ನಟಿ ನಿವೇದಿತಾ ಪೇತುರಾಜ್ ಗಾಗಿ ಗುಟ್ಟಾಗಿ 50 ಕೋಟಿ ರೂ. ಮನೆ ಖರೀದಿಸಿದ್ರಾ ಉದಯನಿಧಿ ಸ್ಟಾಲಿನ್?

Vishwanath S

ತಮಿಳು ನಟ, ರಾಜ್ಯ ಸಚಿವ ಉದಯನಿಧಿ ಸ್ಟಾಲಿನ್ ನಟಿ ನಿವೇದಿತಾ ಪೇತುರಾಜ್ ಮೇಲೆ ಕೋಟ್ಯಾಂತರ ರೂಪಾಯಿ ದುಂದುವೆಚ್ಚ ಮಾಡುತ್ತಿದ್ದು ನಟಿಗಾಗಿ 50 ಕೋಟಿ ರೂಪಾಯಿ ವೆಚ್ಚದ ಮನೆಯನ್ನು ಖರೀದಿಸಿದ್ದಾರೆ ಎಂದು ಖ್ಯಾತ ರಾಜಕೀಯ ವಿಶ್ಲೇಷಕರೊಬ್ಬರು ಆರೋಪಿಸಿದ್ದಾರೆ.

ಖ್ಯಾತ ರಾಜಕೀಯ ನಿರೂಪಕ ಸುವುಕ್ಕು ಶಂಕರ್ ಸಂದರ್ಶನವೊಂದರಲ್ಲಿ ಉದಯನಿಧಿ ನಟಿ ನಿವೇದಿತಾಗಾಗಿ ದುಬೈನಲ್ಲಿ 50 ಕೋಟಿ ರೂಪಾಯಿ ವೆಚ್ಚದಲ್ಲಿ ಮನೆ ಖರೀದಿಸಿದ್ದಾರೆ ಎಂದು ಹೇಳಿದ್ದಾರೆ.

ಈ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಂಚಲನ ಮೂಡಿಸುತ್ತಿದೆ. ಈ ಬಗ್ಗೆ ಕಿಡಿಕಾರಿರುವ ನಿವೇದಿತಾ ಪೇತುರಾಜ್ ಇದು ಸುಳ್ಳು ಸುದ್ದಿ ಎಂದು ಹೇಳಿದ್ದಾರೆ.

ಇತ್ತೀಚೆಗೆ ನನ್ನ ಮೇಲೆ ಸಾಕಷ್ಟು ಹಣ ಖರ್ಚು ಮಾಡಲಾಗುತ್ತಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ. ಈ ಸಂದೇಶಗಳನ್ನು ಹರಡುವ ಮೊದಲು ಯೋಚಿಸಿ ಎಂದು ಹೇಳಿದ್ದಾರೆ.

ಕಳೆದ ಕೆಲವು ದಿನಗಳಿಂದ ನಾನು ಮತ್ತು ನನ್ನ ಕುಟುಂಬದವರು ತುಂಬಾ ಒತ್ತಡ ಅನುಭವಿಸುತ್ತಿದ್ದೇವೆ. ನನ್ನ ಬಗ್ಗೆ ಇಲ್ಲಿಯವರೆಗೆ ಮಾತನಾಡಿರುವ ಯಾವುದೇ ಮಾಹಿತಿಯು ನಿಜವಲ್ಲ ಎಂದು ನಾನು ಖಚಿತವಾಗಿ ಹೇಳಬಲ್ಲೆ ಎಂದರು.

2002ರಿಂದ ನಮ್ಮ ಕುಟುಂಬ ದುಬೈನಲ್ಲಿ ವಾಸಿಸುತ್ತಿದೆ. ಇನ್ನು ನಾನು ಈ ಆರೋಪಕ್ಕೆ ಸಂಬಂಧಿಸಿದಂತೆ ಕಾನೂನಾತ್ಮಕ ಕ್ರಮಕ್ಕೆ ಮುಂದಾಗುವುದಿಲ್ಲ ಎಂದು ಹೇಳಿದ್ದಾರೆ.

ಪತ್ರಿಕೋದ್ಯಮದಲ್ಲಿ ಇನ್ನೂ ಸ್ವಲ್ಪ ಮಾನವೀಯತೆ ಇರುವುದರಿಂದ ಅವರು ನನ್ನನ್ನು ಈ ರೀತಿ ನಿಂದಿಸುವುದಿಲ್ಲ ಎಂದು ನಾನು ಇನ್ನೂ ಭಾವಿಸುತ್ತೇನೆ ಎಂದು ನಿವೇತಾ ಪೇತುರಾಜ್ ಪೋಸ್ಟ್ ಮಾಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ಪ್ರಿ-ವೆಡ್ಡಿಂಗ್ ಕಾರ್ಯಕ್ರಮ; ಮಿಂಚಿದ ಸೆಲೆಬ್ರಿಟಿಗಳು