಿತಾ ಸುಭಾಷ್ ಇದೀಗ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ.

ದಕ್ಷಿಣ ಚಿತ್ರರಂಗದ ಖ್ಯಾತ ನಟಿ ಪ್ರಣಿತಾ ಎರಡನೇ ಬಾರಿಗೆ ತಾಯಿಯಾಗುತ್ತಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದಾರೆ. ಪ್ರಣಿತಾ ಸುಭಾಷ್ ಅವರು ಇತ್ತೀಚೆಗೆ ಗರ್ಭಧಾರಣೆಯ ಫೋಟೋಶೂಟ್ ಮಾಡಿದ್ದಾರೆ.

ನಟಿ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದೂ ಇದಕ್ಕೂ ಮೊದಲು, ಪ್ರಣಿತಾ 2022ರಲ್ಲಿ ತನ್ನ ಮೊದಲ ಮಗುವಿಗೆ ಜನ್ಮ ನೀಡಿದ್ದರು. 2021ರಲ್ಲಿ ಪ್ರಣಿತಾ ಸುಭಾಷ್ ಅವರು ಪ್ರಸಿದ್ಧ ಉದ್ಯಮಿ ನಿತಿನ್ ರಾಜು ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಒಂದು ವರ್ಷದ ನಂತರ, ನಟಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು.

ಪ್ರಣಿತಾ ತನ್ನ ಅಧಿಕೃತ Instagram ಹ್ಯಾಂಡಲ್‌ನಲ್ಲಿ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ತಾನು ಗರ್ಭಿಣಿಯಾಗಿರುವುದನ್ನು ಘೋಷಿಸಿದ್ದಾರೆ. ನಟಿ ತಮ್ಮ ಬೇಬಿ ಬಂಪ್ ಚಿತ್ರಗಳನ್ನು ಹಂಚಿಕೊಂಡಿದ್ದು ರೌಂಡ್ 2 ಮತ್ತು ಈ ಪ್ಯಾಂಟ್‌ಗಳು ಇನ್ನು ಮುಂದೆ ಧರಿಸಲು ಆಗಲ್ಲ ಎಂದು ಶೀರ್ಷಿಕೆ ನೀಡಿದ್ದಾರೆ.

ಕನ್ನಡ, ತಮಿಳು ಮತ್ತು ತೆಲುಗು ಸೇರಿದಂತೆ ಹಲವು ಭಾಷೆಗಳಲ್ಲಿ ಅನೇಕ ಉತ್ತಮ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಪವನ್ ಕಲ್ಯಾಣ್, ಜೂನಿಯರ್ ಎನ್ಟಿಆರ್ ಮತ್ತು ಸಿದ್ಧಾರ್ಥ್ ಅವರಂತಹ ಅನೇಕ ನಟರೊಂದಿಗೆ ಪರದೆಯನ್ನು ಹಂಚಿಕೊಂಡಿದ್ದಾರೆ. ಇನ್ನು ಬಾಲಿವುಡ್ ನಲ್ಲಿ ಹಂಗಾಮ ಸೃಷ್ಟಿಸಿದ್ದರು.

ನೋವಿಲ್ಲದೆ ಒಂದೇ ನಿಮಿಷದಲ್ಲಿ ಸಾಯಿಸುವ ಯಂತ್ರ: ಸ್ವಿಟ್ಜರ್ಲೆಂಡ್ ಆವಿಷ್ಕಾರ!