ದಿಢೀರ್ ಮಳೆಗೆ ದೆಹಲಿ ತತ್ತರ, ಜನಜೀವನ ಅಸ್ತವ್ಯಸ್ತ; ಭೀಕರ ಚಿತ್ರಗಳು

Vishwanath S

ಎಡೆಬಿಡದೆ ಸುರಿದ ಮಳೆಯಿಂದಾಗಿ ಟ್ರಾಫಿಕ್ ಜಾಮ್ ಮತ್ತು ತಗ್ಗು ಪ್ರದೇಶಗಳು ಜಲಾವೃತವಾಗಿವೆ.

ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ರಸ್ತೆಗಳಲ್ಲಿ ನೀರು ತುಂಬಿ ಪ್ರಯಾಣಿಕರಿಗೆ ಸಂಕಷ್ಟ

ನಗರದಾದ್ಯಂತ ಟ್ರಾಫಿಕ್ ಜಾಮ್ ಜೊತೆಗೆ ರಸ್ತೆ ಮೇಲೆ ನಿಂತಿರುವ ನೀರಿನಲ್ಲಿ ವಾಹನಗಳ ಸಂಚಾರ

ರಸ್ತೆಗಳಲ್ಲಿ ನೀರು ತುಂಬಿ ವಾಹನ ಸವಾರರಿಗೆ ಅತೀವ ತೊಂದರೆಯಾಗಿದೆ.

ಜಲಾವೃತ ಪ್ರದೇಶಗಳಲ್ಲಿ ಬಸ್‌ಗಳು ಸಿಲುಕಿಕೊಳ್ಳುವುದನ್ನು ತಡೆಯಲು ನಗರದ ಎಲ್ಲಾ ಅಂಡರ್‌ಪಾಸ್‌ಗಳಲ್ಲಿ ಡಿಟಿಸಿ ಅಧಿಕಾರಿಗಳ ತಂಡ ನಿಯೋಜನೆ.

ಭಾರೀ ಮಳೆಯ ನಡುವೆ ದೆಹಲಿ ವಿಮಾನ ನಿಲ್ದಾಣದ ಟರ್ಮಿನಲ್-1ರ ಮೇಲ್ಛಾವಣಿ ಕುಸಿದು ಬಿದ್ದು ಕನಿಷ್ಠ ಒಬ್ಬರು ಸಾವನ್ನಪ್ಪಿದ್ದು ಆರು ಮಂದಿ ಗಾಯಗೊಂಡಿದ್ದಾರೆ.

ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಅವರು ದೆಹಲಿ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು.