ಬಿರು ಬೇಸಿಗೆಯಲ್ಲಿ ಎಳನೀರು ದೇಹಕ್ಕೆ ತಂಪು ಮಾತ್ರವಲ್ಲ, ಆರೋಗ್ಯಕ್ಕೂ ಆಪದ್ಭಾಂಧವ!

Vishwanath S

ಅಜೀರ್ಣ ಮತ್ತು ಹೊಟ್ಟೆನೋವು ಸಂಬಂದಿತ ಸಮಸ್ಯೆಗಳಿಗೆ ಎಳನೀರು ಒಳ್ಳೆಯ ಆರೋಗ್ಯ ಪರಿಣಾಮ ನೀಡುತ್ತದೆ. ಪ್ರತಿದಿನ ಎಳನೀರು ಸೇವಿಸಿದರೆ ಅಜೀರ್ಣ ಸಮಸ್ಯೆ ಮತ್ತು ಹೊಟ್ಟೆ ನೋವು ನಿವಾರಣೆ ಆಗುತ್ತದೆ.

ಎಳನೀರು ಕೇವಲ ಆರೋಗ್ಯ ಪ್ರಯೋಜನೆಗಳನ್ನು ಮಾತ್ರ ಹೊಂದಿಲ್ಲ, ಇದು ಚರ್ಮಕ್ಕೂ ಅಷ್ಟೇ ಉತ್ತಮ ಪರಿಹಾರಗಳನ್ನು ನೀಡುತ್ತದೆ, ಸುಕ್ಕುಗಟ್ಟಿದ ಚರ್ಮವನ್ನು ಎಳನೀರಿನಿಂದ ತೊಳೆದರೆ ಚರ್ಮದ ಸುಕ್ಕು ನಿವಾರಣೆಯಾಗುತ್ತದೆ.

ಎಳನೀರು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿರ್ವಹಿಸಲು ಮತ್ತು ಮಧುಮೇಹ ರೋಗಲಕ್ಷಣಗಳನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದು ಇನ್ಸುಲಿನ್ ಸೂಕ್ಷ್ಮತೆಯನ್ನು ಹೆಚ್ಚಿಸುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ.

ಕೂದಲು ಉದುರುವುದು ಕಡಿಮೆಯಾಗಿ ಕೂದಲ ಹೊಳಪು ಹೆಚ್ಚುತ್ತದೆ. ಕೂದಲು ಮೃದುವಾಗಿಸುವಲ್ಲಿ ಕೂಡಾ ಸಹಾಯ ಮಾಡುತ್ತದೆ.

ಎಳನೀರಿನಲ್ಲಿರುವ ವಿವಿಧ ವಿಟಮಿನ್ ಮತ್ತು ವಿಶೇಷವಾಗಿ ವಿಟಮಿನ್ ಕೆ ಮತ್ತು ಕಬ್ಬಿಣದ ಅಂಶ ಕೂದಲಿಗೆ ಸಹಕಾರಿಯಾಗಿದೆ. ಕೂದಲನ್ನು ಕೊಂಚ ಎಳನೀರಿನಿಂದ ಮಸಾಜ್ ಮಾಡುವುದರಿಂದ ತಲೆಯ ಚರ್ಮದಲ್ಲಿ ರಕ್ತಸಂಚಾರ ಹೆಚ್ಚುತ್ತದೆ.

ನಿರ್ಜಲೀಕರಣವು ಚರ್ಮವನ್ನು ಹಾನಿಯುಂಟು ಮಾಡುತ್ತದೆ. ಜೊತೆಗೆ ನಿಮ್ಮ ಮುಖದಲ್ಲಿ ಮೊಡವೆ ಉಂಟಾಗಲು ಕಾರಣವಾಗುತ್ತದೆ. ಎಳನೀರು ದೇಹಕ್ಕೆ ತೇವಾಂಶವನ್ನು ನೀಡುವುದರಿಂದ ನಿಮ್ಮ ಚರ್ಮದ ಆರೋಗ್ಯವನ್ನು ಕಾಪಾಡುವಲ್ಲಿ ಸಹಾಯಕವಾಗಿದೆ.

ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಲು, ಮೂತ್ರನಾಳದ ಸೋಂಕಿನಿಂದ ನಿಮಗೆ ರಕ್ಷಣೆಯನ್ನು ನೀಡುತ್ತದೆ.