ಬ್ಯಾಂಕ್ ಆಫ್ ಇಂಗ್ಲೆಂಡ್ ನಲ್ಲಿದ್ದ 1 ಲಕ್ಷ ಕೆಜಿ ಚಿನ್ನದ ಗಟ್ಟಿಗಳನ್ನು RBI ಭಾರತಕ್ಕೆ ಮರಳಿ ತಂದಿದೆ..1991ರ ಬಳಿಕ 33 ವರ್ಷಗಳಲ್ಲೇ ಇಷ್ಟೊಂದು ಪ್ರಮಾಣದ ಚಿನ್ನ ವಿದೇಶದಿಂದ ತಂದಿದ್ದು ಇದೇ ಮೊದಲು. .ಈ ಚಿನ್ನವನ್ನು ಮುಂಬೈ ಮತ್ತು ನಾಗ್ಪುರದಲ್ಲಿ ಆರ್‌ಬಿಐ ಕಚೇರಿಯಲ್ಲಿ ಸಂಗ್ರಹಿಸಿ ಇಡಲಾಗಿದೆ..ಬ್ಯಾಂಕ್ ಆಫ್ ಇಂಗ್ಲೆಂಡ್ ಚಿನ್ನವನ್ನು ಹಿಡಿದಿಟ್ಟುಕೊಳ್ಳಲು ನಿರ್ದಿಷ್ಟ ಶುಲ್ಕ ಪಡೆಯುತ್ತವೆ. .ಚಿನ್ನವನ್ನು ಭಾರತದಲ್ಲೇ ಇಟ್ಟುಕೊಂಡರೆ ಈ ಶುಲ್ಕ ಹಣವನ್ನು ಆರ್‌ಬಿಐ ಉಳಿಸಬಹುದು..ಈ ಹಿಂದೆ 1991ರಲ್ಲಿ ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಭಾರತ ರಾತ್ರೋರಾತ್ರಿ ಹಡಗಿನ ಮೂಲಕ ದೇಶಕ್ಕೆ ಚಿನ್ನವನ್ನು ಸಾಗಿಸಿತ್ತು..ಮಾರ್ಚ್ 2023 ರ ಮಾಹಿತಿಯ ಪ್ರಕಾರ ಆರ್‌ಬಿಐ ಒಟ್ಟು 822.1 ಟನ್ ಚಿನ್ನವನ್ನು ಹೊಂದಿದ್ದು, ಈ ಪೈಕಿ 413.8 ಟನ್‌ಗಳಷ್ಟು ಚಿನ್ನವನ್ನು ವಿದೇಶದಲ್ಲಿ ಇರಿಸಲಾಗಿದೆ..33 ವರ್ಷಗಳ ನಂತರ ಇಂಗ್ಲೆಂಡ್ ನಿಂದ ಭಾರತಕ್ಕೆ 100 ಟನ್ ಚಿನ್ನ ವಾಪಸ್ ತಂದ RBI!